Category: bangalore

  • KEA BMTC Conductor Job 2024: 2500 ಬಿಎಂಟಿಸಿ ಕಂಡಕ್ಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಲಿಂಕ್‌ ಇಲ್ಲಿದೆ

    KEA BMTC Conductor Job 2024: 2500 ಬಿಎಂಟಿಸಿ ಕಂಡಕ್ಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಲಿಂಕ್‌ ಇಲ್ಲಿದೆ

    KEA BMTC Conductor Job 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಧಿಸೂಚನೆಯಲ್ಲಿ ತಿದ್ದುಪಡಿಗಳ ಅನುಸಾರ ಮಿಕ್ಕುಳಿದ ಹಾಗೂ ಸ್ಥಳೀಯ ಈ ಎರಡೂ ವೃಂದಗಳಿಗೆ ಪ್ರತ್ಯೇಕವಾಗಿ ಮೀಸಲಿರುವ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 2500 ಹುದ್ದೆಗಳು ಖಾಲಿ ಇದ್ದು, ನಿರ್ವಾಹಕ (ಕಂಡಕ್ಟರ್‌) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 10-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-04-2024
    ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ-13-04-2024

    ಒಟ್ಟು ಹುದ್ದೆಗಳು
    ಮಿಕ್ಕುಳಿದ ವೃಂದ-2286 ಹುದ್ದೆಗಳು
    ಸ್ಥಳೀಯ ವೃಂದ-214 ಹುದ್ದೆಗಳು
    ಒಟ್ಟು 2500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ: ಪಿಯುಸಿ (ಆರ್ಟ್ಸ್‌/ಕಾಮರ್ಸ್‌/ ಸೈನ್ಸ್‌) ನಲ್ಲಿ ತೇರ್ಗಡೆ ಅಥವಾ 10+2 ಐ.ಸಿ.ಎಸ್‌.ಇ/ಸಿ.ಬಿ.ಎಸ್‌.ಇ ಉತ್ತೀರ್ಣರಾಗಿರತಕ್ಕದ್ದು. ಅಥವಾ ತತ್ಸಮಾನ ವಿದ್ಯಾರ್ಹತೆ ಅಂದರೆ, ತಾಂತ್ರಿಕ ಶಿಕ್ಷಣ ಇಲಾಖೆಯಿಂದ 03 ವರ್ಷಗಳ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರತಕ್ಕದ್ದು.

    ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಕನಿಷ್ಠ ವಯೋಮಿತಿ ಹೊಂದಿರಬೇಕು ಮತ್ತು ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
    ಸಾಮಾನ್ಯ ವರ್ಗ ಕನಿಷ್ಠ 18 ವರ್ಷಗಳು, 35 ವರ್ಷ ಗರಿಷ್ಠ, 2ಎ/2ಬಿ/3ಎ/3ಬಿ 18 ವರ್ಷ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು, ಹಾಗೂ 38 ವರ್ಷ ಗರಿಷ್ಠ ವಯೋಮಿತಿಯನ್ನು ನೀಡಲಾಗಿದೆ. ಪ.ಜಾ/ಪ.ಪಂ/ಪ್ರವರ್ಗ-1 ಇವರಿಗೆ 18 ವರ್ಷ ಕನಿಷ್ಠ ವಯೋಮಿತಿ, 40 ವರ್ಷ ಗರಿಷ್ಠ ವಯೋಮಿತಿಯನ್ನು ಮೀರಬಾರದು. ಮಾಜಿ ಸೈನಿಕ/ಇಲಾಖಾ ಅಭ್ಯರ್ಥಿ ಗರಿಷ್ಠ ವಯೋಮಿತಿ 45 ವರ್ಷ ಮೀರಿರಬಾರದು.

