Category: Govt Jobs

  • ನೈರುತ್ಯ ರೈಲ್ವೆ ಮೈಸೂರು : ಲ್ಯಾಬ್ ಸೂಪರಿಂಟೆಂಡೆಂಟ್ ಹುದ್ದೆಗೆ ನೇರ ಸಂದರ್ಶನ

    ನೈರುತ್ಯ ರೈಲ್ವೆ ಮೈಸೂರು ವಿಭಾಗವು ಈ ಕೆಳಗಿನ ಷರತ್ತು ಮತ್ತು ನಿಯಮಗಳನ್ವಯ ಮೈಸೂರು ವಿಭಾಗದಲ್ಲಿ ಕೋವಿಡ್ -19 ಸಲುವಾಗಿ ಒಪ್ಪಂದದ ಆಧಾರದ ಮೇಲೆ 3 ತಿಂಗಳ ಅವಧಿಗಾಗಿ ಈ ಕೆಳಗಿನ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ವಿವರಗಳು ಈ ಕೆಳಗೆ ನೀಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆಯ ಹೆಸರು : ಲ್ಯಾಬ್ ಸೂಪರಿಂಟೆಂಡೆಂಟ್ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ವಯಸ್ಸು : 07-06-2021 ರಂತೆ 18 ರಿಂದ 33 ವರ್ಷಗಳು.

    ಹುದ್ದೆ ಸಂಖ್ಯೆ : 02 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಸೇವೆ ಬೇಕಾಗಿರುವ ಸ್ಥಳ : ರೈಲ್ವೆ ಆಸ್ಪತ್ರೆ, ಮೈಸೂರು.

    ವಾಕ್ ಇನ್ ಇಂಟರ್ ವ್ಯೂಹ್ ಸ್ಥಳ : ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ, ಐರ್ವಿನ್ ರಸ್ತೆ, ಮೈಸೂರು.

    ವಾಕ್ ಇನ್ ಇಂಟರ್ವ್ಯೂ ದಿನಾಂಕ ‌ಹಾಗೂ ಸಮಯ : 17-06-2021 11 ಗಂಟೆಯ ನಂತರ 17.00 ಗಂಟೆಯವರೆಗೆ

    ಗೌರವಧನ : ರೂ.35,400/- ಪ್ಲಸ್ ಡಿಎ ಮತ್ತು ಇತರೆ ಭತ್ಯೆಗಳು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • 33 ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ

    ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ : ಸಹಾಯಕ ಪ್ರಾಧ್ಯಾಪಕರ ಹುದ್ದೆ ಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಒಟ್ಟು ಹುದ್ದೆ : 33

    ಸಂಸ್ಥೆಯ ಅಂತರ್ಜಾಲದಲ್ಲು ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ‌ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಅಪ್ ಲೋಡ್ ಮಾಡತಕ್ಕದ್ದು. ಹಾಗೂ ಸ್ವೀಕೃತಿ ಪ್ರತಿ ಸಂಬಂಧಪಟ್ಟ ದಾಖಲಾತಿಗಳ ಸ್ವದೃಢೀಕೃತ ಎರಡು ಪ್ರತಿಗಳನ್ನು ದಿನಾಂಕ ; 30-06-2021 ರ ಸಂಜೆ 5 ಗಂಟೆಯೊಳಗೆ ಈ ಕಚೇರಿಗೆ ಸಲ್ಲಿಸತಕ್ಕದ್ದು ಹಾಗೂ ಅರ್ಜಿ ಶುಲ್ಕ ರೂ. 2000/- ಗಳನ್ನು ಆನ್ಲೈನ್ ಮೂಲಕ ಪಾವತಿಸತಕ್ಕದ್ದು.

