Category: bangalore

  • ಕೆನರಾ ಬ್ಯಾಂಕ್ : ಹುದ್ದೆಗಳ ನೇಮಕ

    ಕೆನರಾ ಬ್ಯಾಂಕ್ : ಹುದ್ದೆಗಳ ನೇಮಕ

    ಕೆನರಾ ಬ್ಯಾಂಕ್, ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ.


    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 30,2021

    ಹುದ್ದೆ : ಚೀಫ್ ಡಿಜಿಟಲ್ ಅಧಿಕಾರಿ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಬಿ.ಇ/ಬಿ.ಟೆಕ್ ಮತ್ತು ಎಂಬಿಎ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ನಲ್ಲಿ ಸರ್ಟಿಫಿಕೇಶನ್ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಯೋಮಿತಿ : ಎಪ್ರಿಲ್ 30, 2021 ರ ಅನ್ವಯ ಕನಿಷ್ಠ 35 ರಿಂದ ಗರಿಷ್ಠ 50 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳು ರೂ. 1180/- ರೂ ಮತ್ತು ಪ.ಜಾತಿ/ ಪ.ಪಂಗಡ/pwd/ ಮಹಿಳಾ ಅಭ್ಯರ್ಥಿಗಳಿಗೆ ರೂ. 118 ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ.

    ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ, ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಜೂನ್ 30, 2021 ರೊಳಗೆ ತಲುಪಿಸಬೇಕಾಗುತ್ತದೆ.

    ಕಚೇರಿ ವಿಳಾಸ : The Senior Manager, Canara Bank, Recruitment Cell, HR Wing, Head Office 112, JC Road, Bengaluru-560002

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • TRAI : ಹುದ್ದೆಗಳ ನೇಮಕ

    TRAI : ಹುದ್ದೆಗಳ ನೇಮಕ

    ಭಾರತೀಯ ದೂರಸಂವೇದಿ ನಿಯಂತ್ರಣಾ ಪ್ರಾಧಿಕಾರ ( TRAI) ( ಟೆಲಿಕಾಂ ರೆಗುಲೇಟರಿ ಅಥಾರಿಟಿ ಆಫ್ ಇಂಡಿಯಾ) ಬೆಂಗಳೂರಿನ ಇದರ ಪ್ರಾದೇಶಿಕ ಕಚೇರಿಯಲ್ಲಿ ‌ನಿಯೋಜನೆಯ ಮೇರೆಗೆ ವಿದೇಶಿ ಸೇವಾ ಕರಾರುಗಳನ್ವಯ ದಿನಾಂಕ 29 ನೇ ಎಪ್ರಿಲ್, 2021 ರಂದು ಈವನ್ ಸಂಖ್ಯೆ ಖಾಲಿ ಹುದ್ದೆ ಆದೇಶದಡಿ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಟಿಆರ್ ಎಐ, ನವದೆಹಲಿ ಇವರು ಉಲ್ಲೇಖವನ್ನು ಕರೆದಿದ್ದಾರೆ.

    ಹುದ್ದೆ : ಜಂಟಿ ಸಲಹೆಗಾರ/ ಉಪ ಸಲಹೆಗಾರ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-06-2021

    ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರ ಮತ್ತು ಅರ್ಜಿ ನಮೂನೆಯನ್ನು ಟಿಆರ್ ಎಐ ವೆಬ್ಸೈಟ್ www.trai.gov.in ನಿಂದ ಪಡೆಯಬಹುದು.

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಚಾಮರಾಜನಗರ : ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಿ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಚಾಮರಾಜನಗರ : ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಿ

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಚಾಮರಾಜನಗರ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಕೋವಿಡ್ -19 ಆಸ್ಪತ್ರೆ (ಡಿ.ಸಿ.ಹೆಚ್‌.ಸಿ ) ಅರವಳಿಕೆ ತಜ್ಞರು -5 ಹುದ್ದೆಗಳು
    ಕೋವಿಡ್ -19 ಆಸ್ಪತ್ರೆ (ಡಿ.ಸಿ.ಹೆಚ್.ಸಿ) ಫಿಜಿಶಿಯನ್ -5 ಹುದ್ದೆಗಳು

    ವಿದ್ಯಾರ್ಹತೆ : ಎಂಬಿಬಿಎಸ್ ಡಿ.ಎ/ಎಂ.ಡಿ ಅಭ್ಯರ್ಥಿಗಳು ಹೊಂದಿರಬೇಕು.

    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 2,00,000/-ವೇತನವಿರುತ್ತದೆ.

