
ಭಾರತೀಯ ಸಶಸ್ತ್ರ ಪಡೆಗಳ ಅಡಿಯಲ್ಲಿ ಭಾರತೀಯ ನೌಕಾಪಡೆಯು ನಾವಿಕ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು 2021 ಬಿಡುಗಡೆ ಮಾಡಿದೆ. ಕ್ರೀಡಾ ಕೋಟಾ ಪ್ರವೇಶ 2022 ರ ಬ್ಯಾಚ್ ನ ಹಲವಾರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅವಿವಾಹಿತ ಕ್ರೀಡಾಪಟುಗಳಿಂದ( ಅವಿವಾಹಿತ ಪುರುಷ? ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಪ್ರಿಲ್ 2022 ರಲ್ಲಿ ಪ್ರಾರಂಭವಾಗುವ ಕೋರ್ಸ್ ನ್ನು ಭಾರತದಲ್ಲಿನ ಭಾರತೀಯ ನೌಕಾಪಡೆಯ ಘಟಕಗಳಲ್ಲಿ ಪೂರ್ಣ ಸಮಯದ ಆಧಾರದ ಮೇಲೆ ಪೋಸ್ಟ್ ಮಾಡಲಾಗುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು […]
Source
Category: Govt Jobs
-

Indian Navy 2021 : ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ- ಸುದ್ದಿಜಾಲ ನ್ಯೂಸ್
-
Indian Navy 2021 : ನಾವಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ- ಸುದ್ದಿಜಾಲ ನ್ಯೂಸ್
ಭಾರತೀಯ ಸಶಸ್ತ್ರ ಪಡೆಗಳ ಅಡಿಯಲ್ಲಿ ಭಾರತೀಯ ನೌಕಾಪಡೆಯು ನಾವಿಕ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು 2021 ಬಿಡುಗಡೆ ಮಾಡಿದೆ. ಕ್ರೀಡಾ ಕೋಟಾ ಪ್ರವೇಶ 2022 ರ ಬ್ಯಾಚ್ ನ ಹಲವಾರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅವಿವಾಹಿತ ಕ್ರೀಡಾಪಟುಗಳಿಂದ( ಅವಿವಾಹಿತ ಪುರುಷ? ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಎಪ್ರಿಲ್ 2022 ರಲ್ಲಿ ಪ್ರಾರಂಭವಾಗುವ ಕೋರ್ಸ್ ನ್ನು ಭಾರತದಲ್ಲಿನ ಭಾರತೀಯ ನೌಕಾಪಡೆಯ ಘಟಕಗಳಲ್ಲಿ ಪೂರ್ಣ ಸಮಯದ ಆಧಾರದ ಮೇಲೆ ಪೋಸ್ಟ್ ಮಾಡಲಾಗುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಡಿ.11, 2021
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿ.25, 2021
ವಿದ್ಯಾರ್ಹತೆ : ಈ ಹುದ್ದೆಗೆ ಅರ್ಜಿ ಸಲ್ಲಿಸಲು 10+2 ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ ಸಂಸ್ಥೆ/ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ : ಭಾರತೀಯ ನೌಕಾಪಡೆ ನೇಮಕಾತಿ ನಾವಿಕ ಹುದ್ದೆಗಳಿಗೆ ಕನಿಷ್ಠ 17 ರಿಂದ ಗರಿಷ್ಠ 21 ವರ್ಷ ವಯೋಮಿತಿ ಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21,700/- ರಿಂದ 43,100/- ರೂ.ಗಳ ವರೆಗೆ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ಕಿರುಪಟ್ಟಿ ಮಾಡಿ ನಂತರ ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಭಾರತೀಯ ನೌಕಾಪಡೆ ನೇಮಕಾತಿ ನಾವಿಕ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ, ನಂತರ ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ, ಮಾಹಿತಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಅರ್ಜಿಯನ್ನು ಡಿ.25, 2021 ರೊಳಗೆ ತಲುಪಿಸಬೇಕಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಲಾದ ನೋಟಿಫಿಕೇಶನ್ ನೋಡಿ.