    ಅಭ್ಯರ್ಥಿಗಳಿಗೆ ವಿಭಾಗವಾರು ಸಂದರ್ಶನದ ದಿನಾಂಕವನ್ನು ಪ್ರತ್ಯೇಕವಾಗಿ ಸಂಸ್ಥೆಯ ವೆಬ್‌ಸೈಟ್‌ ನಲ್ಲಿ ತಿಳಿಸಲಾಗುವುದು. ಅವಧಿ ಮುಗಿದ ನಂತರ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸುವ ದಾಖಲಾತಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಮೈಸೂರು ಜಿಲ್ಲಾ ಪಂಚಾಯತ್ : ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ

    ಕೋವಿಡ್ -19 ಸಂಬಂಧವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಬರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಮೈಸೂರು ಜಿಲ್ಲೆ ಮೈಸೂರು ಇವರ ಅಧೀನ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು ಖಾಲಿ ಇರುವ ಶುಶ್ರೂಷಕರು ಹುದ್ದೆಗಳಿಗೆ ತಾತ್ಕಾಲಿಕವಾಗಿ ದಿನಾಂಕ 30-09-2021 ರವರೆಗೆ ಅಥವಾ ನೇರ ನೇಮಕಾತಿ ಹುದ್ದೆಗಳು ಭರ್ತಿಯಾಗುವವರೆಗೆ ಗುತ್ತಿಗೆ ಆಧಾರದ ಮೇಲೆ ಮೆರಿಟ್ ಕಂ ರೊಸ್ಟರ್ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಆಸಕ್ತರು ದಿನಾಂಕ 17-06-2021 ರಂದು ಬೆಳಿಗ್ಗೆ 10.00 ಗಂಟೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಎನ್.ಪಿ.ಸಿ. ಆಸ್ಪತ್ರೆ ‌ಆವರಣ, ಮೈಸೂರು ‌ಇಲ್ಲಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಈ ಹಿಂದೆ ಈ ಉದ್ದೇಶಕ್ಕಾಗಿ ದಿನಾಂಕ ‌04-06-2021 ರಂದು ‌ಸಂದರ್ಶನಕ್ಕೆ ಹಾಜರಾಗಿದ್ದ‌ ಅಭ್ಯರ್ಥಿಗಳನ್ನು ಈ ಹುದ್ದೆಗೆ ಪರಿಗಣಿಸಲಾಗುವುದರಿಂದ ಈ ಸಂದರ್ಶನಕ್ಕೆ ‌ಹಾಜರಾಗುವಂತಿಲ್ಲ.

    ಹುದ್ದೆ : ನರ್ಸಿಂಗ್ ‌ಆಫೀಸರ್
    ವಿದ್ಯಾರ್ಹತೆ : ಬಿ.ಎಸ್ಸಿ/ಜಿಎನ್ ಎಂ/ ಡಿಪ್ಲೋಮಾ ನರ್ಸಿಂಗ್
    ಹುದ್ದೆ ಸಂಖ್ಯೆ : 13
    ವೇತನ : ಅಭ್ಯರ್ಥಿಗಳಿಗೆ ಮಾಸಿಕ‌ ರೂ.25,000/- ವೇತನವಿರುತ್ತದೆ.
    ವಯೋಮಿತಿ : ಜನರಲ್ ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು.

    ಈ ಮೇಲ್ಕಂಡ ಹುದ್ದೆಗೆ ಆಸಕ್ತಿಯುಳ್ಳ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ತಮ್ಮ ಮೂಲ ಅಂಕಪಟ್ಟಿಗಳು/ ಎಲ್ಲಾ ಪ್ರಮಾಣ ಪತ್ರಗಳೊಂದಿಗೆ ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ನೊಂದಿಗೆ ಹಾಗೂ ಇವುಗಳ ಒಂದು ಜೆರಾಕ್ಸ್ ಪ್ರತಿಯೊಂದಿಗೆ ತಿಳಿಸಿರುವ ದಿನಾಂಕದಂದು ಹಾಗೂ ಸಮಯದೊಳಗೆ ಹಾಜರಿರತಕ್ಕದ್ದು.