    ನೇರ ಸಂದರ್ಶನ ನಡೆಯುವ ಸ್ಥಳ : 20-05-2021

    ಸಂದರ್ಶನ ನಡೆಯುವ ಸ್ಥಳ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 312, 3 ನೇ ಅಂತಸ್ತು, ಜಿಲ್ಲಾಡಳಿತ ಭವನ, ಚಾಮರಾಜನಗರ

    ಸದರಿ ಹುದ್ದೆಗಳನ್ನು ರೋಸ್ಟರ್ ಕಮ್ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಇಚ್ಛೆಯುಳ್ಳ‌ ಅಭ್ಯರ್ಥಿಗಳು ಸ್ವ- ವಿವರ ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ದಾಖಲಾತಿಗಳು ಹಾಗೂ ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಿದೆ.

  • ಸರ್.ವಿ‌.ರಾಮನ್ ಸಾರ್ವಜನಿಕ ಆಸ್ಪತ್ರೆ : 18 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸರ್.ವಿ‌.ರಾಮನ್ ಸಾರ್ವಜನಿಕ ಆಸ್ಪತ್ರೆ : 18 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸರ್ ವಿ ರಾಮನ್ ಸಾರ್ವಜನಿಕ ಆಸ್ಪತ್ರೆ ಇಂದಿರಾನಗರ ಬೆಂಗಳೂರು ಆಸ್ಪತ್ರೆಯ ಕೋವಿಡ್ -19 ಸಾಂಕ್ರಾಮಿಕ ರೋಗದ ನಿರ್ವಹಣೆ ಸಮಯದಲ್ಲಿ ಆಸ್ಪತ್ರೆಗಳಲ್ಲಿ ರಚಿಸಲಾದ ಐಸಿಯುಗಳು ಮತ್ತು ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ಕಾರ್ಯಗತಗೊಳಿಸಿ‌ ನಿರ್ವಹಿಸಲು ಹೆಚ್ಚುವರಿ ಮಾನವ ಸಂಪನ್ಮೂಲಗಳನ್ನು 06 ತಿಂಗಳು ಮಟ್ಟಿಗೆ ತಾತ್ಕಾಲಿಕವಾಗಿ ಗುತ್ತಿಗೆ, ಆಧಾರದ ಮೇಲೆ 18 ಶ್ರುಶ್ರೂಷಕರುಗಳ ಸಿಬ್ಬಂದಿಗಳನ್ನು ನೇರ ಸಂದರ್ಶನದ ಮುಖಾಂತರ (walk in Interview) ದಿನಾಂಕ : 25-05-2021 ರಿಂದ 28-05-2021 ರವರೆಗೆ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 4:30 ಗಂಟೆಯವರೆಗೆ ವೈದ್ಯಕೀಯ ಅಧೀಕ್ಷಕರ ಕೊಠಡಿಯಲ್ಲಿ ನಡೆಸುತ್ತಿದ್ದು ತಾವುಗಳು ಮೂಲ ದಾಖಲಾತಿ ಪ್ರಮಾಣ ಪತ್ರಗಳೊಂದಿಗೆ, ಮತ್ತು ಒಂದು ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗುವುದು. ( ಅಭ್ಯರ್ಥಿಯ ವಯೋಮಿತಿ 40 ವರ್ಷದ ಒಳಗಿರಬೇಕು) 18 ಶ್ರುಶ್ರೂಷಕರುಗಳ ಸಿಬ್ಬಂದಿಯ ಹುದ್ದೆಗಳ ವೇತನಕ್ಕೆ ಸಂಬಂಧಿಸಿದಂತೆ, ಸರಕಾರವು ಸದರಿ ಅವಧಿಗೆ ನಿಗದಿಪಡಿಸಿದ ವೇತನವನ್ನು ನೀಡಲಾಗುವುದು.

    ಹುದ್ದೆ : ಶ್ರುಶ್ರೂಷಕರುಗಳು -18 ಹುದ್ದೆ

    ನೇರ ಸಂದರ್ಶನ : ದಿನಾಂಕ 25-05-2021 ರಿಂದ 28-05-2021 ರವರೆಗೆ ‌ಸಮಯ ಬೆಳಿಗ್ಗೆ ‌ 11:00 ಗಂಟೆಯಿಂದ ಮಧ್ಯಾಹ್ನ 4:30 ವರೆಗೆ.

    ವಯೋಮಿತಿ : ಒಬಿಸಿ ಅಭ್ಯರ್ಥಿಗಳು 35 ವಯಸ್ಸು ಮೀರಿರಬಾರದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಸಿಎಟಿ-1 ಅಭ್ಯರ್ಥಿಗಳಿಗೆ 40 ವರ್ಷ.

    ವೇತನ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ‌ ರೂ. 25,000/- ವೇತನವಿರುತ್ತದೆ.

