ಭಾರತೀಯ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಮತ್ತು ಭಾರತದ ಪ್ರಥಮ ವೃತ್ತಿಪರ ಎಲೆಕ್ಟ್ರಾನಿಕ್ಸ್ ಸಾರ್ವಜನಿಕ ವಲಯದ ನವರತ್ನ ಕಂಪನಿ ಆಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಬೆಂಗಳೂರು, ಕಾರ್ಖಾನೆಯಲ್ಲಿ ಶಿಶಿಕ್ಷು ಕಾಯಿದೆ 1961 ರ ಅಡಿಯಲ್ಲಿ 2021-22 ನೇ ಸಾಲಿನ ಅವಧಿಗೆ ಅಪ್ರೆಂಟಿಶಿಪ್ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021
ಹುದ್ದೆಗಳ ವಿವರ : ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಇಲೆಕ್ಟ್ರೀಷಿಯನ್, ಮೆಶಿನಿಸ್ಟ್, ಟರ್ನರ್, ಡ್ರಾಫ್ಟ್ ಮೆನ್ ಮೆಕ್ಯಾನಿಕ್, ಎಲೆಕ್ಟ್ರೋ ಪ್ಲಾಟರ್, ಮೆಕ್ಯಾನಿಕ್ ಶೈತ್ಯೀಕರಣ ಮತ್ತು ಹವಾನಿಯಂತ್ರಣ ( ಎಮ್ ಆರ್ & ಎಸಿ), ಕಂಪ್ಯೂಟರ್ ಅಪರೇಟರ್ ಪ್ರೊಗ್ರಾಮಿಂಗ್ ಅಸಿಸ್ಟೆಂಟ್ ( ಕೋಪಾ), ವೆಲ್ಡರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ 01-01-2018 ರಂದು ಅಥವಾ ನಂತರ ಐಟಿಐ ಪಾಸಾಗಿರಬೇಕು.
ಅಭ್ಯರ್ಥಿಗಳು ಎನ್ ಸಿವಿಟಿ / ಎಸ್ ಸಿವಿಟಿ ಮಂಡಳಿಗಳು ನೀಡಿದ ಐಟಿಐ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.
ವಯಸ್ಸಿನ ಮಿತಿ : 21 ವರ್ಷಗಳು. ಎಸ್ ಸಿ/ ಎಸ್ ಟಿ ವರ್ಗಕ್ಕೆ 5 ವರ್ಷ, ಒಬಿಸಿ ವರ್ಗಕ್ಕೆ 3 ವರ್ಷಗಳ ವಯಸ್ಸಿನ ಮಿತಿಯಲ್ಲಿ ವಿನಾಯಿತಿ ನೀಡಲಾಗುವುದು. ಮತ್ತು ಕನಿಷ್ಠ 40% ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ 10 ವರ್ಷಗಳ ವಿನಾಯಿತಿ ನೀಡಲಾಗುವುದು.
ಬೇರೆ ಯಾವುದೇ ಸಂಸ್ಥೆಯಲ್ಲಿ ಈಗಾಗಲೇ ಅಪ್ರೆಂಟಿಸ್ ಶಿಪ್ ತರಬೇತಿ ಪಡೆಯುತ್ತಿರುವವರು ತರಬೇತಿಗಾಗಿ ನೋಂದಾಯಿಸಿಕೊಂಡ ಅಭ್ಯರ್ಥಿಗಳು ಅರ್ಹರಲ್ಲ.
ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹರು.
ಆಯ್ಕೆ ಪ್ರಕ್ರಿಯೆ : ಎಸ್ ಎಸ್ ಎಲ್ ಸಿ/ 10 ನೇ ತರಗತಿ ಮತ್ತು ಐಟಿಐ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅಂತಿಮ ಆಯ್ಕೆಯ ಫಲಿತಾಂಶವನ್ನು ಬಿಇಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಅಥವಾ ಪ್ರಮಾಣ ಪತ್ರಗಳ ಪರಿಶೀಲನೆಯ ದಿನಾಂಕದಂದು ತತಕ್ಷಣ ಆಯ್ಕೆಯ ಪತ್ರವನ್ನು ನೀಡಲಾಗುವುದು. ಅಥವಾ ಎಸ್ ಎಂಎಸ್ / ಇ- ಮೇಲ್ ಮೂಲಕ ತಿಳಿಸಲಾಗುವುದು.
ಆಸಕ್ತ ಅಭ್ಯರ್ಥಿಗಳು ಕೆಳಗೆ ತಿಳಿಸಲಾದ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಜೊತೆಗೆ 10/ನೇ / ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್, ಐಟಿಐ ಮಾರ್ಕ್ಸ್ ಕಾರ್ಡ್, ಜಾತಿಪ್ರಮಾಣ ಪತ್ರ( ಅನ್ವಯಿಸಿದ್ದರೆ ) ಮತ್ತು ಆಧಾರ್ ಕಾರ್ಡ್ ಗಳನ್ನು ಲಗತ್ತಿಸಬೇಕು.
ವಿಳಾಸ : Deputy Manager ( HR/CLD), centre for learning and development, Bharat Electronics Limited, Jalahalli post, Bengaluru-560013
ಹೆಚ್ಚಿನ ವಿವರಗಳು ಹಾಗೂ ಸ್ಪಷ್ಟೀಕರಣಗಳಿಗಾಗಿ ದಯವಿಟ್ಟು ಸಂಪರ್ಕಿಸಿ , ಇ – ಮೇಲ್: [email protected] ಅಥವಾ 080-22195323
ಹೆಚ್ಚಿನ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