    ತರಬೇತಿ ಅವಧಿ ಭತ್ಯೆ ಮತ್ತು ವೇತನ ಶ್ರೇಣಿ: ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಒಂದು ವರ್ಷ ಕಾಲ ವೃತ್ತಿ ತರಬೇತಿಯಾಗಿ ನಿಯೋಜನೆ ಮಾಡಲಾಗುವುದು. ಈ ತರಬೇತಿ ಅವಧಿಯಲ್ಲಿ ಮಾಸಿಕ ಸಮಗ್ರ ತರಬೇತಿ ಭತ್ಯೆಯಾಗಿ 9,100ರೂ.ನ್ನು ನೀಡಲಾಗುವುದು. ಆಯ್ಕೆಗೊಂಡ ಅಭ್ಯರ್ಥಿಗಳು ಒಂದು ವರ್ಷದ ವೃತ್ತಿ ತರಬೇತಿ ಪೂರೈಸಿದ ನಂತರ ಎರಡು ವರ್ಷಗಳ ಅವಧಿಗೆ ನಿಯಮಾನುಸಾರ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆಯನ್ನು ನೇಮಕ ಮಾಡಲಾಗುವುದು. ವೇತನ ಶ್ರೇಣಿ ಈ ರೀತಿ ಇರಲಿದೆ.
    18660-230-19120-280-20240-410-22700-520-25300

    ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (ಪ್ರವರ್ಗ-2ಎ/2ಬಿ/3ಎ/3ಬಿ) ಅಭ್ಯರ್ಥಿಗಳು ರೂ.750 ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.500 ಅರ್ಜಿ ಶುಲ್ಕ ವಿಧಿಸಲಾಗಿದೆ.

    ಪರೀಕ್ಷಾ ಕೇಂದ್ರಗಳು: ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ಬೆಂಗಳೂರು, ಮೈಸೂರು, ತುಮಕೂರು, ದಾವಣಗೆರೆ, ದಕ್ಷಿಣ ಕನ್ನಡ, ಶಿವಮೊಗ್ಗ, ಬೆಳಗಾವಿ, ಧಾರವಾಡ, ಬಳ್ಳಾರಿ, ಬೀದರ್‌, ಕೊಪ್ಪಳ, ರಾಯಚೂರು ಮತ್ತು ಕಲಬುರ್ಗಿಯಲ್ಲಿ ನಡೆಸಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • CMMAC Recruitment 2024: ಬೆಂಗಳೂರಲ್ಲಿ ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗಳಲ್ಲಿ ಆಸಕ್ತಿ ಇರುವವರಿಗೆ ಇಲ್ಲಿದೆ ಸುವರ್ಣವಕಾಶ

    CMMAC Recruitment 2024: ಬೆಂಗಳೂರಲ್ಲಿ ಪ್ರಾಜೆಕ್ಟ್‌ ಅಸೋಸಿಯೇಟ್‌ ಹುದ್ದೆಗಳಲ್ಲಿ ಆಸಕ್ತಿ ಇರುವವರಿಗೆ ಇಲ್ಲಿದೆ ಸುವರ್ಣವಕಾಶ

    CMMACS Recruitment 2024: CMMACS ತನ್ನ ಅಧಿಕೃತ ಅಧಿಸೂಚನೆಯಲ್ಲಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 06 ಹುದ್ದೆಗಳಿದ್ದು, ಆಸಕ್ತರು ಹಿರಿಯ ಪ್ರಾಜೆಕ್ಟ್ ಅಸೋಸಿಯೇಟ್, ಪ್ರಾಜೆಕ್ಟ್ ಅಸೋಸಿಯೇಟ್-I ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಉದ್ಯೋಗ ಹುಡುಕುವವರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಈ ಹುದ್ದೆಗೆ 05-Mar-2024 09:00 (ಬೆಳಗ್ಗೆ) ನೇರ ಸಂದರ್ಶನಕ್ಕೆ ಹಾಜರಾಗಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಮಾಹಿತಿಯನ್ನು ಓದಿ.