-
NVS : ಅಕೌಂಟ್ಸ್ ಅಧಿಕಾರಿ ಹುದ್ದೆ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ
ನವೋದಯ ವಿದ್ಯಾಲಯ ಸಮಿತಿಯಲ್ಲಿ ಜನರಲ್ ವ್ಯವಸ್ಥಾಪಕ, ಡೆಪ್ಯುಟಿ ಕಮಿಷನರ್ ಮತ್ತು ಅಕೌಂಟ್ಸಗ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅಧಿಸೂಚನೆಯನ್ನು ಓದಿ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 30, 2021
ಖಾಲಿ ಇರುವ ಹುದ್ದೆಗಳು : ಜನರಲ್ ವ್ಯವಸ್ಥಾಪಕ – 1 ಹುದ್ದೆ
ಡೆಪ್ಯುಟಿ ಕಮಿಷನರ್ – 1 ಹುದ್ದೆ
ಅಕೌಂಟ್ಸ್ ಅಧಿಕಾರಿ – 8 ಹುದ್ದೆಒಟ್ಟು 10 ಹುದ್ದೆ
ಶೈಕ್ಷಣಿಕ ವಿದ್ಯಾರ್ಹತೆ : ಈ ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳು ಬಿ.ಇ/ಬಿ.ಟೆಕ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ / ಸಂಸ್ಥೆ/ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು.
ವಯೋಮಿತಿ : ಡಿ.30, 2021 ರ ಅನ್ವಯ ಗರಿಷ್ಠ 55 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.
ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಜ ₹ 44,900/- ರಿಂದ ₹. 2,15,900/- ಗಳವರೆಗೆ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ಮಾಡಿ ತದನಂತರ ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್ ಲಿಂಕ್ ಕ್ಲಿಕ್ ಮಾಡಿ
-
ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಆಹ್ವಾನ
ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ, ಹಳೆಯಂಗಡಿ , ಕರ್ನಾಟಕ ಸರಕಾರದ ಅನುದಾನಕ್ಕೊಳಪಟ್ಟ ಈ ಸಂಸ್ಥೆಯಲ್ಲಿ ಇಲೆಕ್ಟ್ರಿಶಿಯನ್ ಮತ್ತು ಎಲೆಕ್ಟ್ರೋನಿಕ್ ವೃತ್ತಿಯಲ್ಲಿ ‘ವೃತ್ತಿತತ್ವ’ ಮತ್ತು ‘ ಪ್ರಾಯೋಗಿಕ’ ವಿಷಯಗಳಲ್ಲಿ ತರಬೇತಿ ನೀಡಲು ತಾತ್ಕಾಲಿಕ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ : ಸರಕಾರದಿಂದ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ( DEE), ಎಲೆಕ್ಟ್ರೋನಿಕ್ಸ್ ಮತ್ತು ಕಮ್ಯುನಿಕೇಶನ್ ( DEC) ಅಥವಾ ಎನ್.ಸಿ.ವಿ.ಟಿ ಮಾನ್ಯತೆ ಪಡೆದ ಐಟಿಐ ಮತ್ತು ಶಿಶಿಕ್ಷು ತರಬೇತಿಯನ್ನು ಮೇಲ್ಕಾಣಿಸಿದ ವೃತ್ತಿಯಲ್ಲಿ ಪಡೆದಿರಬೇಕು.
ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾ, ಭಾವಚಿತ್ರ, ವಿದ್ಯಾರ್ಹತೆ ಅಂಕಪಟ್ಟಿ, ಅನುಭವಗಳ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ತಾ.18-12-2021 ರ ಒಳಗೆ ಇ- ಮೇಲ್ ಮೂಲಕ [email protected] ಹಾಗೂ ಕಾಪಿಯನ್ನು [email protected] ಗೆ ಕಳುಹಿಸತಕ್ಕದ್ದು ಅಥವಾ ಮೇಲೆ ಸೂಚಿಸಿದಂತೆ ಸಂಸ್ಥೆಯ ವಿಳಾಸಕ್ಕೆ ಪೋಸ್ಟ್ ಮುಖಾಂತರ ಕಳುಹಿಸತಕ್ಕದ್ದು.
