Category: bangalore

  • ಜೆಎನ್ ಸಿಎಎಸ್ ಆರ್  ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಜೆಎನ್ ಸಿಎಎಸ್ ಆರ್ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಜೆಎನ್ ಸಿಎಎಸ್ಆರ್(ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈನ್ಟಿಫಿಕ್ ರಿಸರ್ಚ್) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 11 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 24-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-03-2021(5pm)

    ಜೆಎನ್ ಸಿಎಎಸ್ಆರ್(ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈನ್ಟಿಫಿಕ್ ರಿಸರ್ಚ್) ನಲ್ಲಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.

    ಹುದ್ದೆಗಳ ವಿವರ ‌: ಜೆಎನ್ ಸಿಎಎಸ್ಆರ್(ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈನ್ಟಿಫಿಕ್ ರಿಸರ್ಚ್)ನಲ್ಲಿ ಇನ್ಸ್ಟ್ರುಮೆಂಟ್ ಮ್ಯಾನೇಜರ್ ಮತ್ತು ಅಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ : ಸಂಸ್ಥೆ ಯ ವತಿಯಿಂದ ಹುದ್ದೆ ಸಂಖ್ಯೆ ನಿಗದಿಯಾಗಿಲ್ಲ.

    ಅರ್ಜಿ ಶುಲ್ಕ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವಂತಿಲ್ಲ.

    ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ/ ಬೋರ್ಡ್ ನಿಂದ ಎಂ.ಎಸ್ಸಿ ತೇರ್ಗಡೆ ಹೊಂದಿರಬೇಕು.

    ವಯೋಮಿತಿ : ಜೆಎನ್ ಸಿಎಆರ್ ನ ನೇಮಕಾತಿ ನಿಯಮಾನುಸಾರ ಅಭ್ಯರ್ಥಿಗಳು ವಯೋಮಿತಿ ಹೊಂದಿರಬೇಕು.

    ಅಭ್ಯರ್ಥಿಗಳು ತಮ್ಮ ಅರ್ಜಿ ಮತ್ತು ಎಲ್ಲಾ ದಾಖಲೆಗಳನ್ನು ಈ ಕೆಳಗಿನ ಈ ಮೈಲ್ ಐಡಿ ಗೆ ಕಳುಹಿಸಬೇಕು.
    [email protected] ಗೆ ದಿನಾಂಕ 11.03.2021 ರ ಸಂಜೆ 5 ಗಂಟೆಯ ಒಳಗೆ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

     

  • ರಾಮನ್ ಸಂಶೋಧನಾ ಸಂಸ್ಥೆ ಲೈಬ್ರೆರಿ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ

    ರಾಮನ್ ಸಂಶೋಧನಾ ಸಂಸ್ಥೆ ಲೈಬ್ರೆರಿ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ

    ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಲೈಬ್ರೆರಿ ಟ್ರೈನಿ ಹುದ್ದೆಗೆ, (01) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 24 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 24-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-03-2021
    ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮುಖಾಂತರ ಆಯ್ಕೆ ಮಾಡಲಾಗುತ್ತದೆ.

    ವಯೋಮಿತಿ : 24 ಫೆಬ್ರವರಿ 2021 ರ ಅನ್ವಯ ಅಭ್ಯರ್ಥಿಗೆ ಗರಿಷ್ಠ 30 ವಯಸ್ಸಾಗಿರಬೇಕು.

    ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ/ ಬೋರ್ಡ್ ನಿಂದ ಎಂಎಲ್ ಐ ಎಸ್ ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

    ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?
    ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳೊಂದಿಗೆ ಕೆಳಗೆ ನೀಡಲಾಗಿರುವ ವಿಳಾಸಕ್ಕೆ 24 ಮಾರ್ಚ್ 2021 ರೊಳಗೆ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸತಕ್ಕದ್ದು.

