Category: bank

  • ಕೆನರಾ ಬ್ಯಾಂಕ್ : ಆರ್ಥಿಕ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ

    ಕೆನರಾ ಬ್ಯಾಂಕ್, ಪ್ರವರ್ತಿಸಿರುವ ಬೆಂಗಳೂರು ಜಿಲ್ಲೆ, ಆನೇಕಲ್ ತಾಲ್ಲೂಕಿನ ಆರ್ಥಿಕ ಸಾಕ್ಷರತ ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇರೆಗೆ ” ಆರ್ಥಿಕ ಸಲಹೆಗಾರ” ಹುದ್ದೆಗೆ ಬ್ಯಾಂಕಿನ ನಿವೃತ್ತ/ ಸ್ವ ಇಚ್ಛೆಯಿಂದ ನಿವೃತ್ತಿ ಹೊಂದಿದ 62 ವರ್ಷದ ಒಳಗಿನ ಪ್ರಬಂಧಕರು/ ಹಿರಿಯ ಪ್ರಬಂಧಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹೆಚ್ಚಿನ ಮಾಹಿತಿ ಮತ್ತು ನಿಬಂಧನೆಗಳಿಗೆ ‌ಹಾಗೂ‌ ಅರ್ಜಿ ನಮೂನೆಗಳಿಗಾಗಿ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ : ಕೃಷಿ ಸಾಲ ವಿಭಾಗ,‌ಕೆನರಾ ಬ್ಯಾಂಕ್, ಪ್ರಾದೇಶಿಕ ಕಚೇರಿ- ಪೂರ್ವ, ಸ್ಪೆನ್ಸರ್ ಟವರ್, ಎಂ.ಜಿ.ರಸ್ತೆ, ಬೆಂಗಳೂರು – 560001

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-07-2021
    ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9845461668

  • IBPS RRB Recruitment 2021: ಕರ್ನಾಟಕದ ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾಲಿ ಇರುವ 478 ಹುದ್ದೆಗಳಿಗೆ ಅರ್ಜಿ ಆಹ್ವಾನ

    ,

    ಗ್ರಾಮೀಣ ಬ್ಯಾಂಕ್ ಗಳಲ್ಲಿನ ಹುದ್ದೆಗಳಿಗೆ ಕನ್ನಡದಲ್ಲಿಯೇ ಪರೀಕ್ಷೆ ನಡಸಲಾಗುತ್ತಿದ್ದರೂ, ರಾಜ್ಯದಲ್ಲಿ ಒಂದೇ ಒಂದು ಹುದ್ದೆ ಇಲ್ಲ ಎಂಬ ವಿಷಯಕ್ಕೆ ಈಗ ರಾಜ್ಯದಲ್ಲಿ 478 ಹುದ್ದೆಗಳಿಗೆ ನೇಮಕ ಮಾಡುವುದಾಗಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಈ ಸುದ್ದಿ ರಾಜ್ಯದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ.

    ರಾಜ್ಯದ ಎರಡು ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಒಟ್ಟಾರೆ 478 ಹುದ್ದೆಗಳಿಗೆ ರಾಜ್ಯದ ಅಭ್ಯರ್ಥಿಗಳು ಕನ್ನಡದಲ್ಲಿಯೇ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಬರೆಯಬಹುದು. ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಮುಖ್ಯ ಪರೀಕ್ಷೆ ಆನ್ಲೈನ್ ಮೂಲಕ ನಡೆಯಲಿದೆ.

    ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ‌ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನೇಮಕ ಪ್ರಕ್ರಿಯೆಯಲ್ಲಿದೆ. ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ( ಸ್ಕೇಲ್ 1) ಹುದ್ದೆಗಳಿಗೆ‌ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಇದನ್ನೂ ಓದಿ: IBPS RRB ಅಧಿಸೂಚನೆ ಪ್ರಕಟ: ಗ್ರಾಮೀಣ ಬ್ಯಾಂಕ್‌ಗಳಲ್ಲಿನ 10,447 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ವಿವರ

    ರಾಜ್ಯದಲ್ಲಿ 261 ಆಫೀಸ್ ಅಸಿಸ್ಟೆಂಟ್ ( ಮಲ್ಟಿ ಪರ್ಪಸ್) ಹುದ್ದೆಗಳಿಗೆ ನೇಮಕ ಮಾಡಲಿದ್ದು, ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿನ160 ಮತ್ತು ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ 101 ಹುದ್ದೆಗಳಿವೆ. 201 ಆಫೀಸರ್ (ಸ್ಕೇಲ್ -1) ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಇದರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 87 ಮತ್ತು ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ 130 ಹುದ್ದೆಗಳಿವೆ.