    ಪ್ರಮುಖ ದಿನಾಂಕಗಳು;
    ಅಧಿಸೂಚನೆ ಬಿಡುಗಡೆಗೊಂಡ ದಿನಾಂಕ: 21-02-2024
    ನೇರ ಸಂದರ್ಶನಕ್ಕೆ ಹಾಜರಾಗಬೇಕಾದ ದಿನಾಂಕ: 05-03-2024 (ಬೆಳಗ್ಗೆ 9.00)

    ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ;
    ಹುದ್ದೆ: ಸೀನಿಯರ್‌ ಪ್ರಾಜೆಕ್ಟ್‌ ಅಸೋಸಿಯೇಟ್‌, ಪ್ರಾಜೆಕ್ಟ್‌ ಅಸೋಸಿಯೇಟ್-I ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ:
    ಸೀನಿಯರ್‌ ಪ್ರಾಜೆಕ್ಟ್‌ ಅಸೋಸಿಯೇಟ್‌-1 ಹುದ್ದೆ
    ಪ್ರಾಜೆಕ್ಟ್‌ ಅಸೋಸಿಯೇಟ್-I – 5 ಹುದ್ದೆ
    ಒಟ್ಟು 06 ಹುದ್ದೆಗಳು

    ವಿದ್ಯಾರ್ಹತೆ: ಸೀನಿಯರ್‌ ಪ್ರಾಜೆಕ್ಟ್‌ ಅಸೋಸಿಯೇಟ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ಸಿ, ಎಂಟೆಕ್‌, ಪಿಎಚ್‌ಡಿ ತೇರ್ಗಡೆ ಹೊಂದಿರಬೇಕು
    ಪ್ರಾಜೆಕ್ಟ್‌ ಅಸೋಸಿಯೇಟ್‌-I ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ ಅಥವಾ ಬಿ.ಟೆಕ್‌, ಎಂಸಿಎ, ಎಂಎಸ್ಸಿ ಮಾಡಿರಬೇಕು.

    ವಯೋಮಿತಿ: ಸೀನಿಯರ್‌ ಪ್ರಾಜೆಕ್ಟ್‌ ಅಸೋಸಿಯೇಟ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 40ವರ್ಷ ಮೀರಿರಬಾರದು. ಪ್ರಾಜೆಕ್ಟ್‌ ಅಸೋಸಿಯೇಟ್-I ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿಯು ಗರಿಷ್ಠ 35 ವರ್ಷ ಆಗಿರಬೇಕು. ಈ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆಯನ್ನು ನಿಯಮಾನುಸಾರ ನೀಡಲಾಗುತ್ತದೆ.

    ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ವೇತನ: ಸೀನಿಯರ್‌ ಪ್ರಾಜೆಕ್ಟ್‌ ಅಸೋಸಿಯೇಟ್‌- ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿ ಮಾಸಿಕ ರೂ.42,000 ವೇತನ ಇರಲಿದೆ.
    ಪ್ರಾಜೆಕ್ಟ್‌ ಅಸೋಸಿಯೇಟ್-I- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ.31,000 ಮಾಸಿಕ ವೇತನ ಸಿಗಲಿದೆ.

    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಇಲ್ಲಿ ನೀಡಲಾದ ವಿಳಾಸದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.
    ವಿಳಾಸ: CSIR-4PI, NAL ಬೇಲೂರು ಕ್ಯಾಂಪಸ್, ವಿಂಡ್ ಟನಲ್ ರಸ್ತೆ, ಬೆಂಗಳೂರು-560037. ಈ ವಿಳಾಸದಲ್ಲಿ ದಿನಾಂಕ 05-ಮಾರ್ಚ್-2024 ಬೆಳಗ್ಗೆ 09:00ಗೆ ನೇರ ಸಂದರ್ಶನ ನಡೆಯಲಿದೆ.