    ಸ್ಥಳೀಯ ಅಭ್ಯರ್ಥಿಗಳಿಗೆ ಹಾಗೂ ಆರೋಗ್ಯ ‌ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಅನುಭವುಳ್ಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

  • ಮಾಹಿತಿ ತಂತ್ರಜ್ಞಾನ: ಆಸಕ್ತರು ಈ ಕೂಡಲೇ   ಅರ್ಜಿ ಸಲ್ಲಿಸಿ

    ಮಾಹಿತಿ ತಂತ್ರಜ್ಞಾನ: ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    ಮಾಹಿತಿ ತಂತ್ರಜ್ಞಾನ (IT/ICT) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಂಸ್ಥೆಯಲ್ಲಿ ಕೆಳಕಂಡ ‌ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021

    ಹುದ್ದೆಗಳ ವಿವರ : ಪ್ರಾಜೆಕ್ಟ್ ಮ್ಯಾನೇಜರ್ -06
    ಪ್ರಾಜೆಕ್ಟ್ ಲೀಡ್ – 03
    ಸೆಲ್ಯೂಷನ್ ಆರ್ಕಿಟೆಕ್ಟ್ – 01
    ಬಿಸಿನೆಸ್ ಅನಲಿಸ್ಟ್ – 05
    ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ – 08
    ಸಾಫ್ಟ್‌ವೇರ್ ಇಂಜಿನಿಯರ್ -42
    ಟೆಸ್ಟ್ ಲೀಡ್ – 02
    ಟೆಸ್ಟ್ ಇಂಜಿನಿಯರ್ -10
    ಅಪರೇಷನ್ ಮ್ಯಾನೇಜರ್ – 04
    ಡೇಟಾ ಬೇಸ್ ಡಿಸೈನರ್ – 04
    ಡೇಟಾ ಬೇಸ್ ಅಡ್ಮಿನಿಸ್ಟ್ರೇಟರ್ – 04
    ಸಿಸ್ಟಮ್ ಅಡ್ಮಿನಿಸ್ಟ್ರೇಟರ್ – 02

    ಆಸಕ್ತ ಅಭ್ಯರ್ಥಿಗಳು ತಮ್ಮ ಸಿವಿಗಳನ್ನು [email protected] ಗೆ ಇ ಮೇಲ್ ಮುಖಾಂತರ ಸಲ್ಲಿಸತಕ್ಕದ್ದು.

  • ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಉದ್ಯೋಗವಕಾಶ

    ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಉದ್ಯೋಗವಕಾಶ

    ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆರೋಗ್ಯದ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಈ ಕೆಳಕಂಡ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಫಿಸಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಡಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ವೇತನ ರೂ. 1,10,000/- ವೇತನವಿರುತ್ತದೆ. ಈ ಹುದ್ದೆಗೆ ಕಡ್ಡಾಯವಾಗಿ ಇಂಟರ್ನ್ ಶಿಪ್ ಪೂರೈಸಿರಬೇಕು. ಕೆಎಂಸಿಯ ನೋಂದಣಿಯನ್ನು ಹೊಂದಿರತಕ್ಕದ್ದು. ಸಂಬಂಧಪಟ್ಟ ವಿಶ್ವವಿದ್ಯಾಲಯದಿಂದ ಡಿಗ್ರಿ ಸರ್ಟಿಫಿಕೇಟ್ ನ್ನು ಪಡೆದಿರಬೇಕು.

    ತಜ್ಞ ವೈದ್ಯರು ಹುದ್ದೆಗೆ ಎಂಡಿ/ಡಿ.ಎನ್.ಬಿ ವಿದ್ಯಾರ್ಹತೆ ಹಾಗೂ ಈ ಹುದ್ದೆಗೆ ರೂ. 1,10,000/- ವೇತನವಿರುತ್ತದೆ.

    ವೈದ್ಯಾಧಿಕಾರಿಗಳು ಈ ಹುದ್ದೆಗೆ ‌ಎಂಬಿಬಿಎಸ್ ಮಾಡಿರಬೇಕು. ಈ‌ ಹುದ್ದೆಗೆ ರೂ.35,000/- ಮಾಸಿಕ ವೇತನ ಇರುತ್ತದೆ.

    ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು ಹುದ್ದೆಗೆ ಎಂಬಿಬಿಎಸ್/ಬಿಎಎಂಎಸ್ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ಶ್ರುಶ್ರೂಷ ಅಧಿಕಾರಿಗಳು(ಎನ್ ಸಿಡಿ) ಈ ಹುದ್ದೆಗೆ ಡಿಪ್ಲೋಮಾ ಇನ್ ನರ್ಸಿಂಗ್/ಬಿಎಸ್ಸಿ ‌ನರ್ಸಿಂಗ್ ಮಾಡಿರಬೇಕು. ಈ‌ ಹುದ್ದೆಗೆ ರೂ. 14,000/-ಮಾಸಿಕ ಸಂಭಾವನೆ ಇರುತ್ತದೆ‌.