  • IBPS RRB Recruitment 2021: ಕರ್ನಾಟಕದ ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾಲಿ ಇರುವ 478 ಹುದ್ದೆಗಳಿಗೆ ಅರ್ಜಿ ಆಹ್ವಾನ

    ,

    ಗ್ರಾಮೀಣ ಬ್ಯಾಂಕ್ ಗಳಲ್ಲಿನ ಹುದ್ದೆಗಳಿಗೆ ಕನ್ನಡದಲ್ಲಿಯೇ ಪರೀಕ್ಷೆ ನಡಸಲಾಗುತ್ತಿದ್ದರೂ, ರಾಜ್ಯದಲ್ಲಿ ಒಂದೇ ಒಂದು ಹುದ್ದೆ ಇಲ್ಲ ಎಂಬ ವಿಷಯಕ್ಕೆ ಈಗ ರಾಜ್ಯದಲ್ಲಿ 478 ಹುದ್ದೆಗಳಿಗೆ ನೇಮಕ ಮಾಡುವುದಾಗಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ಸುದ್ದಿ ರಾಜ್ಯದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ.

    ರಾಜ್ಯದ ಎರಡು ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಒಟ್ಟಾರೆ 478 ಹುದ್ದೆಗಳಿಗೆ ರಾಜ್ಯದ ಅಭ್ಯರ್ಥಿಗಳು ಕನ್ನಡದಲ್ಲಿಯೇ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಬರೆಯಬಹುದು. ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಮುಖ್ಯ ಪರೀಕ್ಷೆ ಆನ್ಲೈನ್ ಮೂಲಕ ನಡೆಯಲಿದೆ.

    ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ‌ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನೇಮಕ ಪ್ರಕ್ರಿಯೆಯಲ್ಲಿದೆ. ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ( ಸ್ಕೇಲ್ 1) ಹುದ್ದೆಗಳಿಗೆ‌ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಇದನ್ನೂ ಓದಿ: IBPS RRB ಅಧಿಸೂಚನೆ ಪ್ರಕಟ: ಗ್ರಾಮೀಣ ಬ್ಯಾಂಕ್‌ಗಳಲ್ಲಿನ 10,447 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ವಿವರ

    ರಾಜ್ಯದಲ್ಲಿ 261 ಆಫೀಸ್ ಅಸಿಸ್ಟೆಂಟ್ ( ಮಲ್ಟಿ ಪರ್ಪಸ್) ಹುದ್ದೆಗಳಿಗೆ ನೇಮಕ ಮಾಡಲಿದ್ದು, ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿನ160 ಮತ್ತು ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ 101 ಹುದ್ದೆಗಳಿವೆ. 201 ಆಫೀಸರ್ (ಸ್ಕೇಲ್ -1) ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಇದರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 87 ಮತ್ತು ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ 130 ಹುದ್ದೆಗಳಿವೆ.

    ಅರ್ಹತೆ : ಯಾವುದೇ ಪದವೀಧರರು ಅರ್ಜಿಯನ್ನು ಸಲ್ಲಿಸಬಹುದು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸ್ಥಳೀಯ ಭಾಷೆ ಓದಲು ಬರೆಯಲು ತಿಳಿದಿರಬೇಕು.

    ಆಫೀಸ್ ಅಸಿಸ್ಟೆಂಟ್ ಹುದ್ದೆಗೆ 18 ರಿಂದ 28 ಮತ್ತು ಆಫೀಸರ್ ಹುದ್ದೆಗೆ 18 ರಿಂದ 30 ವರ್ಷ ದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯಲ್ಲಿ ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳಿಗೆ 5 ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆಯನ್ನು ನೀಡಲಾಗಿದೆ.

    ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಆನ್ಲೈನ್ ನಲ್ಲಿ ಅರ್ಜಿ ಶುಲ್ಕ ಪಾವತಿಸಲು ಮಾತ್ರ ಅವಕಾಶವಿದೆ.

