Category: bank

  • SBI ಕ್ಲರ್ಕ್ ಫಲಿತಾಂಶ ಬಿಡುಗಡೆ

    SBI ಕ್ಲರ್ಕ್ ಫಲಿತಾಂಶ ಬಿಡುಗಡೆ

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು, ಎಸ್‌ಬಿಐ ಕ್ಲರ್ಕ್ 2020 ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಎಸ್‌ಬಿಐ ಕ್ಲರ್ಕ್ 2020 ಪರೀಕ್ಷೆ ಬರೆದ ಅಭ್ಯರ್ಥಿಗಳು ಮೊದಲ ಕಾಯ್ದಿರಿಸಿದ ಪಟ್ಟಿಯನ್ನುsbi.co.in ವೆಬ್‌ಸೈಟ್ ಗೆ ಭೇಟಿ ನೀಡಿ ಚೆಕ್ ಮಾಡಲು ಅವಕಾಶವಿದೆ.

    ಎಸ್‌ಬಿಐ ಕ್ಲರ್ಕ್ 2020 ಫಲಿತಾಂಶವನ್ನು ಮುಖ್ಯ ಪರೀಕ್ಷೆಗೆ ಬಿಡುಗಡೆ ಮಾಡಿದೆ. ಈ ಪರೀಕ್ಷೆಯನ್ನು ನವಂಬರ್ 07 ಮತ್ತು ಡಿಸೆಂಬರ್ 31,2020 ರಂದು ಮಾಡಲಾಗಿತ್ತು. ಈ ನೇಮಕಾತಿ ಪ್ರಕ್ರಿಯೆ ಮೂಲಕ 8000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ವಿಶೇಷ ನೇಮಕಾತಿ ಡ್ರೈವ್ ನಲ್ಲಿ 130 ಹುದ್ದೆಗಳನ್ನು. 7870 ಹುದ್ದೆಗಳನ್ನು ರೆಗ್ಯುಲರ್ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ.

    ತಾತ್ಕಾಲಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಇತರೆ ದಾಖಲೆಗಳನ್ನು ಪರಿಶೀಲನೆಗೆ ನಿಗದಿಪಡಿಸಿದ ದಿನಾಂಕದಂದು ನೀಡಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಎಸ್‌ಬಿಐ ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್ ವಿಭಾಗಕ್ಕೆ ಜೂನಿಯರ್ ಅಸಿಸ್ಟೆಂಟ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

  • ಬ್ಯಾಂಕ್ ಆಫ್ ಮಹಾರಾಷ್ಟ್ರ : 150 ಹುದ್ದೆಗಳು

    ಬ್ಯಾಂಕ್ ಆಫ್ ಮಹಾರಾಷ್ಟ್ರ : 150 ಹುದ್ದೆಗಳು

    ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 06 ಎಪ್ರಿಲ್ ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.


    ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22-03-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06-04-2021
    ಅರ್ಜಿ ಶುಲ್ಕ: ಆನ್ಲೈನ್ ಮೂಲಕ

    ಬ್ಯಾಂಕ್ ಆಫ್ ಮಹಾರಾಷ್ಟ್ರನಲ್ಲಿರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.

    ಹುದ್ದೆಗಳ ವಿವರ: ಬ್ಯಾಂಕ್ ಆಫ್ ಮಹಾರಾಷ್ಟ್ರ ಜೆನರಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ ಸಂಖ್ಯೆ: 150

    ಹುದ್ದೆ ಸ್ಥಳ: ಆಲ್ ಒವರ್ ಇಂಡಿಯಾ

    ಅರ್ಜಿ ಶುಲ್ಕ: ಅರ್ಜಿ ಸಲ್ಲಿಸಲು ಯುಆರ್/ಇಡ್ಬ್ಯುಎಸ್/ಒಬಿಸಿ ಅಭ್ಯರ್ಥಿಗಳಿಗೆ ರೂ.1180 ರೂ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ.118/-,ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ‌ಯಾವುದೇ ಅರ್ಜಿ ಶುಲ್ಕವಿಲ್ಲ.. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆನ್ಲೈನ್ ಪಾವತಿ ವಿಧಾನದ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ನ್ನು ಆನ್ಲೈನ್ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

    ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 25 ಹಾಗೂ ಗರಿಷ್ಠ 35 ವಯೋಮಿತಿ ಹೊಂದಿರಬೇಕು.
    ಒಬಿಸಿ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವೇತನ: ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 48,170/- ರಿಂದ ರೂ.69,810/- ವೇತನವಿರುತ್ತದೆ.

    ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ಬೋರ್ಡ್/ಯುನಿವರ್ಸಿಟಿಯಿಂದ
    ಸಿಎ/ಐಸಿಡಬ್ಲುಎ, ಡಿಗ್ರಿ ಹೊಂದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಐಬಿಪಿಎಸ್ ಪ್ರವೇಶ ಪತ್ರ ಬಿಡುಗಡೆ : ಇಲ್ಲಿದೆ ಸಂಪೂರ್ಣ ಮಾಹಿತಿ

    ಐಬಿಪಿಎಸ್ ಪ್ರವೇಶ ಪತ್ರ ಬಿಡುಗಡೆ : ಇಲ್ಲಿದೆ ಸಂಪೂರ್ಣ ಮಾಹಿತಿ

    ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಮಾರ್ಚ್ 02,2021 ರಂದು ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರವನ್ನು ವೆಬ್ ಸೈಟ್ ನಲ್ಲಿ ಅಪಲೋಡ್ ಮಾಡಿದೆ. ibps.in ನಲ್ಲಿ ಲಾಗಿನ್ ಆಗುವ ಮೂಲಕ ಅಡ್ಮಿಟ್ ಕಾರ್ಡ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

    ಮಾರ್ಚ್ 02,2021 ರಿಂದ ಮಾರ್ಚ್ 13, 2021 ರವರೆಗೆ ಐಬಿಪಿಎಸ್ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಬಹುದು. ಮಾರ್ಚ್ ತಿಂಗಳಿನಲ್ಲೇ ಪರೀಕ್ಷೆಯನ್ನು ನಡೆಸಲಾಗುತ್ತದೆ.

    ಪರೀಕ್ಷಾ ಕೇಂದ್ರ, ಪರೀಕ್ಷಾ ದಿನಾಂಕ ಮತ್ತು ಇತರೆ ಮಾಹಿತಿಗಳನ್ನು ಪ್ರವೇಶ ಪತ್ರದಲ್ಲಿ ನೀಡಲಾಗಿದೆ.

    ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ ಅಫಿಶೀಯಲ್ ವೆಬ್ ಸೈಟ್ ibps.in ಗೆ ಭೇಟಿ ನೀಡಿ, ನಂತರ IBPS Admit Card 2021 for various link ಎಂಬಲ್ಲಿ ಕ್ಲಿಕ್ ಮಾಡಿ, ಇನ್ನೊಂದು ಪೇಜ್ ಓಪನ್ ಆಗತ್ತೆ, ಈ ಪೇಜ್ ನಲ್ಲಿ ಅಭ್ಯರ್ಥಿಗಳು ತಮ್ಮ ಲಾಗಿನ್ ಮಾಹಿತಿಗಳನ್ನು ನೀಡಿ ಸಬ್‌ಮಿಟ್ ಮಾಡಿ, ನಂತರ ಪ್ರವೇಶ ಪತ್ರ ಕಾಣಿಸುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದಿಡಿ.

    ಐಬಿಪಿಎಸ್ ಪ್ರತಿ ಪತ್ರಿಕೆಗೆ 50 ಅಂಕಗಳಿಗೆ ಪರೀಕ್ಷೆ ನಡೆಸಲಿದ್ದು, ೪೫ ನಿಮಿಷ ಪರೀಕ್ಷೆ ಅವಧಿ ಇರುತ್ತದೆ. ಟೆಸ್ಟ್ ಒಂದು, ಎರಡು ಎರಡರಿಂದ 90 ನಿಮಿಷ ಪರೀಕ್ಷೆ ಇರುತ್ತದೆ. ಅಬ್ಜೆಕ್ಟಿವ್ ಮಾದರಿ ಪ್ರಶ್ನೆಗಳು ಇರುತ್ತವೆ. ಪ್ರತಿಯೊಂದು ತಪ್ಪು ಉತ್ತರಗಳಿಗೆ 0.25 ನೆಗೆಟಿವ್ ಮಾರ್ಕ್ಸ್ ಇರುತ್ತದೆ.

