Category: bangalore

  • ಪಂಚಾಯತ್ ರಾಜ್ ನಿರ್ದೇಶಕರ ಹುದ್ದೆ ನೇಮಕಾತಿಗಾಗಿ ಅರ್ಜಿ ಆಹ್ವಾನ

    ಪಂಚಾಯತ್ ರಾಜ್ ನಿರ್ದೇಶಕರ ಹುದ್ದೆ ನೇಮಕಾತಿಗಾಗಿ ಅರ್ಜಿ ಆಹ್ವಾನ

    ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ (ಮಹಾತ್ಮಗಾಂಧಿ ನರೇಗಾ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರ ಹುದ್ದೆ ನೇಮಕಾತಿಗಾಗಿ ಅರ್ಜಿ ಆಹ್ವಾನ ಪ್ರಕಟಣೆ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯಕ್ಕೆ (ಮಹಾತ್ಮಾಗಾಂಧಿ ನರೇಗಾ) ಗುತ್ತಿಗೆ ಆಧಾರದ ಮೇಲೆ 2 ವರ್ಷದ ಅವಧಿಗೆ ನಿರ್ದೇಶಕರ ಹುದ್ದೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆ, ವಯಸ್ಸು, ವಿದ್ಯಾರ್ಹತೆ, ಅನುಭವ, ಸಂಭಾವನೆ ನಿಬಂಧನೆಗಳು ಇತ್ಯಾದಿ ವಿವರಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವೆಬ್‌ಸೈಟ್‌ www.rdpr.karnataka.gov.in ನಲ್ಲಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಆಯುಕ್ತರು, ಗ್ರಾಮೀಣಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, 3 ನೇ ಹಂತ, 2 ನೇ ಮಹಡಿ, ಡಾ||ಅಂಬೇಡ್ಕರ್ ವಿಧಿ, ಬೆಂಗಳೂರು- 560001 ಕಛೇರಿಗೆ ದಿನಾಂಕ 12.04.2021 ರ ಸಂಜೆ 5.30 ರೊಳಗಾಗಿ ಸಲ್ಲಿಸಬಹುದಾಗಿದೆ. ನಿಗದಿತ ಗಡುವು ಮೀರಿ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

  • ಕೆಒಎಫ್ ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕೆಒಎಫ್ ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕೆಒಎಫ್ ( ಕರ್ನಾಟಕ ಆಯಿಲ್ ಫೆಡರೇಶನ್) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 08 , ಎಪ್ರಿಲ್ ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆಫ್ ಲೈನ್
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 09-03-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-04-2021(5:30pm)
    ಅರ್ಜಿ ಶುಲ್ಕ: ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸಬೇಕು.

    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಸಿಎಟಿ -1 ಅಭ್ಯರ್ಥಿಗಳಿಗೆ ರೂ.500/- ಹಾಗೂ ಜನರಲ್ ಅಭ್ಯರ್ಥಿಗಳಿಗೆ ರೂ.1,000/- ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ.

    ಹುದ್ದೆ: ಜನರಲ್ ಮ್ಯಾನೇಜರ್-1
    ಅಸಿಸ್ಟೆಂಟ್ ಮ್ಯಾನೇಜರ್ -2
    ಅಸಿಸ್ಟೆಂಟ್ ಎಕ್ಸಿಕ್ಯುಟಿವ್ – 1
    ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ( ಕ್ವಾಲಿಟಿ ಕಂಟ್ರೋಲ್)-1

    ವಿದ್ಯಾರ್ಹತೆ : ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳು ಮಾಸ್ಟರ್ಸ್ ಡಿಗ್ರಿ, ಎಂಬಿಎ, ಡಿಗ್ರಿ, ಬಿಎಸ್ಸಿ ಉತ್ತೀರ್ಣಗೊಂಡಿರಬೇಕು.

    ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 18 ಹಾಗೂ ಗರಿಷ್ಠ 52 ವಯೋಮಿತಿ ಹೊಂದಿರಬೇಕು.

    ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಸಿಎಟಿ-1 ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅಭ್ಯರ್ಥಿಗಳು ಸಂಸ್ಥೆ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ಅರ್ಜಿ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ದಿನಾಂಕ 8 ಎಪ್ರಿಲ್, 2021 ಸಂಜೆ 5.30 ,ರೊಳಗಾಗಿ ಸ್ಪೀಡ್ ಪೋಸ್ಟ್, ಅಥವಾ ರಿಜಿಸ್ಟರ್ ಪೋಸ್ಟ್ ಮೂಲಕ ಸಲ್ಲಿಸಬೇಕು.

