Category: Delhi

  • BIS ನಲ್ಲಿ ಸೈಂಟಿಸ್ಟ್ ಬಿ ಹುದ್ದೆಗಳ ನೇಮಕ : ಆನ್ಲೈನ್ ಅರ್ಜಿ ಆಹ್ವಾನ

    ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣ ಹಾಗೂ ಗ್ರಾಹಕರ ವ್ಯವಹಾರ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಪ್ರಮಾಣೀಕರಣ ಸಂಸ್ಥೆ ( ಬಿಐಎಸ್) ದೇಶದ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ ಆಗಿದೆ.

    ಉತ್ಪನ್ನ ಪ್ರಮಾಣ ಪತ್ರ ನೀಡುವುದು, ಆಭರಣ ಪ್ರಮಾಣೀಕರಣ, ಪ್ರಯೋಗಾಲಯದ ಪರೀಕ್ಷೆ ಇತ್ಯಾದಿ ಪ್ರಮುಖ ಕೆಲಸಗಳನ್ನು ಬಿಐಎಸ್ ಕಂಪನಿ ನಿರ್ವಹಿಸುತ್ತದೆ.

    ಇಲ್ಲಿ ಪ್ರಸ್ತುತ ವಿವಿಧ ವಿಭಾಗ ಮತ್ತು ವರ್ಗಗಳಲ್ಲಿ ಸೈಂಟಿಸ್ಟ್ ಬಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆಗಳ ವಿವರ : ಸಿವಿಲ್ ಇಂಜಿನಿಯರಿಂಗ್ – 13
    ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್- 02
    ಎನ್ವಾರ್ನ್ಮೆಂಟಲ್ ಇಂಜಿನಿಯರಿಂಗ್- 02
    ಕೆಮಿಸ್ಟ್ರಿ – 07
    ಟೆಕ್ಸ್ ಟೈಲ್ ಇಂಜಿನಿಯರಿಂಗ್ – 04

    ಒಟ್ಟು ಹುದ್ದೆಗಳು : 28

    ವಯೋಮಿತಿ : ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10. ವರ್ಷಗಳ ವಯೋಮಿತಿ ಸಡಿಲಿಕೆ ಕೇಂದ್ರ ಸರಕಾರದ ನಿಯಮಾನುಸಾರ ಅನ್ವಯವಾಗಲಿದೆ.

    ಅಭ್ಯರ್ಥಿಗಳನ್ನು 2019, 2020, 2021 ನೇ ಸಾಲಿನಲ್ಲಿ ಗಳಿಸಿದ ಗೇಟ್ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 05-06-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-06-2021

    ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ

  • NHIDCL : ವಿವಿಧ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಭಾರತ ಸರಕಾರದಿಂದ ಸ್ಥಾಪಿತವಾದ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದಡಿಯ ಒಂದು ನಿಗಮವೆಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ,ನಿಗಮ ನಿಯಮಿತರವರು, ಈಶಾನ್ಯ ವಲಯದ ಹಾಗೂ ನಮ್ಮ ನೆರೆಯ ದೇಶಗಳನ್ನುಹಂಚಿಕೊಳ್ಳುವ ಅಂತರಾಷ್ಟ್ರೀಯ ಗಡಿ ಪ್ರದೇಶದರಾಷ್ಟ್ರೀಯ ಹೆದ್ದಾರಿ ನಿರ್ಮಾಣ/ಮೇಲ್ದರ್ಜೆ ಅಗಲೀಕರಣಕ್ಕಾಗಿ ಅತ್ಯಂತ ಶೀಘ್ರಗತಿಯಲ್ಲಿ ಮಾಡಲು ನಿರ್ಧರಿಸಿದೆ.

