ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್‌ಸಿಎಲ್) ವು ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಹುದ್ದೆ ವಿವರ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಈ ಕೆಳಗಿನಂತಿದೆ.
ಹುದ್ದೆ : ನಮ್ಮ ಮೆಟ್ರೋನಲ್ಲಿ ಪ್ರಧಾನ ವ್ಯವಸ್ಥಾಪಕರು (ಎಫ್&ಎ) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನುನ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-04-2021ಸಂಜೆ 4.00 ಗಂಟೆಯವರೆಗೆ
ಹುದ್ದೆ ಸಂಖ್ಯೆ : 01
ವಯೋಮಿತಿ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 55 ವಯಸ್ಸು ಮೀರಿರಬಾರದು.
ವಿದ್ಯಾಭ್ಯಾಸ : ಅಭ್ಯರ್ಥಿಗಳು ಅಂಗೀಕೃತ ಯುನಿವರ್ಸಿಟಿಯಿಂದ ಗ್ರಾಜ್ಯುಯೇಟ್ ಇನ್ ಕಾಮರ್ಸ್ ನ್ನು ಪಡೆದಿರಬೇಕು. ಪ್ರೊಫೆಷನಲ್ ಕ್ವಾಲಿಫಿಕೇಶನ್ ಗಳಾದ ಚಾರ್ಟೆಡ್ ಅಕೌಂಟೆಂಟ್(ಸಿಎ)/ ಕಾಸ್ಟ್ ಅಕೌಂಟೆಂಟ್(ಐಸಿಡ್ಬ್ಯುಎ)/ಎಂಬಿಎ(ಪೂರ್ಣ ಅವಧಿ) ಯಲ್ಲಿ ಫೈನಾನ್ಸ್ ಹೊಂದಿರಬೇಕು.
ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 1,40,000/- ಮಾಸಿಕ ವೇತನ ನಿಗದಿಯಾಗಿರುತ್ತದೆ.
ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಎಪ್ರಿಲ್ 20-04-2021 ಸಂಜೆ 4.00 ಗಂಟೆಯೊಳಗೆ ಸಲ್ಲಿಸಬೇಕು.
ವಿಳಾಸ ಈ ಕೆಳಗಿನಂತಿದೆ:
General Manager (HR&T),Bangalore Metro Rail Corportion Limited,3rd Floor, BMTC Complex,K.H. Road, Shanthinagar, Bangalore-560027
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಆನ್ಲೈನ್ ಅಪ್ಲಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