Category: Central Govt Jobs

Central Govt Jobs News in Kannada, Central Govt Employment News in Kannada, UPSC, Indian Railway Jobs, Bank Jobs News, Airforce Recruitment, Indian Army, Agniveer Jobs updates all Central govt jobs read in Sarakarijobs.com

  • NWDA : ಉದ್ಯೋಗವಕಾಶ

    NWDA : ಉದ್ಯೋಗವಕಾಶ

    ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಏಜೆನ್ಸಿ (NWDA) ಯು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ದಿನಾಂಕ 25-06-2021 ಕೊನೆಯ ದಿನಾಂಕವಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿಯನ್ನು ಸಲ್ಲಿಸಬಹುದು

    ಹುದ್ದೆ : ಜೂನಿಯರ್ ಸಿವಿಲ್ ಇಂಜಿನಿಯರ್- 16, ಹಿಂದಿ ಟ್ರಾನ್ಸ್ ಲೇಟರ್-01, ಜ್ಯೂನಿಯರ್ ಅಕೌಂಟ್ಸ್ ಆಫೀಸರ್- 05,
    ಅಪ್ಪರ್ ಡಿವಿಶನ್ ಕ್ಲರ್ಕ್-12, ಸ್ಟೆನೋಗ್ರಾಫರ್ ಗ್ರೇಡ್ 2 – 05 , ಲೋವರ್ ಡಿವಿಶನ್ ಕ್ಲರ್ಕ್- 23 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ.

    ಜೂನಿಯರ್ ಸಿವಿಲ್ ಇಂಜಿನಿಯರ್– ಡಿಪ್ಲೋಮಾ ಸಿವಿಲ್ ಇಂಜಿನಿಯರ್ ‌ಹೊಂದಿರಬೇಕು. ಹಿಂದಿ ಟ್ರಾನ್ಸ್ ಲೇಟರ್- ಪಿಜಿ ಡಿಗ್ರಿ (ಹಿಂದಿ), ಇಂಗ್ಲೀಷ್ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಜ್ಯೂನಿಯರ್ ಅಕೌಂಟ್ಸ್ ಆಫೀಸರ್– ಕಾಮರ್ಸ್ ಪದವಿ ಜೊತೆ ಕಾರ್ಯಾನುಭವ ಇರಬೇಕು.
    ಅಪ್ಪರ್ ಡಿವಿಶನ್ ಕ್ಲರ್ಕ್– ಯಾವುದೇ ಪದವಿ ಹೊಂದಿರಬೇಕು. ಸ್ಟೆನೋಗ್ರಾಫರ್ ಗ್ರೇಡ್ 2 -ದ್ವಿತೀಯ ಪಿಯು ಜೊತೆಗೆ ಟೈಪಿಂಗ್ ಜ್ಞಾನ ಇರಬೇಕು. ಲೋವರ್ ಡಿವಿಶನ್ ಕ್ಲರ್ಕ್-ದ್ವಿತೀಯ ಪಿಯು ಜೊತೆಗೆ ಟೈಪಿಂಗ್ ಜ್ಞಾನ ಇರಬೇಕು.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 10-05-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 25-06-2021
    ಕಂಪ್ಯೂಟರ್ ಆಧಾರಿತ ಪರೀಕ್ಷೆ : ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

    ಅರ್ಜಿ ಶುಲ್ಕ : ಜನರಲ್/ ಒಬಿಸಿ ಅಭ್ಯರ್ಥಿಗಳಿಗೆ ರೂ.840/-, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪಿಡ್ಬ್ಯುಡಿ ಅಭ್ಯರ್ಥಿಗಳಿಗೆ ರೂ. 500/- ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

    ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯೋಮಿತಿ ಆಗಿರಬೇಕು. ಮತ್ತು ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳಿಗೆ 27/30/27 ವರ್ಷ ವಯೋಮಿತಿ ಇರಬೇಕು. ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ : ಬೋಧಕೇತರ ಹುದ್ದೆ

    ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ : ಬೋಧಕೇತರ ಹುದ್ದೆ

    ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕವಾಗಿ ಸಂಚಿತ ವೇತನದ ಆಧಾರದ ಮೇಲೆ ವಿವಿಧ ಬೋಧಕೇತರ ಹುದ್ದೆಗಳ ನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಿವರಗಳನ್ನು ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ಜಾಲ ತಾಣವಾದ www.kud.ac.in ರ ನೋಟಿಫಿಕೇಶನ್ ಕಾಲದಿಂದ ಪಡೆದು ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ‌ಅಗತ್ಯ ದಾಖಲೆಗಳೊಂದಿಗೆ ದಿನಾಂಕ 05-06-2021 ಅಥವಾ ಸದರಿ ದಿನಾಂಕ ಮತ್ತು ನಂತರದಲ್ಲಿಯೂ ಸಹ ಲಾಕ್ ಡೌನ್ ಇದ್ದಲ್ಲಿ ಲಾಕ್ ಡೌನ್ ಅವಧಿ‌ ಮುಗಿದ ನಂತರ ದಿನಾಂಕದಂದು ಮುಂದಿನ 10 ಕರ್ತವ್ಯದ ದಿನಗಳೊಳಗಾಗಿ ಕಚೇರಿ ವೇಳೆಯಲ್ಲಿ ವಿಶ್ವವಿದ್ಯಾಲಯದ ಅವಕ ವಿಭಾಗದಲ್ಲಿ ಸಲ್ಲಿಸಲು ತಿಳಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ಸಂಚಿತ ವೇತನ ಮತ್ತು ಇತರೆ ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾಲಯದ ಅಂತರ್ಜಾಲ ತಾಣವನ್ನು ವೀಕ್ಷಿಸಲು ಸೂಚಿಸಲಾಗಿದೆ.

  • ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ : 1000ಕ್ಕೂ ಅಧಿಕ ಹುದ್ದೆ : ಈ ಕೂಡಲೇ ಅರ್ಜಿ ಸಲ್ಲಿಸಿ

    ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ : 1000ಕ್ಕೂ ಅಧಿಕ ಹುದ್ದೆ : ಈ ಕೂಡಲೇ ಅರ್ಜಿ ಸಲ್ಲಿಸಿ

    ಬಳ್ಳಾರಿ ಜಿಲ್ಲಾಡಳಿತ ಕಚೇರಿಯಿಂದ ಜಿಲ್ಲೆಯಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಅಗತತ್ಯ ಸಿಬ್ಬಂದಿಗಳನ್ನು ನೇಮಕಾತಿ ಮಾಡಲು ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಯು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಿದ್ದು ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ :

    ಹುದ್ದೆಗಳ ವಿವರ : ಫಿಸಿಷಿಯನ್, ನರ್ಸ್, ಲ್ಯಾಬ್ ಟೆಕ್ನಿಷಿಯನ್, ಡಾಕ್ಟರ್, ಗ್ರೂಪ್ ಡಿ ನೌಕರರು, ಡಯಟೀಷಿಯನ್, ಸ್ಟೋರ್ ಕೀಪರ್, ಮನಃಶಾಸ್ತ್ರಜ್ಞ, ರೇಡಿಯೋಲಾಜಿ, ನರ್ಸಿಂಗ್ ಸೂಪರ್‌ವೈಸರ್, ಕೌನ್ಸಲರ್‌ಗಳು ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದ್ದಾರೆ.

    ಒಟ್ಟು ಹುದ್ದೆಗಳ ಸಂಖ್ಯೆ : 1000 ಕ್ಕೂ ಅಧಿಕ ಇರುತ್ತದೆ.

    ಸಂದರ್ಶನದ ದಿನಾಂಕ : 04-05-2021 ರಿಂದ 11-05-2021 ರವರೆಗೆ

    ಸಂದರ್ಶನದ ಸಮಯ : ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.

    ಮೂರು ತಿಂಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ನಂತರ ಮೂರು ತಿಂಗಳು ಮುಂದೂಡುವ ಅವಕಾಶ ಇರುತ್ತದೆ.

    ಹುದ್ದೆಗಳಿಗೆ ಸಂದರ್ಶನ ಪ್ರಕ್ರಿಯೆಗಳನ್ನು ಆಯಾ ತಾಲೂಕಿನ ತಹಶೀಲ್ದಾರ ಕಛೇರಿಯಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು ಹೆಚ್ಚಿನ ವಿವರಗಳನ್ನು ಬಳ್ಳಾರಿಯ ಜಿಲ್ಲಾಡಳಿತ ಕಚೇರಿಯಲ್ಲಿ ಪಡೆಯಬಹುದು.

    ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು : 08392277100

    ಜಿಲ್ಲಾ ಆಸ್ಪತ್ರೆ, ವಿಮ್ಸ್ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಶುಶ್ರೂಷಕರಿಗೆ ಹಾಗೂ ಮೆಡಿಕಲ್ ಸಿಬ್ಬಂದಿಗಳಿಗೆ ಅವಶ್ಯಕತೆ ಇದ್ದಲ್ಲಿ ಊಟ ಹಾಗೂ ವಸತಿ ವ್ಯವಸ್ಥೆಯನ್ನು ನೀಡಲಾಗುವುದು.

  • ಧಾರವಾಡ ಜಿಲ್ಲಾ ಆಸ್ಪತ್ರೆ : 80 ಹುದ್ದೆ

    ಧಾರವಾಡ ಜಿಲ್ಲಾ ಆಸ್ಪತ್ರೆ : 80 ಹುದ್ದೆ

    ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವುದಕ್ಕಾಗಿ ಹಲವು ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದೆ.

    ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಹುದ್ದೆ : ಶ್ರುಶ್ರೂಷಕರು : 30 ಹುದ್ದೆಗಳು.
    ಫಾರ್ಮಸಿಸ್ಟ್ : 3 ಹುದ್ದೆ.
    ಡಿ.ವರ್ಗ‌ ನೌಕರರು : 30 ಹುದ್ದೆಗಳು
    ಭದ್ರತಾ ಸಿಬ್ಬಂದಿ : 15 ಹುದ್ದೆ
    ಕಂಪ್ಯೂಟರ್ ಅಪರೇಟರ್ : 2 ಹುದ್ದೆಗಳು
    ಒಟ್ಟು ಹುದ್ದೆಗಳ ಸಂಖ್ಯೆ : 80

    ವಯೋಮಿತಿ : 18 ವರ್ಷದಿಂದ ಗರಿಷ್ಠ 40 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ನೇಮಕಾತಿ ನಿಯಮಾನುಸಾರ ವೇತನ‌ ನಿಗದಿಪಡಿಸಲಾಗಿದೆ.

    ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಲಗತ್ತಿಸಿ ಮೇ 4 ಮತ್ತು ಮೇ 5, 2021ರಂದು ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 4.30 ಗಂಟೆಯವರೆಗೆ ಧಾರವಾಡ ಜಿಲ್ಲಾ ಆಸ್ಪತ್ರೆಯ ಸಭಾಭವನದಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

  • ಗೂಗಲ್: ವಿವಿಧ ಹುದ್ದೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

    ಗೂಗಲ್: ವಿವಿಧ ಹುದ್ದೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

    ಗೂಗಲ್ ಇಂಡಿಯಾವು ವಿವಿಧ ಅನುಭವಿ ಪ್ರೊಫೆಷನಲ್ ಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ : ಗೂಗಲ್ ಮೆಟ್ರೋ ನೆಟ್ವರ್ಕ್ ಡೆಪ್ಲಾಯ್ಮೆಂಟ್ ಇಂಜಿನಿಯರ್, ಕಸ್ಟಮರ್ ಇಂಜಿನಿಯರ್- ಡಾಟಾ ಮ್ಯಾನೇಜ್ಮೆಂಟ್ ಸ್ಪೆಷಲಿಸ್ಟ್ ( ಗೂಗಲ್ ಕ್ಲೌಡ್), ಕಸ್ಟಮರ್ ಇಂಜಿನಿಯರ್ – ಸೆಕ್ಯುರಿಟಿ (ಗೂಗಲ್ ಕ್ಲೌಡ್) ಹುದ್ದೆಗಳನ್ನು ಭರ್ತಿ ಮಾಡಲಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಗದಗ ಜಿಲ್ಲಾ ಪಂಚಾಯತಿ : ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಗದಗ ಜಿಲ್ಲಾ ಪಂಚಾಯತಿ : ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗದಗ ಜಿಲ್ಲಾ ಪಂಚಾಯತ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ವಿವಿಧ ಹುದ್ದೆಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ : ರೀಜಿನಲ್ ಪ್ಲಾನಿಂಗ್ ಸ್ಪೆಷಲಿಸ್ಟ್ ಈ ಹುದ್ದೆಗೆ ಮಾಸಿಕ 30,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ರೂರಲ್ ಡೆವಲ್ಪೆಂಟ್ ಮತ್ತು ಮ್ಯಾನೇಜ್‌ಮೆಂಟ್ ಸ್ಪೆಷಲಿಸ್ಟ್‌ ಈ ಹುದ್ದೆಗೆ ಮಾಸಿಕ 25,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ಇಂಜಿನಿಯರಿಂಗ್ ಸ್ಪೆಷಲಿಸ್ಟ್‌ ಈ ಹುದ್ದೆಗೆ ಮಾಸಿಕ 25,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ಸ್ಪೇಷಿಯಲ್ ಪ್ಲಾನಿಂಗ್ ಪ್ರೊಫೆಷನಲ್ ಈ ಹುದ್ದೆಗೆ ಮಾಸಿಕ 20,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ರೂರಲ್ ಮ್ಯಾನೇಜ್‌ಮೆಂಟ್ ಪ್ರಾಫೆಷನಲ್ ಈ ಹುದ್ದೆಗೆ ಮಾಸಿಕ 20,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    Resumeಗಳನ್ನು ಹಾಗೂ ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮರ್ಥ್ಯಗಳು ( ಏನಾದರೂ ಇದ್ದಲ್ಲಿ ) ಮಾಹಿತಿಯನ್ನು ತುಂಬಿ, ಅರ್ಜಿಯನ್ನು ಇ-ಮೇಲ್ ಮೂಲಕ [email protected] ಗೆ pdfನಲ್ಲಿ ಸಲ್ಲಿಸುವುದು. ಅಥವಾ ಹಾರ್ಡ್‌ ಪ್ರತಿಗಳನ್ನು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಗದಗ (ಡಿ.ಆರ್‌.ಡಿ.ಎ ಶಾಖೆ) ಜಿಲ್ಲಾಡಳಿತ ಭವನ ಹುಬ್ಬಳ್ಳಿ ರಸ್ತೆ ಗದಗ ರವರಿಗೆ ದಿನಾಂಕ 07-05-2021 ರ ಸಂಜೆ 5.00 ಗಂಟೆಯೊಳಗೆ ಅರ್ಜಿಯನ್ನು ಖುದ್ದಾಗಿ ಸಲ್ಲಿಸಬಹುದು. ತದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ 9164505757, 8970165300 ಸಂಪರ್ಕಿಸಬಹುದು