Category: Govt Jobs

  • ಸರ್ ಸಿ.ವಿ‌.ರಾಮನ್ ಆಸ್ಪತ್ರೆಯಲ್ಲಿ ಹುದ್ದೆ, ನೇರ ಸಂದರ್ಶನಕ್ಕೆ ಆಹ್ವಾನ

    ಸರ್.ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ, ಇಂದಿರಾನಗರ, ಬೆಂಗಳೂರು ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಹುದ್ದೆ : ಬಯೋಮೆಡಿಕಲ್ ಇಂಜಿನಿಯರ್ – 1 ಹುದ್ದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30,000/- ವೇತನವನ್ನು ನೀಡಲಾಗುವುದು. ಒಬಿಸಿ ಅಭ್ಯರ್ಥಿಗಳು ಗರಿಷ್ಠ 35 ವರ್ಷ ವಯೋಮಿತಿಯನ್ನು ಮೀರಿರಬಾರದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/cat-1 ಅಭ್ಯರ್ಥಿಗಳು 40 ವರ್ಷ ವಯೋಮಿತಿ ಮೀರಿರಬಾರದು.

    ನೇರ ಸಂದರ್ಶನದ ಸ್ಥಳ ಮತ್ತು ಸಮಯ : ದಿನಾಂಕ 02-08-2021 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01:00 ಗಂಟೆಯವರೆಗೆ. ಸರ್ ವಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ, ಇಂದಿರಾನಗರ, ಬೆಂಗಳೂರು- 38

    6 ತಿಂಗಳ ಮಟ್ಟಿಗೆ ತಾತ್ಕಾಲಿಕವಾಗಿ ಗುತ್ತಿಗೆ, ಆಧಾರದ ಮೇಲೆ ನೇರ ಸಂದರ್ಶನದ ಮುಖಾಂತರ ( walk in interview) ದಿನಾಂಕ : 02-08-2021 ರಂದು ಬೆಳಿಗ್ಗೆ 10:30 ರ ಬೆಳಿಗ್ಗೆ 1:00 ಗಂಟೆಯವರೆಗೆ ವೈದ್ಯಕೀಯ ಅಧೀಕ್ಷಕರ ಕೊಠಡಿಯಲ್ಲಿ ನಡೆಸುತ್ತಿದ್ದು, ತಾವುಗಳು ಮೂಲ ದಾಖಲಾತಿ ಪ್ರಮಾಣ ಪತ್ರಗಳೊಂದಿಗೆ ಮತ್ತು ಒಂದು ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗುವುದು. ( ಅಭ್ಯರ್ಥಿಯ ವಯೋಮಿತಿ 40 ವರ್ಷದ ಒಳಗಿರಬೇಕು)

  • ಮೈಸೂರು ವಿಶ್ವವಿದ್ಯಾನಿಲಯದಲ್ಲಿ 4 ಪ್ರಾಜೆಕ್ಟ್ ಫೆಲೋ ಹುದ್ದೆ

    ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಪ್ರಾಜೆಕ್ಟ್ ಫೆಲೋ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ : 4 ಹುದ್ದೆಗಳು.

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.12,000/- ವೇತನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ : ಅಭ್ಯರ್ಥಿಗಳು 55% ಅಂಕಗಳನ್ನು ಎಂ.ಎಸ್ಸಿ ಇನ್ ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಫಿಸಿಕ್ಸ್, ಮೆಟಿರೀಯಲ್ ಸೈನ್ಸ್ ಪಡೆದಿರಬೇಕು.

    ಅಭ್ಯರ್ಥಿಗಳು ಇ-ಮೇಲ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02-08-2021

    ಇ-ಮೇಲ್ ವಿಳಾಸ : [email protected]
    [email protected]

  • ಹಾವೇರಿ ಜಿಲ್ಲೆಯಲ್ಲಿ 93 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಮಹಿಳೆಯರಿಂದ ಆನ್ಲೈನ್ ಅರ್ಜಿ ಆಹ್ವಾನ

    ಹಾವೇರಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 07 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ‌ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ‌ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.

    ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭದ ದಿನಾಂಕ : 22-07-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-08-2021 ಸಂಜೆ‌ 5 ಗಂಟೆ

    ಹುದ್ದೆ: 23 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 70 ಸಹಾಯಕಿಯರ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹಾವೇರಿ‌ ಜಿಲ್ಲೆಯ 07 ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಈ ಕೆಳಗೆ ಕಾಣಿಸಲಾದ ಗ್ರಾಮಗಳ / ನಗರ ಪ್ರದೇಶಗಳ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆ ಹಾಗೂ ಸಹಾಯಕಿಯಾಗಿ ಗೌರವ ಸೇವೆ ಸಲ್ಲಿಸಲು ಮೀಸಲಾತಿ ಹೊಂದಿದ 18 ರಿಂದ 35 ವರ್ಷದೊಳಗಿನ ಅರ್ಹ ಸ್ಥಳೀಯ ಗ್ರಾಮೀಣ ‌ಪ್ರದೇಶದಲ್ಲಿ ಅದೇ ಕಂದಾಯ ಗ್ರಾಮದ ಹಾಗೂ ನಗರ ಪ್ರದೇಶದ ‌ಕೇಂದ್ರದ ವ್ಯಾಪ್ತಿಯ ಕಂದಾಯ ವಾರ್ಡಿನ ಮಹಿಳಾ ಅಭ್ಯರ್ಥಿಗಳಿಂದ ಮಾತ್ರ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯಾಗಲು ಎಸ್ ಎಸ್ ಎಲ್ ಸಿ ತೇರ್ಗಡೆ ಆಗಿರಬೇಕು. ಹೆಚ್ಚಿನ ವಿದ್ಯಾರ್ಹತೆ ಪಡೆದಿದ್ದಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಆದರೆ ಆಯ್ಕೆ ಸಮಯದಲ್ಲಿ ಎಸ್ ಎಸ್ ಎಲ್ ಸಿ ಅಂಕಗಳನ್ನು ಮಾತ್ರ ಪರಿಗಣಿಸಲಾಗುವುದು. ಅಂಗನವಾಡಿ ಸಹಾಯಕಿಯಾಗಲು ಕನಿಷ್ಠ 4 ನೇ ತರಗತಿ ತೇರ್ಗಡೆಯಾಗಿದ್ದು, ಗರಿಷ್ಠ ವಿದ್ಯಾರ್ಹತೆ 9 ನೇ ತರಗತಿ ತೇರ್ಗಡೆ ಹೊಂದಿರಬೇಕು. 9 ನೇ ತರಗತಿ ತೇರ್ಗಡೆ ಹೊಂದಿ ಹೆಚ್ಚಿನ ವಿದ್ಯಾರ್ಹತೆಯನ್ನು ಪಡೆದಿದ್ದಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಆದರೆ ಆಯ್ಕೆ ಸಮಯದಲ್ಲಿ 9 ನೇ ತರಗತಿಯ ಅಂಕಗಳನ್ನು ಮಾತ್ರ ಪರಿಗಣಿಸಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ASRB ಯಲ್ಲಿ 65 ಉದ್ಯೋಗಗಳ ಪ್ರಕಟಣೆ

    ಕೃಷಿ ವಿಜ್ಞಾನಿಗಳ ನೇಮಕಾತಿ ಬೋರ್ಡ್ ( ಎಎಸ್ ಆರ್ ಬಿ) ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 23- 07 -2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-08-2021

    ಹುದ್ದೆ : ಅಡ್ಮಿನಿಸ್ಟ್ರೇಟಿವ್ ಆಫೀಸರ್, ಫೈನಾನ್ಸ್ ಮತ್ತು ಅಕೌಂಟ್ಸ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆಗಳ ವಿವರ : ಅಡ್ಮಿನಿಸ್ಟ್ರೇಟಿವ್ ಆಫೀಸರ್ 44 ಹುದ್ದೆ
    ಫೈನಾನ್ಸ್ ಆಂಡ್ ಅಕೌಂಟ್ಸ್ ಆಫೀಸರ್ 21 ಹುದ್ದೆ

    ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ ರೂ.1000/-, ಒಬಿಸಿ/ ಇಡಬ್ಲೂ ಎಸ್ ಅಭ್ಯರ್ಥಿಗಳಿಗೆ ರೂ.1000/-, ಎಸ್ ಸಿ/ ಎಸ್ ಟಿ / ಪಿಡ್ಬ್ಯುಡಿ / ಮಹಿಳಾ ಅಭ್ಯರ್ಥಿಗಳಿಗೆ ರೂ.40/-

    ವಯೋಮಿತಿ : ಕನಿಷ್ಠ 21 ವರ್ಷ ಹಾಗೂ ಗರಿಷ್ಠ 31 ವರ್ಷ ವಯೋಮಿತಿ ಮೀರಿರಬಾರದು.

    ವಿದ್ಯಾರ್ಹತೆ : ಅಭ್ಯರ್ಥಿಗಳು ಯಾವುದೇ ಪದವಿ ತೇರ್ಗಡೆ ಹೊಂದಿರಬೇಕು. ಕಂಪ್ಯೂಟರ್ ಜ್ಞಾನವನ್ನು ಪಡೆದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

  • ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರಲ್ಲಿ ಖಾಲಿ ಇರುವ ಹಾಗೂ ಅಗತ್ಯವಿರುವ ವಿವಿಧ ವೃಂದಗಳಲ್ಲಿನ ಹುದ್ದೆಗಳಿಗಾಗಿ ಪ್ರಕಟಣೆ ಹೊರಡಿಸಿದೆ. ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆಗಳ ವಿವರ : ಸಿವಿಲ್ ಇಂಜಿನಿಯರ್ ( ವ್ಯವಸ್ಥಾಪಕ ಶ್ರೇಣಿ) : 2 ಹುದ್ದೆ : ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ, ಕನಿಷ್ಠ ಎರಡು ವರ್ಷ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

    ಸಹಾಯಕರು : 16 ಹುದ್ದೆ : ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಸಹಕಾರಿ ವಿಷಯದಲ್ಲಿ ಪದವಿ ಹೊಂದಿರಬೇಕು.

    ಉಪ ಸಿಬ್ಬಂದಿ ಕಮ್ ವಾಹನ ಚಾಲಕ : 6 ಹುದ್ದೆ : ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಎಸ್ ಎಸ್ ಎಲ್ ಸಿ ಅಥವಾ ಅಂಗೀಕೃತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
    ಸಕ್ಷಮ ಪ್ರಾಧಿಕಾರದಿಂದ ಮೋಟಾರ್ ವಾಹನ ಪರವಾನಗಿ ಪಡೆದಿರತಕ್ಕದ್ದು. ಲಘುವಾಹನ ಚಾಲನೆಯಲ್ಲಿ ಎರಡು ವರ್ಷ ಅನುಭವ ಇರುವವರಿಗೆ ಆದ್ಯತೆ.

    ಉಪಸಿಬ್ಬಂದಿ ( ಪ್ಯೂನ್ / ಅಟೆಂಡರ್ ) : 6 ಹುದ್ದೆ : ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಎಸ್ ಎಸ್ ಎಲ್ ಸಿ ಅಥವಾ ಅಂಗೀಕೃತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

    ಸ್ವೀಪರ್: 2 ಹುದ್ದೆ : ಏಳನೇ ತರಗತಿ ಉತ್ತೀರ್ಣರಾಗಿರಬೇಕು. ಕನ್ನಡ ಓದಲು ಮತ್ತು ಬರೆಯಲು ಬರತಕ್ಕದ್ದು.

