Category: Central Govt Jobs

Central Govt Jobs News in Kannada, Central Govt Employment News in Kannada, UPSC, Indian Railway Jobs, Bank Jobs News, Airforce Recruitment, Indian Army, Agniveer Jobs updates all Central govt jobs read in Sarakarijobs.com

  • ECIL ನಲ್ಲಿ 650 ಟೆಕ್ನಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

    ಇಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ECIL)ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಟೆಕ್ನಿಕಲ್ ಆಫೀಸರ್ ಹುದ್ದೆಗೆ (ಕಾಂಟ್ರಾಕ್ಟ್ ಆಧಾರದ ಮೇಲೆ)ಅರ್ಜಿಗಳನ್ನು ಆಹ್ವಾನಿಸಿದೆ‌. ಆಸಕ್ತ ಅಭ್ಯರ್ಥಿಗಳು ದಿನಾಂಕ 15-02-2021ರ ಒಳಗಾಗಿ ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಸಲ್ಲಿಸಬಹುದು.

    ಹುದ್ದೆಯ ಹೆಸರು :ಟೆಕ್ನಿಕಲ್ ಆಫೀಸರ್

    ಹುದ್ದೆಯ ಸಂಖ್ಯೆ : 650

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-02-2021

    ವಿದ್ಯಾರ್ಹತೆ
    ಅಭ್ಯರ್ಥಿಗಳು ಇಂಜಿನಿಯರ್ ಕೋರ್ಸ್ ನ್ನು ಫಸ್ಟ್ ಕ್ಲಾಸ್ ನಲ್ಲಿ ತೇರ್ಗಡೆಯಾಗಿರಬೇಕು.
    (ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ಸ್/ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ ಆಂಡ್ ಇನ್ಸ್ಟ್ರುಮೆಂಟೇಶನ್ಸ್/ಮೆಕ್ಯಾನಿಕಲ್/ಕಂಪ್ಯೂಟರ್ ಸೈನ್ಸ್/ಇನ್ ಫೊರ್ಮೇಶನ್ ಟೆಕ್ನಾಲಜಿ)

    ವಯೋಮಿತಿ
    ಅಭ್ಯರ್ಥಿಗಳಿಗೆ 30ವರ್ಷ ಮೇಲ್ಪಟ್ಟಿರಬಾರದು.
    ವಯಸ್ಸಿನ ಸಡಿಲಿಕೆ ಕಂಪನಿ ರೂಲ್ಸ್ ಮೇಲೆ ಅವಲಂಬಿತವಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ:
    ಆನ್ ಲೈನ್ ಮುಖಾಂತರ ಅಪ್ಲೈ ಮಾಡಲು ಈ ಲಿಂಕನ್ನು ಕ್ಲಿಕ್ ಮಾಡಿ

    ಅಧಿಕೃತ ವೆಬ್‌ಸೈಟ್‌ಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ

  • ಸೆಂಟ್ರಲ್ ರೈಲ್ವೇಯಲ್ಲಿ 2532 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

    ಸೆಂಟ್ರಲ್ ರೈಲ್ವೇಯಲ್ಲಿ 2532 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

    ರೈಲ್ವೆ ರಿಕ್ರುಟ್ ಮೆಂಟ್ ಸೆಲ್ (RRC) ಸೆಂಟ್ರಲ್ ರೈಲ್ವೇ ಯಲ್ಲಿ ಅಪ್ರೈಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ. 2532 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

    ಹುದ್ದೆಯ ಹೆಸರು : ಅರ್ಪೈಂಟಿಸ್

    ಹುದ್ದೆಯ ಸಂಖ್ಯೆ :2532

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05, ಫೆಬ್ರವರಿ ,2021

    ವಯೋಮಿತಿ
    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವಯಸ್ಸಾಗಿರಬೇಕು.

    ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ.100 ನ್ನು ಪಾವತಿಸಬೇಕಾಗುತ್ತದೆ.ಆನ್ ಲೈನ್ ಮುಖಾಂತರ ಶುಲ್ಕ ಸಲ್ಲಿಸಬೇಕು.

