Category: Central Govt Jobs

Central Govt Jobs News in Kannada, Central Govt Employment News in Kannada, UPSC, Indian Railway Jobs, Bank Jobs News, Airforce Recruitment, Indian Army, Agniveer Jobs updates all Central govt jobs read in Sarakarijobs.com

  • SSC ಜೆಇ ಅಡ್ಮಿಟ್ ಕಾರ್ಡ್ ಬಿಡುಗಡೆ

    SSC ಜೆಇ ಅಡ್ಮಿಟ್ ಕಾರ್ಡ್ ಬಿಡುಗಡೆ

    ಸಿಬ್ಬಂದಿ ನೇಮಕಾತಿ ಸಂಸ್ಥೆಯು 2019 ನೇ ಸಾಲಿನ ಜ್ಯೂನಿಯರ್ ಇಂಜಿನಿಯರ್(ಎಸ್‌ಎಸ್‌ಸಿ ಜೆಇ) ಹುದ್ದೆಗಳ ಪರೀಕ್ಷೆಗೆ ಸಂಬಂಧಿಸಿದಂತೆ, ಪ್ರಸ್ತುತ ಎಸ್‌ಎಸ್‌ಸಿ ಜೆಇ ಪೇಪರ್ 2 ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ ಮಾಡಿದೆ.
    ಎಸ್‌ಎಸ್‌ಸಿ ಜೆಇ ಪೇಪರ್ 2 ಪರೀಕ್ಷೆಯನ್ನು ಮಾರ್ಚ್ 21,2021 ರಂದು ನಡೆಸಲಾಗುತ್ತದೆ.

    ಕೇರಳ, ನಾರ್ಥ್ ವೆಸ್ಟ್‌, ವೆಸ್ಟರ್ನ್ ಮತ್ತು ಸೆಂಟ್ರಲ್ ರೀಜನ್‌, ಕರ್ನಾಟಕ ಪ್ರವೇಶ ಪತ್ರ ಬಿಡುಗಡೆ ಮಾಡಿದೆ. ಎಸ್‌ಎಸ್‌ಸಿ ಜೆಇ ಪೇಪರ್ ಅಡ್ಮಿಟ್ ಕಾರ್ಡ್ 2019 ಸಂಸ್ಥೆಯ ಅಫೀಶಿಯಲ್ ವೆಬ್‌ಸೈಟ್ ಗೆ ಭೇಟಿ ನೀಡಬಹುದು. ನಾರ್ಥನ್ ರೀಜನ್ ಎಸ್‌ಎಸ್‌ಸಿ ಜೆಇ ಪೇಪರ್ 2 ಅಡ್ಮಿಟ್ ಕಾರ್ಡ್‌ ನ್ನು ಮಾರ್ಡ್ 17 , 2021 ರಂದು ಬಿಡುಗಡೆ ಮಾಡಲಿದೆ.

    ssckkr.kar.nic.i, sscwr.org, ssc-cr.org, sscmpr.org, sscwr.net

  • ತುಮಕೂರು ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆ

    ತುಮಕೂರು ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆ

    ತುಮಕೂರು ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು 30 ಮಾರ್ಚ್ ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.

    ಕ್ವಿಕ್ ಲುಕ್
    ಅರ್ಜಿ ಸಲ್ಲಿಸುವುದು ಹೇಗೆ?: ಆಫ್ ಲೈನ್ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15-03-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-03-2021( 11am ರಿಂದ 3pm)
    ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.

    ತುಮಕೂರು ಜಿಲ್ಲಾ ಪಂಚಾಯತ್ ನಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿದೆ.

    ಒಟ್ಟು ಹುದ್ದು : 16

    ಹುದ್ದೆಗಳ ವಿವರ : ತಾಲೂಕು ಟೆಕ್ನಿಕಲ್ ಅಸಿಸ್ಟೆಂಟ್( horticulture) – 2
    ತಾಲೂಕು ಟೆಕ್ನಿಕಲ್ ಅಸಿಸ್ಟೆಂಟ್( ಅಗ್ರಿಕಲ್ಚರ್ ಮತ್ತು ಸಿಲ್ಕ್ )-11
    ತಾಲೂಕು ಟೆಕ್ನಿಕಲ್ ಅಸಿಸ್ಟೆಂಟ್( ಫಾರೆಸ್ಟ್)-3

    ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ಬೋರ್ಡ್/ ಯುನಿವರ್ಸಿಟಿ ಯಿಂದ ಬಿ.ಎಸ್ಸಿ ತೇರ್ಗಡೆಯಾಗಿರಬೇಕು.