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ನೋಟಿಫಿಕೇಶನ್‌ ಕ್ಲಿಕ್‌ ಮಾಡಿ

  • NIMHANS Recruitment 2024: ಡಾಟಾ ಎಂಟ್ರಿ ಅಪರೇಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ರೂ.18 ಸಾವಿರ ಸಂಬಳ, ಈ ಕೂಡಲೇ ಅಪ್ಲೈ ಮಾಡಿ

    NIMHANS Recruitment 2024: ಡಾಟಾ ಎಂಟ್ರಿ ಅಪರೇಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ರೂ.18 ಸಾವಿರ ಸಂಬಳ, ಈ ಕೂಡಲೇ ಅಪ್ಲೈ ಮಾಡಿ

    NIMHANS Recruitment 2024: ನಿಮ್ಹಾನ್ಸ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1 ಡೇಟಾ ಎಂಟ್ರಿ ಅಪರೇಟರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಫೆ.23, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್‌ ನಡೆಯಲಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 09-02-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-02-2024

    ಹುದ್ದೆ ಹೆಸರು: ನಿಮ್ಹಾನ್ಸ್‌ನಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಅಪರೇಟರ್‌ (DEO) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ: 01 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ: ನಿಮ್ಹಾನ್ಸ್‌ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೋಗಿಗಳು ಮತ್ತು ಡೇಟಾ ಎಂಟ್ರಿ (ಜಿಸಿಪಿ ತರಬೇತಿ, ಕ್ಲಿನಿಕಲ್‌ ರಿಸರ್ಚ್‌ ಎಕ್ಸ್‌ಪೋಸರ್‌) ಒಳಗೊಂಡ ಆರು ತಿಂಗಳ ಸಂಶೋಧನಾ ಅನುಭವವನ್ನು ಹೊಂದಿರಬೇಕು.

    ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 40 ವರ್ಷ ಮೀರಿರಬಾರದು.

    ಆಯ್ಕೆ ವಿಧಾನ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ವೇತನ: ಡಾಟಾ ಎಂಟ್ರಿ ಅಪರೇಟರ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.18,000 ವೇತನ ದೊರಕಲಿದೆ.

    ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಆಫ್‌ಲೈನ್‌/ಪೋಸ್ಟ್‌ ಮೂಲಕ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ The Director, NIMHANS, P.B. No. 2900, D.R.College Post, Hosur Road. Bengaluru-560 029 ಇಲ್ಲಿಗೆ ಕಳುಹಿಸಬೇಕು. ಅಥವಾ [email protected] ಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಅಧಿಸೂಚನೆ ಸಂಖ್ಯೆ, ದಿನಾಂಕ, ಇಮೇಲ್ ಐಡಿ, ಸಂಪರ್ಕ ಸಂಖ್ಯೆ ಮತ್ತು ಅಂಚೆ ವಿಳಾಸವನ್ನು ನಮೂದಿಸಬೇಕು, ಇಲ್ಲದಿದ್ದರೆ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಸಂಬಂಧಿತ ದಾಖಲೆಗಳೊಂದಿಗೆ ಅರ್ಜಿಗಳನ್ನು ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • KPCL Recruitment 2024: ಕರ್ನಾಟಕ ವಿದ್ಯುತ್‌ ನಿಗಮ ನೇಮಕಾತಿ- ಆಸಕ್ತರು ಇವತ್ತೇ ಅರ್ಜಿ ಸಲ್ಲಿಸಿ

    KPCL Recruitment 2024: ಕರ್ನಾಟಕ ವಿದ್ಯುತ್‌ ನಿಗಮ ನೇಮಕಾತಿ- ಆಸಕ್ತರು ಇವತ್ತೇ ಅರ್ಜಿ ಸಲ್ಲಿಸಿ

    KPCL Recruitment 2024: ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಗುತ್ತಿಗೆ ಆಧಾರದಲ್ಲಿ ಈ ಹುದ್ದೆಗಳ ನೇಮಕಾತಿ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ; 19-01-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 19-02-2024