    ಸೆಂಟ್ರಲ್ ರೈಲ್ವೆ ಅಪ್ರೈಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲ ಬಯಸುವ ಅಭ್ಯರ್ಥಿಗಳು 10 +2 ಶೇ.50 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಹಾಗೂ ITI (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಹೊಂದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ

    ಆನ್ ಲೈನ್ ಮುಖಾಂತರ ಅಪ್ಲೈ ಮಾಡಲು ಈ ಲಿಂಕನ್ನು ಕ್ಲಿಕ್ ಮಾಡಿ

    ಅಧಿಕೃತ ವೆಬ್ ಸೈಟ್ ಲಿಂಕ್

  • ಸೂರ್ಯಮಿತ್ರ ತರಬೇತಿಗೆ ಅರ್ಜಿ ಆಹ್ವಾನ: ಕೂಡಲೇ ಅರ್ಜಿ ಸಲ್ಲಿಸಿ

    ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಯಿಂದ ಸೂರ್ಯ ಮಿತ್ರ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ‌. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

    ಐಟಿಐ /ಡಿಪ್ಲೋಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ತರಬೇತಿಯ ಅವಧಿ 3 ತಿಂಗಳುಗಳಾಗಿದ್ದು, ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ.

    ಅರ್ಜಿ ಸಲ್ಲಿಸಲು ಕೊನೆ ದಿನಾಂಕ 08.02.2021

    ತರಬೇತಿಯು 10.02.2021 ರಂದು ಪ್ರಾರಂಭವಾಗಲಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ

    http://www.mgired.kar.nic.in

    ದೂರವಾಣಿ ಸಂಖ್ಯೆ : 23626359/23626493/9611757523

  • KSRP ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟ

    ದಿನಾಂಕ 29-08-2019 ರಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ವಿಶೇಷ ರಿಸರ್ವ್ ಸಬ್ ಇನ್ಸ್ ಪೆಕ್ಟರ್ (KSRP) ಪುರುಷ ಹಾಗೂ ಸೇವಾ ನಿರತ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಿ, ನೇಮಕಾತಿ ಪ್ರಕ್ರಿಯೆಯನ್ನು ವಿವಿಧ ಹಂತಗಳಲ್ಲಿ ಕೈಗೊಂಡಿತ್ತು.

    ಈಗ ಹುದ್ದೆಗಳ ತಾತ್ಕಾಲಿಕ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಇಲಾಖೆಯು ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.

    ಒಟ್ಟು 5 ಅಭ್ಯರ್ಥಿಗಳು ಬೇರೆ ಹುದ್ದೆಗೆ ಆಯ್ಕೆಯಾಗಿದ್ದಾರೆ.ಈ 5 ಅಭ್ಯರ್ಥಿಗಳು ವಿಶೇಷ ರಿಸರ್ವ್ ಸಬ್ ಇನ್ಸ್ ಪೆಕ್ಟರ್ ಹುದ್ದೆಯನ್ನು ನಿರಾಕರಿಸಿದ್ದರಿಂದ, 5 ಹೊಸದಾಗಿ ಅಭ್ಯರ್ಥಿಗಳನ್ನು ಇಲಾಖೆಯು ಆಯ್ಕೆ ಮಾಡಿದ್ದು ಅಭ್ಯರ್ಥಿಗಳ ವಿವರಗಳನ್ನು ಕೆಳಗೆ ನೀಡಿರುವ ಲಿಂಕ್ ಮೂಲಕ ನೋಡಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಭಾರತೀಯ ಪಶುಪಾಲನ ನಿಗಮ ನಿಯಮಿತದಲ್ಲಿ (BPNL)ಖಾಲಿ ಹುದ್ದೆಗೆ ಅರ್ಜಿ ಆಹ್ವಾನ : ಈ ಕೂಡಲೇ ಅರ್ಜಿ ಸಲ್ಲಿಸಿ

    ಭಾರತೀಯ ಪಶುಪಾಲನ ನಿಗಮ ನಿಯಮಿತದಲ್ಲಿ (BPNL) ಖಾಲಿ ಇರುವ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ‌.

    ಆಸಕ್ತ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.