    ಕೇಂದ್ರ ಸರಕಾರದ ಸಚಿವಾಲಯಗಳು/ ಇಲಾಖೆಗಳಿಂದ ಸೈನ್ಯೆ,ನೌಕಾಪಡೆ, ವಾಯುಪಡೆ ಬಿಆರ್‌ಒ(ಜಿಆರ್‌ಇಎಫ್‌) ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ವಲಯ ಸ್ವಾಮ್ಯಕ್ಕೊಳಪಟ್ಟಿರುವಂತವುಗಳು. ರಾಜ್ಯ ಸರಕಾರದ ಇಲಾಖೆಗಳು ಹಾಗೂ ರಾಜ್ಯ ಸರಕಾರದ ಸಾರ್ವಜನಿಕ ವಲಯ ಸ್ವಾಮ್ಯಕ್ಕೊಳಪಟ್ಟಿರುವಂತಹುಗಳ ಅತ್ಯಂತ ಕ್ರಿಯಾತ್ಮಕ ಪರಿಣಾಮಕಾರಿ ಹಾಗೂ ಅನುಭವಿ ಅರ್ಹ ನಿವೃತ್ತ ಅಧಿಕಾರಿಗಳಿಂದ ಗುತ್ತಿಗೆ ಆಧಾರದ ಮೇಲೆ ಈ ಕೆಳಗಿನ ಷರತ್ತು ಹಾಗೂ ನಿಯಮಗಳಂತೆ ಅರ್ಜಿ ಆಹ್ವಾನಿಸುತ್ತಿದೆ.

    ಹುದ್ದೆ : ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್ (ಟಿಪಿ), ಡೆಪ್ಯುಟಿ ಜನರಲ್ ಮ್ಯಾನೇಜರ್ (ಫಿನಾನ್ಸ್‌),ಮ್ಯಾನೇಜರ್ (ಟಿ/ಪಿ), ಮ್ಯಾನೇಜರ್ ( ಫಿನಾನ್ಸ್‌), ಮ್ಯಾನೇಜರ್ ( ಲೀಗಲ್), ಅಸಿಸ್ಟೆಂಟ್ ಮ್ಯಾನೇಜರ್ ( ಹೆಚ್‌ಆರ್‌), ಜ್ಯೂನಿಯರ್ ಮ್ಯಾನೇಜರ್ ( ಹೆಚ್‌ ಆರ್), ಜ್ಯೂನಿಯರ್ ಮ್ಯಾನೇಜರ್ ( ಲೀಗಲ್), ಜ್ಯೂನಿಯರ್ ಮ್ಯಾನೇಜರ್ ( ರಾಜ್ಯ ಸಭಾ)

    ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 30-೦6-2021 ರಂದು ( ಬುಧವಾರ) 18.೦೦ ಗಂಟೆಯವರೆಗೂ ವಿಸ್ತರಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು NHIDCL ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳಬಹುದು.

  • NHIDCL : ವಿವಿಧ ಉದ್ಯೋಗವಕಾಶ

    NHIDCL : ವಿವಿಧ ಉದ್ಯೋಗವಕಾಶ

    ಭಾರತ ಸರಕಾರದಿಂದ ಸ್ಥಾಪಿತವಾದ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದಡಿಯ ಒಂದ ನಿಗಮವೆಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ ನಿಯಮಿತರವರು ಈಶಾನ್ಯ ವಲಯದ ಹಾಗೂ ನಮ್ಮ ನೆರೆಯ ದೇಶಗಳನ್ನು ಹಂಚಿಕೊಳ್ಳುವ ಅಂತರಾಷ್ಟ್ರೀಯ ಗಡಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ/ಮೇಲ್ದರ್ಜೆ/ಅಗಲೀಕರಣಕ್ಕಾಗಿ ಅತ್ಯಂತ ಶೀಘ್ರಗತಿಯಲ್ಲಿ ಮಾಡಲು ಉದ್ದೇಶಿಸಿದೆ.

