Category: Delhi

  • ಎಫ್ ಸಿಐ ನಲ್ಲಿ ಉದ್ಯೋಗವಕಾಶ

    ಎಫ್ ಸಿಐ ನಲ್ಲಿ ಉದ್ಯೋಗವಕಾಶ

    ಭಾರತೀಯ ಆಹಾರ ನಿಗಮ (ಎಫ್ ಸಿಐ) ದೇಶದ ಆಹಾರ ಭದ್ರತಾ ಖಾತ್ರಿಯಡಿ ಒಂದು ಬೃಹತ್ ಸಾರ್ವಜನಿಕ ಉದ್ದಿಮೆಯಾಗಿದ್ದು, ದೇಶಾದ್ಯಂತ ಇರುವ ಇದರ ಕಚೇರಿಗಳಿಗೆ ನಿಗದಿತ ವಿದ್ಯಾರ್ಹತೆ, ವಯಸ್ಸು, ಅನುಭವ ಇತ್ಯಾದಿ ಇರುವ ಅರ್ಹ ಅಭ್ಯರ್ಥಿಗಳಿಂದ ಸಹಾಯಕ ಪ್ರಧಾನ ವ್ಯವಸ್ಥಾಪಕ (ಪ್ರಧಾನ ಆಡಳಿತ/ತಾಂತ್ರಿಕ/ಲೆಕ್ಕ/ಕಾನೂನು ) ಮತ್ತು ವೈದ್ಯಕೀಯ ಅಧಿಕಾರಿ ಹುದ್ದೆಗಳಿಗಾಗಿ ಆನ್ ಲೈನ್ ಅರ್ಜಿಗಳನ್ನು ಮಾತ್ರ ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ :01-03-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-03-2021
    (16:00 ಗಂಟೆವರೆಗೆ)

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.fci.gov.in ಕ್ಲಿಕ್ ಮಾಡಿ

  • ಎನ್ ಎಟಿಎ 2021 ರ ಮೊದಲ ಮತ್ತು ಎರಡನೇ ಪರೀಕ್ಷೆ  : ದಿನಾಂಕಗಳ ಪ್ರಕಟಣೆ

    ಎನ್ ಎಟಿಎ 2021 ರ ಮೊದಲ ಮತ್ತು ಎರಡನೇ ಪರೀಕ್ಷೆ : ದಿನಾಂಕಗಳ ಪ್ರಕಟಣೆ

    ದಿ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನ್ಯಾಷನಲ್ ಅಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ಎನ್ ಎಟಿಎ) 2021 ರ ಮೊದಲ ಮತ್ತು‌ ಎರಡನೇ ಪರೀಕ್ಷೆಗಳು ಎಪ್ರಿಲ್ 10, ಜೂನ್ 12, 2021 ರಂದು ನಡೆಯಲಿವೆ.

    ಎನ್ ಎಟಿಎ 2021 ರ ಕೈಪಿಡಿಯನ್ನು ಎರಡು ಟೆಸ್ಟ್ ಗಳ‌ ಪ್ರಮುಖ ದಿನಾಂಕಗಳೊಂದಿಗೆ ವೆಬ್ಯ ಗಳಾದ www.nata.in ಮತ್ತು www.coa.gov.in ಗಳಿಗೆ ಶೀಘ್ರದಲ್ಲಿ ಅಪ್ಲೋಡ್ ಮಾಡಲಾಗುವುದು. ಅಭ್ಯರ್ಥಿಗಳು ಮೇಲ್ಕಂಡ ವೆಬ್‌ಸೈಟ್‌ಗಳನ್ನು ನಿಯತವಾಗಿ ಪರಿಶೀಲಿಸುವುದು.