    ಐಬಿಪಿಎಸ್ ಆನ್‌ಲೈನ್ ಟೆಸ್ಟ್ ನ್ನು ಐಟಿ ಸಿಸ್ಟಮ್ಸ್ ಸಪೋರ್ಟ್ ಇಂಜಿನಿಯರ್, ಐಟಿ ಇಂಜಿನಿಯರ್, ಅನಾಲಿಸ್ಟ್ ಪ್ರೊಗ್ರಾಮರ್ ಹುದ್ದೆಗಳಿಗೆ ನಡೆಸಲಿದೆ.

    ಹೆಚ್ಚಿನ ಮಾಹಿತಿಗಾಗಿ ಐಬಿಪಿಎಸ್ ವೆಬ್‌ಸೈಟ್ ಗೆ ಭೇಟಿ ನೀಡಿ

  • ಆರ್ಬಿಐ ಗ್ರೇಡ್ ಬಿ ಪ್ರವೇಶ ಪತ್ರ ಲಭ್ಯ!ಈಗಲೇ ಡೌನ್ಲೋಡ್ ಮಾಡಿ

    ಆರ್ಬಿಐ ಗ್ರೇಡ್ ಬಿ ಪ್ರವೇಶ ಪತ್ರ ಲಭ್ಯ!ಈಗಲೇ ಡೌನ್ಲೋಡ್ ಮಾಡಿ

    ಆರ್ ಬಿಐ ಅಧಿಕಾರಿ ಗ್ರೇಡ್ ಬಿ ಹುದ್ದೆಗಳ ಫೇಸ್ 1 ಆನ್ಲೈನ್ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟಿಸಲಾಗಿದೆ.
    322 ಹುದ್ದೆಗಳನ್ನು ಭರ್ತಿ ಮಾಡಲು ಆರ್ ಬಿಐ ಅರ್ಜಿಗಳನ್ನು ಆಹ್ಬಾನಿಸಲಾಗಿತ್ತು. ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ಎನ್ನುವುದನ್ನು ಮುಂದೆ ಓದಿ

    ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ https://www.rbi.org.in/ ಗೆ ಭೇಟಿ ನೀಡಿ, ಅಲ್ಲಿ career ನ ಕೆಳಗಿರುವ call Letter ಮೇಲೆ ಕ್ಲಿಕ್ ಮಾಡಿ. ನಂತರ ಫೇಸ್-1 ಪರೀಕ್ಷೆಯ ಪ್ರವೇಶ ಪತ್ರದ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಮೇಲೆ ರಿಜಿಸ್ಟ್ರೇಶನ್ ನಂಬರ್/ರೋಲ್ ನಂಬರ್ ಮತ್ತು ಜನ್ಮದಿನಾಂಕ/ಪಾಸ್ವರ್ಡ್ ನಮೂದಿಸಿ ನಿಮ್ಮ ಪ್ರವೇಶ ಪತ್ರವು ಸ್ಕ್ರೀನ್‌ ಮೇಲೆ ಬರುತ್ತದೆ. ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.

  • 841 ಆಫೀಸ್ ಅಟೆಂಡೆಂಟ್ ಹುದ್ದೆ : ಕೂಡಲೇ ಅರ್ಜಿ ಸಲ್ಲಿಸಿ

    841 ಆಫೀಸ್ ಅಟೆಂಡೆಂಟ್ ಹುದ್ದೆ : ಕೂಡಲೇ ಅರ್ಜಿ ಸಲ್ಲಿಸಿ

    ಆರ್ಬಿಐ ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 15, 2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಹುದ್ದೆಗಳ ವಿವರ: ಆರ್ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ನಲ್ಲಿ 841 ಆಫೀಸ್ ಅಟೆಂಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 24-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:ಮಾರ್ಚ್ 15, 2021
    ಆಯ್ಕೆ ಪ್ರಕ್ರಿಯೆ: – ಅಟೆಂಡೆಂಟ್ ಹುದ್ದೆಗೆ ಆನ್ ಲೈನ್ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

    ಅರ್ಜಿ ಸಲ್ಲಿಕೆ: ಆರ್ಬಿಐ
    ನಲ್ಲಿರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.

