BSF Recruitment 2024: ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 82 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೆಳಗೆ ನೀಡಲಾದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಯನ್ನು ಆಯ್ಕೆ ಮಾಡಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು 15-Apr-2024 ಕೊನೆಯ ದಿನಾಂಕವಾಗಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಪ್ರಮುಖ ದಿನಾಂಕಗಳು;
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 16-03-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-04-2024
ಹುದ್ದೆಯ ವಿವರ ಇಲ್ಲಿದೆ;
ಸಂಸ್ಥೆಯ ಹೆಸರು, ಹುದ್ದೆ ಸಂಖ್ಯೆ: ಗಡಿ ಭದ್ರತಾ ಪಡೆ (BSF) ಯಲ್ಲಿ ಒಟ್ಟು 82 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯ ಹೆಸರು: ಸಬ್ ಇನ್ಸ್‌ಪೆಕ್ಟರ್, ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ ಸಂಖ್ಯೆ ಮತ್ತು ವೇತನ;
ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್) 8 ಹುದ್ದೆ – ರೂ.29200-92300 ರೂ. ಮಾಸಿಕ ವೇತನ ಸಿಗಲಿದೆ.
ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್ಪೆಕ್ಟರ್) 11 ಹುದ್ದೆ – ರೂ.29200-92300 ರೂ. ಮಾಸಿಕ ವೇತನ ಸಿಗಲಿದೆ.
SI (Works) 13 ಹುದ್ದೆ – ರೂ.35400-112400 ರೂ. ಮಾಸಿಕ ವೇತನ
SI/JE (Elect) 9 ಹುದ್ದೆ – ರೂ.35400-112400 ರೂ. ಮಾಸಿಕ ವೇತನ
HC (ಪ್ಲಂಬರ್) 1 ಹುದ್ದೆ – ರೂ.25500-ರೂ.81100 ಮಾಸಿಕ ವೇತನ
HC (ಕಾರ್ಪೆಂಟರ್) 1 ಹುದ್ದೆ – ರೂ.25500-ರೂ.81100 ಮಾಸಿಕ ವೇತನ
ಕಾನ್ಸ್ಟೇಬಲ್ (ಜನರೇಟರ್ ಆಪರೇಟರ್) 13 ಹುದ್ದೆ – ರೂ.21700-69100 ರೂ. ಮಾಸಿಕ ವೇತನ
ಕಾನ್ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) 14 ಹುದ್ದೆ – ರೂ.21700-69100 ರೂ. ಮಾಸಿಕ ವೇತನ
ಕಾನ್‌ಸ್ಟೆಬಲ್ (ಲೈನ್‌ಮ್ಯಾನ್) 9 ಹುದ್ದೆ – ರೂ.21700-69100 ರೂ. ಮಾಸಿಕ ವೇತನ
ಕಾನ್ಸ್ಟೇಬಲ್ (ಸ್ಟೋರ್ಮ್ಯಾನ್) 3 ಹುದ್ದೆ – ರೂ.21700-69100 ರೂ. ಮಾಸಿಕ ವೇತನ
ಒಟ್ಟು 82 ಹುದ್ದೆಗಳು
ವಿದ್ಯಾರ್ಹತೆ: ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಸಹಾಯಕ ಸಬ್ ಇನ್‌ಸ್ಪೆಕ್ಟರ್),ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್‌ಸ್ಪೆಕ್ಟರ್),SI (works), SI/JE (elect) – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿ ಡಿಪ್ಲೋಮಾ ಪಾಸಾಗಿರಬೇಕು.
HC (ಪ್ಲಂಬರ್) 10ನೇ, HC (ಕಾರ್ಪೆಂಟರ್)- ITI ತೇರ್ಗಡೆ ಹೊಂದಿರಬೇಕು.
ಕಾನ್ಸ್ಟೇಬಲ್ (ಜನರೇಟರ್ ಆಪರೇಟರ್), ಕಾನ್ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್), ಕಾನ್‌ಸ್ಟೆಬಲ್ (ಲೈನ್‌ಮ್ಯಾನ್), ಕಾನ್‌ಸ್ಟೆಬಲ್ (ಸ್ಟೋರ್‌ಮ್ಯಾನ್) ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿರಬೇಕು.
ವಯೋಮಿತಿ:
ಸಹಾಯಕ ಏರ್‌ಕ್ರಾಫ್ಟ್ ಮೆಕ್ಯಾನಿಕ್ (ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್), ಸಹಾಯಕ ರೇಡಿಯೋ ಮೆಕ್ಯಾನಿಕ್ (ಸಹಾಯಕ ಸಬ್-ಇನ್ಸ್‌ಪೆಕ್ಟರ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 28 ವರ್ಷ ಮೀರಿರಬಾರದು.
SI (Works), SI/JE (ELect)- ಅಭ್ಯರ್ಥಿಗಳ ವಯೋಮಿತಿಯು 30 ವರ್ಷ ಮೀರಿರಬಾರದು.
HC (ಪ್ಲಂಬರ್), HC (ಕಾರ್ಪೆಂಟರ್),ಕಾನ್ಸ್ಟೇಬಲ್ (ಜನರೇಟರ್ ಆಪರೇಟರ್), ಕಾನ್ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್), ಕಾನ್‌ಸ್ಟೆಬಲ್ (ಲೈನ್‌ಮ್ಯಾನ್)- ವಯೋಮಿತಿಯು 18-25 ವರ್ಷ.
ಕಾನ್‌ಸ್ಟೆಬಲ್ (ಸ್ಟೋರ್‌ಮ್ಯಾನ್) – ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿಯು 20-25 ವರ್ಷದೊಳಗಿರಬೇಕು.
ಗಡಿ ಭದ್ರತಾ ಪಡೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.
ಅರ್ಜಿ ಶುಲ್ಕ:
Gen/OBC/EWS ಅಭ್ಯರ್ಥಿಗಳು: ರೂ.1000/- ಅರ್ಜಿ ಶುಲ್ಕ ಪಾವತಿ ಮಾಡಬೇಕು. SC/ST/ESM/ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ. ಆನ್‌ಲೈನ್ ಮೂಲಕ ಮಾತ್ರವೇ ಅರ್ಜಿ ಶುಲ್ಕ ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