    ಹುದ್ದೆಗಳ ವಿವರ:
    ಸಹಾಯಕ ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ನಿಗಮದ ಕಾನೂನು ವಿಷಯಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು ನಿರ್ವಹಿಸಲು ಎರಡು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಲು ನಿಗಮವು ಉದ್ದೇಶಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಹುದ್ದೆಗಳ ಸಂಖ್ಯೆ: ಒಟ್ಟು ಆರು ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಅರ್ಹತೆ ಮತ್ತು ಅನುಭವ: ಅಂಗೀಕೃತ ವಿಶ್ವವಿದ್ಯಾಲಯದಿಂದ (ಮೂರು ಅಥವಾ ಐದು ವರ್ಷಗಳ) ಕಾನೂನು ಪದವಿಯನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಡೆದಿರಬೇಕು. ಕನಿಷ್ಠ ಶೇ.40 ರಷ್ಟು ಅಂಕಗಳನ್ನು ಕಾನೂನು ಪದವಿಯಲ್ಲಿ ಗಳಿಸಿರಬೇಕು. ವಕೀಲ ವೃತ್ತಿಯಲ್ಲಿ ಕನಿಷ್ಠ ಐದು ವರ್ಷಗಳ ಅನುಭವವಿರಬೇಕು.

    ವಯೋಮಿತಿ: ಈ ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 40 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.

    ವೇತನ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.40,000 ಮಾಸಿಕ ವೇತನ ಇರಲಿದೆ. ನೇಮಕ ಹೊಂದಿದ ಅಭ್ಯರ್ಥಿಗಳ ಪ್ರಯಾಣಕ್ಕೆ ನಿಗಮದ ಸಹಾಯಕ ಕಾನೂನು ಅಧಿಕಾರಿ/ಸಹಾಯಕ ಅಭಿಯಂತರರು ಹುದ್ದೆಗೆ ಅರ್ಹವಿರುವ TA/DA ಯನ್ನು ನೀಡಲಾಗುವುದು.

    ಆಯ್ಕೆ ವಿಧಾನ: ಈ ಹುದ್ದೆಗೆ ಅಭ್ಯರ್ಥಿಗಳಿಗೆ ಸಂದರ್ಶನವನ್ನು ನಡೆಸಿ ಆಯ್ಕೆ ಮಾಡಲಾಗುವುದು. ವೃತ್ತಿಯಲ್ಲಿ ಅನುಭವವಿದ್ದವರಿಗೆ ಹಾಗೂ ಆಂಗ್ಲ ಭಾಷೆಯ ಕಂಪ್ಯೂಟರ್‌ ಹಾಗೂ ಬೆರಳಚ್ಚು ಅನುಭವವುಳ್ಳವರಿಗೆ ಆದ್ಯತೆ ನೀಡಲಾಗುವುದು.

    ಗುತ್ತಿಗೆ ಅವಧಿ: ಎರಡು ವರ್ಷಗಳ ಅವಧಿಗೆ ಗುತ್ತಿಗೆ ನೇಮಕಾತಿ ನಡೆಯಲಿದ್ದು, ಸದರಿ ಹುದ್ದೆಯಲ್ಲಿ ತೃಪ್ತಿಕರವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಮುಂದಿನ ಒಂದು ವರ್ಷ ಅವಧಿಗೆ ವಿಸ್ತರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಅರ್ಜಿ ಸಲ್ಲಿಸುವ ವಿಧಾನ:
    ಅಭ್ಯರ್ಥಿಗಳು ನಿಮಗದ ವೆಬ್‌ಸೈಟ್‌ ಗೆ ಭೇಟಿ ನೀಡಿ ಲಭ್ಯವಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ವಿದ್ಯಾರ್ಹತೆ/ಅನುಭವ ದಾಖಲೆಗಳನ್ನು ಲಗತ್ತಿಸಿ [email protected] ಇ-ಮೇಲ್‌ ಗೆ ದಿನಾಂಕ 19-02-2024 ರ ಸಂಜೆ 5.30 ರೊಳಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ನಿಗದಿತ ದಿನಾಂಕ/ಸಮಯದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಇತರೆ ಯಾವುದೇ ನಮೂನೆಯಲ್ಲಿ ಅರ್ಜಿ ಸ್ವೀಕಾರ ಮಾಡಲಾಗವುದಿಲ್ಲ.

