ಬಿಎಂಆರ್ ಸಿ ಎಲ್ ( ಬ್ಯಾಂಗಲೋರ್ ಮೆಟ್ರೋ ರೈಲ್ ಕೋರ್ಪರೇಷನ್ ಲಿಮಿಟೆಡ್ ) ನಲ್ಲಿ ವಿವಿಧ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, 22, ಮಾರ್ಚ್ 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಒಟ್ಟು ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಶುಲ್ಕ ಇತ್ಯಾದಿ ವಿವರಗಳನ್ನು ಮುಂದೆ ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ? ಆಫ್ ಲೈನ್ ಮೂಲಕ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23-02-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-03-2021
ಅರ್ಜಿ ಸಲ್ಲಿಕೆ : ನಮ್ಮ ಮೆಟ್ರೋ
ನಲ್ಲಿರುವ ಹುದ್ದೆಗಳಿಗೆ ಆಫ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
ನಮ್ಮ ಮೆಟ್ರೋ ದಲ್ಲಿ ಒಟ್ಟು 06 ಹುದ್ದೆಗಳು ಖಾಲಿ ಇದ್ದು ಚೀಫ್ ಇಂಜಿನಿಯರ್, ಮ್ಯಾನೇಜರ್, ಡಿಜಿಎಂ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ : ಚೀಫ್ ಇಂಜಿನಿಯರ್ (ಎಸ್ & ಟಿ)-01 ( ಮುಖ್ಯ ಇಂಜಿನಿಯರ್), ಚೀಫ್ ಎಲೆಕ್ಟ್ರಿಕಲ್ ಇಂಜಿನಿಯರ್(ಇ&ಎಂ)-01( ಮುಖ್ಯ ಎಲೆಕ್ಟ್ರಿಕಲ್ ಇಂಂಜಿನಿಯರ್), ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್ ಮೈನ್ಟೆನೆಸ್)-01, ಡೆಪ್ಯುಟಿ ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್ ಮೈನ್ಟೆನೆಸ್)-01, ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಸ್ & ಟಿ) -01, ಡೆಪ್ಯುಟಿ ಜನರಲ್ ಮ್ಯಾನೇಜರ್ (ಸ್ಟೋರ್)-01
ವಿದ್ಯಾರ್ಹತೆ : ಅಭ್ಯರ್ಥಿಗಳು ಯಾವುದೇ ಅಂಗೀಕೃತ ಸಂಸ್ಥೆ/ ಬೋರ್ಡ್ ನಿಂದ ಡಿಗ್ರಿ ಇನ್ ಇಂಜಿನಿಯರಿಂಗ್ ನ್ನು ಹೊಂದಿರಬೇಕು.
ವಯೋಮಿತಿ : ಚೀಫ್ ಇಂಜಿನಿಯರ್ (ಎಸ್ & ಟಿ) ಚೀಫ್ ಎಲೆಕ್ಟ್ರಿಕಲ್ ಇಂಜಿನಿಯರ್(ಇ&ಎಂ) ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್ ಮೈನ್ಟೆನೆಸ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ 50 ವಯೋಮಿತಿ ಹೊಂದಿರಬೇಕು.
ಡೆಪ್ಯುಟಿ ಜನರಲ್ ಮ್ಯಾನೇಜರ್ (ರೋಲಿಂಗ್ ಸ್ಟಾಕ್ ಮೈನ್ಟೆನೆಸ್) , ಡೆಪ್ಯುಟಿ ಜನರಲ್ ಮ್ಯಾನೇಜರ್ (ಎಸ್ & ಟಿ) , ಡೆಪ್ಯುಟಿ ಜನರಲ್ ಮ್ಯಾನೇಜರ್ (ಸ್ಟೋರ್) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 45 ವಯೋಮಿತಿ ಹೊಂದಿರಬೇಕು.
ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್‌ಲೋಡ್ ಮಾಡಿ , ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ದಿನಾಂಕ 15-03-2021 ರೊಳಗೆ ಸ್ಪೀಡ್ ಪೋಸ್ಟ್, ರಿಜಿಸ್ಟರ್ ಪೋಸ್ಟ್ ಅಥವಾ ಬೇರೆ ರೀತಿಯಲ್ಲಿ ಸಲ್ಲಿಸಬೇಕು.
ವಿಳಾಸ : General Manager (HR& taxation), Bangalore Metro Rail Corporation Limited, 3rd Floor, BMTC Complex, KH Road Shantinagara,Bengaluru- 560027
ಹೆಚ್ವಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.
ನೋಟಿಫಿಕೇಶನ್ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