ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಒಂದು ನವರತ್ನ ಕಂಪನಿ ಮತ್ತು ರಕ್ಷಣಾ ಮಂತ್ರಾಲಯದ ಅಧೀನ ಭಾರತದ ಪ್ರಮುಖ ವೃತ್ತಿಪರ ಎಲೆಕ್ಟ್ರಾನಿಕ್ಸ್ ಕಂಪನಿಗೆ ಬೆಂಗಳೂರು ಸಂಕೀರ್ಣದಲ್ಲಿ ಗುತ್ತಿಗೆಯ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ : ಶಿಕ್ಷಣಾರ್ಥಿ ಇಂಜಿನಿಯರ್- 1 –
ಯೋಜನೆ ಇಂಜಿನಿಯರ್ – 1
ವಿದ್ಯಾರ್ಹತೆ : ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ / ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಶನ್ / ಟೆಲಿಕಮ್ಯುನಿಕೇಶನ್/ ಕಮ್ಯೂನಿಕೇಶನ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ನ ಇಂಜಿನಿಯರಿಂಗ್ ವಿಷಯದಲ್ಲಿ ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪೂರ್ಣಕಾಲಿಕ ಬಿ.ಇ/ಬಿ.ಟೆಕ್ ಇಂಜಿನಿಯರಿಂಗ್ ಪಡೆದಿರಬೇಕು.
ಹುದ್ದೆಗಳ ಸಂಖ್ಯೆ : ಶಿಕ್ಷಣಾರ್ಥಿ ಇಂಜಿನಿಯರ್ -1 – 308 ಹುದ್ದೆಗಳು. ವೇತನ : 1 ನೇ ವರ್ಷ – ರೂ.25,000/-
2 ನೇ ವರ್ಷ – ರೂ.28,000/-
3 ನೇ ವರ್ಷ – ರೂ. 31,000/-
ಯೋಜನೆ ಇಂಜಿನಿಯರ್ -1 – 203 ಹುದ್ದೆಗಳು. 1 ನೇ ವರ್ಷ ರೂ.35,000/-, 2 ನೇ ವರ್ಷ : ರೂ.40,000/-, 3 ನೇ ವರ್ಷ : ರೂ.45,000/-, 4 ನೇ ವರ್ಷ : ರೂ.50,000/-
ಹುದ್ದೆ ಸ್ಥಳ : ಬೆಂಗಳೂರು
ವಯೋಮಿತಿ : ಶಿಕ್ಷಣಾರ್ಥಿ ಇಂಜಿನಿಯರ್ ಹುದ್ದೆಗೆ ಅಭ್ಯರ್ಥಿಗಳ ವಯೋಮಿತಿಯು ಗರಿಷ್ಠ 25 ವರ್ಷ, ಹಾಗೂ ಯೋಜನೆ ಇಂಜಿನಿಯರ್ ಹುದ್ದೆಗೆ ಗರಿಷ್ಠ 28 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ :ಶಿಕ್ಷಣಾರ್ಥಿ ಇಂಜಿನಿಯರ್ ಹುದ್ದೆಗೆ ಜನರಲ್,ಇಡಬ್ಲ್ಯುಎಸ್, ಒಬಿಸಿ ಅಭ್ಯರ್ಥಿಗಳು ರೂ.500/- ಅರ್ಜಿ ಶುಲ್ಕವನ್ನು ಪಾವತಿಸಬೇಕು. ಯೋಜನೆ ಇಂಜಿನಿಯರ್ ಹುದ್ದೆಗೆ ಜನರಲ್, ಇಡಬ್ಲ್ಯುಎಸ್, ಒಬಿಸಿ ಅಭ್ಯರ್ಥಿಗಳು ರೂ.200/- ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-08-2021
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು www.bel-india.in ಗೆ ಭೇಟಿ ನೀಡಬಹುದು.