Category: Govt Jobs

  • Indian Coast Guard : ಪುರುಷ ಅಭ್ಯರ್ಥಿಗಳಿಗೆ ಉದ್ಯೋಗವಕಾಶ

    ಭಾರತೀಯ ಕರಾವಳಿ ಕಾವಲು ಪಡೆಯು ಕೇಂದ್ರ ಸರಕಾರದ ಸಶಸ್ತ್ರ ಪಡೆಯಾಗಿದ್ದು, ಯುವ ಮತ್ತು ಕ್ರಿಯಾಶೀಲ ಭಾರತೀಯ ಪುರುಷ ಅಭ್ಯರ್ಥಿಗಳಿಗೆ ವಿವಿಧ ಶಾಖೆಗಳಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ( ಗ್ರೂಪ್ ಎ ಗಜೆಟೆಡ್ ಆಫೀಸರ್) ಸವಾಲುದಾಯಕ ವೃತ್ತಿಯನ್ನು ಒದಗಿಸುತ್ತಿದೆ.

    ಹುದ್ದೆಗಳ ವಿವರ: ಜನರಲ್ ಡ್ಯೂಟಿ- ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಕನಿಷ್ಠ ಸರಾಸರಿ 60% ಅಂಕಗಳೊಂದಿಗೆ ( ಅಂದರೆ ಒಂದನೇ ಸೆಮಿಸ್ಟರ್ ನಿಂದ 8 ನೇ ಸೆಮಿಸ್ಟರ್ ವರೆಗೆ ಬಿ.ಇ/ಬಿ.ಟೆಕ್ ಕೋರ್ಸ್ ಪಡೆದವರಿಗೆ ಅಥವಾ ಒಂದನೇ ವರ್ಷದಿಂದ ಕೊನೆಯ ವರ್ಷದವರೆಗೆ ಬ್ಯಾಚುಲರ್ ಡಿಗ್ರಿ ಅಭ್ಯರ್ಥಿಗಳಿಗೆ ಯಾವುದು ಅನ್ವಯವಾಗುತ್ತದೆಯೋ ಅದು ) ಬ್ಯಾಚುಲರ್ ಡಿಗ್ರಿ ಪಡೆದಿರಬೇಕು.
    ತಾಂತ್ರಿಕ ( ಎಂಜಿನಿಯರಿಂಗ್ & ಎಲೆಕ್ಟ್ರಿಕಲ್) ಸರಾಸರಿ ಶೇ.60 ಅಂಕಗಳೊಂದಿಗೆ ಎಂಜಿನಿಯರಿಂಗ್ ಪದವಿ ಅಥವಾ ಸೆಕ್ಷನ್ ಎ ಮತ್ತು ಬಿ ಪರೀಕ್ಷೆಗಳನ್ನು ಇಂಜಿನಿಯರಿಂಗ್ ನಲ್ಲಿ ( ಇಂಡಿಯಾ) ದಿಂದ ಈ ಕೆಳಗೆ ಪಟ್ಟಿ ಮಾಡಿದ ಯಾವುದೇ ವಿಷಯದಲ್ಲಿ ಶೇ.60 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
    ಎಂಜಿನಿಯರಿಂಗ್ ಶಾಖೆ : ನೌಕಾ ವಾಸ್ತುಶಿಲ್ಪ, ಮೆಕ್ಯಾನಿಕಲ್ ಅಥವಾ ಮೆರೈನ್ ಅಥವಾ ಅಟೋಮೆಟ್ರಿಕ್ಸ್ ಅಥವಾ ಮೆಕೆಟ್ರಾನಿಕ್ಸ್ ಅಥವಾ ಇಂಡಸ್ಟ್ರಿಯಲ್ ಆ್ಯಂಡ್ ಪ್ರೊಡಕ್ಷನ್ ಅಥವಾ ಮೆಟಲರ್ಜಿ ಅಥವಾ ಡಿಸೈನ್ ಅಥವಾ ಏರೋನಾಟಿಕಲ್ ಅಥವಾ ಏರೋಸ್ಪೇಸ್