    ಕೇಂದ್ರ ಸರಕಾರದ ಸಚಿವಾಲಯಗಳು/ಇಲಾಖೆಗಳಿಂದ ಸೈನ್ಯ, ನೌಕಾಪಡೆ, ವಾಯುಪಡೆ, ಬಿಆರ್‌ಒ ( ಜಿಆರ್‌ಇಎಫ್‌), ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ವಲಯ ಸ್ವಾಮಕ್ಕೋಳಟ್ಟಿರುವಂತಹುಗಳು, ರಾಜ್ಯ ಸರಕಾರದ ಇಲಾಖೆಗಳು ಹಾಗೂ ರಾಜ್ಯ ಸರಕಾರದ ಸಾರ್ವಜನಿಕ ವಲಯ ಸ್ವಾಮ್ಯಕ್ಕೊಳಪಟ್ಟಿರುವಂತಹುಗಳ ಅತ್ಯಂತಕ್ರಿಯಾತ್ಮಕ, ಪರಿಣಾಮಕಾರಿ ಹಾಗೂ ಅನುಭವೀ ಅರ್ಹ ನಿವೃತ್ತ ಅಧಿಕಾರಿಗಳಿಂದ ಗುತ್ತಿಗೆ ಆಧಾರದ ಮೇಲೆ ಈ ಕೆಳಗಿನ ಷರತ್ತು ಹಾಗೂ ನಿಯಮಗಳಂತೆ ಅರ್ಜಿಗಳನ್ನು ಆಹ್ವಾನಿಸುತ್ತಿದ್ದಾರೆ.

    ಹುದ್ದೆ : 1. ಜನರಲ್ ಮ್ಯಾನೇಜರ್ (ಟಿ/ಪಿ) (ಈಶಾನ್ಯ ರಾಜ್ಯದಲ್ಲಿರುವ, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 13 (ಪುರ್ವ ಪರಿಷ್ಕೃತ ಪಿಬಿ- 4 ಆಫ್ ರೂ.37,400/-67,000/- ಮತ್ತು ಗ್ರೇಡ್ ವೇತನ ರೂ.8,700/-)