    ವಿಳಾಸ : Librarian, Raman Research Institute,C.V.Raman Avenue, Sadashivanagar, Bangalore – 560080

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

     

  • ನಮ್ಮ ಮೆಟ್ರೊದಲ್ಲಿ ಉದ್ಯೋಗವಕಾಶ : ಇಲ್ಲಿದೆ ಹೆಚ್ಚಿನ ವಿವರ

    ನಮ್ಮ ಮೆಟ್ರೊದಲ್ಲಿ ಉದ್ಯೋಗವಕಾಶ : ಇಲ್ಲಿದೆ ಹೆಚ್ಚಿನ ವಿವರ

    ಬಿಎಂಆರ್ ಸಿ ಎಲ್ ( ಬ್ಯಾಂಗಲೋರ್ ಮೆಟ್ರೋ ರೈಲ್ ಕೋರ್ಪರೇಷನ್ ಲಿಮಿಟೆಡ್ ) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, 22, ಮಾರ್ಚ್ 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸುವುದು ಹೇಗೆ? ಆಫ್ ಲೈನ್ ಮೂಲಕ

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23-02-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-03-2021

    ಅರ್ಜಿ ಸಲ್ಲಿಕೆ :  ನಮ್ಮ ಮೆಟ್ರೋ
    ನಲ್ಲಿರುವ ಹುದ್ದೆಗಳಿಗೆ ಆಫ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

    ನಮ್ಮ ಮೆಟ್ರೋ ದಲ್ಲಿ ಒಟ್ಟು 06 ಹುದ್ದೆಗಳು ಖಾಲಿ ಇದ್ದು ಚೀಫ್ ಇಂಜಿನಿಯರ್, ಮ್ಯಾನೇಜರ್, ಡಿಜಿಎಂ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

    ಹುದ್ದೆಗಳ ವಿವರ : ಚೀಫ್ ಇಂಜಿನಿಯರ್ (ಎಸ್ & ಟಿ)-01 ( ಮುಖ್ಯ ಇಂಜಿನಿಯರ್), ಚೀಫ್ ಎಲೆಕ್ಟ್ರಿಕಲ್ ಇಂಜಿನಿಯರ್(ಇ&ಎಂ)-01( ಮುಖ್ಯ ಎಲೆಕ್ಟ್ರಿಕಲ್ ಇಂಂಜಿನಿಯರ್), ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್ ಮೈನ್ಟೆನೆಸ್)-01, ಡೆಪ್ಯುಟಿ ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್ ಮೈನ್ಟೆನೆಸ್)-01, ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಸ್ & ಟಿ) -01, ಡೆಪ್ಯುಟಿ ಜನರಲ್ ಮ್ಯಾನೇಜರ್ (ಸ್ಟೋರ್)-01

    ವಿದ್ಯಾರ್ಹತೆ : ಅಭ್ಯರ್ಥಿಗಳು ಯಾವುದೇ ಅಂಗೀಕೃತ ಸಂಸ್ಥೆ/ ಬೋರ್ಡ್ ನಿಂದ ಡಿಗ್ರಿ ಇನ್ ಇಂಜಿನಿಯರಿಂಗ್ ನ್ನು ಹೊಂದಿರಬೇಕು.

    ವಯೋಮಿತಿ : ಚೀಫ್ ಇಂಜಿನಿಯರ್ (ಎಸ್ & ಟಿ) ಚೀಫ್ ಎಲೆಕ್ಟ್ರಿಕಲ್ ಇಂಜಿನಿಯರ್(ಇ&ಎಂ) ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್ ಮೈನ್ಟೆನೆಸ್) ಹುದ್ದೆಗೆ ಅರ್ಜಿ‌ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 50 ವಯೋಮಿತಿ ಹೊಂದಿರಬೇಕು.
    ಡೆಪ್ಯುಟಿ ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್ ಮೈನ್ಟೆನೆಸ್) , ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಸ್ & ಟಿ) , ಡೆಪ್ಯುಟಿ ಜನರಲ್ ಮ್ಯಾನೇಜರ್ (ಸ್ಟೋರ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 45 ವಯೋಮಿತಿ ಹೊಂದಿರಬೇಕು.
    ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್‌ ಗೆ ಭೇಟಿ ನೀಡಿ‌ ಅರ್ಜಿಯನ್ನು ಡೌನ್‌ಲೋಡ್ ಮಾಡಿ , ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ದಿನಾಂಕ 15-03-2021 ರೊಳಗೆ ಸ್ಪೀಡ್ ಪೋಸ್ಟ್, ರಿಜಿಸ್ಟರ್ ಪೋಸ್ಟ್ ಅಥವಾ ಬೇರೆ ರೀತಿಯಲ್ಲಿ ಸಲ್ಲಿಸಬೇಕು.
    ವಿಳಾಸ : General Manager (HR& taxation), Bangalore Metro Rail Corporation Limited, 3rd Floor, BMTC Complex, KH Road Shantinagara,Bengaluru- 560027

