Category: Central Govt Jobs

Central Govt Jobs News in Kannada, Central Govt Employment News in Kannada, UPSC, Indian Railway Jobs, Bank Jobs News, Airforce Recruitment, Indian Army, Agniveer Jobs updates all Central govt jobs read in Sarakarijobs.com

  • Goa Shipyard Recruitment: ಗೋವಾ ಶಿಪ್‌ಯಾರ್ಡ್‌ನಲ್ಲಿ ನೇಮಕಾತಿ; ಡಿಪ್ಲೊಮಾ, ಡಿಗ್ರಿ ಆಗಿದ್ರೆ ಅರ್ಜಿ ಹಾಕಿ

    Goa Shipyard Recruitment 2024: ಗೋವಾ ಶಿಪ್‌ಯಾರ್ಡ್‌ ಲಿಮಿಟೆಡ್‌ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 106 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನಾನ್‌ ಎಕ್ಸಿಕ್ಯೂಟಿವ್‌-ಅಸಿಸ್ಟಂಟ್‌ ಸೂಪರಿಂಟೆಂಡಂಟ್‌, ಟೆಕ್ನಿಕಲ್‌ ಅಸಿಸ್ಟಂಟ್‌, ಆಫೀಸ್‌ ಅಸಿಸ್ಟಂಟ್‌, ಕ್ಲೆರಿಕಲ್‌ ಸ್ಟಾಫ್‌, ಪೇಂಟರ್‌, ವೆಹಿಕಲ್‌ ಡ್ರೈವರ್‌ ಮತ್ತು ಇತರೆ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಓದಿ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 28-02-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-03-2024

    ಹುದ್ದೆಗಳ ವಿವಿರ ಇಲ್ಲಿದೆ;
    ಹುದ್ದೆಗಳ ವಿವರ;
    ಅಸಿಸ್ಟಂಟ್ ಸೂಪರಿಂಟೆಂಡಂಟ್ : 04
    ಟೆಕ್ನಿಕಲ್ ಅಸಿಸ್ಟಂಟ್ : 31
    ಆಫೀಸ್ ಅಸಿಸ್ಟಂಟ್ – ಕ್ಲೆರಿಕಲ್ ಸ್ಟಾಫ್: 32
    ಆಫೀಸ್ ಅಸಿಸ್ಟಂಟ್ (ಫೈನಾನ್ಸ್‌ / ಐಎ/) : 06
    ಪೇಂಟರ್ : 20, ಹಾಗೂ ಉಳಿದಂತೆ ಇತರೆ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
    ಒಟ್ಟು 106 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ವಯೋಮಿತಿ: ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 36 ವರ್ಷ ಮೀರಿರಬಾರದು.

    ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಎಂಬಿಎ/ಇತರೆ ಪಿಜಿ/ಯುಜಿ/ವಿವಿಧ ಬ್ರ್ಯಾಂಚ್‌ಗಳಲ್ಲಿ ಡಿಪ್ಲೋಮಾ ಇನ್‌ ಇಂಜಿನಿಯರಿಂಗ್‌ ತೇರ್ಗಡೆ ಹೊಂದಿರಬೇಕು.

    ಅರ್ಜಿ ಶುಲ್ಕ:
    ಎಸ್‌ಸಿ,ಎಸ್‌ಟಿ, PWD, ಮಾಜಿ ಸೈನಿಕ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಉಳಿದವರು ರೂ.200 ಅರ್ಜಿ ಶುಲ್ಕ ಪಾವತಿ ಮಾಡಬೇಕು.

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ವಿಶೇಷ ಸೂಚನೆ; ಅಭ್ಯರ್ಥಿಗಳು ಮೇಲ್ಕಂಡ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು. ಇತರೆ ಯಾವುದೇ ಮಾಧ್ಯಮದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಮೇಲ್ಕಂಡ ಹುದ್ದೆಗಳನ್ನು ಮೂರು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ

  • RRB Technician Recruitment 2024: 9144 ಟೆಕ್ನಿಷಿಯನ್‌ ಪೋಸ್ಟ್‌ಗಳಿಗೆ ನೋಂದಣಿ ಪ್ರಾರಂಭ, ಅರ್ಜಿ ಸಲ್ಲಿಸಲು ನೇರ ಲಿಂಕ್‌ ಇಲ್ಲಿದೆ