    ಅರ್ಹತೆ : ಯಾವುದೇ ಪದವೀಧರರು ಅರ್ಜಿಯನ್ನು ಸಲ್ಲಿಸಬಹುದು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸ್ಥಳೀಯ ಭಾಷೆ ಓದಲು ಬರೆಯಲು ತಿಳಿದಿರಬೇಕು.

    ಆಫೀಸ್ ಅಸಿಸ್ಟೆಂಟ್ ಹುದ್ದೆಗೆ 18 ರಿಂದ 28 ಮತ್ತು ಆಫೀಸರ್ ಹುದ್ದೆಗೆ 18 ರಿಂದ 30 ವರ್ಷ ದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯಲ್ಲಿ ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳಿಗೆ 5 ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆಯನ್ನು ನೀಡಲಾಗಿದೆ.

    ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಆನ್ಲೈನ್ ನಲ್ಲಿ ಅರ್ಜಿ ಶುಲ್ಕ ಪಾವತಿಸಲು ಮಾತ್ರ ಅವಕಾಶವಿದೆ.

    ರಾಜ್ಯದ ಎರಡು ಗ್ರಾಮೀಣ ಬ್ಯಾಂಕುಗಳೂ ಒಟ್ಟು 478 ಹುದ್ದೆಗಳಿಗೆ ನೇಮಕ ನಡೆಸುವಂತೆ ಈ ಹಿಂದೆಯೇ ಐಬಿಪಿಎಸ್ ಬೇಡಿಕೆ ಸಲ್ಲಿಸಿದ್ದವು. ಆದರೆ ಐಬಿಪಿಎಸ್ ನಿರ್ಲಕ್ಷ್ಯ ತೋರಿದ್ದರಿಂದ ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿತ್ತು. ಹೀಗಾಗಿ ರಾಜ್ಯದಲ್ಲಿ ಹುದ್ದೆಗಳೇ ಇಲ್ಲ ಎಂದು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿರಲಿಲ್ಲ.

  • ಕೆನರಾ ಬ್ಯಾಂಕ್ : ಹುದ್ದೆಗಳ ನೇಮಕ

    ಕೆನರಾ ಬ್ಯಾಂಕ್ : ಹುದ್ದೆಗಳ ನೇಮಕ

    ಕೆನರಾ ಬ್ಯಾಂಕ್, ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ.


    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 30,2021

    ಹುದ್ದೆ : ಚೀಫ್ ಡಿಜಿಟಲ್ ಅಧಿಕಾರಿ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಬಿ.ಇ/ಬಿ.ಟೆಕ್ ಮತ್ತು ಎಂಬಿಎ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ನಲ್ಲಿ ಸರ್ಟಿಫಿಕೇಶನ್ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಯೋಮಿತಿ : ಎಪ್ರಿಲ್ 30, 2021 ರ ಅನ್ವಯ ಕನಿಷ್ಠ 35 ರಿಂದ ಗರಿಷ್ಠ 50 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳು ರೂ. 1180/- ರೂ ಮತ್ತು ಪ.ಜಾತಿ/ ಪ.ಪಂಗಡ/pwd/ ಮಹಿಳಾ ಅಭ್ಯರ್ಥಿಗಳಿಗೆ ರೂ. 118 ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ.

    ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ, ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಜೂನ್ 30, 2021 ರೊಳಗೆ ತಲುಪಿಸಬೇಕಾಗುತ್ತದೆ.