    1. ಡೆಪ್ಯುಟಿ ಜನರಲ್ ಮ್ಯಾನೇಜರ್ ( (ಈಶಾನ್ಯ ರಾಜ್ಯದಲ್ಲಿರುವ, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 12 (ಪುರ್ವ ಪರಿಷ್ಕೃತ ಪಿಬಿ- 3 ಆಫ್ ರೂ./- 15,600/-, 39100/-ಮತ್ತು ಗ್ರೇಡ್ ವೇತನ ರೂ.7600/-) ವೇತನವಿರುತ್ತದೆ. ಇಲ್ಲಿ ಒಟ್ಟು ಇಪ್ಪತ್ತು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
    2. ಡೆಪ್ಯುಟಿ ಜನರಲ್ ಮ್ಯಾನೆಜರ್ (ಫಿನಾನ್ಸ್‌) ಲಡಖ್, (Leh), (J&k, ಈಶಾನ್ಯ ರಾಜ್ಯಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ.,ಯಲ್ಲಿರುವ NHIDCL ವಲಯಾಧಿಕಾರಿ ಕಚೇರಿಗಳು ). ಈ ಹುದ್ದೆಗೆಗೆ 7ನೇ ವೇತನ ಆಯೋಗದ ವೇತನ ಮ್ಯಾಟ್ರಕ್ಸ್ ಲೆವೆಲ್ 11 ( (ಪುರ್ವ ಪರಿಷ್ಕೃತ ಪಿಬಿ- 3 ಆಫ್ ರೂ./- 15,600/-, 39100/-ಮತ್ತು ಗ್ರೇಡ್ ವೇತನ ರೂ.7600/-) ವೇತನವಿರುತ್ತದೆ. ಇಲ್ಲಿ ಒಟ್ಟು 05 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
    1. ಮ್ಯಾನೇಜರ್ (ಟಿ/ಪಿ) (ಈಶಾನ್ಯ ರಾಜ್ಯದಲ್ಲಿರುವ, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 11 ( (ಪುರ್ವ ಪರಿಷ್ಕೃತ ಪಿಬಿ- 3 ಆಫ್ ರೂ./- 15,600/-, 39100/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.6,600/-) ವೇತನವಿರುತ್ತದೆ. ಇಲ್ಲಿ ಒಟ್ಟು 20 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    5. ಮ್ಯಾನೇಜರ್ (ಫೈನಾನ್ಸ್) ( ಲಡಾಖ್,(Leh) ಈಶಾನ್ಯ ರಾಜ್ಯದಲ್ಲಿರುವ, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆಗೆ 7ನೇ ವೇತನ ಆಯೋಗದ ವೇತನ ಮ್ಯಾಟ್ರಕ್ಸ್ ಲೆವೆಲ್ 12 (ಪುರ್ವ ಪರಿಷ್ಕೃತ ಪಿಬಿ- 3 ಆಫ್ ರೂ./- 15,600/-, 39100/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.6,600/-) ವೇತನವಿರುತ್ತದೆ. ಇಲ್ಲಿ ಒಟ್ಟು 05 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    1. ಮ್ಯಾನೇಜರ್ (ಲೀಗಲ್) (ಲಡಾಖ್, ( Leh), J&K,ಈಶಾನ್ಯ ರಾಜ್ಯದಲ್ಲಿರುವ, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 12 (ಪುರ್ವ ಪರಿಷ್ಕೃತ ಪಿಬಿ- 2 ಆಫ್ ರೂ./- 15,600/-, 39100/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.6,600/-) ವೇತನವಿರುತ್ತದೆ. ಇಲ್ಲಿ ಒಟ್ಟು 01 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