    RRB Technician Recruitment 2024: 9144 ಟೆಕ್ನಿಷಿಯನ್‌ ಪೋಸ್ಟ್‌ಗಳಿಗೆ ನೋಂದಣಿ ಪ್ರಾರಂಭ, ಅರ್ಜಿ ಸಲ್ಲಿಸಲು ನೇರ ಲಿಂಕ್‌ ಇಲ್ಲಿದೆ

    RRB Recruitment 2024: RRB ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 9144 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಈ ಕೆಳಗೆ ನೀಡಿದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಟೆಕ್ನಿಷಿಯನ್‌ ಹುದ್ದೆಗಳಿಗೆ ಆರ್‌ಆರ್‌ಬಿ ತನ್ನ ಅಧಿಕೃತ ಅಧಿಸೂಚನೆಯ ಮೂಲಕ ನೇಮಕಾತಿ ಪ್ರಾರಂಭ ಮಾಡಿದೆ. ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಕೂಡಲೇ ಅರ್ಜಿ ಸಲ್ಲಿಸಿ. ಅಭ್ಯರ್ಥಿಗಳು 08-Apr-2024 ರಂದು ಅಥವಾ ಮೊದಲು ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 09-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 08-04-2024

    ಹುದ್ದೆಯ ವಿವರಗಳು ಈ ಕೆಳಗೆ ನೀಡಲಾಗಿದೆ;
    ಹುದ್ದೆಯ ಹೆಸರು: ತಂತ್ರಜ್ಞ ಹುದ್ದೆಗಳಿಗೆ ರೈಲ್ವೆ ನೇಮಕಾತಿ ಮಂಡಳಿಯು ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 9144 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ: ತಂತ್ರಜ್ಞ ಗ್ರೇಡ್ I ಸಿಗ್ನಲ್: 1092 ಪೋಸ್ಟ್‌ಗಳು
    ತಂತ್ರಜ್ಞ ಗ್ರೇಡ್ III: 8052 ಪೋಸ್ಟ್‌ಗಳು

    ವೇತನ: ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.19,900 – 29,200/-ರೂ. ವೇತನ ಸಿಗಲಿದೆ.

    ವಿದ್ಯಾರ್ಹತೆ: ಅಭ್ಯರ್ಥಿಗಳು 10th, 12th, ITI, ಡಿಪ್ಲೊಮಾ, B.Sc, BE/ B.Tech ಅನ್ನು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ತೇರ್ಗಡೆ ಹೊಂದಿರಬೇಕು.

    ಹುದ್ದೆ ಹೆಸರು ಮತ್ತು ಅರ್ಹತೆ;
    ತಂತ್ರಜ್ಞ Gr I ಸಿಗ್ನಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ, B.Sc, BE/ B.Tech ತೇರ್ಗಡೆ ಹೊಂದಿರಬೇಕು.
    ತಂತ್ರಜ್ಞ III ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ, 12ನೇ, ಐಟಿಐ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿಯು 18 ವರ್ಷ, ಗರಿಷ್ಠ 36 ವರ್ಷ ಮೀರಿರಬಾರದು. ಒಬಿಸಿ(ಎನ್‌ಸಿಎಲ್‌) ಅಭ್ಯರ್ಥಿಗಳಿಗೆ -3 ವರ್ಷ, ಎಸ್‌ಸಿ,ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಎಸ್‌ಸಿ/ಎಸ್‌ಟಿ, ಎಕ್ಸ್‌ ಸರ್ವಿಸ್‌ಮೆನ್‌, PwBD, ಮಹಿಳೆಯರು, Transgender, ಇಬಿಸಿ ಅಭ್ಯರ್ಥಿಗಳಿಗೆ ರೂ.250, ಉಳಿದ ಅಭ್ಯರ್ಥಿಗಳಿಗೆ ರೂ.500/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ ಮೂಲಕವಷ್ಟೇ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

    ವೇತನ: ಟೆಕ್ನಿಷಿಯನ್‌ Gr 1 Signal ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.29,200 ವೇತನವಿರಲಿದೆ. ಟೆಕ್ನಿಷಿಯನ್‌111 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.19,900 ವೇತನವಿರಲಿದೆ.