    ರಾಜ್ಯದ ಎರಡು ಗ್ರಾಮೀಣ ಬ್ಯಾಂಕುಗಳೂ ಒಟ್ಟು 478 ಹುದ್ದೆಗಳಿಗೆ ನೇಮಕ ನಡೆಸುವಂತೆ ಈ ಹಿಂದೆಯೇ ಐಬಿಪಿಎಸ್ ಬೇಡಿಕೆ ಸಲ್ಲಿಸಿದ್ದವು. ಆದರೆ ಐಬಿಪಿಎಸ್ ನಿರ್ಲಕ್ಷ್ಯ ತೋರಿದ್ದರಿಂದ ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿತ್ತು. ಹೀಗಾಗಿ ರಾಜ್ಯದಲ್ಲಿ ಹುದ್ದೆಗಳೇ ಇಲ್ಲ ಎಂದು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿರಲಿಲ್ಲ.

  • ಕರಾವಳಿ ಪಡೆಯಲ್ಲಿ 350 ಹುದ್ದೆ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ ಓದಿರುವವರಿಗೆ ಭರ್ಜರಿ ಅವಕಾಶ

    ದೇಶದ ಕರಾವಳಿ ಪಡೆಯಲ್ಲಿ ನಾವಿಕರಾಗಲು ಅಥವಾ ಇತರೆ ಯಾಂತ್ರಿಕ ಹುದ್ದೆಗಳನ್ನು ಪಡೆಯಲು ಬಯಸುವವರಿಗೆ ಸಿಹಿಸುದ್ದಿ. ನಾವಿಕ್‌ ಮತ್ತು ಯಾಂತ್ರಿಕ್‌ ಹುದ್ದೆಗಳಿಗೆ ನೇಮಕ ನಡೆಸುವ ಸಲುವಾಗಿ ನಡೆಸುವ ತರಬೇತಿ ಕಾರ್ಯಕ್ರಮಕ್ಕೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದೀಗ 01/2022 ಬ್ಯಾಚ್‌ನ ನೇಮಕ ಪ್ರಕ್ರಿಯೆಗಾಗಿ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ವರ್ಷದ ಆರಂಭದಲ್ಲಿ ಕರಾವಳಿ ಪಡೆಯ ತರಬೇತಿ ಮತ್ತು ಕೋರ್ಸ್‌ ಆರಂಭವಾಗಲಿದ್ದು, ಅಂತಿಮವಾಗಿ ನಾವಿಕ ಅಥವಾ ಯಾಂತ್ರಿಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

    2022 ಜನವರಿಯಿಂದ ಆರಂಭವಾಗುವ ಕೋರ್ಸ್‌ಗಳಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 16 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಅಂಚೆ ಮೂಲಕ ಆಯಾ ವಲಯ ಕಚೇರಿಗಳಿಗೆ ಕಳುಹಿಸುವಂತೆ ಸೂಚಿಸಲಾಗಿದೆ. ಆದರೆ, ಪುರುಷರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸ್ಪೀಡ್‌ ಪೋಸ್ಟ್‌ ಅಥವಾ ಕೊರಿಯರ್‌ ಮೂಲಕ ಕಳುಹಿಸಿರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

    ಆಯ್ಕೆ ಕೋರ್ಸ್‌ ಆಯ್ಕೆಯಾಗುವ ಸಮಯ: ಮುಂದಿನ ವರ್ಷ ಜನವರಿ

    ಯಾರು ಅರ್ಜಿ ಸಲ್ಲಿಸಬಹುದು: ಪುರುಷ ಅಭ್ಯರ್ಥಿಗಳು ಮಾತ್ರ

    ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 02-07-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-07-2021
    ಸ್ಟೇಜ್ 1 ಪರೀಕ್ಷೆ ದಿನಾಂಕ : ಸೆಪ್ಟೆಂಬರ್ 2021
    ಸ್ಟೇಜ್ 2 ಪರೀಕ್ಷೆ ದಿನಾಂಕ : ಅಕ್ಟೋಬರ್ 2021
    ಸ್ಟೇಜ್ 3 ಪರೀಕ್ಷೆ ದಿನಾಂಕ : ಫೆಬ್ರವರಿ 2022
    ಸ್ಟೇಜ್ 4 ಪರೀಕ್ಷೆ ದಿನಾಂಕ : ಎಪ್ರಿಲ್ 2022

