Category: Central Govt Jobs

Central Govt Jobs News in Kannada, Central Govt Employment News in Kannada, UPSC, Indian Railway Jobs, Bank Jobs News, Airforce Recruitment, Indian Army, Agniveer Jobs updates all Central govt jobs read in Sarakarijobs.com

  • BOB Recruitment 2024: ಬ್ಯಾಂಕ್‌ ಆಫ್‌ ಬರೋಡಾದಿಂದ ಉದ್ಯೋಗಾವಕಾಶ; ದ.ಕ.ಜಿಲ್ಲೆಯಲ್ಲಿ ಪೋಸ್ಟಿಂಗ್‌! ಈಗಲೇ ಅರ್ಜಿ ಹಾಕಿ

    BOB Recruitment 2024: ಬ್ಯಾಂಕ್‌ ಆಫ್‌ ಬರೋಡಾದಿಂದ ಉದ್ಯೋಗಾವಕಾಶ; ದ.ಕ.ಜಿಲ್ಲೆಯಲ್ಲಿ ಪೋಸ್ಟಿಂಗ್‌! ಈಗಲೇ ಅರ್ಜಿ ಹಾಕಿ

    BOB Recruitment 2024: ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 01 ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಬಿಸಿನೆಸ್ ಕರೆಸ್ಪಾಂಡೆಂಟ್ ಮೇಲ್ವಿಚಾರಕರು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ – ಕರ್ನಾಟಕ ಸರ್ಕಾರದಲ್ಲಿ ಈ ಹುದ್ದೆಯ ಪೋಸ್ಟಿಂಗ್‌ ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ದಿ.30-Jun-2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತ, ಅರ್ಜ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ಆರಂಭಗೊಂಡ ದಿನಾಂಕ: 01-06-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2024

    ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ;
    ಹುದ್ದೆ ಹೆಸರು, ಇತರೆ ವಿವರ; ಬ್ಯಾಂಕ್ ಆಫ್ ಬರೋಡಾ (BOB)ದಲ್ಲಿ ಬಿಸಿನೆಸ್‌ ಕರೆಸ್ಪಾಂಡೆಂಟ್‌ ಮೇಲ್ವಿಚಾರಕರು ಹುದ್ದೆ ಖಾಲಿ ಇದ್ದು, ಈ ಹುದ್ದೆಗೆ ಆಯ್ಕೆಯಾದವರಿಗೆ ದ.ಕ ಭಾಗದಲ್ಲಿ ಪೋಸ್ಟಿಂಗ್‌ ನಡೆಯಲಿದೆ.

    ವೇತನ: ಮೇಲೆ ತಿಳಿಸಿದ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.10000-15000/- ಮಾಸಿಕ ವೇತನ ಸಿಗಲಿದೆ.

    ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ B.E, MBA, MCA, M.Sc ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆಯ ಪ್ರಕಾರ, ಬಿಸಿನೆಸ್‌ ಕರೆಸ್ಪಾಂಡೆಂಟ್‌ ಮೇಲ್ವಿಚಾರಕರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ 45 ವರ್ಷ ಮೀರಿರಬಾರದು. ಬ್ಯಾಂಕ್‌ ಆಫ್‌ ಬರೋಡ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸುವುದು ಹೇಗೆ?
    ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ತಮ್ಮ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗೆ ನೀಡಲಾದ ವಿಳಾಸಕ್ಕೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.

    ವಿಳಾಸ ಇಲ್ಲಿದೆ;
    Regional Manager, Bank of Baroda, Regional Office, R.E.B Enclave, Ground Floor, Near Duggamma Deranna Hall, Bypass Road, Darbe Puttur, Dakshina Kannada, Karnataka-574202. ಇಲ್ಲಿಗೆ ದಿ. 30-ಜೂನ್-2024 ರಂದು ಅಥವಾ ಮೊದಲು ಕಳುಹಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • Indian Airforce Recruitment 2024: ಅಗ್ನಿವೀರ್‌ ವಾಯು ಸಂಗೀತಗಾರರ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ

    Indian Airforce Recruitment 2024: ಅಗ್ನಿವೀರ್‌ ವಾಯು ಸಂಗೀತಗಾರರ ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ

    Airforce Agniveer Musician Recruitment 2024: ಏರ್‌ಫೋರ್ಸ್‌ ಅಗ್ನಿವೀರ್‌ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಏರ್‌ಫೋರ್ಸ್‌ ಅಗ್ನಿವೀರ್‌ ವಾಯು ಸಂಗೀತಗಾರರ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು ವಾಯುಪಡೆ ಕೇಂದ್ರದಲ್ಲಿ ಕೂಡಾ ನೇಮಕಾತಿ ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಕೆಗೆ ಸುವರ್ಣಾವಕಾಶ ಎಂದೇ ಹೇಳಬಹುದು. ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿದೆ.