    2. ಮ್ಯಾನೇಜರ್ (ಟಿ/ಪಿ) (ಈಶಾನ್ಯ ರಾಜ್ಯದಲ್ಲಿರುವ, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 08 (ಪುರ್ವ ಪರಿಷ್ಕೃತ ಪಿಬಿ- 2 ಆಫ್ ರೂ./- 9,300/-, 34,800/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.4,800/-) ವೇತನವಿರುತ್ತದೆ. ಇಲ್ಲಿ ಒಟ್ಟು 02 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
    3. ಜ್ಯೂನಿಯರ್ ಮ್ಯಾನೇಜರ್ (ಹೆಚ್‌ಆರ್) (ಲಡಾಕ್,(Leh), J&Kಈಶಾನ್ಯ ರಾಜ್ಯಗಳು, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 6 (ಪುರ್ವ ಪರಿಷ್ಕೃತ ಪಿಬಿ- 2 ಆಫ್ ರೂ./- 9,300/-, 34,800/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.4,200/-) ವೇತನವಿರುತ್ತದೆ. ಇಲ್ಲಿ ಒಟ್ಟು 06 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
    4. ಜ್ಯೂನಿಯರ್ ಮ್ಯಾನೇಜರ್ (ಲೀಗಲ್) (ಲಡಾಖ್, (Leh), J&K,ಈಶಾನ್ಯ ರಾಜ್ಯಗಳು, ಅಂಡಮಾನ ಮತ್ತು ನಿಕೋಬಾರ್ ದ್ವೀಪ ಇತ್ಯಾದಿ., ಯಲ್ಲಿರುವ ಎನ್‌ಎಚ್ಐಡಿಸಿಎಲ್ ವಲಯಾಧಿಕಾರಿ ಕಚೇರಿಗಳು ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 06 (ಪುರ್ವ ಪರಿಷ್ಕೃತ ಪಿಬಿ- 2 ಆಫ್ ರೂ./- 9,300/-, 34,800/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.4,200/-) ವೇತನವಿರುತ್ತದೆ. ಇಲ್ಲಿ ಒಟ್ಟು 01 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
    5. ಜ್ಯೂನಿಯರ್ ಮ್ಯಾನೇಜರ್ (ರಾಜ್ಯ ಸಭಾ) ಪ್ರಧಾನ ಕಚೇರಿಗಳು NHIDCL) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹದ್ದೆಗೆ 7 ನೇ ವೇತನ ಆಯೋಗದ ಮ್ಯಾಟ್ರಕ್ಸ್ ಲೆವಲ್ 06 (ಪುರ್ವ ಪರಿಷ್ಕೃತ ಪಿಬಿ- 2 ಆಫ್ ರೂ./- 9,300/-, 34,800/-ಮತ್ತು CDA ಮಾದರಿಯಲ್ಲಿ ಗ್ರೇಡ್ ವೇತನ ರೂ.4,200/-) ವೇತನವಿರುತ್ತದೆ. ಇಲ್ಲಿ ಒಟ್ಟು 01 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-05-2021 ರಂದು ( ಸೋಮವಾರ) 18.00 ಗಂಟೆಯವರೆಗೂ
    ವಿವರವಾದ ಷರತ್ತು ಹಾಗೂ ನಿಯಮಗಳಿಗೆ ಅಭ್ಯರ್ಥಿಗಳು www.nhidcl.com ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು.