    ಅರ್ಜಿ ಶುಲ್ಕ: ರೂ. 500/- ಸಾಮಾನ್ಯ/ಒಬಿಸಿ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ/ ಮಾಜಿ ಸೈನಿಕ ಅಭ್ಯರ್ಥಿಗಳು ರೂ.50/- ಶುಲ್ಕ ನಿಗದಿಯಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆನ್ಲೈನ್ ಪಾವತಿ ವಿಧಾನದ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು.

    ವಿದ್ಯಾರ್ಹತೆ: ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ/ ಮೆಟ್ರಿಕ್ಯುಲೇಶನ್ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಯೋಮಿತಿ: ಕನಿಷ್ಠ18 ಹಾಗೂ ಗರಿಷ್ಠ 25 ವಯೋಮಿತಿ ಉಳ್ಳವರು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ಒಬಿಸಿ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.10,940/- ರಿಂದ ರೂ. 23,700/- ವೇತನವನ್ನು ನೀಡಲಾಗುತ್ತದೆ.

    ಅಭ್ಯರ್ಥಿಗಳು ಆರ್ಬಿಐ ನ ಅಧಿಕೃತ ವೆಬ್‌ಸೈಟ್‌ https://www.rbi.org.in/ ಗೆ ಭೇಟಿ ನೀಡಿ ಮಾಹಿತಿಯನ್ನು ಭರ್ತಿ ಮಾಡಿ ಮಾರ್ಚ್ 15, 2021 ರೊಳಗೆ ಸಲ್ಲಿಸಬೇಕು.

     

  • ಎಸ್ ಬಿಐ ಸಂದರ್ಶನ ಪ್ರವೇಶ ಪತ್ರ ಬಿಡುಗಡೆ : ಕೂಡಲೇ ಡೌನ್ಲೋಡ್ ಮಾಡಿ

    ಎಸ್ ಬಿಐ ಸಂದರ್ಶನ ಪ್ರವೇಶ ಪತ್ರ ಬಿಡುಗಡೆ : ಕೂಡಲೇ ಡೌನ್ಲೋಡ್ ಮಾಡಿ

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರೊಬೆಷನರಿ ಹುದ್ದೆಯ ಸಂದರ್ಶನ ಪ್ರವೇಶ ಪತ್ರವನ್ನು ಪ್ರಕಟ ಮಾಡಲಾಗಿದೆ.

    ಎಸ್ ಬಿ ಐ ಒಟ್ಟು 2000 ಪಿಓ ಹುದ್ದೆಗೆ ನೇಮಕಾತಿ ಮಾಡಲು ನಿರ್ಧರಿಸಿದ್ದು, ಅಭ್ಯರ್ಥಿಗಳಿಗೆ ಸಂದರ್ಶನ ಪತ್ರವನ್ನು ಬಿಡುಗಡೆ ಮಾಡಿದೆ.

    ಅಭ್ಯರ್ಥಿಗಳು ಎಸ್ ಬಿ ಐ ಅಧಿಕೃತ ವೆಬ್‌ಸೈಟ್‌ https://www.sbi.co.in/web/career ಗೆ ಭೇಟಿ ನೀಡಿ, ಎಸ್ ಬಿಐ ಪಿ.ಒ ಸಂದರ್ಶನ ಪ್ರವೇಶ ಪತ್ರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ, ನಂತರ ಪ್ರವೇಶ ಪತ್ರ ಸ್ಕ್ರೀನ್ ಮೇಲೆ ಲಭ್ಯವಾಗುವುದು ಅದರ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ.

    ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ನೇರವಾಗಿ ಡೌನ್‌ಲೋಡ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