ದಿ ಕ್ಯಾಂಪ್ಕೋ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್, 22 ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.
ಕ್ವಿಕ್ ಲುಕ್
ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 08-03-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-03-2021
ಅರ್ಜಿ ಶುಲ್ಕ: ಜನರಲ್ ಅಭ್ಯರ್ಥಿಗಳಿಗೆ ರೂ.590/- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.295/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕವನ್ನು NEFT ಮೂಲಕ ಸಲ್ಲಿಸಬೇಕು.
ಬ್ಯಾಂಕ್ ಹೆಸರು : Axis bank
Branch : Bunts hostel, Mangalore,bank account no 918030002920451
IFSC Code :UTIB0000077
ಹುದ್ದೆಗಳ ವಿವರ : ಎಕ್ಸಿಕ್ಯುಟಿವ್ ಆಫೀಸರ್ (ಎಚ್ ಆರ್ ಡಿ), ಲಾ ಆಫೀಸರ್ iv, ಅಸಿಸ್ಟೆಂಟ್ ಮೆಕ್ಯಾನಿಕಲ್ ಇಂಜಿನಿಯರ್ (ಮೈಂಟೆನೆಸ್ ವರ್ಕ್ಸ್/ಪ್ರಾಜೆಕ್ಟ್ ಕೋರ್ಡಿನೇಶನ್) ಜ್ಯೂನಿಯರ್ ಇಂಜಿನಿಯರ್ ಗ್ರೇಡ್ 2,ಜ್ಯೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯುಟಿವ್(ಅಕೌಂಟ್ಸ್/ಮಾರ್ಕೆಟಿಂಗ್) ಟ್ರೈನಿ, ಜ್ಯೂನಿಯರ್ ಗ್ರೇಡರ್- ಟ್ರೈನಿ
ದಿ ಕ್ಯಾಂಪ್ಕೋ ಲಿಮಿಟೆಡ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತೆ ಇಲ್ಲ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು NEFT ಪಾವತಿ ವಿಧಾನದ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ : 08-03-2021
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :22-03-2021
ವಯೋಮಿತಿ : ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷ ವಯೋಮಿತಿ ಹೊಂದಿರಬೇಕು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ( 35 ವರ್ಷ)
ಹುದ್ದೆಗಳ ಸಂಖ್ಯೆ : 44
ಎಕ್ಸಿಕ್ಯುಟಿವ್ ಆಫೀಸರ್-1- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಡಿಗ್ರಿ ಇನ್ ಎಚ್ ಆರ್ ಡಿ/ಎಚ್ ಆರ್ ಎಂ/ಎಂಎಸ್ ಡಬ್ಲ್ಯು ಇನ್ ಪರ್ಸನಲ್ ಮ್ಯಾನೆಜ್ಮೆಂಟ್,ಅಥವಾ ಎಂಎಸ್ ಡಬ್ಲ್ಯು ಇನ್ ಎಚ್ ಆರ್ ಡಿಎಂ/ ಎಂಬಿಎ ಇನ್ ಹೆಚ್ ಆರ್ /ಎಂಎ ಇನ್ ಇಂಡಸ್ಟ್ರಿಯಲ್ ರಿಲೇಶನ್ಸ್ ಮತ್ತು ಪರ್ಸನಲ್ ಮ್ಯಾನೇಜ್ಮೆಂಟ್ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅಭ್ಯರ್ಥಿಗಳು ಇದೇ ಫೀಲ್ಡ್ ನಲ್ಲಿ ೪ ವರ್ಷಗಳ ಅನುಭವ ಹೊಂದಿರಬೇಕು.
ಲಾ ಆಫೀಸರ್ -1v -1-ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಡಿಗ್ರಿ ಇನ್ಲ ಲಾ ಪಡೆದಿರಬೇಕು. ಹಾಗೂ ಮರ್ಕಂಟೈಲ್ ನಲ್ಲಿ ೫ ವರ್ಷಗಳ ಅನುಭವ ಹೊಂದಿರಬೇಕು.
ಅಸಿಸ್ಟೆಂಟ್ ಮೆಕ್ಯಾನಿಕಲ್ ಇಂಜಿನಿಯರ್ (ಮೈಂಟೆನೆಸ್/ವರ್ಕ್ಸ್ /ಪ್ರಾಜೆಕ್ಟ್ ಕೋ ಓರ್ಡಿನೇಶನ್)-1- ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿಇ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ನ್ನು ಪ್ರಥಮ ಶ್ರೇಣಿಯಲ್ಲಿ ಪಾಸಾಗಿರಬೇಕು. ಹಾಗೂ ಸಂಬಂಧಿಸಿದ ಹುದ್ದೆಯಲ್ಲಿ ೪ ವರ್ಷಗಳ ಅನುಭವ ಹೊಂದಿರಬೇಕು.