    ಎಲೆಕ್ಟ್ರಿಕಲ್ ಶಾಖೆ : ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಅಥವಾ ಟೆಲಿಕಮ್ಯುನಿಕೇಶನ್ ಅಥವಾ ಇನ್ಸ್ಟ್ರುಮೆಂಟೇಶನ್ ಅಥವಾ ಇನ್ಸ್ಟ್ರುಮೆಂಟೇಷನ್ ಆ್ಯಂಡ್ ಕಂಟ್ರೋಲ್ ಅಥವಾ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಅಥವಾ ಪವರ್ ಎಂಜಿನಿಯರಿಂಗ್ ಅಥವಾ ಪವರ್ ಎಲೆಕ್ಟ್ರಾನಿಕ್ಸ್.
    ಈ ಎಲ್ಲ ಎಂಜಿನಿಯರಿಂಗ್ ಶಾಖೆಗಳು ಅಖಿಲ ಭಾರತ ಶಿಕ್ಷಣ ಮಂಡಳಿ ( ಎಂಐಸಿಟಿಇ) ಯಿಂದ ಮಾನ್ಯತೆ ಪಡೆದಿರಬೇಕು.
    ಭೌತಶಾಸ್ತ್ರ ಮತ್ತು ಗಣಿತದಲ್ಲಿ 12 ನೇ ತರಗತಿಯಲ್ಲಿ ಸರಾಸರಿ 60% ಅಂಕ ಪಡೆದಿರಬೇಕು ಅಥವಾ ಸರಾಸರಿ 60% ಅಂಕಗಳೊಂದಿಗೆ ಮೂರು ವರ್ಷದ ಡಿಪ್ಲೋಮಾ ಕೋರ್ಸ್.

    ವಯೋಮಿತಿ : ಜನರಲ್ ಡ್ಯೂಟಿ ಹುದ್ದೆಗೆ 01-07-1997 ರಿಂದ 30-06-2001 ರ ಒಳಗೆ ಹುಟ್ಟಿದವರು. ( ಎರಡೂ ದಿನಾಂಕ ಸೇರಿ)

    ತಾಂತ್ರಿಕ ( ಎಂಜಿನಿಯರಿಂಗ್ & ಎಲೆಕ್ಟ್ರಿಕಲ್ ) ಹುದ್ದೆಗೆ 01-07-1997 ರಿಂದ 30-06-2001 ರ ಒಳಗೆ ಹುಟ್ಟಿದವರು. ( ಎರಡೂ ದಿನಾಂಕ ಸೇರಿ)

    ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ : 04-07-2021
    ಆನ್ಲೈನ್ ಅರ್ಜಿ‌ ಸಲ್ಲಿಕೆಗೆ ಕೊನೆಯ ದಿನಾಂಕ – 14-07-2021

    ಹೆಚ್ಚಿನ ಮಾಹಿತಿಗಾಗಿ www.joinindiancoastguard.gov.in ಗೆ ಭೇಟಿ ನೀಡಬಹುದು

  • ಬೀದರ್ 113 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

    ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿ ಪರಿಷ್ಕೃತ ಮಾರ್ಗಸೂಚಿಯಂತೆ, ಬೀದರ್ ಜಿಲ್ಲೆಯ 05 ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಖಾಲಿ ಇರುವ 17 ಅಂಗನವಾಡಿ ಕಾರ್ಯಕರ್ತೆಯರ ಹಾಗೂ ‌96 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಸೇರಿದಂತೆ ಒಟ್ಟು 113 ಗೌರವ ಸೇವೆಯ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-07-2021 ರ ಒಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

    ಅಭ್ಯರ್ಥಿಯ ವಯಸ್ಸು 18-35 ವರ್ಷದೊಳಗಿನವರಾಗಿರಬೇಕು. ( ಕಾರ್ಯಕರ್ತರ ಹುದ್ದೆಗಳಿಗೆ ಮಾತ್ರ ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ಅಂದರೆ ಗರಿಷ್ಠ 45 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ)

    ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.

