ಬೆಳಗಾಂ ಕಂಟೋನ್ಮೆಂಟ್ ಬೋರ್ಡ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಕೂಡಲೇ ಅರ್ಜಿ ಸಲ್ಲಿಸಿ

Advertisements

ಬೆಳಗಾಂ ಕಂಟೋನ್ಮೆಂಟ್ ಬೋರ್ಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿವರಗಳನ್ನು ಓದಿ, ಅರ್ಜಿ ಸಲ್ಲಿಸಬಹುದು.

ಹುದ್ದೆ : ಚೌಕಿದಾರ್ (ಕಾವಲುಗಾರ)-01
ಸಫಾವ್ ವಾಲಾ ( ಕ್ಲೀನಿಂಗ್)-08
ವೈಯರ್ ಮ್ಯಾನ್ -01
ಪ್ರೈಮರಿ ಅಸಿಸ್ಟೆಂಟ್ ಟೀಚರ್(ಮರಾಠಿ ಮೀಡಿಯಂ)-01
ದ್ವಿತೀಯ ದರ್ಜೆ ಸಹಾಯಕ- 01
ಸ್ಟೆನೋಗ್ರಾಫರ್ -01

ವಯೋಮಿತಿ: ಚೌಕಿದಾರ್, ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಗರಿಷ್ಠ 28 ವಯಸ್ಸಾಗಿರಬೇಕು.
ಸಫಾಯ್ ವಾಲಾ, ವೈಯರ್ ಮ್ಯಾನ್,ದ್ವಿತೀಯ ದರ್ಜೆ ಸಹಾಯಕ, ಸ್ಟೆನೋಗ್ರಾಫರ್ ಹುದ್ದೆಗೆ ಗರಿಷ್ಠ 25 ವಯೋಮಿತಿ ಹೊಂದಿರಬೇಕು.
ಪ್ರೈಮರಿ ಅಸಿಸ್ಟೆಂಟ್ ಟೀಚರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಗರಿಷ್ಠ 30 ವಯಸ್ಸಾಗಿರಬೇಕು.

ವಿದ್ಯಾರ್ಹತೆ :
ಚೌಕಿದಾರ್, ಸಫಾಯಿವಾಲಾ ಹುದ್ದೆಗೆ 7ನೇ ತರಗತಿ ಪಾಸಾಗಿರಬೇಕು.
ವೈಯರ್ ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಎಸ್ ಎಸ್ ಎಲ್ ಸಿ, ಐಟಿಐ ಪಾಸಾಗಿರಬೇಕು,ಒಂದು ವರ್ಷ ಅಪ್ರೆಂಟಿಸ್ ತರಬೇತಿ ಪಡೆದಿರಬೇಕು. ಪ್ರೈಮರಿ ಟೀಚರ್ ಹುದ್ದೆಗೆ ಪಿಯುಸಿ, ಡಿ.ಇಡಿ ಅಥವ ಪದವಿ, ಬಿ.ಇಡಿ ಪಾಸ್ ಮಾಡಿರಬೇಕು. ಹಾಗೂ ಟಿಇಟಿ ಅರ್ಹತೆ ಹೊಂದಿರಬೇಕು.
ದ್ವಿತೀಯ ದರ್ಜೆ ಹುದ್ದೆಗೆ ಪಿಯುಸಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಸ್ಟೆನೋಗ್ರಾಫರ್ ಹುದ್ದೆಗೆ ಪಿಯುಸಿ, ಸೀನಿಯರ್ ಶಾರ್ಟ್ ಹ್ಯಾಂಡ್, ಸೀನಿಯರ್ ಟೈಪಿಂಗ್ ಅರ್ಹತೆ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19-03-2021

ವೇತನ : ಹುದ್ದೆಗಳಿಗನುಸಾರವಾಗಿ ತಿಂಗಳಿಗೆ ರೂ.17,000/- ರಿಂದ ರೂ.52650/- ನಿಗದಿಯಾಗಿರುತ್ತದೆ.

ಅಭ್ಯರ್ಥಿಗಳು ಈ ಕೆಳಗಿನ ವಿಳಾಸಕ್ಕೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸ್ಪೀಡ್ ಪೋಸ್ಟ್ /ರಿಜಿಸ್ಟರ್ ಪೋಸ್ಟ್ ಮುಖಾಂತರ ಸಲ್ಲಿಸಬೇಕು.

ಕಚೇರಿ ವಿಳಾಸ : chief executive officer,
Contonment board,
B.C.No.41,Khanapur Road,Camp,Belagavi-590001

ನೋಟಿಫಿಕೇಶನ್ ಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ

Leave a Comment