    ಅರ್ಜಿ ಸಲ್ಲಿಸುವುದು ಹೇಗೆ? ರೈಲ್ವೆ ನೇಮಕಾತಿ ಮಂಡಳಿಯ (RRB) ಅಧಿಕೃತ ವೆಬ್‌ಸೈಟ್ rrbapply.gov.in ಗೆ ಭೇಟಿ ನೀಡಿ, ಇಲ್ಲಿ ನೀವು ‘ಆನ್‌ಲೈನ್‌ನಲ್ಲಿ ಅನ್ವಯಿಸು – ತಂತ್ರಜ್ಞರ ನೇಮಕಾತಿ 2024’ ಎಂಬ ಆಯ್ಕೆಯನ್ನು ಕಾಣಬಹುದು ಮತ್ತು ಅದರ ಮೇಲೆ ಕ್ಲಿಕ್ ಮಾಡಿ, ನಂತರ ಅಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಇಮೇಲ್‌ ವಿಳಾಸ, ಪಾಸ್‌ವರ್ಡ್‌ ಬಳಸಿ ಲಾಗ್‌ಇನ್‌ ಮಾಡಿ, ಶೈಕ್ಷಣಿಕ ಅರ್ಹತೆ, ಭಾವಚಿತ್ರ ಮತ್ತು ಸಹಿಯನ್ನು ಒಳಗೊಂಡ ದಾಖಲೆಗಳನ್ನು ಅಪಲೋಡ್‌ ಮಾಡಿ, ಅರ್ಜಿ ಶುಲ್ಕ ಪಾವತಿಸಿ. ಸಬ್‌ಮಿಟ್‌ ಬಟನ್‌ ಒತ್ತುವ ಮೊದಲು ನೀವು ನಮೂದಿಸಿದ ಎಲ್ಲಾ ವಿವರಗಳನ್ನು ಕ್ರಾಸ್-ಚೆಕ್ ಮಾಡಿ, ನಂತರ ಸಬ್‌ಮಿಟ್‌ ಬಟ್‌ ಕ್ಲಿಕ್‌ ಮಾಡಿ

    ಹುದ್ದೆಯ ಕುರಿತು ಡಿಟೇಲ್ಡ್‌ ನೋಟಿಫಿಕೇಷನ್‌ ಇಲ್ಲಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ನೇರ ಲಿಂಕ್‌ ಇಲ್ಲಿದೆ.

  • ESIC Recruitment 2024: ನೌಕರರ ರಾಜ್ಯ ವಿಮಾ ನಿಗಮದಲ್ಲಿ 1930 ಹುದ್ದೆಗಳು ಖಾಲಿ; ಮಾಸಿಕ ರೂ.63ಸಾವಿರ ಸಂಬಳ, ಈ ಕೂಡಲೇ ಅರ್ಜಿ ಸಲ್ಲಿಸಿ

    ESIC Recruitment 2024: ನೌಕರರ ರಾಜ್ಯ ವಿಮಾ ನಿಗಮದಲ್ಲಿ 1930 ಹುದ್ದೆಗಳು ಖಾಲಿ; ಮಾಸಿಕ ರೂ.63ಸಾವಿರ ಸಂಬಳ, ಈ ಕೂಡಲೇ ಅರ್ಜಿ ಸಲ್ಲಿಸಿ

    ESIC Recruitment 2024: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಕೇಂದ್ರ ಲೋಕ ಸೇವಾ ಆಯೋಗವು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 1930 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ನರ್ಸಿಂಗ್‌ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ದಿನಾಂಕ ಮಾರ್ಚ್‌ 27,2024 ರೊಳಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 07-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-03-2024

    ಹುದ್ದೆಗಳ ವಿವರ ಇಲ್ಲಿದೆ: ನರ್ಸಿಂಗ್‌ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಒಟ್ಟು 1930 ಹುದ್ದೆಗಳು ಖಾಲಿ ಇದೆ. ವರ್ಗಾವಾರು ಹುದ್ದೆಗಳ ಲಿಸ್ಟ್‌ ಇಲ್ಲಿ ನೀಡಲಾಗಿದೆ. ಸಾಮಾನ್ಯ ವರ್ಗ-892, EWS-193, OBC-446, SC-235, ST-164 ಹುದ್ದೆ ನೀಡಲಾಗಿದೆ.

