Category: Govt Jobs

  • Mazagon Dock : 1388 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ ‌04,2021

    ಹುದ್ದೆಗಳ ವಿವರ : 1388 ನಾನ್ ಎಕ್ಸಿಕ್ಯುಟಿವ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಎಸ್ ಎಸ್ ಸಿ, ಎನ್ ಟಿಸಿ, ಎನ್ ಎಸಿ, 8 ನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಯೋಮಿತಿ : ಜೂನ್ 1, 2021ರ ಅನ್ವಯ, ಕನಿಷ್ಠ 18 ವರ್ಷ ಹಾಗೂ ಗರಿಷ್ಠ 38 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನೇಮಕಾತಿ ನಿಯಮಾನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.17,000/- ರಿಂದ ರೂ.64,360/- ವೇತನ ನಿಗದಿಪಡಿಸಲಾಗಿದೆ.

    ಅಭ್ಯರ್ಥಿಗಳನ್ನು ಟ್ರೇಡ್ ಪರೀಕ್ಷೆ, ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ.100/- ಅರ್ಜಿ ಶುಲ್ಕವನ್ನು ಪಾವತಿಸಬೇಕು. ಪರಿಶಿಷ್ಟ ಜಾತಿ/ ಅಂಗವಿಕಲ/ ಮಾಜಿ ಸೈನಿಕ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಾಡಿ.

    ನೋಟಿಫಿಕೇಶನ್

  • ASC ಸೆಂಟರ್ ( ಸೌತ್)100 ಹುದ್ದೆಗಳು: ಸಿವಿಲ್ ಮೋಟಾರ್ ಡ್ರೈವರ್, ಕ್ಲೀನರ್ ಹುದ್ದೆ

    ದೇಶದ ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ಕೇಂದ್ರ ಸರಕಾರದ ಇಲಾಖೆಯಾಗಿರುವ ಎಎಸ್ ಸಿ ( ದಕ್ಷಿಣ) ( ಆರ್ಮಿ ಸರ್ವಿಸ್ ಕೋರ್ಪ್ಸ್ ಸೆಂಟರ್ ಸೌತ್ ) ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ‌ಆಹ್ವಾನಿಸಲಾಗಿದೆ.

    ಹುದ್ದೆಗಳ ವಿವರ : ಸಿವಿಲ್ ಮೋಟಾರ್ ಡ್ರೈವರ್ – 42 ಕ್ಲೀನರ್- 40
    ಕುಕ್ – 15
    ಸಿವಿಲಿಯನ್ ಕ್ಯಾಟರಿಂಗ್ ಇನ್ಸ್ಟ್ರಕ್ಟರ್ -3 ಹುದ್ದೆಗಳಿವೆ.

    ಹುದ್ದೆ ಸ್ಥಳ : ಅಸ್ಸಾಂ, ಹರ್ಯಾಣ, ಕರ್ನಾಟಕ, ಮಹಾರಾಷ್ಟ್ರ

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 12-06-2021
    ಅರ್ಜಿ‌ ಸಲ್ಲಿಸಲು ಕೊನೆಯ ದಿನಾಂಕ : 11-07-2021

    ಶೈಕ್ಷಣಿಕ ಅರ್ಹತೆ : ಸಿವಿಲ್ ಮೋಟಾರ್ ಡ್ರೈವರ್, ಕ್ಲೀನರ್, ಕುಕ್ ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿರಬೇಕು.
    ಸಿವಿಲ್ ಕ್ಯಾಟರಿಂಗ್ ಕನ್ಸ್ಟ್ರಕ್ಟರ್ ಹುದ್ದೆಗೆ ಎಸ್ ಎಸ್ ಎಲ್ ಸಿ ಜೊತೆಗೆ ಡಿಪ್ಲೋಮಾ ಹೊಂದಿರಬೇಕು.

