BPNL Recruitment 2024: ಪಶುಪಾಲನಾ ನಿಗಮದಲ್ಲಿ 1125 ಹುದ್ದೆಗಳಿಗೆ ಅರ್ಜಿ ಆಹ್ವಾನ; 10th ಪಾಸಾದವರು ಅರ್ಜಿ ಸಲ್ಲಿಸಿ

Advertisements

BPNL Recruitment 2024: 1125 ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 1125 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೆಂಟರ್ ಅಸಿಸ್ಟೆಂಟ್, ಸೆಂಟರ್ ಎಕ್ಸ್‌ಟೆನ್ಶನ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 21-Mar-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕೆಂದು ಆನ್‌ಲೈನ್‌ನಲ್ಲಿ ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 10-03-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-03-2024

ಹುದ್ದೆಯ ಕುರಿತು ಮಾಹಿತಿ ಇಲ್ಲಿದೆ
ಹುದ್ದೆ ಹೆಸರು: ಸೆಂಟರ್ ಅಸಿಸ್ಟೆಂಟ್, ಸೆಂಟರ್ ಎಕ್ಸ್‌ಟೆನ್ಶನ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು, ಒಟ್ಟು 1125 ಹುದ್ದೆಗಳು ಖಾಲಿ ಇದೆ.

ವೇತನ: ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.37,500-ರೂ.43,500 ವೇತನ ನಿಗದಿಪಡಿಸಲಾಗಿದೆ.
ಸೆಂಟರ್‌ ಇನ್‌ ಚಾರ್ಜ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.43,500, ಸೆಂಟರ್‌ ಎಕ್ಸ್‌ಟೆಂಶನ್ ಆಫೀಸರ್‌ ಹುದ್ದೆಗೆ ರೂ.40500/- ಮಾಸಿಕ ವೇತನ, ಸೆಂಟರ್‌ ಅಸಿಸ್ಟೆಂಟ್‌ ಹುದ್ದೆಗೆ ಆಯ್ಕೆಯಾದವರಿಗೆ ರೂ.37,500/- ವೇತನ ನಿಗದಿಪಡಿಸಲಾಗಿದೆ.

ಹುದ್ದೆ ಸಂಖ್ಯೆ;
ಸೆಂಟರ್‌ ಇನ್‌ ಚಾರ್ಜ್‌-125 ಹುದ್ದೆಗಳು, ಸೆಂಟರ್‌ ಎಕ್ಸ್‌ಟೆಂಶನ್‌ ಆಫೀಸರ್‌ -250 ಹುದ್ದೆಗಳು, ಸೆಂಟರ್‌ ಅಸಿಸ್ಟೆಂಟ್‌ -750 ಹುದ್ದೆಗಳು ಖಾಲಿ ಇದೆ.

ವಿದ್ಯಾರ್ಹತೆ: ಸೆಂಟರ್‌ ಇನ್‌ ಚಾರ್ಜ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿಯನ್ನು ಪಡೆದಿರಬೇಕು. ಸೆಂಟರ್‌ ಎಕ್ಸ್‌ಟೆಂಶನ್‌ ಆಫೀಸರ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು 12th ಪಾಸಾಗಿರಬೇಕು, ಸೆಂಟರ್‌ ಅಸಿಸ್ಟೆಂಟ್‌ ಹುದ್ದೆಗೆ 10th ಪಾಸಾದವರು ಅರ್ಜಿ ಸಲ್ಲಿಸಬಹುದು

ವಯೋಮಿತಿ: ಸೆಂಟರ್‌ ಇನ್‌ ಚಾರ್ಜ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 21-40 ವರ್ಷದೊಳಗಿರಬೇಕು. ಸೆಂಟರ್‌ ಎಕ್ಸ್‌ಟೆಂಶನ್‌ ಆಫೀಸರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 21-40 ವರ್ಷದೊಳಗಿರಬೇಕು.
ಸೆಂಟರ್‌ ಅಸಿಸ್ಟೆಂಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 18-40 ವರ್ಷದೊಳಗಿರಬೇಕು.
ವಯೋಮಿತಿ ಸಡಿಲಿಕೆಯನ್ನು ನಿಯಮಾನುಸಾರ ನೀಡಲಾಗುತ್ತದೆ.

ಅರ್ಜಿ ಶುಲ್ಕ: ಸೆಂಟರ್‌ ಇನ್‌ ಚಾರ್ಜ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ.944 ಅರ್ಜಿ ಶುಲ್ಕ ಪಾವತಿ ಮಾಡಬೇಕು, ಸೆಂಟರ್‌ ಎಕ್ಸ್‌ಟೆಂಶನ್‌ ಆಫೀಸರ್‌ ಹುದ್ದೆಗೆ ರೂ.826 ಅರ್ಜಿ ಶುಲ್ಕ, ಸೆಂಟರ್‌ ಅಸಿಸ್ಟೆಂಟ್‌ ಹುದ್ದೆಗೆ ರೂ.708 ಅರ್ಜಿ ಶುಲ್ಕ ಪಾವತಿ ಮಾಡಬೇಕು. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರವೇ ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