    ವಿದ್ಯಾರ್ಹತೆ: ಬಿ.ಎಸ್‌ಸಿ (Hons) ನರ್ಸಿಂಗ್/ಬಿ.ಎಸ್‌.ಸಿ.ನರ್ಸಿಂಗ್‌/ಪೋಸ್ಟ್‌ ಬೇಸಿಕ್‌ ಬಿ.ಎಸ್‌.ಸಿ.ನರ್ಸಿಂಗ್‌ ತೇರ್ಗಡೆ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ರಾಜ್ಯ ನರ್ಸಿಂಗ್‌ ಕೌನ್ಸಿಲ್‌ನಲ್ಲಿ ನರ್ಸ್‌ ಅಥವಾ ನರ್ಸ್‌ ಸೂಲಗಿತ್ತಿಯಾಗಿ ನೋಂದಾಯಿಸಿಕೊಂಡಿರಬೇಕು ಅಥವಾ ಜನರಲ್‌ ನರ್ಸಿಂಗ್‌ ಮಿಡ್‌ ವೈಫರಿಯಲ್ಲಿ ಡಿಪ್ಲೋಮಾ ಕೋರ್ಸ್‌ ಮಾಡಿರುವವರಿಗೆ ಆದ್ಯತೆ ನೀಡಲಾಗುವುದು.

    ಅನುಭವ: ಒಂದು ವರ್ಷ 50ಹಾಸಿಗೆಗಳ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.

    ವಯೋಮಿತಿ: ನೌಕರರ ರಾಜ್ಯ ವಿಮಾ ನಿಗಮದ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವವರ ಕನಿಷ್ಠ ವಯೋಮಿತಿಯು 18 ವರ್ಷ, ಗರಿಷ್ಠ 30 ವರ್ಷ ನಿಗದಿಪಡಿಸಲಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಶೇಷ ಚೇತನ ವ್ಯಕ್ತಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್‌ ವರ್ಗದ ಅಭ್ಯರ್ಥಿಗಳಿಗೆ ರೂ.25ನ್ನು ಅರ್ಜಿ ಶುಲ್ಕವಾಗಿ ಪಾವತಿ ಮಾಡಬೇಕು. ಮಹಿಳೆಯರು/ಎಸ್‌ಸಿ/ಎಸ್‌ಟಿ/ವಿಶೇಷ ಚೇತನ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ.

    ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಎರಡು ವರ್ಷ ಪ್ರೊಬೆಷನರಿ ಅವಧಿ ಇರಲಿದ್ದು, ನಂತರ ಹುದ್ದೆಯನ್ನು ಖಾಯಂ ಮಾಡಲಾಗುವುದು.

    ವೇತನ: ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.42,300-ರೂ.63,300 ವೇತನವಿರಲಿದೆ.

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ವೆಬ್‌ಸೈಟ್ https://www.upsconline.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಬೇರೆ ಯಾವುದೇ ವಿಧಾನದ ಮೂಲಕ ಸ್ವೀಕರಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡುವಾಗ ಭಾವಚಿತ್ರ, ಸಹಿ ಮತ್ತು ಗುರುತಿನ ಪುರಾವೆಗಳನ್ನು ಹೊರತುಪಡಿಸಿ ಯಾವುದೇ ದಾಖಲೆಯನ್ನು ಅಪ್‌ಲೋಡ್ ಮಾಡಬೇಕಾಗಿಲ್ಲ.
    ಅಭ್ಯರ್ಥಿಗಳು ತಮ್ಮ ಸರಿಯಾದ ಮತ್ತು ಸಕ್ರಿಯ ಇ-ಮೇಲ್ ವಿಳಾಸಗಳನ್ನು ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ ಭರ್ತಿ ಮಾಡಬೇಕು. ಏಕೆಂದರೆ ಎಲ್ಲಾ ಪತ್ರವ್ಯವಹಾರಗಳನ್ನು ಇ-ಮೇಲ್ ಮೂಲಕ ಆಯೋಗದ ಮೂಲಕ ಮಾಡಲಾಗುತ್ತದೆ. ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿದ ನಂತರ, ಅಭ್ಯರ್ಥಿಗಳು ಅಂತಿಮವಾಗಿ ಸಲ್ಲಿಸಿದ ಆನ್‌ಲೈನ್ ನೇಮಕಾತಿ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • HAL Recruitment 2024: ಹೆಚ್‌ಎಎಲ್‌ನಲ್ಲಿ 160 ಡಿಪ್ಲೋಮಾ, ಏರ್‌ಕ್ರಾಫ್ಟ್ ತಂತ್ರಜ್ಞರ ಹುದ್ದೆಗೆ ನೇಮಕಾತಿ; ಮಾಸಿಕ ರೂ.57,000 ವೇತನ