    ಸೂಚನೆ : ಇದೀಗ ಕೇಂದ್ರ ಸರಕಾರದ ಸಚಿವಾಲಯಗಳು/ಇಲಾಖೆಗಳಿಂದ, ಸೈನ್ಯ ವಾಯುಪಡೆ, ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ವಲಯ, ಸ್ವಾಮ್ಯಕ್ಕೊಳಪಟ್ಟಿರುವಂತಹುಗಳು, ರಾಜ್ಯ ಸರಕಾರದ ಇಲಾಖೆಗಳು ಹಾಗೂ ರಾಜ್ಯಸರಕಾರದ ಸಾರ್ವಜನಿಕ ವಲಯ ಸ್ವಾಮ್ಯಕ್ಕೊಳಪಟ್ಟಿರುವಂತಹುಗಳಲ್ಲಿ ಹಾಲಿ ಸೇವ ಸಲ್ಲಿಸುತ್ತಿರುವವರು ಹಾಗೂ ಸೂಚಿತ ಅರ್ಹತಾ ಮಾನದಂಡಗಳನ್ನು ತೃಪ್ತಿಪಡಿಸುವಂತಹವೂ ಸಹಾ ಮೇಲಿನ ಹುದ್ದೆಗಳಿಗೆ ನಿಯೋಜಿತ ಆಧಾರದ ಮೇಲೆ ಅರ್ಜಿ ಸಲ್ಲಿಸುವವರು ಕಳೆದ ಐದು ವರ್ಷಗಳಿಗೆ ಯಾವುದೇ ಆಕ್ಷೇಪಣೆ ಇಲ್ಲದ ಪ್ರಮಾಣ ಪತ್ರ, (ಎನ್‌ಒಸಿ), ಹಾಗೂ ವಿಜಿಲೆನ್ಸ್ ಪ್ರಮಾಣ ಪತ್ರ (ವಿಸಿ) ನಕಲುಗಳನ್ನು ಲಗತ್ತಿಸಿ ಸೂಚಿತ ನಮೂನೆಯ ಮೂಲಕ ಸಹಾ ಅರ್ಜಿ ಸಲ್ಲಿಸಬಹುದು. ನಿಯೋಜಿತ(On deputation ) ಆಧಾರದ ಮೇಲೆ ಹುದ್ದೆಗೆ ಸಲ್ಲಿಸುವವರಿಗೆ ಯಾವುದೇ ವಯೋಮಿತಿ ಇಲ್ಲ. ಅವರ ನಿವೃತ್ತಿಗೆ ಅನುಗುಣವಾಗಿರುವಂತಹವರನ್ನು ಗುತ್ತಿಗೆ ಆಧಾರದ ಮೇಲೆ ಎನ್‌ಎಚ್‌ಐಡಿಸಿಎಲ್‌ ನಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಮುಂದುವರಿಯಬಹುದು. ಇಂದು ವೇಳೆ ತಮ್ಮ ಮೂಲ ಸಂಸ್ಥೆ ಸದರಿಯವರ ನಿವೃತ್ತಿಯ ನಿಯಮಾನುಷ್ಠಾನವನ್ನು ಹಿಂತಿರುಗಿಸಿದ್ದಲ್ಲಿ, ಅಂತವರನ್ನು ಒಂದು ವಾರದವರೆಗೂ ಮೂಲಸಂಸ್ಥೆಯಲ್ಲಿ ಅವರು ಸೇವೆ ಮಾಡುವುದಕ್ಕೆ ಅನುಮತಿಸಲಾಗುವುದು. ತದನಂತರ ಅವರು ಗುತ್ತಿಗೆ ಆಧಾರದ ಮೇಲೆ ಗುತ್ತಿಗೆ ನೌಕರರಿಗೆ ಅನ್ವಯಿಸುವ ಷರತ್ತು ಹಾಗೂ ನಿಯಮಗಳಿಗೆ ಬದ್ಧರಾಗಿ ಆಯ್ಕೆಯಾದ ತಮ್ಮ ಹುದ್ದೆಯನ್ನು ಮುಂದುವರಿಸಬಹುದು.
    ಖಾಲಿ ಹುದ್ದೆಯ ಸುತ್ತೋಲೆಯ ಬಗ್ಗೆ ಯಾವುದೇ ಬದಲಾವಣೆ ಅಥವಾ ತಿದ್ದುಪಡಿಗಳಿದ್ದಲ್ಲಿ ಎನ್‌ಎಚ್‌ಐಡಿಸಿಎಲ್ ವೆಬ್‌ಸೈಟ್ನಲ್ಲಿ ಮಾತ್ರ ಪ್ರಕಟಿಸಲಾಗುವುದು.
    ಅಪೂರ್ಣಗೊಂಡ ಅರ್ಜಿಗಳು ಅಥವಾ ಸೂಚಿತ ದಿನಾಂಕದ ನಂತರ ಸ್ವೀಕೃತವಾದ ಅರ್ಜಿಗಳನ್ನು ಒಟ್ಟಾರೆ ತಿರಸ್ಕರಿಸಲಾಗುವುದು.

  • NHSRC : ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

    NHSRC : ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

    ನ್ಯಾಷನಲ್ ಹೆಲ್ತ್ ಸಿಸ್ಟಮ್ಸ್ ರಿಸೋರ್ಸ್ ಸೆಂಟರ್ ( ಎನ್ ಎಚ್ ಎಸ್ ಆರ್ ಸಿ), ನ್ಯೂ ಡೆಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಕನ್ಸಲ್ಟೆಂಟ್ (ಎನ್- ಎಫ್ಎಎಮ್ಎಸ್)
    ಜ್ಯೂನಿಯರ್ ಕನ್ಸಲ್ಟೆಂಟ್ (ಎನ್- ಎಫ್ಎಎಮ್ಎಸ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10-05-2021( ಆನ್ಲೈನ್ ಮೂಲಕ ಮಾತ್ರ)

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.nhsrcindia.org, www.mohfw.gov.in ಮತ್ತು www.devnetjobsindia.org ಗೆ ಭೇಟಿ ನೀಡಬಹುದು.

  • SAI : ಯಂಗ್ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    SAI : ಯಂಗ್ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 12-04-2021 (11 am)
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26-04-2021( 5.00pm)

    ಹುದ್ದೆ : ಯಂಗ್ ಪ್ರೊಫೆಷನಲ್ ಹುದ್ದೆ -05

    ಯಂಗ್ ಪ್ರೊಫೆಷನಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮಾ ಕೋರ್ಸ್ ನ್ನು ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಅಥವಾ ಬಿ.ಟೆಕ್/ಎಂಬಿಎ/ಪಿಜಿಡಿಎಂ( ೨ ವರ್ಷ) ನ್ನು ಮಾನ್ಯತೆ ಪಡೆದ ಯುನಿವರ್ಸಿಟಿಯಿಂದ ಪಡೆದಿರಬೇಕು. ವಯೋಮಿತಿಯು 35 ವರ್ಷ ಮೀರಿರಬಾರದು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ. 4೦,೦೦೦/- ರಿಂದ ರೂ.6೦,೦೦೦/- ರವರೆಗೆ ನಿಗದಿಯಾಗಿರುತ್ತದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಲಾಗಿನ್ ಆಗಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆನ್‌ಲೈನ್‌ ಮೂಲಕ ಅರ್ಜಿಯನ್ನು ಇ-ಮೇಲ್ [email protected] ಮೂಲಕ ಸಲ್ಲಿಸಬೇಕು.
    ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಬೇರೆ ಮಾಧ್ಯಮದ ಮೂಲಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

    ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ದೂರದರ್ಶನದಲ್ಲಿ ವಿವಿಧ ಹುದ್ದೆ : ಹೆಚ್ಚಿನ ಮಾಹಿತಿ ಇಲ್ಲಿದೆ

    ದೂರದರ್ಶನದಲ್ಲಿ ವಿವಿಧ ಹುದ್ದೆ : ಹೆಚ್ಚಿನ ಮಾಹಿತಿ ಇಲ್ಲಿದೆ

    ದೂರದರ್ಶನ ನ್ಯೂಸ್ ವಾಹಿನಿ (ಸರಕಾರಿ ಸ್ವಾಮ್ಯದ) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಪ್ರಸಾರ ಭಾರತಿ ಅರ್ಜಿಗಳನ್ನು ಆಹ್ವಾನಿಸಿದೆ.

    ಒಟ್ಟು ಹುದ್ದೆ : ಸರಕಾರಿ ಸ್ವಾಮ್ಯದ ಡಿಡಿ ಇಂಡಿಯಾ(ಇಂಗ್ಲೀಷ್ ನ್ಯೂಸ್ ಚಾನೆಲ್) ದಲ್ಲಿ ಇರುವ 15 ಹುದ್ದೆಗಳಿಗೆ ಪ್ರಸಾರ ಭಾರತಿ ಅರ್ಜಿ ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-04-2021 ಸಂಜೆ 05.೦೦ ಗಂಟೆ

    ಹುದ್ದೆಗಳ ವಿವರ : ಅಸೈನ್ಮೆಂಟ್ ಕೋಆರ್ಡಿನೇಟರ್ – 04, ಬ್ರಾಡ್ಕಾಸ್ಟ್‌ ಎಕ್ಸಿಕ್ಯೂಟಿವ್ ಗ್ರೇಡ್ 1 – 05, ಕಾಪಿ ರೈಟರ್ ಗ್ರಾಡ್ 2- 04 , ಗೆಸ್ಟ್ ಕೋ ಆರ್ಡಿನೇಟರ್ ಗ್ರೇಡ್ 1 – 1, ಗೆಸ್ಟ್ ಕೋ ಆರ್ಡಿನೇಟರ್ ಗ್ರೇಡ್ 2-1, ಹುದ್ದೆಗಳಿಗೆ ಸರಕಾರಿ ಸ್ವಾಮ್ಯದ ದೂರದರ್ಶನವು ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.

    ಅಸೈನ್ಮೆಂಟ್ ಕೋಆರ್ಡಿನೇಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ಸಾಮೂಹಿಕ ಸಂವಹನ ಅಥವಾ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೋಮಾ ಪಡೆದಿರಬೇಕು. ಇಂಗ್ಲೀಷ್ ಭಾಷಾ ಪ್ರಾವೀಣ್ಯತೆಯನ್ನು ಹೊಂದಿರಬೇಕು. ಕನಿಷ್ಠ 5 ವರ್ಷ ಮಾಧ್ಯಮ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ಗರಿಷ್ಠ 40 ವರ್ಷ ವಯೋಮಿತಿಯನ್ನು ಅಭ್ಯರ್ಥಿಯು ಮೀರಿರಬಾರದು.