    ಅಂಗವಿಕಲರು ಸಹಾಯಕಿ ಹುದ್ದೆಗೆ ಅನರ್ಹರಾಗಿರುತ್ತಾರೆ.

    ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭ : 25-06-2021
    ಅರ್ಜಿಗಳನ್ನು ಸಲ್ಲಿಕೆಯ ಕೊನೆಯ ದಿನಾಂಕ : 31-07-2021
    ಆಯ್ಕೆ ಸಮಿತಿಯಿಂದ ಅರ್ಜಿಗಳ ಪರಿಶೀಲನೆ : 10-08-2021
    ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಮಿತಿಯಿಂದ ಅನುಮೋದನೆ ಪಡೆಯುವುದು : 24-08-2021
    ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಿರುವ ಹಾಗೂ ಸಾರ್ವಜನಿಕ ಆಕ್ಷೇಪಣೆ ಸಲ್ಲಿಸುವಿಕೆಗೆ ಕಾಲಾವಕಾಶ : 03-09-2021
    ಬಂದ ಆಕ್ಷೇಪಣೆಗಳನ್ನು ಪರಿಶೀಲನೆ : 24-09-2021
    ಅಂತಿಮ ಆಯ್ಕೆ ಪಟ್ಟಿಗೆ ಸಮಿತಿಯಿಂದ ಅನುಮೋದನೆ ಪಡೆಯುವುದು: 22-10-2021

  • HKRDB ಯಿಂದ ವಿವಿಧ ಹುದ್ದೆಗಳ ನೇಮಕ : ಅರ್ಜಿ ಸಲ್ಲಿಕೆಗೆ ಜುಲೈ 3 ಕೊನೆಯ ದಿನಾಂಕ

    ಕ.ಕ.ಪ್ರ.ಅ.ಮಂಡಳಿ ಕಲಬುರಗಿ ಕಾರ್ಯಾಲಯದಲ್ಲಿ ಮಂಜೂರಾಗಿ ತೆರವಾಗಿರುವ ಹುದ್ದೆಗಳಿಗೆದುರಾಗಿ ನಿವೃತ್ತ ಅಧಿಕಾರಿ/ಸಿಬ್ಬಂದಿಯವರನ್ನು ಹೊರಗುತ್ತಿಗೆ/ ಗೌರವಧನದ ಆಧಾರದ ಮೇಲೆ ಪಡೆದುಕೊಳ್ಳಲಾಗುವುದು. ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ:

    ಹುದ್ದೆ : ಕಾರ್ಯನಿರ್ವಾಹಕ ಅಭಿಯಂತರರು -01 ಹುದ್ದೆ. ಈ ಹುದ್ದೆಗೆ ಅರ್ಜಿ‌ ಸಲ್ಲಿಸುವ ಅಭ್ಯರ್ಥಿಗಳು pwd, pref,mi,res,kuws&db ಮತ್ತು KRIDL ಇಲಾಖೆಗಳ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಕನಿಷ್ಠ 05 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು.

    ಸಹಾಯಕ ಅಭಿಯಂತರರು – 05 ಹುದ್ದೆಗಳು. ಈ ಹುದ್ದೆಗೆ ಅರ್ಜಿ‌ ಸಲ್ಲಿಸುವ ಅಭ್ಯರ್ಥಿಗಳು pwd, pref,mi,res,kuws&db ಮತ್ತು KRIDL ಇಲಾಖೆಗಳ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಕನಿಷ್ಠ 05 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಕಿರಿಯ/ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು.

