ಸಿಎಬಿಎಸ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

Advertisements

ಸೆಂಟರ್ ಫಾರ್ ಎರ್ ಬೋರ್ನ್ ಸಿಸ್ಟಮ್ಸ್ (ಸಿಎಬಿಎಸ್), ಡಿಫಿನ್ಸ್‌ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಓ) ರಕ್ಷಣಾ ಮಂತ್ರಾಲಯ ಇಲ್ಲಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಸಬಹುದು.

ಹುದ್ದೆ : ಸಿವಿಲಿಯನ್ ಮೆಡಿಕಲ್ ಆಫೀಸರ್ ಹುದ್ದೆಗಾಗಿ ಅರ್ಹ ವೈದ್ಯರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ( ಗುತ್ತಿಗೆ ಆಧಾರದ ಮೇಲೆ)

ಹುದ್ದೆ ಸಂಖ್ಯೆ – 01

ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.55,೦೦೦/- ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ : ಕೆಎಂಸಿ/ಐಎಂಸಿ ನೋಂದಣಿಯೊಂದಿಗೆ ಎಂಬಿಬಿಎಸ್‌, ಏವಿಯೇಷನ್‌ ಮೆಡಿಸಲನ್‌ನಲ್ಲಿ ಅಪೇಕ್ಷಣೀಯ ಪಿಜಿ ಡಿಪ್ಲೋಮಾ/ಡಿಗ್ರಿ ಪಡೆದಿರಬೇಕು.

ಕಾರ್ಯಾನುಭವ : ಕ್ಲಿನಿಕ್/ ಆಸ್ಪತ್ರೆಯಲ್ಲಿ ವೈಯಕ್ತಿಕ ಸಾಮರ್ಥ್ಯದಲ್ಲಿ ಒಬ್ಬ ಆರ್‌ಎಂಪಿಯಾಗಿ ಕನಿಷ್ಠ 5 ವರ್ಷಗಳ ಅನುಭವವಿರಬೇಕು.
ಸ್ಥಳೀಯ ಭಾಷೆ ಕನ್ನಡ ಬಲ್ಲವರಾದ ಬೆಂಗಳೂರಿಗರಿಗೆ ಆದ್ಯತೆ.

‍‍‍‍‍‍‍‍‍‍ಷರತ್ತುಗಳು :

a.ಹುದ್ದೆಯು ಕೇವಲ ಗುತ್ತಿಗೆ ಆಧಾರಿತವಾಗಿರುತ್ತದೆ.
b.ಎನ್‌ಪಿಎ ಮತ್ತು ಇತರೆ ಭತ್ಯೆಗಳು ಸ್ವೀಕಾರ್ಹವಲ್ಲ.
c.ನೇಮಕಾತಿಯ ಅವಧಿ ಕೆಲಸ ಕೈಗೆತ್ತಿಕೊಂಡ ದಿನದಿಂದ ಒಂದು ವರ್ಷ ಅಥವಾ ಸಿಎಬಿಎಸ್‌ಗೆ ಖಾಯಂ ಹುದ್ದೆಗಾರ ದೊರೆಯುವವರೆಗೆ ಯಾವುದು ಮೊದಲೋ ಅದರನ್ವಯ
d.ಹುದ್ದೆಗೆ ಆಯ್ಕೆಯಾದ ಅಧಿಕಾರಿಯು ಮುಂದೊಮ್ಮೆ ಖಾಯಂ ಸರಕಾರಿ ಸೇವೆಗೆ ಆಯ್ಕೆಯಾದಲ್ಲಿ ಸೇವಾ ಹಿರಿತನ ಅಥವಾ ಯಾವುದೇ ಅನ್ವಯ ಸವಲತ್ತುಗಳಿಗೆ ಅರ್ಹರಾಗುವುದಿಲ್ಲ.
e.ನೇಮಕಾತಿಯು ನವದೆಹಲಿಯ ಡಿಆರ್‌ಡಿಒ ಕೇಂದ್ರ ಕಚೇರಿಯ ಅನುಮೋದನೆಗೆ ಒಳಪಟ್ಟಿರುತ್ತದೆ.
f.ಕೆಲಸದ ವೇಳೆ ( ರಜಾದಿನ ಬಿಟ್ಟು ) ಸೋಮವಾರದಿಂದ ಶುಕ್ರವಾರ 8.30 ಗಂಟೆಯಿಂದ 05.೦೦ ಗಂಟೆಯವರಿಗೆ. ಶನಿವಾರ/ಭಾನುವಾರ (ತುರ್ತು ಅಥವಾ ಕರೆಯ ಮೇರೆಗೆ)
g.ಅರ್ಹ ಅಭ್ಯರ್ಥಿಗಳು ಹೆಸರು, ತಂದೆ/ಗಂಡನ ಹೆಸರು, ಜನ್ಮದಿನಾಂಕ, ಸಂವಹನ ವಿಳಾಸ, ವಿದ್ಯಾರ್ಹತೆ ಅನುಭವ ವಿವರ, ದೂರವಾಣಿ ಸಂಖ್ಯೆ ಮತ್ತು ಇಮೇಲ್ ವಿಳಾಸದೊಂದಿಗೆ ಕೆಎಂಸಿ/ಐಎಂಸಿ ನೋಂದಣಿಯನ್ನು ಒಂದು ಬಿಳಿಯ ಹಾಳೆಯ ಮೇಲೆ ಅರ್ಜಿಯನ್ನು ಬೆರಳಚ್ಚು ಮಾಡಿಸಿ ಮತ್ತು ಪೂರಕ ಪ್ರಮಾಣಪತ್ರ/ಯೋಗ್ಯತಾ ಪತ್ರಗಳ ಸ್ವ ದೃಢೀಕೃತ ನಕಲು ಪ್ರತಿಗಳನ್ನು ನಿರ್ದೇಶಕರು, ಸಿಎಬಿಎಸ್, ವಿಂಡ್ ಟೆನಲ್ ರಸ್ತೆ, ಬೇಲೂರು,ಯಮಲೂರು ಅಂಚೆ, ಬೆಂಗಳೂರು -560037 ಗೆ ಈ ಜಾಹೀರಾತು ಪ್ರಕಟವಾದ 30 ದಿನದೊಳಗಾಗಿ ಸಲ್ಲಿಸಬೇಕು. ಲಕೋಟೆಯ ಮೇಲೆ ‘ಸಿವಿಲಿಯನ್ ಮೆಡಿಕಲ್ ಆಫೀಸರ್- ಗುತ್ತಿಗೆ ಹುದ್ದೆಗಾಗಿ ಅರ್ಜಿ’ ಎಂದು ಸೂಪರ್‌ಸ್ಕ್ರೈಬ್ಡ್ ಆಗಿರಬೇಕು.

ಸಿಎಬಿಎಸ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ 2

Leave a Comment