    HAL Recruitment 2024: ಹೆಚ್‌ಎಎಲ್‌ನಲ್ಲಿ 160 ಡಿಪ್ಲೋಮಾ, ಏರ್‌ಕ್ರಾಫ್ಟ್ ತಂತ್ರಜ್ಞರ ಹುದ್ದೆಗೆ ನೇಮಕಾತಿ; ಮಾಸಿಕ ರೂ.57,000 ವೇತನ

    HAL India Recruitment 2024: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 160 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಡಿಪ್ಲೊಮಾ ಮತ್ತು ಏರ್‌ಕ್ರಾಫ್ಟ್ ತಂತ್ರಜ್ಞರ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅಖಿಲ ಭಾರತ ಸರ್ಕಾರದಲ್ಲಿ ಉದ್ಯೋಗ ಹುಡುಕಲು ಇಚ್ಛಿಸುವವರು ಅರ್ಜಿ ಸಲ್ಲಿಸಲು ಉತ್ತಮ ಅವಕಾಶ. ಆಸಕ್ತ ಅಭ್ಯರ್ಥಿಗಳು 16-Mar-2024 ರಂದು ಅಥವಾ ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 06-03-2024
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-ಮಾರ್ಚ್-2024
    ಲಿಖಿತ ಪರೀಕ್ಷೆಯ ತಾತ್ಕಾಲಿಕ ದಿನಾಂಕ: 24-ಮಾರ್ಚ್-2024

    ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ;
    ಹುದ್ದೆ ಹೆಸರು: ಡಿಪ್ಲೊಮಾ ಮತ್ತು ವಿಮಾನ ತಂತ್ರಜ್ಞರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ: ಡಿಪ್ಲೊಮಾ ಟೆಕ್ನಿಷಿಯನ್‌ ಗೆ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ 137 ಹುದ್ದೆಗಳು ಖಾಲಿ ಇದೆ. ಮತ್ತು ವಿಮಾನ ತಂತ್ರಜ್ಞರು ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ 23 ಹುದ್ದೆಗಳು ಖಾಲಿ ಇದೆ.

    ವೇತನ: ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.23000-57000/- ವೇತನ ದೊರಕಲಿದೆ.

    ವಿದ್ಯಾರ್ಹತೆ: ಡಿಪ್ಲೊಮಾ ತಂತ್ರಜ್ಞರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಸಿಇ/ಇಇಇ/ಮೆಕ್ಯಾನಿಕಲ್‌ನಲ್ಲಿ ಡಿಪ್ಲೊಮಾ ತೇರ್ಗಡೆ ಹೊಂದಿರಬೇಕು. ಏರ್‌ಕ್ರಾಫ್ಟ್ ಟೆಕ್ನಿಷಿಯನ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ತೇರ್ಗಡೆ ಹೊಂದಿರಬೇಕು.

    ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಗರಿಷ್ಠ ವಯಸ್ಸು 31-ಡಿಸೆಂಬರ್-2023 ರಂತೆ 28 ವರ್ಷಗಳನ್ನು ಮೀರಿರಬಾರದು. OBC-NCL- 03 ವರ್ಷ, SC/ST 05 ವರ್ಷ, PwBD (ಸಾಮಾನ್ಯ) 10 ವರ್ಷ, PwBD (OBC) 13 ವರ್ಷ, PwBD (SC/ST) 15 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ.