  • ESIC Karnataka Jobs: ಇಎಸ್‌ಐಸಿಯಲ್ಲಿ ಪ್ರೊಫೆಸರ್‌ ಹುದ್ದೆಗಳ ನೇಮಕಾತಿ, ಆಸಕ್ತರು ಫೆ.22, 2024 ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಿ

    ESIC Karnataka Jobs: ಇಎಸ್‌ಐಸಿಯಲ್ಲಿ ಪ್ರೊಫೆಸರ್‌ ಹುದ್ದೆಗಳ ನೇಮಕಾತಿ, ಆಸಕ್ತರು ಫೆ.22, 2024 ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಿ

    ESIC Karnataka Recruitment 2024: ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಕರ್ನಾಟಕ (ESIC) ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ಮೂಲಕ ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಈ ಹುದ್ದೆಗೆ 22-Feb-2024 ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು
    ನೋಟಿಫಿಕೇಶನ್‌ ಬಿಡುಗಡೆಗೊಂಡ ದಿನಾಂಕ: 12-02-2024
    ನೇರ ಸಂದರ್ಶನಕ್ಕೆ ಹಾಜರಾಗಬೇಕಾದ ದಿನಾಂಕ: 22-02-2024

    ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ
    ಹುದ್ದೆ ಹೆಸರು: ಪ್ರೊಫೆಸರ್‌ -03
    ಅಸೋಸಿಯೇಟ್‌ ಪ್ರೊಫೆಸರ್‌ -09
    ಅಸಿಸ್ಟೆಂಟ್‌ ಪ್ರೊಫೆಸರ್‌ -01 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಒಟ್ಟು 13 ಹುದ್ದೆಗಳಿದೆ.

    ವೇತನ: ಪ್ರೊಫೆಸರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ ರೂ.2,39,607 ವೇತನ ಸಿಗುತ್ತದೆ
    ಅಸೋಸಿಯೇಟ್‌ ಪ್ರೊಫೆಸರ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.1,59,334/- ವೇತನ ಇರಲಿದೆ.
    ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.1,36,880/- ವೇತನ ಸಿಗಲಿದೆ.

    ವಯೋಮಿತಿ: ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಕರ್ನಾಟಕ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 22-02-2024 ರಂತೆ 67 ವರ್ಷಗಳನ್ನು ಮೀರಿರಬಾರದು. ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

    ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು: The Dean, ESIC Medical College PGIMSR & Model Hospital, Rajajinagar, Bangalore- 560010 ಇಲ್ಲಿಗೆ ದಿನಾಂಕ ಫೆ.22 ರಂದು ನೇರ ಸಂದರ್ಶನಕ್ಕೆ ಹಾಜರಾಗಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • BBMP Job: ಬಿಬಿಎಂಪಿಯಲ್ಲಿ 444 ಹುದ್ದೆಗಳಿಗೆ ಅರ್ಜಿ ಆಹ್ವಾನ

    BBMP Job: ಬಿಬಿಎಂಪಿಯಲ್ಲಿ 444 ಹುದ್ದೆಗಳಿಗೆ ಅರ್ಜಿ ಆಹ್ವಾನ

    BBMP Recruitment 2024: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 444 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 444 ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ ನಡೆಯಲಿದ್ದು, ಯುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ.
    ಹುದ್ದೆ: ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ತಂಬಾಕು ನಿಯಂತ್ರಣ ಕಾರ್ಯಕ್ರಮ, ಕುಷ್ಠರೋಗ ನಿರ್ಮೂಲಕನಾ ಕಾರ್ಯಕ್ರಮ, ಅಂಧತ್ವ ನಿರ್ಮೂಲಕನಾ ಕಾರ್ಯಕ್ರಮದಡಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

