Category: Govt Jobs

  • ಬೆಂಗಳೂರು : ಕೇಂದ್ರ ಕಾರಾಗೃಹದಲ್ಲಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ನ. 15ರೊಳಗೆ ಅರ್ಜಿ ಸಲ್ಲಿಸಿ

    ಬೆಂಗಳೂರು : ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಖಾಲಿ ಇರುವ ಐದು ಸೈಕ್ಯಾಟ್ರಿಕ್ ಸೋಷಿಯಲ್ ವರ್ಕರ್ ಹುದ್ದೆಗಳಿಗೆ 11 ತಿಂಗಳ ಅವಧಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಪ್ರಮಾಣ ಪತ್ರ, ಸ್ನಾತಕೋತ್ತರ ಪದವಿಯಲ್ಲಿ ಅಧಿಕ ಅಂಕ ಗಳಿಸಿದವರು, ಮಾನಸಿಕ ಮತ್ತು ಮನೋವೈದ್ಯಕೀಯ ವಿಷಯದ ಮೇಲೆ ಸ್ನಾತಕೋತ್ತರ ಕಲಿತು ಭಾರತೀಯ ಪುನರ್ವಸತಿ ಮಂಡಳಿ ಮಾನ್ಯತೆ ಪಡೆದವರು ಅರ್ಹರು. ಮಾಸಿಕ ರೂ.25 ಸಾವಿರ ಇರಲಿದೆ. 45 ವರ್ಷ ವಯೋಮಿತಿ ಮೀರದವರು ನ. 15 ರೊಳಗೆ ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ, ಪರಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ , ಬೆಂಗಳೂರು – 560100 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.08025733809 ಗೆ ಸಂಪರ್ಕಿಸಬಹುದು.

  • ಸ್ವಾಭಿಮಾನಿ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಲಿ., ಬೆಂಗಳೂರು : ಲೆಕ್ಕ ಸಹಾಯಕರು ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸ್ವಾಭಿಮಾನಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿ.,ಬೆಂಗಳೂರು ಇಲ್ಲಿ ವಿವಿಧ ಹುದ್ದೆಗಳಿಗಾಗಿ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.

    ಹುದ್ದೆ : ಲೆಕ್ಕ ಸಹಾಯಕರು, ಹಿರಿಯ ಸಹಾಯಕರು, ಕಿರಿಯ ಸಹಾಯಕರು

    ಅರ್ಜಿ ಸಲ್ಲಿಕೆ ಅವಧಿ :

    ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 18-10-2021 ( ಬೆಳಿಗ್ಗೆ 10.30 ರಿಂದ )

    ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 30-10-2021 ಸಂಜೆ 5.30 ಗಂಟೆಯೊಳಗೆ

    ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ವಿವರವಾದ ಅಧಿಸೂಚನೆ, ಅರ್ಜಿ ನಮೂನೆಯನ್ನು www.swabhimanisouharda.com ವೆಬ್ಸೈಟ್ ನಲ್ಲಿ ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಿ ಅರ್ಜಿ ಸಲ್ಲಿಸಬಹುದಾಗಿದೆ.

    ನೋಟಿಫಿಕೇಶನ್ ಈ ಕೆಳಗೆ ನೀಡಲಾಗಿದೆ

  • KSEEB : ವಕೀಲ ಹುದ್ದೆ, ಈ ಕೂಡಲೇ ಅರ್ಜಿ ಸಲ್ಲಿಸಿ

    ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ಮತ್ತು ಮೈಸೂರು ವಿಭಾಗ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಸಂಬಂಧಪಟ್ಟ ರಾಜ್ಯದ ನ್ಯಾಯಾಲಯದ ವಿವಿಧ ಹಂತಗಳಲ್ಲಿರುವ ನ್ಯಾಯಾಲಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸರಕಾರಿ ವಕೀಲರಿಗೆ ಸಹಾಯಕರಾಗಿ ಮತ್ತು ಇಲಾಖೆಗೆ ಕಾನೂನು ಸಮಾಲೋಚಕರಾಗಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಹಿರಿಯ ವಕೀಲರು ಮತ್ತು ಕಿರಿಯ ವಕೀಲರುಗಳ ಸೇವೆಗೆ ಅರ್ಜಿ ಆಹ್ವಾನಿಸಿದೆ.

