Teachers Jobs: ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ ರೂ.25,100 ವೇತನ, ಈ ಕೂಡಲೇ ಅರ್ಜಿ ಸಲ್ಲಿಸಿ

Advertisements

BEEI Recruitment 2024: ಬಿಇಎಲ್‌ ಶಿಕ್ಷಣ ಸಂಸ್ಥೆಯು ತನ್ನ ಬಿಇಇಐ ಸಂಸ್ಥೆಯ ಮೂಲಕ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 37 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬಿಇಇಐ ತನ್ನ ಅಧಿಕೃತ ಅಧಿಸೂಚನೆಯಲ್ಲಿ ಖಾಲಿ ಇರುವ ಶಿಕ್ಷಕರ, ಕಚೇರಿ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 23-Apr-2024 ರಂದು ಅಥವಾ ಮೊದಲು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 12-04-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-04-2024

ಹುದ್ದೆಯ ಕುರಿತ ವಿವರ ಇಲ್ಲಿದೆ;
ಸಂಸ್ಥೆಯ ಹೆಸರು: BEL ಶೈಕ್ಷಣಿಕ ಸಂಸ್ಥೆ (BEEI) ಮೂಲಕ ಒಟ್ಟು ಖಾಲಿ ಇರುವ 37 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಬೆಂಗಳೂರು ಕರ್ನಾಟಕ ಸರಕಾರದಲ್ಲಿ ಈ ಪೋಸ್ಟಿಂಗ್‌ ನಡೆಯಲಿದೆ. ಶಿಕ್ಷಕ, ಕಚೇರಿ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.16250-25100/- ವೇತನ ದೊರಕಲಿದೆ.

ಹುದ್ದೆ ಹೆಸರು ಮತ್ತು ಸಂಖ್ಯೆ:
ನರ್ಸರಿ ಶಿಕ್ಷಕ- 1 ಹುದ್ದೆ
ಪ್ರಾಥಮಿಕ ಶಿಕ್ಷಕ – 18 ಹುದ್ದೆಗಳು
ಉಪನ್ಯಾಸಕರು (ಪಿಯು)- 3 ಹುದ್ದೆಗಳು
ಸ್ನಾತಕೋತ್ತರ ಶಿಕ್ಷಕರು – 3 ಹುದ್ದೆಗಳು
ಉಪನ್ಯಾಸಕರು (FGC) – 3 ಹುದ್ದೆಗಳು
ಸಹ-ವಿದ್ವತ್ ಶಿಕ್ಷಕರು – 5 ಹುದ್ದೆಗಳು
ಸಹಾಯಕ ಆಡಳಿತಾಧಿಕಾರಿ – 1 ಹುದ್ದೆ
ಕಛೇರಿ ಸಹಾಯಕ – 3 ಹುದ್ದೆಗಳು

ಶೈಕ್ಷಣಿಕ ಅರ್ಹತೆ:
ನರ್ಸರಿ ಶಿಕ್ಷಕ- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪಾಸ್‌ ಮಾಡಿರಬೇಕು.
ಪ್ರಾಥಮಿಕ ಶಿಕ್ಷಕ – ಈ ಹುದ್ದೆಗೆ ಅರ್ಜಿ ಸಲ್ಲಿಸುವವರು B.A, B.Sc, BCA, M.A, M.Sc, MCA ಆದವರು ಅರ್ಜಿ ಸಲ್ಲಿಸಿ
ಉಪನ್ಯಾಸಕರು (ಪಿಯು) ಮತ್ತು ಸ್ನಾತಕೋತ್ತರ ಶಿಕ್ಷಕ ಹುದ್ದೆಗೆ ಸ್ನಾತಕೋತ್ತರ ಪದವಿ, ಬಿ.ಎಡ್ ಮಾಡಿದವರು ಅರ್ಜಿ ಸಲ್ಲಿಸಬಹುದು.
ಉಪನ್ಯಾಸಕರು (FGC) ಸ್ನಾತಕೋತ್ತರ ಈ ಹುದ್ದೆಗೆ ಪದವಿ, M.A, M.E ಅಥವಾ M.Tech, MCA ಆದವರು ಅರ್ಜಿ ಸಲ್ಲಿಸಿ
ಸಹ-ವಿದ್ವತ್ ಶಿಕ್ಷಕರು ಹುದ್ದೆಗೆ B.F.A, B.Lib, MA, M.Lib ಮಾಡಿದವರು ಅರ್ಜಿ ಸಲ್ಲಿಸಿ
ಸಹಾಯಕ ಆಡಳಿತ ಅಧಿಕಾರಿ ಹುದ್ದೆಗೆ ಸ್ನಾತಕೋತ್ತರ ಪದವಿ, MBA ಆದವರು ಅರ್ಜಿ ಸಲ್ಲಿಸಿ
ಕಚೇರಿ ಸಹಾಯಕ ಹುದ್ದೆಗೆ ಡಿಪ್ಲೊಮಾ ಆದವರು ಅರ್ಜಿ ಸಲ್ಲಿಸಿ.

ವಯೋಮಿತಿ: BEEI ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಅಭ್ಯರ್ಥಿಗಳು ಹೊಂದಿರಬೇಕು BEL ಶಿಕ್ಷಣ ಸಂಸ್ಥೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವೇತನ (ಮಾಸಿಕ): ನರ್ಸರಿ ಟೀಚರ್ ರೂ.18700/-
ಪ್ರಾಥಮಿಕ ಶಿಕ್ಷಕ, ಉಪನ್ಯಾಸಕರು (ಪಿಯು)- .21350/-
ಸ್ನಾತಕೋತ್ತರ ಶಿಕ್ಷಕರು ರೂ.23100/-
ಉಪನ್ಯಾಸಕರು (FGC) ರೂ.24200/-
ಸಹ-ವಿದ್ವತ್ ಶಿಕ್ಷಕರು, ಸಹಾಯಕ ಆಡಳಿತಾಧಿಕಾರಿ – ರೂ.25100/-
ಕಚೇರಿ ಸಹಾಯಕ ಹುದ್ದೆಗೆ ರೂ.16,250 ವೇತನ ಮಾಸಿಕವಾಗಿ ನಿಗದಿಪಡಿಲಾಗಿದೆ.

ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬೇಕು.
ವಿಳಾಸ:
Secretary, BEEI, BEL High School Building, Jalahalli P.O, Bengaluru-560013 23-Apr-2024 ಅಥವಾ ಮೊದಲು ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