ಜ್ಯೂನಿಯರ್ ಇಂಜಿನಿಯರ್ -1-ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ಹೊಂದಿರಬೇಕು. ಹಾಗೂ ಈ ವೃತ್ತಿಯಲ್ಲಿ ೪ ವರ್ಷಗಳ ಅನುಭವ ಹೊಂದಿರಬೇಕು.
ಜ್ಯೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ( ಅಕೌಂಟ್ಸ್ / ಮಾರ್ಕೆಟಿಂಗ್) -40-ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಡಿಗ್ರಿ /ಬಿಕಾಂ, ಬಿಎಸ್ಸಿ,ಬಿಎ,ಬಿಬಿಎಂ ಜೊತೆಗೆ ಟ್ಯಾಲಿ ಜ್ಞಾನ ಹೊಂದಿರಬೇಕು.
ಜ್ಯೂನಿಯರ್ ಗ್ರೇಡರ್ -10- ಟ್ರೈನಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪಿಯುಸಿ-೧೦+೨ ಪಾಸಾಗಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವೇತನ -ಎಕ್ಸಿಕ್ಯುಟಿವ್ ಆಫೀಸರ್-1- ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 40,900/-ರಿಂದ 78,200/- , ಲಾ ಆಫೀಸರ್ -1v -1 ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 40,900/ ರಿಂದ 78,200/- , ಅಸಿಸ್ಟೆಂಟ್ ಮೆಕ್ಯಾನಿಕಲ್ ಇಂಜಿನಿಯರ್ (ಮೈಂಟೆನೆಸ್/ವರ್ಕ್ಸ್ /ಪ್ರಾಜೆಕ್ಟ್ ಕೋ ಓರ್ಡಿನೇಶನ್)-1- ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.36,000/-ರಿಂದ ರೂ.67,550/- , ಜ್ಯೂನಿಯರ್ ಇಂಜಿನಿಯರ್ -1-ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.30350/ ರಿಂದ 58250/-, ಜ್ಯೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ( ಅಕೌಂಟ್ಸ್ / ಮಾರ್ಕೆಟಿಂಗ್) -40- ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಟ್ರೈನಿಂಗ್ ನಲ್ಲಿ ಮೊದಲ ಒಂದು ವರ್ಷ ರೂ.12,000/- ಹಾಗೂ ಇನ್ನೊಂದು ವರ್ಷ ರೂ.14,000/- ಹಾಗೂ ಎರಡು ವರ್ಷಗಳ ತರಬೇತಿಯ ನಂತರ ತಿಂಗಳಿಗೆ ರೂ.27,650/- ರಿಂದ ರೂ.52,650/- ನಿಗದಿಯಾಗಿರುತ್ತದೆ
ಜ್ಯೂನಿಯರ್ ಗ್ರೇಡರ್ -10-ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಟ್ರೈನಿಂಗ್ ನಲ್ಲಿ ಮೊದಲ ಒಂದು ವರ್ಷ ರೂ.8,000/- ಹಾಗೂ ಇನ್ನೊಂದು ವರ್ಷ ರೂ.9,000/- ಹಾಗೂ ಎರಡು ವರ್ಷಗಳ ತರಬೇತಿಯ ನಂತರ ತಿಂಗಳಿಗೆ ರೂ.18,600/- ರಿಂದ ರೂ.32,600/- ನಿಗದಿಯಾಗಿರುತ್ತದೆ.
ಹುದ್ದೆ ಸ್ಥಳ : ಎಕ್ಸಿಕ್ಯುಟಿವ್ ಆಫೀಸರ್ – ಹೆಡ್ ಆಫೀಸ್ ಮಂಗಳೂರು
ಲಾ ಆಫೀಸರ್ – ಹೆಡ್ ಆಫೀಸ್ ಮಂಗಳೂರು
ಅಸಿಸ್ಟೆಂಟ್ ಮೆಕ್ಯಾನಿಕಲ್ ಇಂಜಿನಿಯರ್ (ಮೈಂಟೆನೆಸ್/ವರ್ಕ್ಸ್ /ಪ್ರಾಜೆಕ್ಟ್ ಕೋ ಓರ್ಡಿನೇಶನ್)- ಪುತ್ತೂರು / ಮಂಗಳೂರು
ಜ್ಯೂನಿಯರ್ ಇಂಜಿನಿಯರ್- ಹೆಡ್ ಆಫೀಸ್ ಮಂಗಳೂರು
ಜ್ಯೂನಿಯರ್ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ( ಅಕೌಂಟ್ಸ್ / ಮಾರ್ಕೆಟಿಂಗ್) – ಇಂಡಿಯಾದ ಯಾವುದೇ ಸ್ಥಳದಲ್ಲಿ
ಜ್ಯೂನಿಯರ್ ಗ್ರೇಡರ್ – ಇಂಡಿಯಾದ ಯಾವುದೇ ಸ್ಥಳದಲ್ಲಿ
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