  • 1145 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

    1145 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

    ರಾಷ್ಟ್ರೀಯ  ಪರೀಕ್ಷಾ ಏಜೆನ್ಸಿಯು ದೆಹಲಿ ವಿಶ್ವವಿದ್ಯಾಲಯದ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

    ದೆಹಲಿ ವಿಶ್ವವಿದ್ಯಾಲಯದ ಬೋಧಕೇತರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 16, ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸುವುದು ಹೇಗೆ?: ಅಭ್ಯರ್ಥಿಗಳು ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬೇಕು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಫೆಬ್ರವರಿ 23,2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 16, 2021
    ಅರ್ಜಿ ಶುಲ್ಕ‌ಪಾವತಿಸಲು ಕೊನೆಯ ದಿನಾಂಕ: ಮಾರ್ಚ್ 17, 2021
    ಅರ್ಜಿ ತಿದ್ದುಪಡಿಗೆ ಕೊನೆಯ ದಿನಾಂಕ : ಮಾರ್ಚ್ 18 – 20, 2021

    ದೆಹಲಿ ವಿಶ್ವವಿದ್ಯಾಲಯದ ಬೋಧಕೇತರ ಹುದ್ದೆಗಳ ನೇಮಕಾತಿ ಮೂಲಕ 1145 ಹುದ್ದೆಗಳನ್ನು ಭರ್ತಿ ಮಾಡಲಿದೆ.

    ಹುದ್ದೆಗಳ ವಿವರ : ಜೂನಿಯರ್ ಅಸಿಸ್ಟೆಂಟ್, ಟೆಲಿಫೋನ್ ಅಪರೇಟರ್, ಅಸಿಸ್ಟೆಂಟ್,ಸ್ಟೆನೋಗ್ರಾಫರ್,ಯೋಗ ವ್ಯವಸ್ಥಾಪಕ, ಹಿರಿಯ ವೈಯಕ್ತಿಕ ಸಹಾಯಕ, ನರ್ಸ್, ಭಾಷಾಂತರಕಾರರು, ಕ್ರಿಡಾ ಕೋಚ್ ಸೇರಿದಂತೆ ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

    ವಿದ್ಯಾರ್ಹತೆ : ಅಭ್ಯರ್ಥಿಗಳು ಹುದ್ದೆಗಳಿಗೆ ಅನುಸಾರವಾಗಿ ಪಿಯುಸಿ, ಪದವಿ, ಸ್ನಾತಕೋತ್ತರ, ಐಟಿಐ, ಡಿಪ್ಲೋಮಾ ಕೋರ್ಸ್ ತೇರ್ಗಡೆ ಹೊಂದಿರಬೇಕು. ಹಾಗೂ ನಿಗದಿತ ಕಾರ್ಯಾನುಭವವನ್ನು ಹೊಂದಿರಬೇಕು.

    ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪಿಡ್ಬ್ಯು ಡಿ ಅಭ್ಯರ್ಥಿಗಳು ರೂ.600/-, ಒಬಿಸಿ ಅಭ್ಯರ್ಥಿಗಳು ರೂ.800/-,ಸಾಮಾನ್ಯ ಅಭ್ಯರ್ಥಿಗಳು ರೂ.1000/- ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಆನ್ಲೈನ್ ಟೆಸ್ಟ್, ಪರ್ಸನಾಲಿಟಿ ಟೆಸ್ಟ್, ಸಂದರ್ಶನ, ಕೌಶಲ ಪರೀಕ್ಷೆಗಳ ಮೂಲಕ‌ ಆಯ್ಕೆ ಮಾಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

     

  • ದೆಹಲಿ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳಿಗೆ ನೇಮಕಾತಿ

    ದೆಹಲಿ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳಿಗೆ ನೇಮಕಾತಿ

     