    ಹುದ್ದೆಗಳ ವಿವರ ಈ ಕೆಳಗಿನಂತಿದೆ:
    ಮಾರಾಟ ವ್ಯವಸ್ಥಾಪಕ(sales manage) ಮಾರಾಟ ಅಭಿವೃದ್ಧಿ ಅಧಿಕಾರಿ( salea development officer)ಮಾರಾಟ ಸಹಾಯಕ ಹುದ್ದೆ ( sales assistant)ಗಳಿಗೆ ಅರ್ಜಿ ಆಹ್ವಾನಿಸಿದೆ.

    ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 15, 2021 ಕೊನೆಯ ದಿನವಾಗಿರುತ್ತದೆ.

    ಹುದ್ದೆಯ ಸಂಖ್ಯೆ: 3216

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ಫೆಬ್ರವರಿ, 2021

    ಹುದ್ದೆಗಳ ಸಂಖ್ಯೆ
    ಮಾರಾಟ ವ್ಯವಸ್ಥಾಪಕ-64
    ಮಾರಾಟ ಅಭಿವೃದ್ಧಿ ಅಧಿಕಾರಿ-485
    ಮಾರಾಟ ಸಹಾಯಕ ಹುದ್ದೆ-2667

    ವಿದ್ಯಾರ್ಹತೆ
    ಮಾರಾಟ ವ್ಯವಸ್ಥಾಪಕ(sales manager) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬ್ಯಾಚುಲರ್ ಡಿಗ್ರಿ ಹೊಂದಿರಬೇಕು.

    ಮಾರಾಟ ಅಭಿವೃದ್ಧಿ ಅಧಿಕಾರಿ(sales development officer) ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಪಿಯುಸಿ ಪಾಸಾಗಿರಬೇಕು.

    ಮಾರಾಟ ಸಹಾಯಕ ( sales assistant) ಹುದ್ದೆಗೆ ಆಸಕ್ತರಿರುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪಾಸಾಗಿರಬೇಕು.

    ವಯೋಮಿತಿ

    ಮಾರಾಟ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 25 ಮತ್ತು ಗರಿಷ್ಠ 45 ವರ್ಷ ವಯಸ್ಸಾಗಿರಬೇಕು.

    ಮಾರಾಟ ಅಭಿವೃದ್ಧಿ ಅಧಿಕಾರಿ ಹಾಗೂ ಮಾರಾಟ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳಿಗೆ ಕನಿಷ್ಠ 21 ಹಾಗೂ ಗರಿಷ್ಠ 40 ವಯಸ್ಸಾಗಿರಬೇಕು.

    ಅರ್ಜಿ ಶುಲ್ಕ ಇರುವುದಿಲ್ಲ.(null)

    BPNL website link

    ಆನ್ಲೈನ್ ಅರ್ಜಿ ಸಲ್ಲಿಸಲು ಲಿಂಕ್

  • ಬಿಇಸಿಐಎಲ್ನಲ್ಲಿ ಉದ್ಯೋಗವಕಾಶ, ಫೆಬ್ರವರಿ ತಿಂಗಳಿನ ೧೩ ರ ಮೊದಲು ಅರ್ಜಿ ಸಲ್ಲಿಸಿ

    BECIL (ಬ್ರಾಡ್ ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟಿಂಗ್ ಇಂಡಿಯಾ ಲಿಮಿಟೆಡ್) ಕನ್ಸಲ್ಟಿಂಗ್ ಭಾಷಾ ಸಂಪಾದಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಿದೆ.
    ಆಸಕ್ತರು ಈ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆಯ ಹೆಸರು – ಸಲಹಾ ಭಾಷಾ ಸಂಪಾದಕರಾಗಿ (ಕನ್ಸಲ್ಟಿಂಗ್ ಲಾಂಗ್ವೇಜ್‌ ಎಡಿಟರ್)

    ಹುದ್ದೆಯ ಸಂಖ್ಯೆ-6.
    ತಮಿಳು (1)
    ಕನ್ನಡ(1)
    ಮರಾಠಿ (1)
    ಪಂಜಾಬಿ(1)
    ಬೆಂಗಾಲಿ (1)
    ಒಡಿಯಾ(1)
    ಭಾರತದ ಕಚೇರಿಗಳಲ್ಲಿ ನಿಯೋಜಿಸಲು ಒಪ್ಪಂದದ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸಿದೆ.

    ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಫೆಬ್ರವರಿ 12, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

    ವಿದ್ಯಾರ್ಹತೆ

    ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ/ಡಿಪ್ಲೊಮಾ/ಸ್ನಾತಕೋತ್ತರ ಪದವಿ ಹೊಂದಿರಬೇಕು.

    ವಯೋಮಿತಿ

    BECIL ನೇಮಕಾತಿ ಮಾನದಂಡಗಳ ಪ್ರಕಾರ ಅನ್ವಯವಾಗುತ್ತದೆ.

    ಅರ್ಜಿ ಶುಲ್ಕ

    ಅರ್ಜಿ ಶುಲ್ಕ ಆನ್ ಲೈನ್ ಮುಖಾಂತರ ಪಾವತಿಸಬೇಕು.
    ಜನರಲ್/ಒಬಿಸಿ/ಎಕ್ಸ್ ಸರ್ವಿಸ್ ಮ್ಯಾನ್/ ಮಹಿಳಾ ಅಭ್ಯರ್ಥಿಗಳು ರೂ‌.750 ನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು.

    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಇಡ್ಬ್ಯು ಎಸ್/ಪಿಎಚ್ ಅಭ್ಯರ್ಥಿಗಳು ರೂ‌.450 ನ್ನು ಪಾವತಿಸಬೇಕು.

    ಇತರೆ ಅರ್ಹತೆಗಳು

    ಟಿ.ವಿ ಅಥವಾ ಪ್ರಿಂಟ್ ಪಬ್ಲಿಕೇಶನ್ ಅಥವಾ ರೇಡಿಯೋನಲ್ಲಿ 5 ವರ್ಷಗಳ ಅನುಭವ. ಎಡಿಟಿಂಗ್, ಫ್ರೂಫ್ ರೀಡಿಂಗ್, ಟ್ರಾನ್ಸ್ ಲೇಶನ್ ಮಾಡಲು ತಿಳಿದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಎಲ್ಲಾ ಅರ್ಹ ಅಭ್ಯರ್ಥಿಗಳು ಫೆಬ್ರವರಿ -2021 ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ಕನ್ಸಲ್ಟೆಂಟ್ ಲಾಂಗ್ವೇಜ್ ಎಡಿಟರ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು
    ಹಂತ -1: ಮೊದಲನೆಯದಾಗಿ BECIL ನೇಮಕಾತಿ ಅಧಿಸೂಚನೆ 2021 ಮೂಲಕ ಸಂಪೂರ್ಣವಾಗಿ ಹೋಗಿ ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಇದೆಯೇ ಎಂದು ಖಚಿತಪಡಿಸಿಕೊಳ್ಳಿ
    ಹಂತ -2: ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವ ಇದ್ದರೆ ದಾಖಲೆಗಳನ್ನು ಸಿದ್ಧವಾಗಿಡಿ. .
    ಹಂತ -3: BECIL ಕನ್ಸಲ್ಟೆಂಟ್ ಭಾಷಾ ಸಂಪಾದಕರು ಆನ್‌ಲೈನ್‌- ಲಿಂಕ್ ಅನ್ನು ಕ್ಲಿಕ್ ಮಾಡಿ. ಲಿಂಕನ್ನು ಕೆಳಗೆ ನೀಡಲಾಗಿದೆ.
    ಹಂತ -4: ಅಗತ್ಯವಿರುವ ಎಲ್ಲ ವಿವರಗಳನ್ನು BECIL ಆನ್‌ಲೈನ್ ಅರ್ಜಿ ನಮೂನೆಯಲ್ಲಿ ನವೀಕರಿಸಿ. ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯವಾಗಿದ್ದರೆ) ಅಗತ್ಯ ಪ್ರಮಾಣಪತ್ರಗಳು / ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ

    BECIL ನ website link