    ಹೆಚ್ವಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ದಲ್ಲಿ ಖಾಲಿ ಇರುವ ಹುದ್ದೆಗೆ ನೇರ ಸಂದರ್ಶನ

    ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ದಲ್ಲಿ ಖಾಲಿ ಇರುವ ಹುದ್ದೆಗೆ ನೇರ ಸಂದರ್ಶನ

    ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ದಲ್ಲಿ ಗುತ್ತಿಗೆ ಆಧಾರದಲ್ಲಿ ಈ ಕೆಳಕಂಡ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು‌ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಟೆಕ್ನಿಕಲ್ ಕನ್ಸಲ್ಟೆಂಟ್ -01

    ವೇತನ : ತಿಂಗಳಿಗೆ 30,000 ವೇತನ ನಿಗದಿಯಾಗಿರುತ್ತದೆ.

    ವಿದ್ಯಾರ್ಹತೆ : ಎಂ.ಎಸ್ಸಿ ಇನ್ ಎನ್ವಿರಾನ್ಮೆಂಟಲ್ ಸೈನ್ಸಸ್/ಅಪ್ಲೈಡ್ ಬಾಟನಿ/ನ್ಯಾಚುರಲ್ ರಿಸೋರ್ಸ್ ಕಂಸರ್ವೇಶನ್ ಆಂಡ್ ಮ್ಯಾನೇಜ್ಮೆಂಟ್

    ಆಸಕ್ತ ಅಭ್ಯರ್ಥಿಗಳು ದಿನಾಂಕ 10-03-2021 ರ ಬೆಳಗ್ಗೆ 11.30 ಗೆ ಪ್ರಾಧಿಕಾರದ ಕಚೇರಿಯಲ್ಲಿ ಸಂದರ್ಶನವು ನಿಗದಿಯಾಗಿರುತ್ತದೆ.

    ವೈಯಕ್ತಿಕ ಮಾಹಿತಿಯನ್ನು ಒಳಗೊಂಡ ಮತ್ತು ವಿದ್ಯಾರ್ಹತೆ ಗೆ ಸಂಬಂಧಿಸಿದ ಪ್ರಮಾಣ ಪತ್ರಗಳ ಮೂಲ ಮತ್ತು ಛಾಯಾಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಇದು ಸಂಪೂರ್ಣವಾಗಿ ತಾತ್ಕಾಲಿಕ ಹುದ್ದೆ ಆಗಿರುತ್ತದೆ. ಮತ್ತು ಯಾವುದೇ ಮಂಜೂರಾದ ಹುದ್ದೆ ಅಲ್ಲ. ಗುತ್ತಿಗೆ ಅವಧಿಯು 11 ತಿಂಗಳಿಗೆ ಮಾತ್ರ‌ ಮತ್ತು ಅಭ್ಯರ್ಥಿಯ ಕಾರ್ಯನಿರ್ವಹಣೆಯನ್ನು ಅವಲಂಭಿಸಿ ಗುತ್ತಿಗೆ ಆಧಾರದಲ್ಲಿ ವಿಸ್ತರಿಸಲಾಗುವುದು.

    ಕಚೇರಿ ವಿಳಾಸ : ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ,4 ನೇ ಮಹಡಿ, ವನವಿಕಾಸ,18 ನೇ ಅಡ್ಡ ರಸ್ತೆ, ಮಲ್ಲೇಶ್ವರಂ,ಬೆಂಗಳೂರು-03

    ದೂರವಾಣಿ ಸಂಖ್ಯೆ : 23464089

  • ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ ) ನಿಯಮಿತ ಹುದ್ದೆಗಳಿಗೆ ಅರ್ಜಿ ಆಹ್ವಾನ

    ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ ) ನಿಯಮಿತ ಹುದ್ದೆಗಳಿಗೆ ಅರ್ಜಿ ಆಹ್ವಾನ

    ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ( ಕರ್ನಾಟಕ ) ನಿಯಮಿತ  (ಕೆಆರ್ ಐಡಿಯು)  ನಲ್ಲಿ ಖಾಲಿ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 19 ಮಾರ್ಚ್ 2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 19-02-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-03-2021
    ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.