    ಜ್ಯೂನಿಯರ್ ಪ್ರೋಗ್ರಾಮರ್- 02 ಹುದ್ದೆಗಳು. ಎಂಸಿಎ, ಎಂಎಸ್ಸಿ( ಸಿಎಸ್), ಹೆಚ್ ಟಿಎಂಎಲ್,c#asp.net,mssql, ಎರಡು ವರ್ಷ ಅನುಭವ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಗೌರವಧನ ಧನ ರೂ.15,000/-

    ಕಂಪ್ಯೂಟರ್ ಅಪರೇಟರ್ – 02 ಹುದ್ದೆಗಳು. ಈ ಹುದ್ದೆಗೆ ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಕಡ್ಡಾಯವಾಗಿ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ತಿಳಿದಿರಬೇಕು. ಕಡ್ಡಾಯವಾಗಿ ಸರಕಾರದ ಯಾವುದೇ ಸರಕಾರದ ಕಚೇರಿಯಲ್ಲಿ ಕೆಲಸ ನಿರ್ವಹಿಸಿರಬೇಕು. ( ಸಂಭಾವನೆ ಕನಿಷ್ಠ ವೇತನ ಕಾಯ್ದೆ ಅನ್ವಯ)

    ಆಸಕ್ತಿಯುಳ್ಳ ನಿವೃತ್ತ ಅಧಿಕಾರಿ/ಸಿಬ್ಬಂದಿಯವರು ಹಾಗೂ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಅವಶ್ಯಕ ದಾಖಲಾತಿಗಳೊಂದಿಗೆ ಈ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಲು ದಿನಾಂಕ 03-07-2021 ರಂದು ಸಾಯಂಕಾಲ 5.30 ರೊಳಗೆ (ರಜಾದಿನ ಹೊರತು ಪಡಿಸಿ) ಕಚೇರಿ ವೇಳೆಯಲ್ಲಿ ಸಲ್ಲಿಸಬಹುದಾಗಿದೆ.
    ದಿನಾಂಕ 06-07-2021 ರಂದು ಬೆಳಿಗ್ಗೆ 10.00 ಗಂಟೆಗೆ ನಿವೃತ್ತ ಅಧಿಕಾರಿ/ ಸಿಬ್ಬಂದಿಯವರು ಹಾಗೈ ಅಭ್ಯರ್ಥಿಗಳ ರವರ ದಾಖಲಾತಿಗಳ ಪರಿಶೀಲನೆ ಹಾಗೂ ಸಂದರ್ಶನ ಮತ್ತು ದಿನಾಂಕ 07-07-2021 ರಂದು ಬೆಳಿಗ್ಗೆ 10.00 ಗಂಟೆಗೆ ಕಂಪ್ಯೂಟರ್ ಅಪರೇಟರ್ ರವರ ಲಿಖಿತ ಪರೀಕ್ಷೆ ಮಂಡಳಿಯ ಕಾರ್ಯಾಲಯ ದಲ್ಲಿ ನಿಗದಿಪಡಿಸಲಾಗಿದೆ.

    ಹೆಚ್ಚಿನ ವಿವರಗಳನ್ನು ಕಚೇರಿಯ ಕೆಲಸದ ದಿನಗಳಲ್ಲಿ ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ: ನೇರ ಸಂದರ್ಶನ ದಿನಾಂಕ ಮುಂದೂಡಿಕೆ

    ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಯಾದಗಿರಿಯಲ್ಲಿ ಖಾಲಿ ಇದ್ದ ಬೋಧಕ ಸಿಬ್ಬಂದಿಗಳ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು.

    ನೇರ ನೇಮಕಾತಿ ಪ್ರಕ್ರಿಯೆಯು 28-06-2021 ರಂದು ನಿಗದಿಪಡಿಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿರುತ್ತದೆ.

    ನೇರ ನೇಮಕಾತಿ ಸಂದರ್ಶನಕ್ಕೆ ಹಾಜರಾಗಬೇಕಾಗಿರುವ ಅಭ್ಯರ್ಥಿಗಳು ಮುಂದಿನ ದಿನಾಂಕಗಳನ್ನು http://dme.karnataka.gov.in ವೆಬ್‌ಸೈಟ್‌ ನಲ್ಲಿ ತಿಳಿಸಲಾಗುವುದು. ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ಸಂದರ್ಶನದ ದಿನಾಂಕವನ್ನು ನೋಡಲು ಕೋರಲಾಗಿದೆ.