    ಹುದ್ದೆ : ವಕೀಲರು

    ಹುದ್ದೆ ಸಂಖ್ಯೆ : ಹಿರಿಯ ವಕೀಲ 02, ಕಿರಿಯ ವಕೀಲ – 03

    ವಕೀಲರ ನೇಮಕಾತಿ ಆಯ್ಕೆಯು ಸಂಪೂರ್ಣವಾಗಿ ಸಮಾಲೋಚನೆ ಹಾಗೂ ಸಂದರ್ಶನ ಆಧಾರಿತವಾಗಿದ್ದು, ಅರ್ಜಿ ಸಲ್ಲಿಸಲು ಅಂತಿಮ, ದಿನಾಂಕ : 30-10-2021 ಆಗಿರುತ್ತದೆ. ಆಸಕ್ತ ಅರ್ಹ ವಕೀಲರು ಸಂದರ್ಶನಕ್ಕೆ ಹಾಜರಾಗಲು ಮತ್ತು ವಕೀಲರ ಸಂಭಾವನೆ, ಅರ್ಹತೆ, ಅನುಭವ ಮತ್ತು ಇತರೆ ಮಾನದಂಡ ಹಾಗೂ ಷರತ್ತುಗಳು ಒಳಗೊಂಡಿರುವ ವಕೀಲರ ನೇಮಕಾತಿ ಅರ್ಜಿ ಆಹ್ವಾನ, ದಸ್ತಾವೇಜು ಮಂಡಳಿಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುತ್ತದೆ.

  • HPCL : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಒಂದು ಮಹಾರತ್ನ ಕಂಪನಿ, ನಿಗಮದ ವಿವಿಧ ಸಂಶೋಧನಾ ಯೋಜನೆಗಳಿಗೆ ಸಹಾಯ ಮಾಡಲು ತನ್ನ ಹೆಚ್ ಪಿ ಗ್ರೀನಗ ಆರ್ & ಡಿ ಸೆಂಟರ್, ಬೆಂಗಳೂರಿನಲ್ಲಿ ನಿಶ್ಚಿತ ಅವಧಿಯ ಸಂಶೋಧನಾ ಸಹಯೋಗಿಗಳನ್ನು ( FTRA) ಮತ್ತು ನಿಶ್ಚಿತ ಅವಧಿಯ ಯೋಜನಾ ಸಹಯೋಗಿಗಳನ್ನು ( FTPA) ತೊಡಗಿಸಿಕೊಳ್ಳಲು ಯೋಜಿಸಿದೆ.

    ವಿವರಗಳಿಗಾಗಿ ಮತ್ತು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ನಮ್ಮ ವೆಬ್ಸೈಟ್ www.hindustanpetroleum.com ಗೆ ಭೇಟಿ ನೀಡಿ. ಆನ್ಲೈನ್ ನಲ್ಲಿ ಅರ್ಜಿಯ ಪ್ರಾರಂಭದ ದಿನಾಂಕ : 11-10-2021 ಮತ್ತು‌ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-10-2021

  • ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 3006 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಈ ಕೂಡಲೇ ಅರ್ಜಿ ಸಲ್ಲಿಸಿ


    ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬೀದರ್, ಬಳ್ಳಾರಿ, ಕಲಬುರಗಿ, ರಾಯಚೂರು, ಚಿಕ್ಕಮಗಳೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಉತ್ತರ ಕನ್ನಡ ಹಾಗೂ ಯಾದಗಿರಿ ಜಿಲ್ಲೆಗಳಿಗೆ ( ಹೆಚ್ಚಿನ ಆಧ್ಯತೆಯುಳ್ಳ ಜಿಲ್ಲೆಗಳು) ಹಾಗೂ ಹಾವೇರಿ, ಕೋಲಾರ, ಬೆಳಗಾವಿ, ತುಮಕೂರು, ಮೈಸೂರು, ದಕ್ಷಿಣ ಕನ್ನಡ, ಮಂಡ್ಯ, ಉಡುಪಿ, ಚಿಕ್ಕಬಳ್ಳಾಪುರ, ಕೊಡಗು, ದಾವಣಗೆರೆ, ಬೆಂಗಳೂರು ನಗರ ಮತ್ತು ಧಾರವಾಡ ಜಿಲ್ಲೆಗಳಿಗೆ ( ಆದ್ಯತೆ ಹೊರತು ಪಡಿಸಿದ ಇತರ ಜಿಲ್ಲೆಗಳು ) ಆನ್ಲೈನ್ ಮೂಲಕ ಅರ್ಜಿಗಳನ್ನು […]

    Source

  • 3006 ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆ : ಅ.18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

    3006 ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆ : ಅ.18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ


    ಕರ್ನಾಟಕದಾದ್ಯಂತ ಹಲವು ಜಿಲ್ಲೆಗಳಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ( ಸಿಎಚ್ ಒ) ಪೋಸ್ಟ್ ಗಳನ್ನು ಭರ್ತಿ ಮಾಡಲು ಕಳೆದ ತಿಂಗಳು ಅಧಿಸೂಚನೆ ಪ್ರಕಟಿಸಲಾಗಿತ್ತು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 27-09-2021 ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-10-2021 ಸಂಜೆ 5 ಗಂಟೆವರೆಗೆ ಲಿಖಿತ ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆ : 23-10-2021 […]

    Source