    (ಕೆಆರ್ ಐಡಿ)ಯು –
    ಜನರಲ್ ಮ್ಯಾನೇಜರ್ (ಎಲೆಕ್ಟ್ರಿಕಲ್ ಒಎಚ್ ಇ) -01
    ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್)-01
    ಸೀನಿಯರ್ ಡಿಜಿಎಂ/ಜೆಜಿಎಂ-01 ಹುದ್ದೆಗಳಿಗೆ ಅರ್ಜಿ ಯನ್ನು‌ ಆಹ್ವಾನಿಸಿದೆ.

    ವಿದ್ಯಾರ್ಹತೆ :
    ಜನರಲ್ ಮ್ಯಾನೇಜರ್ (ಎಲೆಕ್ಟ್ರಿಕಲ್ ಒಎಚ್ ಇ)ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬ್ಯಾಚುಲರ್ ಡಿಗ್ರಿ ಹೊಂದಿರಬೇಕು. ಸೀನಿಯರ್ ಡಿಜಿಎಂ/ಜೆಜಿಎಂ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗ್ರಾಜ್ಯುಯೇಟ್ ಇನ್ ಲಾ ಪಡೆದಿರಬೇಕು.

    ವಯೋಮಿತಿ : ಅಭ್ಯರ್ಥಿಗಳು ಗರಿಷ್ಠ 57 ವಯಸ್ಸು ಹೊಂದಿರಬೇಕು.

    ವೇತನ : ಜನರಲ್ ಮ್ಯಾನೇಜರ್ ( ಎಲೆಕ್ಟ್ರಿಕಲ್ ಒಎಚ್ ಇ) ಹಾಗೂ ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ರೂ. 161250 /- ತಿಂಗಳ ವೇತನ ನಿಗದಿಪಡಿಸಲಾಗಿದೆ.
    ಮತ್ತು ಸೀನಿಯರ್ ಡಿಜಿಎಂ/ಜೆಜಿಎಂ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ರೂ‌. 147250/- ಹಾಗೂ ರೂ‌.14250/- ವೇತನ ಪಡೆಯಲು ಅರ್ಹರಾಗಿರುತ್ತಾರೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ದಿನಾಂಕ ‌19-03-2021 ರೊಳಗೆ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು.

    ವಿಳಾಸ : Managing Director, Rail Infrastructure development company Karnataka limited, Samparkha Soudha,1 st Floor, Survey No.8(BEP Premises)Opp.Orion Mall, Dr.Rajkumar Road, Rajajinagar, 1st block, Bangalore-560052,Karnataka, India

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಆರ್ ಆರ್ ಐ ನಲ್ಲಿ ಹುದ್ದೆಗಳಿಗೆ ನೇಮಕ

    ಆರ್ ಆರ್ ಐ ನಲ್ಲಿ ಹುದ್ದೆಗಳಿಗೆ ನೇಮಕ

    ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ( ಆರ್ ಆರ್ ಐ) (ರಾಮನ್ ಸಂಶೋಧನಾ ಸಂಸ್ಥೆ) ನಲ್ಲಿ  ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 31 ಮಾರ್ಚ್ 2021 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 16 ಫೆಬ್ರವರಿ 2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಮಾರ್ಚ್ 2021

    ಪ್ರಾಜೆಕ್ಟ್ ಇಂಜಿನಿಯರ್ -02 ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

    ವಿದ್ಯಾರ್ಹತೆ : ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಇ ಅಥವಾ ಬಿ.ಟೆಕ್, ಎಂ‌‌.ಇ, ಎಂ.ಟೆಕ್ ವಿದ್ಯಾರ್ಹತೆಯನ್ನು ಅಂಗೀಕೃತ ಸಂಸ್ಥೆ /ಬೋರ್ಡ್ ನಿಂದ ಪಡೆದುಕೊಂಡಿರಬೇಕು.

    ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 30 ವಯಸ್ಸು ಆಗಿರಬೇಕು.(31.03.2021)

    ಅರ್ಜಿ ಸಲ್ಲಿಕೆ

    ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.

    ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳನ್ನು [email protected] ಹಾಗೂ ಇನ್ನೊಂದು ಕಾಪಿ ಯನ್ನು [email protected] ಈಮೈಲ್ ಐಡಿಗೆ 31 ಮಾರ್ಚ್ 2021 ರೊಳಗೆ ಲಗತ್ತಿಸಬೇಕು.

    ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

    ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮುಖಾಂತರ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