ಬೆಂಗಳೂರು ಮೆಟ್ರೋ ರೈಲು ನಿಗಮ ಮಂಡಳಿಯು ( ಬಿಎಂಆರ್ ಸಿ ಎಲ್ ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. 37 ಸಹಾಯಕರು ಸೆಕ್ಯುರಿಟಿ ಅಧಿಕಾರಿ ( ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 18-10-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-11-2021
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ( ಪೋಸ್ಟ್ ಆಫೀಸ್ / post( ಮೂಲಕ ಅರ್ಜಿ ಹಾಕಬೇಕು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾದ ಮಾಹಿತಿ ಇಲ್ಲಿದೆ :
ಹುದ್ದೆಯ ಹೆಸರು : ಸಹಾಯಕ ಭದ್ರತಾ ಅಧಿಕಾರಿ
ಒಟ್ಟು ಹುದ್ದೆಗಳು : 37
ಸ್ಥಳ : ಬೆಂಗಳೂರು
ವಯೋಮಿತಿ : 62 ವರ್ಷ
ಸಂಬಳ : ಮಾಸಿಕ ರೂ.30,000
ಆಯ್ಕೆ ಪ್ರಕ್ರಿಯೆ : ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ : ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಅರ್ಹತೆ : ಮೆಟ್ರೋ ನಿಲ್ದಾಣಗಳು, ಡಿಪೋಗಳಲ್ಲಿ ಭದ್ರತೆ ಮತ್ತು ಇತರೆ ಸಂಬಂಧಿತ ಕೆಲಸಗಳನ್ನು ನೋಡಿಕೊಳ್ಳಲು ಬಿಎಂಆರ್ ಸಿಎಲ್ ನ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದಲ್ಲಿ ಭದ್ರತಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಬೇಕು.
ಸೆಕ್ಯುರಿಟಿ ಕ್ಷೇತ್ರದಲ್ಲಿ ಅನುಭವ ಹೊಂದಿರುವ ನಿವೃತ್ತ ಸಿಬ್ಬಂದಿಯಾಗಿರಬೇಕು.
ಕರ್ನಾಟಕ ಸರಕಾರದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರಬೇಕು.
ಸೈನ್ಯ, ವಾಯುಪಡೆ ಮತ್ತು ಸೆಂಟ್ರಲ್ ಪೊಲೀಸ್ ಸಶಸ್ತ್ರ ಪಡೆಗಳಲ್ಲಿ ನಿವೃತ್ತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುಬೇದಾರ್ ಆಗಿರಬೇಕು.
ಬಿಎಂ ಆರ್ ಸಿ ಎಲ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಆಫ್ ಲೈನ್/ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಈ ಕೆಳಗಿನ ವಿಳಾಸಕ್ಕೆ ಲಕೋಟೆಯಲ್ಲಿ ” ಸಹಾಯಕ ಭದ್ರತಾ ಅಧಿಕಾರಿಯ ಹುದ್ದೆಗೆ ಅರ್ಜಿ” ಎಂದು ನಮೂದಿಸಿ ಕಳುಹಿಸಬೇಕು. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 17/11/2021 ಸಂಜೆ 4 ಗಂಟೆ.
ವಿಳಾಸ : General Manager ( HR )
Bangalore Metro Rail Corporation Limited
||| rd Floor, BMTC Complex, K.H.Road, Shantinagar, Bangalore – 560027
ನೋಟಿಫಿಕೇಶನ್