    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 25 ವಯೋಮಿತಿ ಹೊಂದಿರಬೇಕು.
    ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಸಿ, ಎಸ್ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ದಿನಾಂಕ 11-07-2021 ರೊಳಗೆ ಸಲ್ಲಿಸಬೇಕು.
    ವಿಳಾಸ : Preceding officer,civiliay direct recruitment board,chq,asc,centre south-2 ATC, Agram Post BANGALORE-530007

  • ಸೇನಾ ಹುದ್ದೆಗಳಿಗೆ ಯುಪಿಎಸ್ ಸಿ ಪರೀಕ್ಷಾ ದಿನಾಂಕ ಪ್ರಕಟ

    ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿಯ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

    ಸೆಪ್ಟೆಂಬರ್ 05 ರಂದು ಪರೀಕ್ಷೆ ನಡೆದಲು ನಿರ್ಧರಿಸಲಾಗಿದೆ. ಸೇನೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು upsc.gov.in ಮತ್ತು upsconline.nic.in ವೆಬ್ ಸೈಟ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ‌ ನೀಡಲಾಗಿದೆ.

    ಆನ್ಲೈನ್ ಅರ್ಜಿ‌ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 29 ಕೊನೆಯ ದಿನಾಂಕವಾಗಿರುತ್ತದೆ ಎಂದು ಯುಪಿಎಸ್ ಸಿಯ ಪ್ರಕಟಣೆ ತಿಳಿಸಿದೆ.

    ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸಂದರ್ಶನಕ್ಕೆ ಕರೆಯಲಾಗುವುದು. ಇಲ್ಲಿ ಆಯ್ಕೆ ಯಾದವರನ್ನು ಭೂಸೇನೆ, ವಾಯುದಳ ಮತ್ತು ನೌಕಾದಳದ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ.

    ವಿದ್ಯಾರ್ಹತೆ : ಈ ಪರೀಕ್ಷೆ ತೆಗೆದುಕೊಳ್ಳಲು ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. 18 ವರ್ಷ ವಯಸ್ಸಿನವರಾಗಿರಬೇಕು.

    ಅಭ್ಯರ್ಥಿಗಳು ಯುಪಿಎಸ್ ಸಿ ಅಧಿಕೃತ ವೆಬ್‌ಸೈಟ್‌ upsconline.nic.in ಗೆ ಭೇಟಿ ನೀಡಿ, ಅಲ್ಲಿರುವ, ಆನ್ಲೈನ್ ಅಪ್ಲಿಕೇಶನ್ ಫಾರ್ ವೇರಿಯಸ್ ಪೋಸ್ಟ್ ಎಂಬ ಸಾಲಿನ ಮೇಲೆ ಕ್ಲಿಕ್ ಮಾಡಿ. ನಂತರ registration link ಮೇಲೆ ಕ್ಲಿಕ್ ಮಾಡಿ. ಅರ್ಜಿಯಲ್ಲಿ ರುವ ಎಲ್ಲಾ ಮಾಹಿತಿಯನ್ನು ತುಂಬಿ, ನಿಮ್ಮ‌ಭಾವಚಿತ್ರ ಮತ್ತು ಸಹಿಯನ್ನು ಅಲ್ಲಿ ನೀಡಿರುವ ಮಾಹಿತಿಯಂತೆ ಅಪ್ಲೋಡ್ ಮಾಡಿ. ಶುಲ್ಕ ಭರಿಸಿ. ದಾಖಲಾಗಿರುವ ಅರ್ಜಿಯನ್ನು ಪರಿಶೀಲಿಸಿ, ಸಬ್ಮಿಟ್ ಮಾಡಿ. ದಾಖಲಾತಿ ನಂಬರ್ ಬರೆದಿಟ್ಟುಕೊಳ್ಳಿ.

  • ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ : ಹುದ್ದೆಗಳ ನೇಮಕ

    ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಕಾರ್ಯಾಲಯ ಶೋಧನಾ ಸಮಿತಿ, ಬೆಂಗಳೂರು ಇಲ್ಲಿ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯದ ಉಪಕುಲಪತಿಗಳ ಹುದ್ದೆಗೆ ನೇಮಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಜಿದಾರರು ದಿನಾಂಕ 13-07-2021 ಕ್ಕೆ 62 ವರ್ಷಗಳ ವಯಸ್ಸನ್ನು ಮೀರಿರಬಾರದು.

    ಅರ್ಜಿಗಳನ್ನು ಅಭ್ಯರ್ಥಿಗಳು ಈ ಕೆಳಗಿನ ವಿಳಾಸಕ್ಕೆ ದಿನಾಂಕ 28-06-2021 ರ ಸಂಜೆ 5:30 ಗಂಟೆಯೊಳಗೆ ನಾಲ್ಕು ಪ್ರತಿಗಳಲ್ಲಿ ಸಂಚಾಲಕರು- ಶೋಧನಾ ಸಮಿತಿ, ಕೊಠಡಿ ಸಂಖ್ಯೆ : 611, 6 ನೇ‌ ಮಹಡಿ, 4 ನೇ ಗೇಟ್, ಬಹುಮಹಡಿಗಳ ಕಟ್ಟಡ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು – 560001

  • ಅಂಗನವಾಡಿ ಖಾಲಿ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ಜುಲೈ 1 ರಿಂದ ಆರಂಭ

    ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ‌ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಜುಲೈ 1 ರಿಂದ ಆರಂಭಿಸಿ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ರಾಜ್ಯ‌ ಕಾನೂನು ಸೇವಾ ಪ್ರಾಧಿಕಾರ‌ ಶಿಫಾರಸು ಮಾಡಿದೆ.

    2011 ರಲ್ಲಿ ಸಲ್ಲಿಕೆಯಾಗಿರುವ ಅಪೌಷ್ಟಿಕತೆ ನಿವಾರಣೆಗೆ‌ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಕ್ಕೆ ಸಲ್ಲಿಸಿದ ವರದಿಯಲ್ಲಿ ಈ ಶಿಫಾರಸು ಮಾಡಲಾಗಿದೆ. ಅಪೌಷ್ಟಿಕತೆ ನಿವಾರಣೆಗೆ ಸಂಬಂಧಿಸಿದ ಸರಕಾರದ ಕಾರ್ತಕ್ರಮಗಳ ಮೇಲ್ವಿಚಾರಣೆ ನಡೆಸಿ ಅಗತ್ಯ ಶಿಫಾರಸುಗಳನ್ನು ನೀಡಲು ಹೈಕೋರ್ಟ್ ನೇಮಕ ಮಾಡಿರುವ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡರ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ‌ಸಹಾಯಕಿಯರ ಹುದ್ದೆಗಳ ಭರ್ತಿಗೆ ಮಧ್ಯಂತರ ಶಿಫಾರಸು ‌ನೀಡಲಾಗಿದೆ.

    ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್. ಶಶಿಧರ ಶೆಟ್ಟಿ ಸಮಿತಿಯ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಮಾಹಿತಿಯಂತೆ ರಾಜ್ಯದಲ್ಲಿ 1,418 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 2,411 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದಾವೆ. ಇಷ್ಟೊಂದು ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇರುವುದು ಅಪೌಷ್ಟಿಕತೆ ನಿವಾರಣೆ, ನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಖಾಲಿ ಇರುವ ಹುದ್ದೆಗೆ ವೇಳಾಪಟ್ಟಿ ಮಾಡಬೇಕು. ಜುಲೈ 1 ರಿಂದ ಅರ್ಜಿ ಆಹ್ವಾನಿಸಬೇಕು. ಅರ್ಜಿ ಆಹ್ಬಾನಕ್ಕೆ ಜು.31 ಕೊನೆ ದಿನಾಂಕವಾಗಿರಬೇಕು. ಆ.15 ಕ್ಕೆ ಅರ್ಜಿಗಳ ಪರಿಶೀಲನೆ ನಡೆಯಬೇಕು. ಡಿಸಿ ನೇತೃತ್ವದ ಆಯ್ಕೆ ಸಮಿತಿ ಆ.31 ಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಸೆ. 15 ಕ್ಕೆ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿ‌ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಅ.10ಕ್ಕೆ ಅಂತಿಮ ಪಟ್ಟಿ ಪ್ರಕಟಿಸಬೇಕು. ಅ.30 ಕ್ಕೆ ನೇಮಕಾತಿ ಆದೇಶ ‌ನೀಡಬೇಕೆಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