    ಶ್ರುಶ್ರೂಷ ಅಧಿಕಾರಿಗಳು(ತಾಯಿ ಆರೋಗ್ಯ ಮತ್ತು ಮಕ್ಕಳ ಆರೋಗ್ಯ) ಈ ಹುದ್ದೆಗೆ ಡಿಪ್ಲೋಮಾ ಇನ್ ನರ್ಸಿಂಗ್/ಬಿಎಸ್ಸಿ ‌ನರ್ಸಿಂಗ್ ಮಾಡಿರಬೇಕು. ಈ‌ ಹುದ್ದೆಗೆ ರೂ. 11,500/-ಮಾಸಿಕ ಸಂಭಾವನೆ ಇರುತ್ತದೆ‌.

    ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆಗೆ ರೂ.10,000/- ವೇತನವಿರುತ್ತದೆ.

    ಕಿರಿಯ‌ ಪುರುಷ ಆರೋಗ್ಯ ‌ಸಹಾಯಕರು ಹುದ್ದೆಗೆ ಮಾಸಿಕ ರೂ.10,000/- ವೇತನವಿರುತ್ತದೆ.

    ನೇತ್ರ ಸಹಾಯಕರು ಈ ಹುದ್ದೆಗೆ ಎರಡು ವರ್ಷದ ಡಿಪ್ಲೋಮಾ ಇನ್ ಒಪ್ಟೋಮೆಟ್ರಿ ಅಥವಾ ನೇತ್ರ‌ಸಹಾಯಕರು/ಬಿ ಫಾರ್ಮ/ ಡಿ ಫಾರ್ಮ ವಿದ್ಯಾರ್ಹತೆ ಹೊಂದಿದ್ದು, ರೂ. 12,000/- ಮಾಸಿಕ ವೇತನವಿರುತ್ತದೆ.

    ಸೈಕಿಯಾಟ್ರಿಕ್ ಸ್ಟಾಫ್ ನರ್ಸ್ ಡಿಪ್ಲೋಮಾ ಇನ್ ನರ್ಸಿಂಗ್ / ಬಿಎಸ್ಸಿ ನರ್ಸಿಂಗ್ ಅರ್ಹತೆಯನ್ನು ಹೊಂದಿರಬೇಕು. ರೂ.14,000 ವೇತನವಿರುತ್ತದೆ.

    ಕಮ್ಯುನಿಟಿ ನರ್ಸ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಹತೆ ಹೊಂದಿದ್ದು, ರೂ. 14,000 ವೇತನವಿರುತ್ತದೆ.

    ಡಿಸ್ಟ್ರಿಕ್ಟ್‌ ಕನ್ಸಲ್ಟೆಂಟ್ ಅಶ್ಯುರೆನ್ಸ್ ಹುದ್ದೆಗೆ ಎಂಬಿಬಿಎಸ್/ಬಿಡಿಎಸ್/ನರ್ಸಿಂಗ್ ಗ್ರಾಜ್ಯುಯೇಟ್/ಪಿಜಿ ಮಾಸ್ಟರ್ಸ್ ಇನ್ ಹೆಲ್ತ್ ಅಡ್ಮಿನಿಸ್ಟ್ರೇಶನ್/ಹೆಲ್ತ್ ಮ್ಯಾನೇಜ್ಮೆಂಟ್ ವಿದ್ಯಾರ್ಹತೆಯನ್ನು ಹೊಂದಿರಬೇಕು. ರೂ.45,000/- ಮಾಸಿಕ ವೇತನವಿರುತ್ತದೆ.

    ಇನ್ಸ್ಟಕ್ಟರ್ ಫಾರ್ ಇಂಪಾರ್ಡ್ ಚಿಲ್ಡ್ರನ್ ಹುದ್ದೆಗೆ ಡಿಪ್ಲೋಮಾ ಇನ್ ಟ್ರೈನಿಂಗ್ ಯಂಗ್ ಡೆಫ್ ಮತ್ತು ಹಿಯರಿಂಗ್ ಹ್ಯಾಂಡಿಕ್ಯಾಪ್ಡ್ ವಿದ್ಯಾರ್ಹತೆಯನ್ನು ಹೊಂದಿರಬೇಕು. ಈ ಹುದ್ದೆಗೆ ರೂ. 15,000/- ವೇತನವಿರುತ್ತದೆ.

    ಸದರಿ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಎಲ್ಲಾ ಮೂಲ ದಾಖಲಾತಿಗಳೊಂದಿಗೆ ದಿನಾಂಕ 15/05/2021 ರ ಬೆಳಿಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಸಂದರ್ಶನದ ಸ್ಥಳದಲ್ಲಿ ತಮ್ಮ‌ ಹೆಸರುಗಳನ್ನು ನೊಂದಾಯಿಸಿಕೊಂಡ‌ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು.