Category: bangalore

  • HAL : ಉದ್ಯೋಗವಕಾಶ

    HAL : ಉದ್ಯೋಗವಕಾಶ

    ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ( ಹೆಚ್ ಎಎಲ್) ನವರತ್ನ ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಮೆಡಿಕಲ್ ಪ್ರೊಫೆಷನಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ನೇರ ಸಂದರ್ಶನಕ್ಕೆ ಅಭ್ಯರ್ಥಿಗಳು ದಿನಾಂಕ 08-05-2021 (ಶನಿವಾರ) ಸಮಯ ಬೆಳಿಗ್ಗೆ 8.30 ರಂದು ಈ ಕೆಳಗಿನ ವಿಳಾಸದಲ್ಲಿ ಹಾಜರಿರತಕ್ಕದ್ದು.

    HAL Hospital, Vimanapura Post, Bangalore -17

  • TRAI : ಉದ್ಯೋಗವಕಾಶ

    TRAI : ಉದ್ಯೋಗವಕಾಶ

    ಭಾರತೀಯ ದೂರಸಂವೇದಿ ನಿಯಂತ್ರಣಾ ಪ್ರಾಧಿಕಾರವು ( ಟೆಲಿಕಾಂ ರೆಗ್ಯುಲೇಟರಿ ಅಥಾರಟಿ ) ಬೆಂಗಳೂರಿನ ಟ್ರಾಯ್ ಪ್ರಾದೇಶಿಕ ಕಛೇರಿಯಲ್ಲಿ ನಿಯೋಜನೆಯ ಮೇರೆಗೆ ವಿದೇಶಿ ಸೇವಾ ಕರಾರುಗಳನ್ವಯ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದೆ.

    ಹುದ್ದೆಯ ಹೆಸರು : ಜಂಟಿ ಸಲಹೆಗಾರರು/ ಉಪ ಸಲಹೆಗಾರರು

    ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ : 17-05-2021
    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್ ಮಾಡಿ

  • SAI : ಹುದ್ದೆಗೆ ಅರ್ಜಿ ಆಹ್ವಾನ

    SAI : ಹುದ್ದೆಗೆ ಅರ್ಜಿ ಆಹ್ವಾನ

    ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

    ಹುದ್ದೆ : ಯಂಗ್ ಪ್ರೊಫೆಷನಲ್ (ಅಥ್ಲೆಟ್ ರಿಲೇಷನ್ ಮ್ಯಾನೇಜರ್ ) ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆಗಳ ಸಂಖ್ಯೆ : 5+2*

    ನೇಮಕಾತಿಯ ಬಗ್ಗೆ ವಿವರಗಳ ನಮೂನೆಗಾಗಿ SAI ವೆಬ್‌ಸೈಟ್‌ ಗೆ ಭೇಟಿ ನೋಡಬಹುದು.

  • ಜ್ಯೂನಿಯರ್ ಅಸಿಸ್ಟೆಂಟ್ ಕಮ್ ಸೇಲ್ಸ್ ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

    ಜ್ಯೂನಿಯರ್ ಅಸಿಸ್ಟೆಂಟ್ ಕಮ್ ಸೇಲ್ಸ್ ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

    ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿ. ಈ ಸಂಘದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸಂಘವು ಪೂರೈಸುವ ಮೂಲ ಅರ್ಜಿಯೊಂದಿಗೆ ಪೂರಕ ದಾಖಲೆಗಳ ನಕಲುಗಳನ್ನು ಸ್ವಯಂ ದೃಢೀಕರಿಸಿ, ದಿನಾಂಕ : 24-05-2021 ರಂದು ಸಂಜೆ 5.00 ಘಂಟೆ ಒಳಗಾಗಿ ಸಂಘಕ್ಕೆ ತಲುಪುವಂತೆ ಸಲ್ಲಿಸತಕ್ಕದ್ದು.

    ಹುದ್ದೆಯ ಹೆಸರು : ಕಿರಿಯ ಸಹಾಯಕ ಕಂ ಮಾರಾಟ ಗುಮಾಸ್ತ ( ಜ್ಯೂನಿಯರ್ ಅಸಿಸ್ಟೆಂಟ್ ಕಮ್ ಸೇಲ್ಸ್ ಕ್ಲರ್ಕ್‌)

    ಸಾಮಾನ್ಯ ಅಭ್ಯರ್ಥಿ – 3
    ಪರಿಶಿಷ್ಟ ಜಾತಿ-1
    ಪ್ರವರ್ಗ-2A- 1
    ಒಟ್ಟು 5 ಹುದ್ದೆಗಳು.

    ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದ ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಭಾಷೆಯನ್ನು ಕಲಿತಿರಬೇಕು ಹಾಗೂ ಭಾಷಾ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು. ಕಂಪ್ಯೂಟರ್ ಅಪರೇಷನ್ ಮತ್ತು ಅಪ್ಲಿಕೇಶನ್ಸ್ ತರಬೇತಿ ಮತ್ತು ಜ್ಞಾನ ಹೊಂದಿರಬೇಕು.

    ವಯೋಮಿತಿ : ಅಭ್ಯರ್ಥಿಗೆ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ತುಂಬಿರಬೇಕು. ಹಾಗೂ ಈ ಕೆಳಕಂಡಂತೆ ಗರಿಷ್ಠ ವಯೋಮಿತಿಗೊಳಪಟ್ಟಿರಬೇಕು.
    ಅ) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು
    ಆ) 2ಎ, 2ಬಿ, 3ಎ, 3ಬಿ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷಗಳು.
    ಇ) ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು.
    ಅರ್ಜಿ ಸಲ್ಲಿಸುವ ವಿಧಾನ : ಸಂಘದ ಕೇಂದ್ರ ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ ಅರ್ಜಿಯನ್ನು ವಿತರಿಸಲಾಗುವುದು. ರೂ.1000/- ಪಾವತಿ ಮಾಡಿ ಅರ್ಜಿಯನ್ನು ಪಡೆಯಬಹುದು. ಈ ಹಣವನ್ನು ಹಿಂದಿರುಗಿಸಲಾಗುವುದಿಲ್ಲ. ಸಂಘದಿಂದ ಪೂರೈಸಿದ ಮೂಲ ಅರ್ಜಿಯಲ್ಲಿ ಭರ್ತಿ ಮಾಡಿ ಅರ್ಜಿಯೊಂದಿಗೆ ಪೂರಕ ದಾಖಲೆಗಳ ನಕಲುಗಳನ್ನು ಸ್ವಯಂ ದೃಢೀಕರಿಸಿ ಸದಸ್ಯ ಕಾರ್ಯದರ್ಶಿ,ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿ.ಸರ್ಜಾಪುರ -562125, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ, ಇವರಿಗೆ ದಿನಾಂಕ : 24-05-2021ರಂದು ಸಂಜೆ 5.00 ಒಳಗಾಗಿ ಖುದ್ದಾಗಿ ಸಲ್ಲಿಸತಕ್ಕದ್ದು.

  • ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ: ನೇಮಕ ಪ್ರಕಟಣೆ

    ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ: ನೇಮಕ ಪ್ರಕಟಣೆ

    ಮಹಾತ್ಮಾ ಗಾಂಧಿ‌ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ ಖಾತರಿ ಯೋಜನೆಯಡಿ ಬೆಂಗಳೂರು ನಗರ ಪಂಚಾಯಿತಿ ವ್ಯಾಪ್ತಿಯಲ್ಲಿಈ ಕೆಳಕಂಡ ಹುದ್ದೆಗಳಿಗೆ 11 ತಿಂಗಳ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ: ತಾಂತ್ರಿಕ ಸಹಾಯಕರು (ಅರಣ್ಯ)-01, ತಾಂತ್ರಿಕ ಸಹಾಯಕರು ( ತೋಟಗಾರಿಕೆ) -01

    ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ (ಫಾರೆಸ್ಟ್ರಿ) , ಎಂಎಸ್ಸಿ (ಫಾರೆಸ್ಟ್ರಿ) ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.24,000/- ಮಾಸಿಕ ವೇತನ ( ಪ್ರಯಾಣ ಭತ್ಯೆ ಪ್ರತಿ ಕಿ.ಮೀ.ಗೆ 5 ರೂ.ನಂತೆ ಗರಿಷ್ಠ ಮಾಸಿಕ ರೂ.1,500). ಈ ಹುದ್ದೆಗೆ 21ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ತಾಂತ್ರಿಕ ಸಹಾಯಕರು (ತೋಟಗಾರಿಕೆ) ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛೆ ಪಡುವ ಅಭ್ಯರ್ಥಿಗಳು ಬಿಎಸ್ಸಿ ( ಹೋರಿಕಲ್ಚರ್), ಎಂ.ಎಸ್ಸಿ ( ಹೋರಿಕಲ್ಚರ್) ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಇರಬೇಕು. ಈ ಹುದ್ದೆಗೆ ಅರ್ಜಿ‌ ಸಲ್ಲಿಸುವ ಅಭ್ಯರ್ಥಿಗಳು 21 ರಿಂದ 41 ರೊಳಗೆ ವಯೋಮಿತಿ ಇರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 24,000/- ಮಾಸಿಕ ವೇತನ ( ಪ್ರಯಾಣ ಭತ್ಯೆ ಪ್ರತಿ ಕಿ.ಮೀ.ಗೆ 5 ರೂ.ನಂತೆ ಗರಿಷ್ಠ ಮಾಸಿಕ ರೂ.1,500).ಇರುತ್ತದೆ.

    ಭರ್ತಿ ಮಾಡಿ‌ದ ಅರ್ಜಿಯನ್ನು ದಿನಾಂಕ 15-05-2021 ರ ಸಂಜೆ 5.30 ರೊಳಗೆ ಖುದ್ದಾಗಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಟಪಾಲು ಶಾಖೆಗೆ ಸಲ್ಲಿಸುವುದು.

    ಅರ್ಜಿ ಸಲ್ಲಿಸುವ ವಿಳಾಸ : ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಬನಶಂಕರಿ ದೇವಸ್ಥಾನದ ಹತ್ತಿರ, ಎಸ್.ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು- 70

  • BMS ಎಜುಕೇಶನಲ್ ಟ್ರಸ್ಟ್  : ಹುದ್ದೆಗಳ ನೇಮಕಾತಿ

    BMS ಎಜುಕೇಶನಲ್ ಟ್ರಸ್ಟ್ : ಹುದ್ದೆಗಳ ನೇಮಕಾತಿ

    ಬಿಎಂಎಸ್ ಎಜುಕೇಶನಲ್ ಟ್ರಸ್ಟ್ ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಶುಲ್ಕ, ವಿದ್ಯಾರ್ಹತೆ, ಹುದ್ದೆ ವಿವರಗಳು ಈ ಕೆಳಗೆ ನೀಡಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, 28 ಎಪ್ರಿಲ್ 2021 ಕೊನೆಯ ದಿನಾಂಕವಾಗಿದೆ.

    ಹುದ್ದೆ : ಆಫೀಸ್ ಅಸಿಸ್ಟೆಂಟ್ ಟೈಪಿಸ್ಟ್‌, ಅಸಿಸ್ಟೆಂಟ್ ಇನ್ಸ್ಟ್ರಕ್ಟರ್, ಫಾರ್‌ಮ್ಯಾನ್, ವಿಡಿಯೋ ಎಡಿಟರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-04-2021

    ಆಫೀಸ್ ಅಸಿಸ್ಟೆಂಟ್ ಟೈಪಿಸ್ಟ್ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ಯುನಿವರ್ಸಿಟಿಯಿಂದ ಡಿಗ್ರಿಯನ್ನು ಪಡೆದಿರಬೇಕು. ಸೀನಿಯರ್ ಗ್ರೇಡ್ ಟೈಪಿಸ್ಟ್ ನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಪಾಸಾಗಿರಬೇಕು. ಎಂಎಸ್ ಆಫೀಸ್ ತಿಳಿದಿರಬೇಕು.

    ಅಸಿಸ್ಟೆಂಟ್ ಇನ್ಸ್ಟ್ರಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ ಅಥವಾ ಡಿಪ್ಲೋಮಾ ವನ್ನು ಸಿಎಸ್ಇ/ಐಎಸ್‌ಇ ನ್ನು ತೇರ್ಗಡೆ ಹೊಂದಿರಬೇಕು. ಹಾಗೂ ಸದರಿ ಹುದ್ದೆಯಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು.
    ಫಾರ್‌ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಬಿಇ/ಡಿಪ್ಲೋಮಾ ಇನ್‌ ಸಿವಿಲ್ ಇಂಜಿನಿಯರಿಂಗ್ ಮತ್ತು ಮೂರು ವರ್ಷಗಳ ಫಾರ್ಮ್ಯಾನ್‌/ಇನ್ಸ್ಟ್ರಕ್ಟರ್ ಹುದ್ದೆಯಲ್ಲಿ ಪರಿಣಿತಿ ಹೊಂದಿರಬೇಕು.
    ವಿಡಿಯೋ ಎಡಿಟರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಎಸ್ಸಿ ಕಂಪ್ಯೂಟರ್/ಬಿಸಿಎ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಗಳು ವಿಡಿಯೋ ಎಡಿಟಿಂಗ್ ಮತ್ತು ಕ್ಯಾಮೆರ ಮ್ಯಾನ್ ಹುದ್ದೆಯಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು.

    ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಅಪ್ಲಿಕೇಶನ್‌ ನ್ನು ಈ ಲಿಂಕ್ ಕ್ಲಿಕ್ ಮಾಡಿ ಓದಿ ಅರ್ಜಿ ಸಲ್ಲಿಸಬಹುದು.