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22-05-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-06-2024

    ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 17.5 ವರ್ಷ ಗರಿಷ್ಠ 22 ವರ್ಷ ಎಂದು ನಿಗದಿಪಡಿಸಲಾಗಿದೆ.

    ಅರ್ಜಿ ಶುಲ್ಕ: ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್‌ ರೂ.100/-, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ರೂ.100 ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ನೆಟ್‌ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ವಾಲೆಟ್‌ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.

    ಅರ್ಹತೆ: ಪುರುಷ/ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರು.

    ಅರ್ಜಿ ನಮೂನೆಯು ಜಾಯಿನ್‌ ಇಂಡಿಯನ್‌ ಏರ್‌ಫೋರ್ಸ್‌ ಅಗ್ನಿವೀರ್‌ ವಾಯು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬೇಕು.

    ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಇಲ್ಲಿ ನೀಡಲಾಗಿದ್ದು, ಅಭ್ಯರ್ಥಿಗಳ ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬೇಕು.

  • NCB Recruitment 2024: ಕೇಂದ್ರ ಸರಕಾರಿ ಉದ್ಯೋಗಾವಕಾಶ; ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೋದಲ್ಲಿ ಹುದ್ದೆ; ತಡಮಾಡದೇ ಈ ಕೂಡಲೇ ಅರ್ಜಿ ಸಲ್ಲಿಸಿ

    NCB Recruitment 2024: ಕೇಂದ್ರ ಸರಕಾರಿ ಉದ್ಯೋಗಾವಕಾಶ; ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೋದಲ್ಲಿ ಹುದ್ದೆ; ತಡಮಾಡದೇ ಈ ಕೂಡಲೇ ಅರ್ಜಿ ಸಲ್ಲಿಸಿ

    NCB Recruitment 2024: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇಲ್ಲಿ ಖಾಲಿ ಇರುವ ಅರ್ಜಿಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 05 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಸೆಕ್ಷನ್‌ ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗುತ್ತಿದ್ದು, ಈ ಕೆಳಗೆ ನೀಡಿದ ಮಾಹಿತಿಯನ್ನು ಆಧರಿಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಆಯ್ಕೆಯಾದವರಿಗೆ ಭಾರತದಾದ್ಯಂತ ಪೋಸ್ಟಿಂಗ್‌ ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ದಿ.27-Jul-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 28-05-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-07-2024

    ಹುದ್ದೆಯ ಕುರಿತ ಮಾಹಿತಿ ಇಲ್ಲಿದೆ;
    ಸಂಸ್ಥೆಯ ಹೆಸರು: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಇಲ್ಲಿ ಖಾಲಿ ಇರುವ ಸೆಕ್ಷನ್‌ ಆಫೀಸರ್‌ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ರೂ.44900-142400/- ವೇತನ ದೊರಕಲಿದೆ.

    ವಿದ್ಯಾರ್ಹತೆ: NCB ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷ ಮೀರಿರಬಾರದು. ಉಳಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

  • IIMB Jobs: ಬೆಂಗಳೂರಿನಲ್ಲಿ ಉದ್ಯೋಗಾವಕಾಶ; ಬೇಗ ಅಪ್ಲೈ ಮಾಡಿ

    IIMB Jobs: ಬೆಂಗಳೂರಿನಲ್ಲಿ ಉದ್ಯೋಗಾವಕಾಶ; ಬೇಗ ಅಪ್ಲೈ ಮಾಡಿ

    IIMB Recruitment 2024: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆಯನ್ನು ಇನ್ನೂ ನಿರ್ದಿಷ್ಟ ಪಡಿಸಿಲ್ಲ. ಅಭ್ಯರ್ಥಿಗಳು ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಅಕಾಡೆಮಿಕ್ ಅಸೋಸಿಯೇಟ್ – ಪ್ರೊಡಕ್ಷನ್ ಮತ್ತು ಆಪರೇಷನ್ ಮ್ಯಾನೇಜ್‌ಮೆಂಟ್ ಏರಿಯಾ ಪೋಸ್ಟ್‌ಗಳನ್ನು ಐಐಎಂಬಿ ಅಧಿಕೃತ ಅಧಿಸೂಚನೆಯ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಪೋಸ್ಟಿಂಗ್‌ ನಡೆಯಲಿದೆ. 14-ಜೂನ್-2024 ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 30-05-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-06-2024