    ವಯೋಮಿತಿ : ಅಭ್ಯರ್ಥಿಗಳು ಕನಿಷ್ಠ 21 ಹಾಗೂ ಗರಿಷ್ಠ 40 ವಯೋಮಿತಿ ಹೊಂದಿರಬೇಕು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ದಿನಾಂಕ 30-03-2021 ( 11.am ರಿಂದ 3 pm ) ರೊಳಗೆ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸಬೇಕು.
    ವಿಳಾಸ :
    Development Branch (2nd Floor), Zilla Panchayat, Tumakuru,

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ನೀಟ್ ವೇಳಾಪಟ್ಟಿ ಬಿಡುಗಡೆ

    ನೀಟ್ ವೇಳಾಪಟ್ಟಿ ಬಿಡುಗಡೆ

    ರಾಷ್ಟ್ರೀಯ ಪರೀಕ್ಷೆ ಏಜೆನ್ಸಿಯು ( ಎನ್‌ಟಿಎ) ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್ ( ನೀಟ್) 2021 ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ನೀಟ್ 2021(ಯುಜಿ) ಪರೀಕ್ಷೆಗೆ ಆನ್‌ಲೈನ್ ಮೂಲಕ ರಿಜಿಸ್ಟ್ರೇಶನ್ ಪಡೆಯಬಹುದಾಗಿದೆ. ನೀಟ್ ಯುಜಿ ಪರೀಕ್ಷೆ ವೇಳಾಪಟ್ಟಿತಯ ಆಗಸ್ಟ್ 01, 2021 ರಂದು 11 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಬಾರಿ ನೀಟ್ 2021 ಪರೀಕ್ಷೆಯು ಒಂದೇ ಬಾರಿ ನಡೆಸಲಿದೆ. ಈ ಬಗ್ಗೆ ಎನ್‌ಟಿಎ ತನ್ನ ಪ್ರಕಟಣೆಯಲ್ಲಿ ಹೇಳಿದೆ. ಇದಕ್ಕೂ ಮೊದಲು ನೀಟ್ ಪರೀಕ್ಷೆ ಎರಡು ಬಾರಿ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಎನ್‌ಟಿಎ ಅಭ್ಯರ್ಥಿಗಳ ಸಂಶಯಕ್ಕೆ ಉತ್ತರ ನೀಡಿದೆ.

    ನೀಟ್(ಯುಜಿ) ೨೦೨೧ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು https://nta.ac.in, https://ntaneet.nic.in ವೆಬ್‌ಸೈಟ್ ಭೇಟಿ ನೀಡಬಹುದು

  • ಯುಪಿಎಸ್ ಸಿ ಫಲಿತಾಂಶ ಪ್ರಕಟ

    ಯುಪಿಎಸ್ ಸಿ ಫಲಿತಾಂಶ ಪ್ರಕಟ

    ಯುನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ 2020 ನೇ ಸಾಲಿನ ಯುಪಿಎಸ್ ಸಿ ಎನ್ ಡಿಎ, ಎನ್ ಎ 1 ಸಾಲಿನ ಪರೀಕ್ಷೆ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಸದರಿ ಪರೀಕ್ಷೆಯನ್ನು ಬರೆದ ಅಭ್ಯರ್ಥಿಗಳು ಯುಪಿಎಸ್ ಸಿ ಆಪೀಶಿಯಲ್ ವೆಬ್‌ಸೈಟ್‌ ಗೆ ಭೇಟಿ ನೀಡಿ ಅಂಕಗಳನ್ನು ಚೆಕ್ ಮಾಡಬಹುದು. ಯುಪಿಎಸ್ ಸಿ ಫಲಿತಾಂಶವನ್ನು ಮಾರ್ಚ್ 7, 2021 ರಂದು ಬಿಡುಗಡೆ ಮಾಡಲಾಗಿದೆ.

    ಕೇಂದ್ರ ಲೋಕಸೇವಾ ಅಫೀಶಿಯಲ್ ವೆಬ್‌ಸೈಟ್‌ https://upsc.gov.in/ ಗೆ ಭೇಟಿ ನೀಡಿ.

  • ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ

    ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನ

    ಮೈಸೂರು ಜಿಲ್ಲೆಯಲ್ಲಿ ಯುವ ಪರಿವರ್ತಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನಾರೋಗ್ಯ ಸಂಸ್ಥೆ, ನಿಮ್ಹಾನ್ಸ್‌ನ ಎಪಿಡಿಯಾಮಾಲಜಿ ವಿಭಾಗ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಹಾಗೂ ರಾಜ್ಯ ಸರಕಾರದ ಅನುದಾನಿತ ಯೋಜನೆಯಾದ “ಯುವಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳ ಸಮಗ್ರ ಅಭಿವೃದ್ಧಿ’ ಮತ್ತು’ ಅನುಷ್ಠಾನ ಯೋಜನೆ’ ಯಡಿಯಲ್ಲಿ ಯುವ ಪರಿವರ್ತಕರಾಗಿ ಕಾರ್ಯ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.

    ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 21 ಹಾಗೂ ಗರಿಷ್ಠ 35 ವರ್ಷದೊಳಗಿರಬೇಕು.