    ವಿಳಾಸ:
    Managing Director, K.C.O.G.F Limited, No.11, 4th Floor, Blue Cross Chambers, Infantry Cross, Bengaluru – 01

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ:

    http://www.kof.co.in/

  • ಅಂಚೆ ವಿಭಾಗದಲ್ಲಿ ನೇರ ಸಂದರ್ಶನ

    ಅಂಚೆ ವಿಭಾಗದಲ್ಲಿ ನೇರ ಸಂದರ್ಶನ

    ಬಳ್ಳಾರಿ ಅಂಚೆ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ಆಯ್ಕೆ ಮಾಡಲಾಗುತ್ತದೆ.
    ಮಾರ್ಚ್‌ 25 ರಂದು ಬೆಳಗ್ಗೆ 11 ಕ್ಕೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.

    ಕೋಟೆ ಪ್ರದೇಶದಲ್ಲಿರುವ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗಿಯಾಗಬಹುದು.

    ವಿದ್ಯಾರ್ಹತೆ: ಅಭ್ಯರ್ಥಿಗಳು ಖಡ್ಡಾಯವಾಗಿ 10 ನೇ ತರಗತಿ ಪಾಸಾಗಿರಬೇಕು.

    ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 18. ಹಾಗೂ ಗರಿಷ್ಠ 50 ವಯಸ್ಸಾಗಿರಬೇಕು

    ಯಾರು ಅರ್ಜಿ ಸಲ್ಲಿಸಬಹುದು?
    ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗ ನಿರತ ಯುವಕರು, ವಿಮಾ ಕಂಪನಿಗಳ ಮಾಜಿ ಏಜೆಂಟರು ಹಾಗೂ ಮಾಜಿ ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆ ಯರು,ಮಹಿಳಾ ಮಂಡಲದ ಕಾರ್ಯಕರ್ತೆ ಯರು,ನಿವೃತ್ತ ಪ್ರಧಾನ ಮತ್ತು ಗ್ರಾಮ ಪಂಚಾಯತಿಯ ಸದಸ್ಯರು,ಅಂಚೆವಿಭಾಗದ ಮುಖ್ಯಸ್ಥರು

    ನುರಿತ ಸಂವಹನ ಕಲೆ ವಿಮಾ ಮಾರಾಟ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ. ಆಯ್ಕೆಯಾದ ಅಭ್ಯರ್ಥಿಗಳು 5 ಸಾವಿರ ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ್ ಪತ್ರದ ರೂಪದಲ್ಲಿ ಠೇವಣಿ ಇರಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವ್ಯವಹಾರಕ್ಕೆ ತಕ್ಕಂತೆ ಸೂಕ್ತ ಕಮಿಶನ್ ನೀಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 08392-266037/266768 ಸಂಖ್ಯೆ ಗೆ ಕರೆ ಮಾಡಬಹುದು.

  • ಬಿಇಡಿ ಕೋರ್ಸ್ ದಾಖಲಾತಿ ದಿನಾಂಕ ವಿಸ್ತರಣೆ

    ಬಿಇಡಿ ಕೋರ್ಸ್ ದಾಖಲಾತಿ ದಿನಾಂಕ ವಿಸ್ತರಣೆ

    2020-21 ನೇ ಸಾಲಿನ ಬಿ‌ಇಡಿ ಕೋರ್ಸಿನ ದಾಖಲಾತಿಗಾಗಿ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ದಿನಾಂಕ : 04-03-2021ರಂದು ಇಲಾಖಾ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗಿದೆ. ಸದರಿ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ನಿಗದಿತ ಶುಲ್ಕ ಪಾವತಿಸಿ ಹಂಚಿಕೆಯಾದ ಕಾಲೇಜಿಗೆ ದಾಖಲಾತಿ ಪಡೆಯಲು ದಿನಾಂಕ ವ10-03-2021 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಅಭ್ಯರ್ಥಿಗಳ ಹಿತದೃಷ್ಟಿಯಿಂದ ದಾಖಲಾತಿಗೆ ನಿಗದಿಪಡಿಸಿದ್ದ ಅಂತಿಮ ದಿನಾಂಕವನ್ನು 20-03-2021ರವರೆಗೆ ವಿಸ್ತರಿಸಲಾಗಿದೆ.