    ಹುದ್ದೆ: ನಾವಿಕ್ ಮತ್ತು ಯಾಂತ್ರಿಕ್ ಹುದ್ದೆಗಳನ್ನು ಭರ್ತಿ ಅರ್ಜಿ ಆಹ್ವಾನಿಸಲಾಗಿದೆ. ಡೊಮೆಸ್ಟಿಕ್ ಬ್ರ್ಯಾಂಚ್, ಜೆನರಲ್ ಡ್ಯೂಟಿ ವಿಭಾಗಕ್ಕೆ ಈ ನೇಮಕ ನಡೆಯಲಿದೆ. ಒಟ್ಟು ೩೫೦ ಹುದ್ದೆಗಳಿದ್ದು, ಅರ್ಹರು ಈ ಅದ್ಭುತ ಅವಕಾಶ ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬಹುದು.

    ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆಬ್ಜೆಕ್ಟಿವ್‌ ಮಾದರಿಯಲ್ಲಿ ಲಿಖಿತ ಪರೀಕ್ಷೆ ಇರಲಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ‌ ಮತ್ತು ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ. 

    ಹುದ್ದೆಗಳ ‌ವಿವರ : ನಾವಿಕ್ ( ಜೆನರಲ್ ಡ್ಯೂಟಿ ) ಪಿಯುಸಿ 260
    ನಾವಿಕ್ ( ಡೊಮೆಸ್ಟಿಕ್ ಬ್ರ್ಯಾಂಚ್ ) ಎಸ್ ಎಸ್ ಎಲ್ ಸಿ 50
    ಯಾಂತ್ರಿಕ್ ( ಮೆಕ್ಯಾನಿಕಲ್ ) ಡಿಪ್ಲೋಮಾ 20
    ಯಾಂತ್ರಿಕ್ ( ಇಲೆಕ್ಟ್ರಿಕಲ್ ) ಡಿಪ್ಲೋಮಾ 13
    ಯಾಂತ್ರಿಕ್ ( ಇಲೆಕ್ಟ್ರೀಷಿಯನ್ ) ಡಿಪ್ಲೋಮಾ 07

    ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ‌ ಹಾಗೂ ಗರಿ 22 ವರ್ಷ ಮೀರಿರಬಾರದು.

    ಪರೀಕ್ಷಾ ಶುಲ್ಕ : ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.250/-, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

    ನೋಟಿಫಿಕೇಶನ್

  • KHFWS : ಹುದ್ದೆಗಳ ನೇಮಕ

    ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 17-06-2021

    ಹುದ್ದೆ : ಪ್ರೊಕ್ಯೂರ್ ಮೆಂಟ್ ಕನ್ಸಲ್ಟೆಂಟ್ ಹುದ್ದೆಯನ್ನು‌ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಎಂಬಿಎ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಯೋಮಿತಿ : ಗರಿಷ್ಠ 65 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.55,000/- ವೇತನವನ್ನು ನಿಗದಿಪಡಿಸಲಾಗಿದೆ.

    ಆಸಕ್ತ ಅಭ್ಯರ್ಥಿಗಳು ಈ ಲಿಂಕ್ ಮೂಲಕ ವೆಬ್‌ಸೈಟ್‌ ಗೆ ಭೇಟಿ ನೀಡಿ ಅಲ್ಲಿ ನೀಡಲಾಗಿರುವ ಗೂಗಲ್ ಫಾರ್ಮಾಟ್ ಲಿಂಕ್ ಮೂಲಕ ಜೂನ್, 17 ಸಂಜೆ 5 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

    ಆನ್ಲೈನ್ ಅಪ್ಲಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ನೋಟಿಫಿಕೇಶನ್