ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಹಾಯಕ ಕಮಾಂಡೆಟ್ಸ್ ನೇಮಕಾತಿಗಾಗಿ ಸಂಬಂಧಿಸಿದಂತೆ ಕೇಂದ್ರ ಲೋಕ ಸೇವಾ ಆಯೋಗವು ಆಗಸ್ಟ್ 8 ರಂದು ಪರೀಕ್ಷೆ ನಡೆಸಲು ಪ್ರಕಟಣೆ ಹೊರಡಿಸಿದೆ.
ಅಡ್ಮಿಟ್ ಕಾರ್ಡನ್ನು ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ಯುಪಿಎಸ್ ಸಿ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಇ-ಅಡ್ಮಿಟ್ ಕಾರ್ಡ್ ನಲ್ಲಿ ಯಾವುದೇ ಸಮಸ್ಯೆ ಗಳಿದ್ದಲ್ಲಿ ಆಯೋಗಕ್ಕೆ ಇಮೇಲ್ ಮೂಲಕ ತಿಳಿಸಬಹುದು. ಇ- ಮೇಲೆ ವಿಳಾಸ ಇಲ್ಲಿದೆ : [email protected]
ಈ ನೇಮಕಾತಿಯಲ್ಲಿ ಸಿಐಎಸ್ ಎಫ್ ಗೆ 67, ಎಸ್ ಎಸ್ ಬಿ 1, ಸಿಆರ್ ಪಿಎಫ್ ಗೆ 36, ಸಿಐಎಸ್ ಎಫ್ ಗೆ 67 ಮತ್ತು ಐಟಿಬಿಪಿಗೆ 20 ಸೇರಿದಂತೆ ಒಟ್ಟು 159 ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ( ಸಹಾಯಕ ಕಮಾಂಡೆಂಟ್ಸ್) ಪರೀಕ್ಷೆಯ ಅಂತಿಮ ಫಲಿತಾಂಶ ಘೋಷಿಸುವವರೆಗೆ ಇ ಅಡ್ಮಿಟ್ ಕಾರ್ಡ್ ನ್ನು ಸುರಕ್ಷಿತವಾಗಿಡಬೇಕು. ಪರೀಕ್ಷೆಗೆ ಯಾವುದೇ ಪೇಪರ್ ಅಡ್ಮಿಟ್ ಕಾರ್ಡ್ ನೀಡಲಾಗುವುದಿಲ್ಲ.
ಅಭ್ಯರ್ಥಿಗಳು ಪರೀಕ್ಷೆಯ ನಿಗದಿತ ಪ್ರಾರಂಭಕ್ಕೆ 10 ನಿಮಿಷಗಳ ಮೊದಲೇ ಪರೀಕ್ಷಾ ಕೇಂದ್ರ ಪ್ರವೇಶಿಸಬೇಕು. ಅಭ್ಯರ್ಥಿಗಳು ಬೆಳಗಿನ ಸೆಷನ್ ಪರೀಕ್ಷೆಗೆ 9.50 ರೊಳಗೆ ಹಾಜರಿರಬೇಕು. ಎರಡನೇ ಸೆಷನ್ ಪರೀಕ್ಷೆಗೆ ಹಾಜರಾಗಲು ಮಧ್ಯಾಹ್ನ 1.50 ರೊಳಗೆ ಪರೀಕ್ಷಾ ಕೇಂದ್ರವನ್ನು ತಲುಪ ಬೇಕೆಂದು ಸೂಚಿಸಲಾಗಿದೆ. ತಡವಾಗಿ ಪರೀಕ್ಷಾ ಸ್ಥಳಕ್ಕೆ ಪ್ರವೇಶಿಸಲು ಯಾವುದೇ ಅಭ್ಯರ್ಥಿಯನ್ನು ಅನುಮತಿಸಲಾಗುವುದಿಲ್ಲ.