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ, ಉದ್ಯೋಗ ಪೂರ್ವ ವೈದ್ಯಕೀಯ ಪರೀಕ್ಷೆ ಪರಿಶೀಲನೆಯ ಮೂಲಕ ಅಭ್ಯರ್ಥಿಗಳನ್ನು ಮೇಲ್ಕಂಡ ಹುದ್ದೆಗೆ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಲಿಂಕ್‌ ಕ್ಲಿಕ್‌ ಮಾಡಿ;

  • GSTAT Recruitment 2024: ಜಿಎಸ್‌ಟಿಎಟಿ ನಲ್ಲಿ ನ್ಯಾಯಾಂಗ, ತಾಂತ್ರಿಕ ಸದಸ್ಯರ ಹುದ್ದೆಗೆ ಅರ್ಜಿ ಆಹ್ವಾನ

    GSTAT Recruitment 2024: ಜಿಎಸ್‌ಟಿಎಟಿ ನಲ್ಲಿ ನ್ಯಾಯಾಂಗ, ತಾಂತ್ರಿಕ ಸದಸ್ಯರ ಹುದ್ದೆಗೆ ಅರ್ಜಿ ಆಹ್ವಾನ

    GSTAT Recruitment 2024: ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (GSTAT) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 96 ಖಾಲಿ ಹುದ್ದೆಗಳಿದ್ದು, ನ್ಯಾಯಾಂಗ ಸದಸ್ಯ, ತಾಂತ್ರಿಕ ಸದಸ್ಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ಹುದ್ದೆ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 31-Mar-2024 ರಂದು ಅಥವಾ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

    ಪ್ರಮುಖ ದಿನಾಂಕಗಳು;
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 19-02-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-03-2024

    ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ.
    ಹುದ್ದೆಯ ವಿವರ:
    ಹುದ್ದೆಯ ಹೆಸರು: ನ್ಯಾಯಾಂಗ ಸದಸ್ಯರು, ತಾಂತ್ರಿಕ ಸದಸ್ಯ (ಕೇಂದ್ರ), ತಾಂತ್ರಿಕ ಸದಸ್ಯ (ರಾಜ್ಯ) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ: ನ್ಯಾಯಾಂಗ ಸದಸ್ಯರು 63, ತಾಂತ್ರಿಕ ಸದಸ್ಯ (ಕೇಂದ್ರ) 32, ತಾಂತ್ರಿಕ ಸದಸ್ಯ (ರಾಜ್ಯ) 1- ಒಟ್ಟು 96 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ: ಮೇಲ್ಕಂಡ ಹುದ್ದೆಗಳಿಗೆ GSTAT ನಿಯಮಗಳ ಪ್ರಕಾರ ಅಭ್ಯರ್ಥಿಗಳು ವಿದ್ಯಾರ್ಹತೆ ಹೊಂದಿರಬೇಕು.

    ವಯೋಮಿತಿ: ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 50 ವರ್ಷಗಳು ಮತ್ತು ಗರಿಷ್ಠ 67 ವರ್ಷಗಳನ್ನು ಮೀರಿರಬಾರದು.

    ವಯೋಮಿತಿ ಸಡಿಲಿಕೆ:
    ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ನಿಯಮಗಳ ಪ್ರಕಾರ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

    ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

    ಆಯ್ಕೆ ಪ್ರಕ್ರಿಯೆ: ಅರ್ಹತೆ, ಅನುಭವ, ವೈಯಕ್ತಿಕ ಸಂವಹನದ ಮೂಲಕ ಅರ್ಹ, ಆಸಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • CBSE Recruitment 2024: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯಿಂದ 118 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಹೆಚ್ಚಿನ ಮಾಹಿತಿ ಇಲ್ಲಿದೆ

    CBSE Recruitment 2024: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯಿಂದ 118 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಹೆಚ್ಚಿನ ಮಾಹಿತಿ ಇಲ್ಲಿದೆ

    CBSE Recruitment 2024: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 118 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಸಹಾಯಕ ಕಾರ್ಯದರ್ಶಿ, ಜೂನಿಯರ್ ಅಕೌಂಟೆಂಟ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಉದ್ಯೋಗದ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 11-Apr-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 12-03-2024
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:11-04-2024

    ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ;
    ಹುದ್ದೆ: ಅಸಿಸ್ಟಂಟ್‌ ಸೆಕ್ರೆಟರಿ (ಆಡಳಿತ ವಿಭಾಗ), ಅಸಿಸ್ಟಂಟ್‌ ಸೆಕ್ರೆಟರಿ (ಶೈಕ್ಷಣಿಕ ವಿಭಾಗ), ಜೂನಿಯರ್‌ ಇಂಜಿನಿಯರ್‌, ಲೆಕ್ಕಿಗ, ಇತರೆ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ:
    ಅಸಿಸ್ಟಂಟ್ ಸೆಕ್ರೇಟರಿ (ಆಡಳಿತ ವಿಭಾಗ ) : 18
    ಅಸಿಸ್ಟಂಟ್ ಸೆಕ್ರೇಟರಿ (ಶೈಕ್ಷಣಿಕ ವಿಭಾಗ ) : 16
    ಅಸಿಸ್ಟಂಟ್ ಸೆಕ್ರೇಟರಿ (ಕೌಶಲ ಶಿಕ್ಷಣ ) : 08
    ಅಸಿಸ್ಟಂಟ್ ಸೆಕ್ರೇಟರಿ (ತರಬೇತಿ) : 22
    ಲೆಕ್ಕಿಗ ಅಧಿಕಾರಿ : 03
    ಜೂನಿಯರ್ ಇಂಜಿನಿಯರ್ : 17
    ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್ : 07
    ಅಕೌಂಟಂಟ್ : 07
    ಜೂನಿಯರ್ ಅಕೌಂಟಂಟ್ : 20
    ಒಟ್ಟು 118 ಹುದ್ದೆಗಳು

    ವೇತನ: ಗ್ರೂಪ್‌ ಎ ಹುದ್ದೆಯಾದ ಅಸಿಸ್ಟಂಟ್‌ ಸೆಕ್ರೆಟರಿ ಹುದ್ದೆಗೆ ವೇತನ ಶ್ರೇಣಿ -10 ಸಂಭಾವನೆ ಇರಲಿದೆ. ಗ್ರೂಪ್‌ ಸಿ ಹುದ್ದೆಗಳಾದ ಲೆಕ್ಕಿಗ ಹುದ್ದೆಗಳಿಗೆ ಪೇ ಲೆವಲ್‌ -4/ಪೇ ಲೆವೆಲ್‌ 2 ಸಂಭಾವನೆ ಸಿಗಲಿದೆ. ಗ್ರೂಪ್‌ ಬಿ ಹುದ್ದೆಗಳಾದ ಜೂನಿಯರ್‌ ಇಂಜಿನಿಯರ್/ಭಾಷಾಂತರ ಅಧಿಕಾರಿ ಹುದ್ದೆಗಳಿಗೆ ಪೇ ಲೆವೆಲ್‌ 6 ಸಂಭಾವನೆ ಇದೆ.

    ವಿದ್ಯಾರ್ಹತೆ: ಮೇಲ್ಕಂಡ ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ, ಪದವಿ ಪಾಸ್‌ ಮಾಡಿರಬೇಕು. ಹಾಗೂ ಕರ್ತವ್ಯದ ಅನುಭವ ಹೊಂದಿರಬೇಕು.

    ಅರ್ಜಿ ಸಲ್ಲಿಸುವುದು ಹೇಗೆ?
    ಈ ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಬೇಕು. ಅಲ್ಲಿ career section ನಲ್ಲಿ ಅರ್ಜಿ ಸಲ್ಲಿಸಬೇಕು.
    ಮಾರ್ಚ್‌ 12 ರಂದು ಆನ್‌ಲೈನ್‌ ಅರ್ಜಿ ಲಿಂಕ್‌ ಬಿಡುಗಡೆ ಆಗಲಿದ್ದು, ಹುದ್ದೆಯ ಕುರಿತ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಅಂದೇ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಬಿಡುಗಡೆ ಮಾಡುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಆ ಸಂದರ್ಭದಲ್ಲಿ ಓದಿ, ಅರ್ಜಿ ಸಲ್ಲಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ
    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