    ಅರ್ಜಿ ಸಲ್ಲಿಕೆ ಪ್ರಾರಂಭಿಕ ದಿನಾಂಕ : 20-07-2021 ( 10.30 ರಿಂದ)
    ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 21-08-2021 ( ಸಂಜೆ 5.30 ರವರೆಗೆ)

    ವಯೋಮಿತಿ : ಸಹಾಯಕ ಹುದ್ದೆಗೆ ಕನಿಷ್ಠ 18 ಹಾಗೂ ಗರಿಷ್ಠ 36 ವರ್ಷ ವಯೋಮಿತಿ ಮೀರಿರಬಾರದು.

    ಉಪಸಿಬ್ಬಂದಿ ಕಮ್ ವಾಹನ ಚಾಲಕ ಹುದ್ದೆಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 32 ವರ್ಷ ವಯೋಮಿತಿ ಮೀರಿರಬಾರದು.

    ಉಪಸಿಬ್ಬಂದಿ ಹುದ್ದೆಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು.

    ಅರ್ಜಿ ಶುಲ್ಕ : ಸಿವಿಲ್ ಇಂಜಿನಿಯರ್ ಹಾಗೂ ಸಹಾಯಕ ಹುದ್ದೆಗೆ ರೂ.1000/-
    ಉಪ ಸಿಬ್ಬಂದಿ ( ಪ್ಯೂನ್ / ಅಟೆಂಡರ್) ಉಪಸಿಬ್ಬಂದಿ ಕಮ್ ವಾಹನ ಚಾಲಕ, ಸ್ವೀಪರ್ ಹುದ್ದೆಯ ಅರ್ಜಿ ಶುಲ್ಕ ರೂ.500/-

    ಅಭ್ಯರ್ಥಿಗಳು ಅರ್ಜಿಯನ್ನು ಅಂಚೆ/ ಕೊರಿಯರ್/ ಖುದ್ದಾಗಿ ಸಲ್ಲಿಸಬಹುದು. ‌

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್

  • ರಾಜ್ಯ ಸರಕಾರಿ ನೌಕರರಿಗೆ ಶೇ.11 ರಷ್ಟು ತುಟ್ಟಿಭತ್ಯೆ ಹೆಚ್ಚಿಸಿದ ಸಿಎಂ

    ರಾಜ್ಯದ ಸರಕಾರಿ ನೌಕರರಿಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು ಮಂಗಳವಾರ ಸರಕಾರಿ ನೌಕರರಿಗೆ ತುಟ್ಟಿಭತ್ಯೆ ( ಡಿಎ) ಹೆಚ್ಚಳ ಮಾಡಿ ಸೂಚನೆಯನ್ನು ಹೊರಡಿಸಿದೆ.

    ಸಿಎಂ‌ ಬಿ.ಎಸ್.ಯಡಿಯೂರಪ್ಪ ಹಣಕಾಸು ಇಲಾಖೆಗೆ ಜುಲೈ 1, 2021 ರಿಂದ ಅನ್ವಯಿಸುವಂತೆ ರಾಜ್ಯ ಸರಕಾರಿ ನೌಕರರಿಗೆ ಶೇ.11 ರಷ್ಟು ಡಿಎ ( ತುಟ್ಟಿಭತ್ಯೆ) ನೀಡುವಂತೆ ಸೂಚಿಸಿದ್ದಾರೆ. ಅಧಿಕೃತ ಆದೇಶ ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.

    ರಾಜ್ಯ ಸರಕಾರಿ ನೌಕರರ ತುಟ್ಟಿಭತ್ಯೆ ದರ ಶೇ.11.25% ಇದೆ. ಈಗ ಶೇ.11 ಹೆಚ್ಚಳದಿಂದಾಗಿ ಒಟ್ಟು 22.25 ರಷ್ಟು ತುಟ್ಟಿಭತ್ಯೆ ದೊರಕಲಿದೆ. ಇದರಿಂದಾಗಿ 1.50 ಲಕ್ಷ ಪಿಂಚಣಿದಾರರು ಸೇರಿದಂತೆ 6 ಲಕ್ಷ ನೌಕರರಿಗೆ ಅನುಕೂಲವಾಗಲಿದೆ.