BEL Jobs: ಬಿಇಎಲ್‌ ಕಂಪನಿಯಲ್ಲಿ 59 ಹುದ್ದೆಗಳ ನೇಮಕಾತಿ- ಕಂಪ್ಲೀಟ್‌ ವಿವರ ಇಲ್ಲಿದೆ

Advertisements

BEL Recruitment 2024: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 59 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗಳ ಪೋಸ್ಟಿಂಗ್ ಕಾರವಾರ – ಗುವಾಹಟಿ, ಬೆಂಗಳೂರು-ಗುವಾಹಟಿ ಸರ್ಕಾರದಲ್ಲಿ ನಡೆಯಲಿದೆ. ಹಿರಿಯ ಸಹಾಯಕ ಇಂಜಿನಿಯರ್‌ ಹುದ್ದೆಗಳು, ಹಾಗೂ ಫೀಲ್ಡ್‌ ಆಪರೇಷನ್‌ ಇಂಜಿನಿಯರ್‌, ಸೀನಿಯರ್‌ ಫೀಲ್ಡ್‌ ಆಪರೇಷನ್‌ ಹುದ್ದೆಗಳು ಖಾಲಿ ಇದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 13-March-2024 ಹಾಗೂ 20-Mar-2024 ರಂದು ಅಥವಾ ಮೊದಲು ಆನ್‌ಲೈನ್‌, ಹಾಗೂ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:
ಫೀಲ್ಡ್‌ ಆಪರೇಷನ್‌ ಇಂಜಿನಿಯರ್‌- 29ಹುದ್ದೆಗಳು, ಸೀನಿಯರ್‌ ಫೀಲ್ಡ್‌ ಆಪರೇಷನ್‌ ಇಂಜಿನಿಯರ್‌ ಹುದ್ದೆಗಳು – 6 ಖಾಲಿ ಇದ್ದು, ಒಟ್ಟು 35 ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರು-ಗುವಾಹಟಿ ಪೋಸ್ಟಿಂಗ್‌ ಮಾಡಲಾಗುವುದು.
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 28-02-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-03-2024
ಫೀಲ್ಡ್‌ ಅಪರೇಷನ್‌ ಇಂಜಿನಿಯರ್‌ ಹುದ್ದೆಗೆ ಅರ್ಜಿ ಸಲ್ಲುಸವವರು ಆನ್‌ಲೈನ್‌ ಮೂಲಕ ಅಲ್ಲಿ ನೀಡಲಾದ ವೆಬ್‌ಸೈಟ್‌ ಲಿಂಕ್‌ ಮೂಲಕ, ಕೇಳಿದ ಮಾಹಿತಿಯನ್ನು ಭರ್ತಿ ಮಾಡಿ, ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬೇಕು.

ಹಿರಿಯ ಸಹಾಯಕ ಇಂಜಿನಿಯರ್‌ ಹುದ್ದೆಗಳು ಖಾಲಿ ಇದ್ದು, ಒಟ್ಟು 24 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾರವಾರ-ಗುವಾಹಟಿಯಲ್ಲಿ ಪೋಸ್ಟಿಂಗ್‌ ಆಗಲಿದೆ. ಹಿರಿಯ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಸ್ವಯಂ ದೃಢೀಕರಿಸಿದ ದಾಖಲೆಯೊಂದಿಗೆ, Assistant Manager-Human Resources, Bharat Electronics Limited, Military Communication & NWCS – SBU, Jalahalli Post, Bengaluru – 560013 ಇಲ್ಲಿಗೆ ತಲುಪುವಂತೆ 20-Mar-2024 ರೊಳಗ ಅರ್ಜಿ ಸಲ್ಲಿಸಬೇಕು.

ಒಟ್ಟು 59 ಹುದ್ದೆಗಳು ಖಾಲಿ ಇದೆ.

ವೇತನ: ಹಿರಿಯ ಫೀಲ್ಡ್ ಆಪರೇಷನ್ ಇಂಜಿನಿಯರ್ ರೂ.80000/-, ಫೀಲ್ಡ್ ಆಪರೇಟಿಂಗ್ ಇಂಜಿನಿಯರ್ ರೂ.60000/- ಸೀನಿಯರ್‌ ಅಸಿಸ್ಟೆಂಟ್‌ ಇಂಜಿನಿಯರ್‌ ಹುದ್ದೆಗೆ ರೂ.30000-120000/- ವೇತನವಿರಲಿದೆ.

ವಯೋಮಿತಿ: ಹಿರಿಯ ಫೀಲ್ಡ್ ಆಪರೇಷನ್ ಇಂಜಿನಿಯರ್ 45 ವರ್ಷ ಗರಿಷ್ಠ, ಫೀಲ್ಡ್ ಆಪರೇಷನ್ ಇಂಜಿನಿಯರ್ 40 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿದೆ.
OBC (NCL) ಅಭ್ಯರ್ಥಿಗಳು: 03 ವರ್ಷಗಳು, SC/ST ಅಭ್ಯರ್ಥಿಗಳು: 05 ವರ್ಷಗಳು, PwBD ಅಭ್ಯರ್ಥಿಗಳು: 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನಿಯಮಾನುಸಾರ ನೀಡಲಾಗಿದೆ. ಸೀನಿಯರ್‌ ಅಸಿಸ್ಟೆಂಟ್‌ ಇಂಜಿನಿಯರ್‌ ಹುದ್ದೆಗೆ 50 ವರ್ಷಗಳ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಇಲ್ಲಿ OBC ಅಭ್ಯರ್ಥಿಗಳು: 03 ವರ್ಷಗಳು, SC/ST ಅಭ್ಯರ್ಥಿಗಳು: 05 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ: ಹಿರಿಯ ಫೀಲ್ಡ್ ಆಪರೇಷನ್ ಇಂಜಿನಿಯರ್, ಫೀಲ್ಡ್ ಆಪರೇಷನ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವವರ ಅರ್ಜಿ ಶುಲ್ಕ ಈ ರೀತಿ ಇದೆ
SC/ST/PwBD ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡುವಂತಿಲ್ಲ. ಇತರ ಎಲ್ಲಾ ಅಭ್ಯರ್ಥಿಗಳು: ರೂ.450/- ಅರ್ಜಿ ಶುಲ್ಕ ಪಾವತಿ ಮಾಡಬೇಕು. SBI ಕಲೆಕ್ಟ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