  • ಜಿಲ್ಲಾ ಆರೋಗ್ಯ ಮತ್ತು ಕು.ಕ.ಸಂಘ ಬೆಂಗಳೂರು : ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

    ಬೆಂಗಳೂರು ನಗರ ಜಿಲ್ಲೆಯಲ್ಲಿ 2021-22 ನೇ ಸಾಲಿಗೆ ಎನ್ ಹೆಚ್ ಎಂ ಯೋಜನೆಯ ವಿವಿಧ ಕಾರ್ಯಕ್ರಮದಡಿ ಖಾಲಿ ಇರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗನ್ನು ಗುತ್ತಿಗೆ ಆಧಾರದ ಮೇಲೆ ಎನ್ ಹೆಚ್ ಎಂ ಮಾರ್ಗಸೂಚಿಯಂತೆ ನಿಯಮಾನುಸಾರ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳ ನೇರ ಸಂದರ್ಶನಕ್ಕೆ ಆಹ್ವಾನಿಸಿದೆ

    ಹುದ್ದೆಗಳ ವಿವರ : ಎಸ್.ಎನ್.ಸಿ ಯು ವೈದ್ಯಾಧಿಕಾರಿಗಳು : 10 ಹುದ್ದೆ ಗಳು : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 50,000/- ವೇತನವಿರುತ್ತದೆ. ಅಭ್ಯರ್ಥಿಗಳು ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿ‌ ಕಡ್ಡಾಯವಾಗಿ ಇಂಟರ್ನ್ ಶಿಪ್ ಪೂರೈಸಿ ಕೆ.ಎಂ.ಸಿ ನೋಂದಣಿ ಹೊಂದಿರಬೇಕು. ಅಭ್ಯರ್ಥಿಗಳ ವಯೋಮಿತಿಯು 60 ವರ್ಷ ಒಳಗಿರತಕ್ಕದ್ದು.

    ಟೆಲಿಮಡಿಸಿನ್ ವೈದ್ಯಾಧಿಕಾರಿಗಳು : 8 ಹುದ್ದೆಗಳು: ಮಾಸಿಕ ವೇತನ ರೂ.45,000/- ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿ‌ ಕಡ್ಡಾಯವಾಗಿ ಇಂಟರ್ನ್ ಶಿಪ್ ಪೂರೈಸಿ ಕೆ.ಎಂ.ಸಿ ನೋಂದಣಿ ಹೊಂದಿರಬೇಕು.ಅಭ್ಯರ್ಥಿಗಳ ವಯೋಮಿತಿಯು 60 ವರ್ಷ ಒಳಗಿರತಕ್ಕದ್ದು.

    ಎನ್.ಪಿ.ಸಿ.ಡಿ.ಸಿ.ಎಸ್. ವೈದ್ಯಾಧಿಕಾರಿಗಳು : 2 ಹುದ್ದೆಗಳು : ಅಭ್ಯರ್ಥಿಗಳಿಗೆ ಮಾಸಿಕ ರೂ.46,200/- ವೇತನವಿರುತ್ತದೆ. ಅಭ್ಯರ್ಥಿಗಳು ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿ‌ ಕಡ್ಡಾಯವಾಗಿ ಇಂಟರ್ನ್ ಶಿಪ್ ಪೂರೈಸಿ ಕೆ.ಎಂ.ಸಿ ನೋಂದಣಿ ಹೊಂದಿರಬೇಕು.ಅಭ್ಯರ್ಥಿಗಳ ವಯೋಮಿತಿಯು 60 ವರ್ಷ ಒಳಗಿರತಕ್ಕದ್ದು.