    ಹುದ್ದೆಯ ಕುರಿತ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIMB) ಇಲ್ಲಿ ಅಕಾಡೆಮಿಕ್ ಅಸೋಸಿಯೇಟ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.38000-44000/- ವೇತನ ಸಿಗಲಿದೆ.

    ವಿದ್ಯಾಭ್ಯಾಸ: ಅರ್ಥಶಾಸ್ತ್ರ, ಅಂಕಿಅಂಶಗಳು, ವ್ಯಾಪಾರ ಅನಾಲಿಟಿಕ್ಸ್ ಅಥವಾ ಇಂಡಸ್ಟ್ರಿಯಲ್ ಇಂಜಿನಿಯರಿಂಗ್/ಆಪರೇಷನ್ ರಿಸರ್ಚ್, MBA, ಯಾವುದೇ ವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿಯನ್ನು ತೇರ್ಗಡೆ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

    ವಯೋಮಿತಿ: ಐಐಎಂಬಿ ನಿಯಮಗಳ ಪ್ರಕಾರ ಅಭ್ಯರ್ಥಿಗಳು ವಯೋಮಿತಿ ಮಿತಿಯನ್ನು ಹೊಂದಿರಬೇಕು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಮೇಲ್ಕಂಡ ಹುದ್ದೆಗೆ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗಿಲ್ಲ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

  • HAL ಸಂಸ್ಥೆಯಲ್ಲಿ ಇಂಜಿನಿಯರ್‌ ಹುದ್ದೆಗೆ ಅರ್ಜಿ ಆಹ್ವಾನ; 16 ಹುದ್ದೆಗಳು ಖಾಲಿ ಇದೆ, ಭರ್ಜರಿ ವೇತನ

    HAL ಸಂಸ್ಥೆಯಲ್ಲಿ ಇಂಜಿನಿಯರ್‌ ಹುದ್ದೆಗೆ ಅರ್ಜಿ ಆಹ್ವಾನ; 16 ಹುದ್ದೆಗಳು ಖಾಲಿ ಇದೆ, ಭರ್ಜರಿ ವೇತನ

    HAL India Recruitment 2024: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 16 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇಂಜಿನಿಯರ್‌ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಹುದ್ದೆಯ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಮಾಡಲಿಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಇಂಜಿನಿಯರ್‌ ಹುದ್ದೆಗೆ ಅರ್ಜಿ ಸಲ್ಲಿಸಲು 07-Jun-2024 ಕೊನೆಯ ದಿನಾಂಕವಾಗಿದ್ದು. ಅದರೊಳಗೆ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29-05-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 07-06-2024

    ಹುದ್ದೆಯ ಕುರಿತ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL ಇಂಡಿಯಾ) ಇಲ್ಲಿ ಇಂಜಿನಿಯರ್‌ ಹುದ್ದೆ ಖಾಲಿ ಇದ್ದು, ಒಟ್ಟು 16 ಪೋಸ್ಟ್‌ಗಳಿಗೆ ಭರ್ತಿ ನಡೆಯಲಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 40,000 – 60,000/- ವೇತನ ದೊರಕಲಿದೆ.

    ಹುದ್ದೆ ಹೆಸರು ಮತ್ತು ಸಂಖ್ಯೆ:
    CMM (ಹಂತ5) ಇಂಜಿನಿಯರ್ 4 ಹುದ್ದೆಗಳು
    ಮಧ್ಯಮ ತಜ್ಞ 6 ಹುದ್ದೆಗಳು
    ಜೂನಿಯರ್ ಸ್ಪೆಷಲಿಸ್ಟ್ 6 ಹುದ್ದೆಗಳು

    ವಿದ್ಯಾರ್ಹತೆ: HAL ಭಾರತದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ, BE/ B.Tech ತೇರ್ಗಡೆ ಹೊಂದಿರಬೇಕು.

    ವೇತನ:
    CMM (ಹಂತ5) ಎಂಜಿನಿಯರ್ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 60,000/- ವೇತನವಿರಲಿದೆ.
    ಮಧ್ಯಮ ತಜ್ಞ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 50,000/- ಸಂಬಳವಿರಲಿದೆ.
    ಜೂನಿಯರ್ ಸ್ಪೆಷಲಿಸ್ಟ್ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 40,000/- ವೇತನ ಸಿಗಲಿದೆ.

    ವಯೋಮಿತಿ:
    CMM (ಹಂತ5) ಇಂಜಿನಿಯರ್ – 45 ವರ್ಷ ಮೀರಿರಬಾರದು.
    ಮಧ್ಯಮ ತಜ್ಞ 40 ವರ್ಷ ಮೀರಿರಬಾರದು.
    ಜೂನಿಯರ್ ಸ್ಪೆಷಲಿಸ್ಟ್ 35 ವರ್ಷ ಮೀರಿರಬಾರದು.

    ವಯೋಮಿತಿ ಸಡಿಲಿಕೆ:
    OBC ಅಭ್ಯರ್ಥಿಗಳಿಗೆ 3 ವರ್ಷ, PWBD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಎಲ್ಲಾ ಇತರ ಅಭ್ಯರ್ಥಿಗಳಿಗೆ ರೂ. 500/-, SC/ST/PwB ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರವೇ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: HAL ನಲ್ಲಿ ಇಂಜಿನಿಯರ್‌ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

  • EDII Recruitment: ವಿವಿಧ ಪ್ರಾಜೆಕ್ಟ್ ಕೋಆರ್ಡಿನೇಟರ್ ಹುದ್ದೆಗೆ ಅರ್ಜಿ ಸಲ್ಲಿಸಿ

    EDII Recruitment: ವಿವಿಧ ಪ್ರಾಜೆಕ್ಟ್ ಕೋಆರ್ಡಿನೇಟರ್ ಹುದ್ದೆಗೆ ಅರ್ಜಿ ಸಲ್ಲಿಸಿ

    EDII Recruitment 2024: ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಿರಿಯ ಪ್ರಾಜೆಕ್ಟ್ ಕೋಆರ್ಡಿನೇಟರ್, ಪ್ರಾಜೆಕ್ಟ್ ಕೋಆರ್ಡಿನೇಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಹುದ್ದೆಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸಿಲ್ಲ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಈ ಹುದ್ದೆಗೆ ಪೋಸ್ಟಿಂಗ್‌ ನಡೆಯಲಿದ್ದು, ಕರ್ನಾಟಕ ಸರಕಾರದಲ್ಲಿ ಉದ್ಯೋಗ ಮಾಡಲು ಇಚ್ಛೆ ಪಡುವವರು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 02-Jun-2024 ರಂದು ಅಥವಾ ಮೊದಲು ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 29-05-2024
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 02-ಜೂನ್-2024

    ಹುದ್ದೆಯ ವಿವರ ಇಲ್ಲಿದೆ;
    ಸಂಸ್ಥೆಯ ಹೆಸರು: ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (EDII) ಇಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಹಿರಿಯ ಪ್ರಾಜೆಕ್ಟ್ ಕೋಆರ್ಡಿನೇಟರ್, ಪ್ರಾಜೆಕ್ಟ್ ಕೋಆರ್ಡಿನೇಟರ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದ್ದು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ – ಕರ್ನಾಟಕದಲ್ಲಿ ಉದ್ಯೋಗ ಸಿಗಲಿದೆ.

    ವೇತನ: ರೂ. 40,000 – 55,000/- ವೇತನ ಮಾಸಿಕ ದೊರಕಲಿದೆ.

    ವಿದ್ಯಾರ್ಹತೆ: EDII ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮೇಲೆ ತಿಳಿಸಿದ ಹುದ್ದೆಗೆ BE/ B.Tech, MBA, ಯಾವುದೇ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿಯನ್ನು ಅಭ್ಯರ್ಥಿಯು ಪಡೆದಿರಬೇಕು.

    ವಯೋಮಿತಿ ಸಡಿಲಿಕೆ: ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಸಲ್ಲಿಸುವುದು ಹೇಗೆ?
    ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ದಿ.02-06-2024 ರೊಳಗೆ ಇ-ಮೇಲ್ ಐಡಿ, [email protected] ಕಳುಹಿಸಬೇಕು.