  • KRIDL : ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಬೆಂಗಳೂರಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣದ ಸಲುವಾಗಿ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ / ಹೊರಗುತ್ತಿಗೆ ಆಧಾರದ ಮೇಲೆ ಹಿರಿಯ ಅಭಿಯಂತರರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ.

    ಹುದ್ದೆ : ಸೀನಿಯರ್ ಎಂಜಿನಿಯರ್ ( ಸಿವಿಲ್) – 1 ಹುದ್ದೆ

    ವಿದ್ಯಾರ್ಹತೆ : ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಗ್ರಾಜ್ಯುಯೇಶನ್ ಮಾಡಿರಬೇಕು.

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40,000/- ಮಾಸಿಕ ವೇತನವಿರುತ್ತದೆ.

    ವಯೋಮಾನ : ಪ್ರಕಟಣೆ ಹೊರಡಿಸಿದ ‌ದಿನಾಂಕಕ್ಕೆ 65 ವರ್ಷಗಳು ಮೀರಿರಬಾರದು.

    ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ, ಅರ್ಜಿ ಜೊತೆಗೆ ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮಾರ್ಥ್ಯಗಳು ಮತ್ತು ರೆಸ್ಯೂಮ್ ಅನ್ನು ಮುಖ್ಯ ಅಭಿಯಂತರರು ( ಬಿಬಿಎಂಪಿ), ಕೆಆರ್ ಐಡಿಎಲ್, 4&5 ನೇ ಮಹಡಿ, ಗ್ರಾಮೀಣಾಭಿವೃದ್ಧಿ ಭವನ, ಆನಂದರಾವ್ ವೃತ್ತ, ಬೆಂಗಳೂರು – 560009 ಈ ವಿಳಾಸಕ್ಕೆ ಅರ್ಜಿಯ ಹಾರ್ಡ್ ಪ್ರತಿಯನ್ನು ದಿನಾಂಕ: 05-07-2021 ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು.

    ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಕೆನರಾ ಬ್ಯಾಂಕ್ : ಆರ್ಥಿಕ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ

    ಕೆನರಾ ಬ್ಯಾಂಕ್, ಪ್ರವರ್ತಿಸಿರುವ ಬೆಂಗಳೂರು ಜಿಲ್ಲೆ, ಆನೇಕಲ್ ತಾಲ್ಲೂಕಿನ ಆರ್ಥಿಕ ಸಾಕ್ಷರತ ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇರೆಗೆ ” ಆರ್ಥಿಕ ಸಲಹೆಗಾರ” ಹುದ್ದೆಗೆ ಬ್ಯಾಂಕಿನ ನಿವೃತ್ತ/ ಸ್ವ ಇಚ್ಛೆಯಿಂದ ನಿವೃತ್ತಿ ಹೊಂದಿದ 62 ವರ್ಷದ ಒಳಗಿನ ಪ್ರಬಂಧಕರು/ ಹಿರಿಯ ಪ್ರಬಂಧಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹೆಚ್ಚಿನ ಮಾಹಿತಿ ಮತ್ತು ನಿಬಂಧನೆಗಳಿಗೆ ‌ಹಾಗೂ‌ ಅರ್ಜಿ ನಮೂನೆಗಳಿಗಾಗಿ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ : ಕೃಷಿ ಸಾಲ ವಿಭಾಗ,‌ಕೆನರಾ ಬ್ಯಾಂಕ್, ಪ್ರಾದೇಶಿಕ ಕಚೇರಿ- ಪೂರ್ವ, ಸ್ಪೆನ್ಸರ್ ಟವರ್, ಎಂ.ಜಿ.ರಸ್ತೆ, ಬೆಂಗಳೂರು – 560001

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-07-2021
    ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9845461668