    ವಿದ್ಯಾರ್ಹತೆ : ಪದವಿ ಹಾಗೂ ಮೇಲ್ಪಟ್ಟು ವಿದ್ಯಾಭ್ಯಾಸ ಮಾಡಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಇತರೆ ಅನುಭವ : ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಬರುವ, ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ, ಹುಮ್ಮಸ್ಸು, ಉತ್ತಮ, ಅಂತರ್ವ್ಯಕ್ತಿತ್ವ, ಸಂವಹನ ಕೌಶಲ್ಯದ ಜತೆಗೆ ಸಂವಾದ ಕೌಶಲ್ಯ,ಸೇವಾ ಮನೋಭಾವ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

    ಹುದ್ದೆ ಸ್ಥಳ : ಮೈಸೂರು ಜಿಲ್ಲೆಯಲ್ಲಿ ಪ್ರಯಾಣಿಸುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 18 , 2021

    ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ನಿರ್ದೇಶಕರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು : 0821-2444922, 9611069973

  • ಯುಪಿಎಂಆರ್‌ಸಿಎಲ್ ನಲ್ಲಿ ವಿವಿಧ ಹುದ್ದೆ

    ಯುಪಿಎಂಆರ್‌ಸಿಎಲ್ ನಲ್ಲಿ ವಿವಿಧ ಹುದ್ದೆ

    ಉತ್ತರ ಪ್ರದೇಶ ಮೆಟ್ರೋ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ( ಯುಪಿಎಂಆರ್‌ಸಿಎಲ್) ಮತ್ತು ಲಕ್ನೋ ಮಟ್ರೋ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ (ಎಲ್‌ಎಂಆರ್‌ಸಿ) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 11-03-2021
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 02-04-2021
    ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 11-03-2021 ರಿಂದ 02-04-2021
    ಪರೀಕ್ಷೆ ಪ್ರವೇಶ ಪತ್ರ ಡೌನ್‌ಲೋಡ್ ಆರಂಭ : 10-04-2021
    ಲಿಖಿತ ಪರೀಕ್ಷೆ ನಿರೀಕ್ಷಿತ ದಿನಾಂಕ :17-04-2021

    ಹುದ್ದೆಗಳ ವಿವರ : ಅಸಿಸ್ಟೆಂಟ್ ಮ್ಯಾನೇಜರ್ ( ಆಪರೇಷನ್ಸ್‌)-06
    ಸ್ಟೇಷನ್ ಕಂಟ್ರೋಲರ್ ಕಮ್ ಟ್ರೇನ್ ಆಪರೇಟರ್-186
    ಮೇಂಟೆನರ್ (ಇಲೆಕ್ಟ್ರಿಕಲ್)-52
    ಮೇಂಟೆನರ್ (ಎಸ್ &ಟಿ)-24
    ಮೇಂಟೆನರ್ (ಸಿವಿಲ್)-24

    ವಿದ್ಯಾರ್ಹತೆ : ಅಸಿಸ್ಟೆಂಟ್ ಮ್ಯಾನೇಜರ್ ( ಆಪರೇಷನ್ಸ್‌)-ಬಿಇ/ಬಿಟೆಕ್ (ಸಂಬಂಧಿಸಿದ ವಿಭಾಗದಲ್ಲಿ ಇಂಜಿನಿಯರಿಂಗ್)
    ಸ್ಟೇಷನ್ ಕಂಟ್ರೋಲರ್ ಕಮ್ ಟ್ರೇನ್ ಆಪರೇಟರ್-ಡಿಪ್ಲೋಮಾ
    ಮೇಂಟೆನರ್ (ಇಲೆಕ್ಟ್ರಿಕಲ್)-ಐಟಿಐ(ಎನ್‌ಸಿವಿಟಿ/ಎಸ್‌ಸಿವಿಟಿ)
    ಮೇಂಟೆನರ್ (ಎಸ್ &ಟಿ)-ಐಟಿಐ(ಎನ್‌ಸಿವಿಟಿ/ಎಸ್‌ಸಿವಿಟಿ)
    ಮೇಂಟೆನರ್ (ಸಿವಿಲ್)-ಐಟಿಐ(ಎನ್‌ಸಿವಿಟಿ/ಎಸ್‌ಸಿವಿಟಿ)

    ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ. 590/- ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.236/- ನಿಗದಿಪಡಿಸಲಾಗಿದೆ.

    ವಯೋಮಿತಿ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ಹಾಗೂ ಗರಿಷ್ಠ 28 ವಯೋಮಿತಿ ಹೊಂದಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಠ ಪಂಗಡ/ಒಬಿಡಿ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.( ಸರಕಾರಿ ನಿಯಮದ ಪ್ರಕಾರ ಅನ್ವಯವಾಗಲಿದೆ )

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