-

ದಿ ಮೈಕೊ ಎಂಪ್ಲಾಯೀಸ್ ಕೋ ಆಪರೇಟಿವ್ ಸೊಸೈಟಿ ಲಿ., ನಲ್ಲಿ ಉದ್ಯೋಗವಕಾಶ- ಸುದ್ದಿಜಾಲ ನ್ಯೂಸ್

ದಿ ಮೈಕೊ ಎಂಪ್ಲಾಯೀಸ್ ಕೋ ಆಪರೇಟಿವ್ ಸೊಸೈಟಿ ಲಿ., ಬೆಂಗಳೂರು ಇಲ್ಲಿ ಸಂಘದಲ್ಲಿ ಖಾಲಿ ಇರುವ ಲೆಕ್ಕಗರು ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಹಕಾರ ಸಂಘದಲ್ಲಿ ಅಥವಾ ಬ್ಯಾಂಕಿಂಗ್ ಸೇವೆಯಲ್ಲಿ ಕೆಲಸ ನಿರ್ವಹಿಸುವ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಹುದ್ದೆ : ಲೆಕ್ಕಿಗರು – 01 ಸಂಖ್ಯೆ ವಿದ್ಯಾರ್ಹತೆ : ಬಿ.ಕಾಂ/ ಎಂ.ಕಾಂ/ ಎಂಬಿಎ ಪದವಿ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ( ಕನಿಷ್ಠ 6 ತಿಂಗಳು ಪ್ರಮಾಣ ಪತ್ರ) ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ […]
Source -
ದಿ ಮೈಕೊ ಎಂಪ್ಲಾಯೀಸ್ ಕೋ ಆಪರೇಟಿವ್ ಸೊಸೈಟಿ ಲಿ., ನಲ್ಲಿ ಉದ್ಯೋಗವಕಾಶ- ಸುದ್ದಿಜಾಲ ನ್ಯೂಸ್
ದಿ ಮೈಕೊ ಎಂಪ್ಲಾಯೀಸ್ ಕೋ ಆಪರೇಟಿವ್ ಸೊಸೈಟಿ ಲಿ., ಬೆಂಗಳೂರು ಇಲ್ಲಿ ಸಂಘದಲ್ಲಿ ಖಾಲಿ ಇರುವ ಲೆಕ್ಕಗರು ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಹಕಾರ ಸಂಘದಲ್ಲಿ ಅಥವಾ ಬ್ಯಾಂಕಿಂಗ್ ಸೇವೆಯಲ್ಲಿ ಕೆಲಸ ನಿರ್ವಹಿಸುವ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.
ಹುದ್ದೆ : ಲೆಕ್ಕಿಗರು – 01 ಸಂಖ್ಯೆ
ವಿದ್ಯಾರ್ಹತೆ : ಬಿ.ಕಾಂ/ ಎಂ.ಕಾಂ/ ಎಂಬಿಎ ಪದವಿ ಹೊಂದಿರಬೇಕು.
ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ( ಕನಿಷ್ಠ 6 ತಿಂಗಳು ಪ್ರಮಾಣ ಪತ್ರ)
ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಉತ್ತೀರ್ಣತೆ.
ಅರ್ಜಿಯನ್ನು ಸಂಘದ ಕಚೇರಿಯಿಂದ ಕಚೇರಿ ಸಮಯದಲ್ಲಿ ಅಥವಾ ವೆಬ್ಸೈಟ್ www.boschmes.com ನಿಂದ ಪಡೆಯಬಹುದು.
ಅರ್ಜಿಯನ್ನು ದಿನಾಂಕ 20.12.2021 ರ ಒಳಗಾಗಿ ( ರಜಾ ದಿನ ಹೊರತುಪಡಿಸಿ) ಸಂಜೆ 5.00 ಘಂಟೆಯೊಳಗೆ ತಲುಪುವಂತೆ ಕಳುಹಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಅಥವಾ ಸಂಘವನ್ನು ಸಂಪರ್ಕಿಸಬೇಕಾಗಿ ವಿನಂತಿ.