  • ಪ್ರೊಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ

    ಪ್ರೊಜೆಕ್ಟ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ

    ಭಾರತೀಯ ವಿಜ್ಞಾನ ಸಂಸ್ಥೆ ಯಲ್ಲಿ ಪ್ರೊಜೆಕ್ಟ್ ಅಸೋಸಿಯೇಟ್ -1 ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ:

    ವಿದ್ಯಾರ್ಹತೆ : ವಿಶ್ವವಿದ್ಯಾನಿಲಯವು ಘೋಷಿಸಿದಂತೆ ಪ್ರಥಮ ದರ್ಜೆಯಲ್ಲಿ ಎಂಸಿಎ/ಬಿಇ/ಬಿಟೆಕ್/(ಸಿಎಸ್/ಐಟಿ) ಅಥವಾ ಸಮಾನಾಂತರ ಶಿಕ್ಷಣ ಹೊಂದಿರಬೇಕು.

    ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದರೂ ಸಾಕು.

    ಅನುಭವ: ಒಂದು ಅಥವಾ ಹೆಚ್ಚಿನ ಕ್ಷೇತ್ರದಲ್ಲಿ ನಿರ್ದಿಷ್ಟ ಡೊಮೇನ್ ಪರಿಣಿತಿಯೊಂದಿಗೆ ಲಿನಕ್ಸ್ ಸಿಸ್ಟಮ್ ಅಡ್ಮಿನಿಸ್ಟ್ರೇಶನ್ ನಲ್ಲಿ 1 ವರ್ಷದ ಅನುಭವ, ಆರ್ ಹೆಚ್ ಸಿಇ ಪ್ರಮಾಣೀಕರಣದೊಂದಿಗೆ ಲಿನಕ್ಸ್ ಅಥವಾ ಹೆಚ್ ಪಿಸಿ ಸಿಸ್ ಅಡ್ಮಿನ್ ಅನುಭವಗಳೊಂದಿಗೆ ಲಿನಕ್ಸ್ (ಕಂಪ್ಯೂಟರ್ ಸಿಸ್ಟಮ್ಸ್ ನ ಹೆಚ್ಚಿನ ಕಾರ್ಯಕ್ಷಮತೆ, ಬೃಹತ್ ಪ್ರಮಾಣದ ವಿತರಿತ ಶೇಖರಣಾ ಸರ್ವರ್ ಗಳು ಅಥವಾ ಸಮಾನಾಂತರ ಫೈಲ್ ವ್ಯವಸ್ಥೆಗಳು)

    ಹುದ್ದೆಗಳ ಸಂಖ್ಯೆ : 7
    ಸಾಮಾನ್ಯ -4,
    ಇಡ್ಬ್ಯುಎಸ್ -1, ಒಬಿಸಿ-1, ಪ‌.ಪಂ& 1, ವಿಕಲಚೇತನ -1

    ವಯೋಮಿತಿ : 30 ವರ್ಷಗಳು.
    ಒಬಿಸಿ, ಪ.ಪಂ ಮತ್ತು ಪಿಹೆಚ್ ಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ ‌

    ವೇತನ : ರೂ.25,000/- + ಹೆಚ್ ಆರ್ ಎ, 1 ನೇ ಮತ್ತು 2ನೇ ವರ್ಷಕ್ಕೆ ರೂ. ‌28,000/-, + ಹೆಚ್ ಆರ್ ಎ 3 ನೇ ಮತ್ತು 4 ನೇ ವರ್ಷಕ್ಕೆ ಮತ್ತು ರೂ.42,000/- + ಹೆಚ್ ಆರ್ ಎ 5 ನೇ ವರ್ಷದಲ್ಲಿ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-04-2021

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
    https://www.serc.iisc.ac.in/opportunities/

  • ಕರ್ನಾಟಕ  ರೇರಾ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ರೇರಾ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಅಧ್ಯಕ್ಷ ರು ಮತ್ತು ಸದಸ್ಯರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ‌. ಆಸಕ್ತರು ಅರ್ಜಿ ಸಲ್ಲಿಸಬಹುದು.

    ಅಭ್ಯರ್ಥಿಗಳು ಓನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :09-04-2021(5pm)

    ಅಭ್ಯರ್ಥಿಗಳು ಓನ್ ಲೈನ್ ಮೂಲಕ ಅಥವಾ ರಿಜಿಸ್ಟರ್ ಪೋಸ್ಟ್ ಅಥವಾ ಮುಖತಃ ಅರ್ಜಿ ಸಲ್ಲಿಸಬಹುದು.

    ಇ-ಮೈಲ್ – [email protected]/[email protected]

    ವಿಳಾಸ : The Member Secretary, Selection Committee and Secretary to government,housing department,Government of Karnataka,Karnataka government Secretariat, Room no.211,2nd Floor, Vikasa Soudha,Bengaluru-560001

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