ಬ್ಲಾಕ್ ಬಾಲ್ ಪಾಯಿಂಟ್ ಪೆನ್ ನ್ನು ತರಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ಉತ್ತರ ಪತ್ರಿಕೆ ಮತ್ತು ಹಾಜರಾತಿ ಪಟ್ಟಿಯನ್ನು ಬ್ಲ್ಯಾಕ್ ಬಾಲ್ ಪಾಯಿಂಟ್ ಪೆನ್ನೊಂದಿಗೆ ಮಾತ್ರ ಭರ್ತಿ ಮಾಡಲು ಸೂಚಿಸಲಾಗಿದೆ. ಅಭ್ಯರ್ಥಿಗಳು ಇ – ಅಡ್ಮಿಟ್ ಕಾರ್ಡ್ ಜೊತೆಗೆ ಫೊಟೋ ಐಡಿ ಕಾರ್ಡ್ ನಮೂದಿಸಬೇಕು.
ಪರೀಕ್ಷೆಯು ಲಿಖಿತ ರೂಪದಲ್ಲಿದ್ದು, ಎರಡು ಪತ್ರಿಕೆಗಳು ಇರುತ್ತವೆ. ಪೇಪರ್ -1 ಬಹು ಆಯ್ಕೆ ಪ್ರಶ್ನೆಗಳ ( ಎಂಸಿಕ್ಯೂ) ಆಧಾರದ ಮೇಲೆ ಅಭ್ಯರ್ಥಿಗಳ ಸಾಮಾನ್ಯ ಸಾಮಾರ್ಥ್ಯ ಮತ್ತು ಬುದ್ಧಿವಂತಿಕೆಯನ್ನು ಪರೀಕ್ಷಿಸಲಾಗುತ್ತದೆ. ಇಲ್ಲಿ ಒಟ್ಟು 250 ಅಂಕಗಳನ್ನು ಹೊಂದಿರುವ 200 ಪ್ರಶ್ನೆಗಳನ್ನು ಪೂರ್ಣಗೊಳಿಸಲು ಅಭ್ಯರ್ಥಿಗೆ ಒಟ್ಟು 2 ಗಂಟೆ ಅವಧಿ ಕಾಲಾವಕಾಶ ನೀಡಲಾಗಿದೆ. ಪೇಪರ್ 2 ವಿವರಣಾತ್ಮಕ ಪ್ರಶ್ನೆ ಹೊಂದಿದ್ದು, ಅಭ್ಯರ್ಥಿಯ ಭಾಷಾ ಪ್ರಾವೀಣ್ಯತೆಯನ್ನು ಪರೀಕ್ಷಿಸುತ್ತದೆ.ಇಲ್ಲಿ ಕೂಡಾ 200 ಅಂಕಗಳನ್ನು ಹೊಂದಿರುವ ವಿವರಣಾತ್ಮಕ ಪ್ರಕಾರದ ಪ್ರಶ್ನೆಗಳನ್ನು ಪೂರ್ಣಗೊಳಿಸಲು 3 ಗಂಟೆ ಸಮಯ ಇದೆ.
ಸಾಂವಿಧಾನಿಕ ಮಂಡಳಿಯಾದ ಲೋಕಸೇವಾ ಆಯೋಗಬಯ ( ಯುಪಿಎಸ್ ಸಿ), ಗಡಿ ಭದ್ರತಾ ಪಡೆ ( ಬಿಎಸ್ ಎಫ್), ಕೇಂದ್ರ ಭದ್ರತಾ ಪಡೆ (ಸಿಐಎಸ್ ಎಫ್), ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ( ಐಟಿಬಿಪಿ), ಕೇಂದ್ರ ಮೀಸಲು ಪೊಲೀಸ್ ಸಹಾಯಕ ಕಮಾಂಡೆಂಟ್ ಗಳ ( ಗ್ರೂಪ್ ಎ), ಫೋರ್ಸ್ ( ಸಿಆರ್ಪಿಎಫ್) ಮತ್ತು ಸಶಸ್ತ್ರ ಸೀಮಾ ಪಡೆ ( ಎಸ್ ಎಸ್ ಬಿ) ಅಧಿಕಾರಿಗಳ ಅರ್ಹತೆ ಆಧಾರಿತ ಆಯ್ಕೆಗಾಗಿ ಸಿಎಪಿಎಫ್ ಪರೀಕ್ಷೆಯನ್ನು ನಡೆಸುತ್ತದೆ.