ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣ ಹಾಗೂ ಗ್ರಾಹಕರ ವ್ಯವಹಾರ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಪ್ರಮಾಣೀಕರಣ ಸಂಸ್ಥೆ ( ಬಿಐಎಸ್) ದೇಶದ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ ಆಗಿದೆ.
ಉತ್ಪನ್ನ ಪ್ರಮಾಣ ಪತ್ರ ನೀಡುವುದು, ಆಭರಣ ಪ್ರಮಾಣೀಕರಣ, ಪ್ರಯೋಗಾಲಯದ ಪರೀಕ್ಷೆ ಇತ್ಯಾದಿ ಪ್ರಮುಖ ಕೆಲಸಗಳನ್ನು ಬಿಐಎಸ್ ಕಂಪನಿ ನಿರ್ವಹಿಸುತ್ತದೆ.
ಇಲ್ಲಿ ಪ್ರಸ್ತುತ ವಿವಿಧ ವಿಭಾಗ ಮತ್ತು ವರ್ಗಗಳಲ್ಲಿ ಸೈಂಟಿಸ್ಟ್ ಬಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ : ಸಿವಿಲ್ ಇಂಜಿನಿಯರಿಂಗ್ – 13
ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್- 02
ಎನ್ವಾರ್ನ್ಮೆಂಟಲ್ ಇಂಜಿನಿಯರಿಂಗ್- 02
ಕೆಮಿಸ್ಟ್ರಿ – 07
ಟೆಕ್ಸ್ ಟೈಲ್ ಇಂಜಿನಿಯರಿಂಗ್ – 04
ಒಟ್ಟು ಹುದ್ದೆಗಳು : 28
ವಯೋಮಿತಿ : ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10. ವರ್ಷಗಳ ವಯೋಮಿತಿ ಸಡಿಲಿಕೆ ಕೇಂದ್ರ ಸರಕಾರದ ನಿಯಮಾನುಸಾರ ಅನ್ವಯವಾಗಲಿದೆ.
ಅಭ್ಯರ್ಥಿಗಳನ್ನು 2019, 2020, 2021 ನೇ ಸಾಲಿನಲ್ಲಿ ಗಳಿಸಿದ ಗೇಟ್ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 05-06-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-06-2021
ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