    ದೆಹಲಿ ವಿಶ್ವವಿದ್ಯಾಲಯ(ಡಿ.ಯು) ದಲ್ಲಿ ವಿವಿಧ ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಹ ವಿದ್ಯಾರ್ಹತೆ/ಕಾರ್ಯಾನುಭವುಳ್ಳ ಭಾರತೀಯ ನಾಗರಿಕರಿಂದ ಅನ್ ಲೈನ್ ಅರ್ಜಿಗಳನ್ನು ಕರೆಯಲಾಗಿದ್ದು, ಇದನ್ನು ಮಾಹಿತಿ ಬುಲೆಟಿನ್ ನಲ್ಲೂ ನೋಡಬಹುದು. ಆನ್ಲೈನ್ ಅರ್ಜಿಯ ವಿವರಗಳು ಸೇರಿದಂತೆ ವಿದ್ಯಾರ್ಹತೆ, ಅನುಭವ (ಅಗತ್ಯ ವಿರುವ ಕಡೆ) ಮತ್ತು ಇತರೆ ಅರ್ಹತೆ ಮಾನದಂಡ ಇತ್ಯಾದಿಯನ್ನು https://recruitment.nta.nic.in

    www.du.ac.in ರಲ್ಲಿನ ಮಾಹಿತಿ  ಬುಲೆಟಿನ್ ನಲ್ಲಿ ಲಭ್ಯವಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮೇಲ್ಕಂಡ ವೆಬ್‌ಸೈಟ್‌ ಗಳಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು 16.03.2021ರ (23-50ಗಂಟೆ) ವೇಳೆಗೆ ಸಲ್ಲಿಸಬಹುದಾಗಿದ್ದು, 17.03.2021 ರ (23:50 ಗಂಟೆ) ವೇಳೆಗೆ ಸೂಚಿಸಲಾದ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸುವುದು.

  • ಹೆಚ್ಚುವರಿ ರಿಜಿಸ್ಟ್ರಾರ್ (ಕಂಪ್ಯೂಟರ್) ಹುದ್ದೆಗೆ ಅರ್ಜಿ ಆಹ್ವಾನ

    ಹೆಚ್ಚುವರಿ ರಿಜಿಸ್ಟ್ರಾರ್ (ಕಂಪ್ಯೂಟರ್) ಹುದ್ದೆಗೆ ಅರ್ಜಿ ಆಹ್ವಾನ

    ಭಾರತೀಯ ಸರ್ವೋಚ್ಛ ನ್ಯಾಯಾಲಯದಲ್ಲಿ ಹೆಚ್ಚುವರಿ ರಿಜಿಸ್ಟ್ರಾರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ
    www.sci.gov.in

  • BECIL ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    BECIL ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    ಬ್ರಾಡ್ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (ಬಿಇಸಿಐಎಲ್) ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಸೆಕ್ಷನ್ ಆಫೀಸರ್, ಕೌನ್ಸಿಲರ್, ಸೀನಿಯರ್ ಅಸಿಸ್ಟೆಂಟ್

    ಹುದ್ದೆ ಸಂಖ್ಯೆ : 9

    ವಯೋಮಿತಿ : ಹುದ್ದೆಗಳಿಗೆ ಅನುಸಾರವಾಗಿ ಅಭ್ಯರ್ಥಿಗಳಿಗೆ ಗರಿಷ್ಠ 35 ವಯೋಮಿತಿ ಹೊಂದಿರಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :28.02.2021

    ಅಭ್ಯರ್ಥಿಗಳು ಅರ್ಜಿಯನ್ನು . ಅಧಿಕೃತ ವೆಬ್‌ಸೈಟ್‌ www.becil.com ಅಥವಾ https://becilregistration.com
    ಮೂಲಕವೇ ಸಲ್ಲಿಸಬೇಕು. ಬೇರೆ ಯಾವುದೇ ಮಾಧ್ಯಮದಿಂದ ಅರ್ಜಿ ಸಲ್ಲಿಸಿದ್ದು ತಿರಸ್ಕೃತವಾಗುತ್ತೆ.

    ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಇಡ್ಬ್ಯುಎಸ್ /ಪಿಎಚ್ ರೂ.450/-
    ಜನರಲ್/ಒಬಿಸಿ/ಮಹಿಳಾ ಅಭ್ಯರ್ಥಿಗಳು/ಎಕ್ಸ್ ಸರ್ವಿಸ್ ಮ್ಯಾನ್ ರೂ.750/- ಅರ್ಜಿ ಶುಲ್ಕ ನಿಗದಿಯಾಗಿರುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