    ಕಚೇರಿ ವಿಳಾಸ : The Senior Manager, Canara Bank, Recruitment Cell, HR Wing, Head Office 112, JC Road, Bengaluru-560002

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಬಂಧನ ಬ್ಯಾಂಕ್ : ವಿವಿಧ ಹುದ್ದೆ : ಈ ಕೂಡಲೇ  ಅರ್ಜಿ ಸಲ್ಲಿಸಿ

    ಬಂಧನ ಬ್ಯಾಂಕ್ : ವಿವಿಧ ಹುದ್ದೆ : ಈ ಕೂಡಲೇ ಅರ್ಜಿ ಸಲ್ಲಿಸಿ

    ಬಂಧನ ಬ್ಯಾಂಕ್ ಸ್ಥಳೀಯ ಕೆಲಸದ ಅನುಭವ ಹೊಂದಿರುವ ‌ಕ್ರಿಯಾಶೀಲ ಮತ್ತು ಬದ್ಧತೆ ಹೊಂದಿರುವ ‌ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಹತಾ ಮಾನದಂಡಗಳು : ಕನಿಷ್ಠ 10+2
    ದ್ವಿಚಕ್ರ ವಾಹನ ಹೊಂದಿದ್ದು ಪರವಾನಿಗೆ ಇರಬೇಕು.
    ವಯಸ್ಸಿನ ಮಿತಿ‌ 21 ರಿಂದ 32 ವರ್ಷಗಳು.

    ಅವಕಾಶ ಮತ್ತು ಇತರ ಲಾಭಗಳು : ನೌಕರರು ಇಸಿಎಫ್, ಮೆಡಿಕ್ಲೇಮ್, ಇನ್ಶುರೆನ್ಸ್, ಗ್ರಾಚ್ಯುವಿಟಿ ಮತ್ತು ವಾರ್ಷಿಕ ಕಾರ್ಯಕ್ಷಮತೆಯ ಬೋನಸ್ ನೊಂದಿಗೆ ತಿಂಗಳ ವೇತನ ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ.

    ಅರ್ಜಿ ಪ್ರಕ್ರಿಯೆ : ಆಸಕ್ತಿ ಹೊಂದಿದ ಅಭ್ಯರ್ಥಿಗಳು ಕೆಳಗೆ ತಿಳಿಸಿದ ಇ-ಮೇಲ್ ಐಡಿಯಲ್ಲಿ ತಮ್ಮ ಸಂಪರ್ಕ ಸಂಖ್ಯೆ, ಪ್ಯಾನ್ ಕಾರ್ಡ್ ಫೊಟೊಕಾಪಿ, ಆಧಾರ್ ಮತ್ತು ಶೈಕ್ಷಣಿಕ ವಿದ್ಯಾರ್ಹತೆ (ಪದವಿ) ದಸ್ತಾವೇಜದೊಂದಿಗೆ ತಮ್ಮ ಬಯೋಡೇಟಾ ಕಳುಹಿಸಿ ಕೊಡಬೇಕು.

  • SBI : 5237 ಕ್ಲರ್ಕ್ ಹುದ್ದೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    SBI : 5237 ಕ್ಲರ್ಕ್ ಹುದ್ದೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದೆಲ್ಲೆಡೆ ಖಾಲಿ ಇರುವ 5237 ಜ್ಯೂನಿಯರ್ ಅಸೋಸಿಯೇಟ್ ( ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್ ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಈ ಮೊದಲು ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜ್ಯೂನಿಯರ್ ಅಸೋಸಿಯೇಟ್ ( ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್ ) ಹುದ್ದೆಗಳನ್ನು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಎಸ್ ಬಿಐ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಲು ಈ ಲಿಂಕ್ ಕ್ಲಿಕ್ ಮಾಡಿ.

    ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಅಭ್ಯರ್ಥಿಗಳು ಮೇ.20 ರ ರವರೆಗೆ ಆನ್ಲೈನ್ ರಿಜಿಸ್ಟ್ರೇಶನ್ ಸಲ್ಲಿಸಿ ಶುಲ್ಕವನ್ನು ಪಾವತಿಸಬಹುದು. ಈ ಹಿಂದೆ ಮೇ. 17, 2021 ರ ವರೆಗೆ ಮಾತ್ರ ಅರ್ಜಿಗೆ ಅವಕಾಶ ನೀಡಲಾಗಿತ್ತು ‌