    ಕಾಪಿ ರೈಟರ್ ಗ್ರೇಡ್ 2 ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಸಾಮೂಹಿಕ ಸಂವಹನ/ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಅಥವಾ ಸಂಬಂಧಿತ ವಿಷಯದಲ್ಲಿ ಪದವಿಯನ್ನು ಅಭ್ಯರ್ಥಿಯು ಪಡೆದಿರಬೇಕು. ಇದೇ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಅನುಭವವಿರಬೇಕು. ಇಂಗ್ಲೀಷ್ ಭಾಷಾ ಪ್ರಾವೀಣ್ಯತೆಯನ್ನು ಹೊಂದಿರಬೇಕು. ಅಭ್ಯರ್ಥಿಯ ವಯೋಮಿತಿಯು 4೦ ವರ್ಷಕ್ಕಿಂತ ಹೆಚ್ಚಿರಬಾರದು.

    ಬ್ರಾಡ್ಕಾಸ್ಟ್‌ ಎಕ್ಸಿಕ್ಯೂಟಿವ್ ಗ್ರೇಡ್ 1 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ರೇಡಿಯೋ/ ಟೆಲಿವಿಷನ್ ಪ್ರೊಡಕ್ಷನ್‌ನಲ್ಲಿ ಪದವಿ ಅಥವಾ ವೃತ್ತಿಪರ ಡಿಪ್ಲೋಮಾ ಮಾಡಿರಬೇಕು. ಇಂಗ್ಲೀಷ್‌ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಕನಿಷ್ಠ 3 ವರ್ಷ ಅನುಭವವಿರಬೇಕು. ವಯೋಮಿತಿ 4೦ ಮೀರಿರಬಾರದು.

    ಗೆಸ್ಟ್‌ ಕೋಆರ್ಡಿನೇಟರ್ ಗ್ರೇಡ್ 1 ಹುದ್ದೆಗೆ ಬಿಎ ಪದವೀಧರರು ಅರ್ಜಿ ಸಲ್ಲಿಸಬಹುದು. ಪ್ರತಿಷ್ಠಿತ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸಾರ್ವಜನಿಕ ಸಂಪರ್ಕ/ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಆಗಿರಬೇಕು. ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಪಡೆದಿರಬೇಕು. ಇದೇ ಕ್ಷೇತ್ರದಲ್ಲಿ ಕನಿಷ್ಠ 7 ವರ್ಷ ಅನುಭವ ಹೊಂದಿರಬೇಕು. ವಯೋಮಿತಿಯು 45 ವರ್ಷ ಮೀರಿರಬಾರದು.

    ಗೆಸ್ಟ್‌ ಕೋಆರ್ಡಿನೇಟರ್ ಗ್ರೇಡ್ 2 ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಶ್ವವಿದ್ಯಾಲಯದ ಬಿಎ ಪದವೀಧರರಾಗಿರಬೇಕು. ಪ್ರತಿಷ್ಠಿತ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಸಾರ್ವಜನಿಕ ಸಂಪರ್ಕ/ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪಡೆದಿರಬೇಕು. ಕನಿಷ್ಠ 3 ವರ್ಷ ಅನುಭವವರಿರಬೇಕು. ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಹೊಂದಿರಬೇಕು. ವಯೋಮಿತಿ 45 ವರ್ಷ ಮೀರಿರಬಾರದು.

    ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಉಪನಿರ್ದೇಶಕರು (ಎಚ್‌ಆರ್‌), ಕೊಠಡಿ ಸಂಖ್ಯೆ 413, 4 ನೇ ಮಹಡಿ, ದೂರದರ್ಶನ ಭವನ, ಟವರ್ ಬಿ ಕೋಪರ್ನಿಕಸ್ ಮಾರ್ಗ, ನವದೆಹಲಿ -110001 ಇಲ್ಲಿಗೆ ಪೋಸ್ಟ್/ಕೊರಿಯರ್/ಡ್ರಾಪ್‌ ಬಾಕ್ಸ್‌ ಮೂಲಕ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