    ಯಾವೆಲ್ಲ ಹುದ್ದೆಗಳು: ನೇತ್ರ ತಜ್ಞರು, ಮಕ್ಕಳ ತಜ್ಞರು, ಫಾರ್ಮಾಸಿಸ್ಟ್‌, ಲ್ಯಾಬ್‌ ಟೆಕ್ನಿಶಿಯನ್ಸ್‌, ಸ್ಟಾಫ್‌ ನರ್ಸ್‌ ಹಾಗೂ ಇತರ ಅರೆವೈದ್ಯ ಸಿಬ್ಬಂದಿ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ವಿದ್ಯಾಭ್ಯಾಸ: ಹುದ್ದೆಗಳಿಗನುಗುಣವಾಗಿ ಎಸ್‌ಎಸ್‌ಎಲ್ಸಿ, ಪಿಯುಸಿ, ಜೆಎನ್‌ಎಂ ,ಎ.ಎನ್‌.ಎಂ.ಎಂ.ಎಸ್ಸಿ, ಬಿಎಸ್ಸಿ, ಡಿಪ್ಲೊಮಾ ಇನ್‌ ನರ್ಸಿಂಗ್‌, ಬಿ.ಫಾರ್ಮಾ/ಡಿ.ಫಾರ್ಮಾ,ಬಿಇ, ಬಿ.ಟೆಕ್‌, ಎಂ.ಟೆಕ್‌, ಎಂಬಿಎ,ಎಂಬಿಬಿಎಸ್‌, ಎಂಡಿ(ಓಬಿಜಿ/ಪಿಡಿಯಾಟ್ರಿಕ್ಸ್‌/ಮೆಡಿಸಿನ್/ಅನಸ್ಥೇಷಿಯಾ/ರೆಡಿಯೋಲಾಜಿ) ಹೊಂದಿರಬೇಕು.

    ವಯೋಮಿತಿ: ಈ ಹುದ್ದೆಗಳಿಗೆ ಕನಿಷ್ಠ 18ವರ್ಷ ವಯಸ್ಸಾಗಿರಬೇಕು.

    ಆಯ್ಕೆ ಮಾಡುವ ವಿಧಾನ: ಅಭ್ಯರ್ಥಿಗಳನ್ನು ಮೆರಿಟ್‌ ಕಂ ರೋಸ್ಟರ್‌ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ.

    ವಾಕ್‌ಇನ್‌ ಇಂಟರ್‌ವ್ಯೂ ದಿನಾಂಕ: ಪಾಲಿಕೆ ನಿಗದಿಪಡಿಸಿರುವ ಸ್ಥಳಗಳಲ್ಲಿ ಫೆ.13ರಿಂದ 15, 2024ರವರೆಗೆ ಸಮಯ ಬೆಳಿಗ್ಗೆ 10.30ರಿಂದ ಸಂಜೆ 4.30 ರವರೆಗೆ. ಆಯಾ ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆಯನ್ನು ಆಧರಿಸಿ ನೇಮಕಾತಿ ನಡೆಯಲಿದೆ.

    ನೇರ ಸಂದರ್ಶನ ನಡೆಯುವ ಸ್ಥಳ: ಡಾ.ರಾಜ್‌ಕುಮಾರ್‌ ಗಾಜಿನ ಮನೆ, ಬಿಬಿಎಂಪಿ ಕೇಂದ್ರ ಕಛೇರಿ, ಎನ್‌.ಆರ್‌.ಚೌಕ, ಬೆಂಗಳೂರು.

    ಮೇಲೆ ನೀಡಿದ ಎಲ್ಲಾ ಹುದ್ದೆಗಳಿಗೆ ಒಂದು ವರ್ಷದ ಗುತ್ತಿಗೆಯಾಧಾರದಲ್ಲಿ ನೇಮಕಾತಿ ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಆಸಕ್ತ ಅಭ್ಯರ್ಥಿಗಳು ಬಿಬಿಎಂಪಿ ವೆಬ್‌ಸೈಟ್‌ನಲ್ಲಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿಸಿದ ವಿದ್ಯಾರ್ಹತೆಯ ಮೂಲ ದಾಖಲೆಗಳು, ವಾಕ್‌ಇನ್‌ ಆಯ್ಕೆ ಪ್ರಕ್ರಿಯೆಗೆ ಹಾಜರಾಗಲು ಸೂಚಿಸಲಾಗಿದೆ. ಹೆಚ್ಚಿನ ವಿವರಗಳಾಗಿ ಅಭ್ಯರ್ಥಿಗಳು Email [email protected] ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವೆಬ್‌ಸೈಟ್‌ ಗೆ ಸಂಪರ್ಕಿಸಿ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