  • IBPS RRB, PSB ಪರೀಕ್ಷಾ ದಿನಾಂಕ ಪ್ರಕಟ

    IBPS RRB, PSB ಪರೀಕ್ಷಾ ದಿನಾಂಕ ಪ್ರಕಟ

    ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ ಪ್ರಾದೇಶಿಕ ಬ್ಯಾಂಕ್ ಮತ್ತು ಪಬ್ಲಿಕ್ ಸೆಕ್ಟಾರ್ ಬ್ಯಾಂಕ್ ಗಳ ವಿವಿಧ ಹುದ್ದೆಗಳಿಗೆ ನಡೆಸಲಾಗುವ ಸಾಮಾನ್ಯ ನೇಮಕಾತಿ ಪ್ರಕ್ರಿಯೆಗಳು ಆಗಸ್ಟ್ ನಿಂದ ಪ್ರಾರಂಭಗೊಳ್ಳಲಿದೆ.

    ಆರ್ ಆರ್ ಬಿ, ಪಿಎಸ್ ಬಿ ಬ್ಯಾಂಕ್ ಗಳ ಆಫೀಸ್ ಅಸಿಸ್ಟೆಂಟ್ ಆಫೀಸರ್ ಸ್ಕೇಲ್-1, 111, ಕ್ಲರ್ಕ್, ಪ್ರೊಬೆಷನರಿ ಆಫೀಸರ್ಸ್, ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಐಬಿಪಿಎಸ್ ಪರೀಕ್ಷೆ ಆಗಸಯ ತಿಂಗಳಲ್ಲಿ ಆರಂಭವಾಗಿ 2022 ರ ಜನವರಿ ಅಂತ್ಯದವರೆಗೂ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ನಡೆಯಲಿವೆ.

    ಪೂರ್ವಬಾವಿ ಪರೀಕ್ಷೆ ಗಳ ದಿನಾಂಕ /ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಸ್ಕೇಲ್ -1 ಹುದ್ದೆಗೆ ಆಗಸ್ಟ್ 1, 2021 ರಿಂದ ಆಗಸ್ಟ್ 21, 2021 ರವರೆಗೆ.

    ಸಿಂಗಲ್ ಎಕ್ಸಾಮಿನೇಷನ್ / ಆಫೀಸರ್ ಸ್ಕೇಲ್ 11, 111 ಹುದ್ದೆಗಳಿಗೆ ಸೆಪ್ಟೆಂಬರ್ 25, 2021 ರವರೆಗೆ ಪರೀಕ್ಷೆ ನಡೆಯಲಿದೆ.

    ಮುಖ್ಯ ಪರೀಕ್ಷೆ / ಆಫೀಸರ್ ಸ್ಕೇಲ್ -1 ಹುದ್ದೆಗೆ 25, ಸೆಪ್ಟೆಂಬರ್ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ 2021 ರ ಅಕ್ಟೋಬರ್ 3.

    ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ರಿಜಿಸ್ಟ್ರೇಶನ್ ಪಡೆಯಬೇಕು. ಕೊರೊನಾ ಪರಿಸ್ಥಿತಿಯನ್ನು ಪರಿಗಣಿಸಿ ಅಂತಿಮ ವೇಳಾಪಟ್ಟಿಯನ್ನು ನೀಡಲಾಗುವುದು.

    ಕ್ಲರ್ಕ್ ಹುದ್ದೆ – ಪೂರ್ವಬಾವಿ ಪರೀಕ್ಷೆ – 28-08-2021, 29-08-2021, 04-09-2021, 05-09-2021
    ಮುಯ ಪರೀಕ್ಷೆ – 31-10-2021

    ಪ್ರೊಬೆಷನರಿ ಆಫೀಸರ್ಸ್ – ಪೂರ್ವಬಾವಿ ಪರೀಕ್ಷೆ – 09-10-2021, 10-10-2021, 16-10-2021, 17-10-2021, ಪರೀಕ್ಷೆ – 27-11-2021

    ಸ್ಪೆಷಲಿಸ್ಟ್ ಆಫೀಸರ್ – ಪೂರ್ವಬಾವಿ ಪರೀಕ್ಷೆ -18-12-2021, 26-12-2021 ಮುಖ್ಯ ಪರೀಕ್ಷೆ – 30-01-2021