    ಶ್ರುಶ್ರೂಷಕಿಯರು‌: 126 ಹುದ್ದೆಗಳು : ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿಎಸ್ ಸಿ/ ಜಿಎನ್ ಎಂ ತರಬೇತಿ ಹಾಗೂ ಕೆಎನ್ ಸಿ ನೋಂದಣಿ ಹೊಂದಿ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮಾಸಿಕ ವೇತನ ರೂ.11,500/+ 13% EPF. ಅಭ್ಯರ್ಥಿಗಳ ವಯೋಮಿತಿಯು 40 ವರ್ಷ ಒಳಗಿರತಕ್ಕದ್ದು.

    ಫಾರ್ಮಸಿಸ್ಟ್ : 4 ಹುದ್ದೆಗಳು : ಡಿ.ಫಾರ್ಮ/ಬಿ.ಫಾರ್ಮ ಪದವಿಯೊಂದಿಗೆ ಕರ್ನಾಟಕ ಫಾರ್ಮಸಿ ಕೌನ್ಸಿಲ್ ನಲ್ಲಿ ನೋಂದಣಿ ಹೊಂದಿ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮಾಸಿಕ ವೇತನ ರೂ.11,025/+ 13% EPF. ಅಭ್ಯರ್ಥಿಗಳ ವಯೋಮಿತಿಯು 40 ವರ್ಷ ಒಳಗಿರತಕ್ಕದ್ದು.

    ಪ್ರಯೋಗಶಾಲಾ ತಂತ್ರಜ್ಞರು : 1 ಹುದ್ದೆ : DMLT ಪದವಿಯೊಂದಿಗೆ ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿಯನ್ನು ಹೊಂದಿ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.ಮಾಸಿಕ ವೇತನ ರೂ.14,000/- + 13% EPF. ಅಭ್ಯರ್ಥಿಗಳ ವಯೋಮಿತಿಯು 40 ವರ್ಷ ಒಳಗಿರತಕ್ಕದ್ದು.

    ಈ ಮೇಲ್ಕಂಡ ಹುದ್ದೆಗಳಿಗೆ ಪ್ರತಿ ಸೋಮವಾರ ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆ ಒಳಗಾಗಿ ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿಗಳ ಕಚೇರಿಯಲ್ಲಿ ಪಡೆದು ನೋಂದಣಿ ಮಾಡಿಕೊಂಡು, ನೋಂದಣಿಯಾದ ಅರ್ಹ ಅಭ್ಯರ್ಥಿಗಳನ್ನು ಮಾತ್ರ ದಾಖಲಾತಿ ಪರಿಶೀಲನೆಗೆ ಪರಿಗಣಿಸಲಾಗುತ್ತದೆ.

    ಈ ಪ್ರಕಟಣೆಯು Rolling Advertisement ಆಗಿರುವುದರಿಂದ ಅವಧಿಯು 31-03-2022 ರವರೆಗೆ ಇರುತ್ತದೆ.

    ಆಸಕ್ತಿಯುಳ್ಳ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ತಮ್ಮ ಮೂಲ ದಾಖಲೆಗಳೊಂದಿಗೆ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಜಿಲ್ಲಾ ಆರ್ ಸಿಹೆಚ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ,ಹಳೇ ಟಿ.ಬಿ.ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ, ಇಂದಿರಾನಗರ, ಬೆಂಗಳೂರು-38 ಇಲ್ಲಿ ಹಾಜರಾಗುವುದು.