BECIL : 567 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

Advertisements

ಬ್ರಾಡ್ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (ಬಿಇಸಿಐಎಲ್) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಅರ್ಜಿ ಸಲ್ಲಿಸಲು ದಿನಾಂಕ 24-05-2021 ಕೊನೆಯ ದಿನಾಂಕ ವಾಗಿದ್ದು ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ:

ಹುದ್ದೆ : ತನಿಖಾಧಿಕಾರಿ – 350 ಹುದ್ದೆಗಳು
ಮೇಲ್ವಿಚಾರಕರು – 145 ಹುದ್ದೆಗಳು
ಕಿರಿಯ ಡೊಮೇನ್ ತಜ್ಞರು -25 ಹುದ್ದೆಗಳು
ಹಿರಿಯ ಡೊಮೇನ್ ತಜ್ಞರು -19 ಹುದ್ದೆಗಳು
ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ( ಎಂಟಿಎಸ್)-16 ಹುದ್ದೆಗಳು ಸಬ್ಜೆಕ್ಟ್
ಮ್ಯಾಟರ್ ಎಕ್ಸ್ ಪರ್ಟ್ (ಎಸ್ ಎಂಇ) -05 ಹುದ್ದೆಗಳು
ಯುವ ವೃತ್ತಿಪರರು – 05 ಹುದ್ದೆಗಳು
ಸಿಸ್ಟಮ್ ಅನಾಲಿಸಿಸ್ -02 ಹುದ್ದೆಗಳು

ವಿದ್ಯಾರ್ಹತೆ : ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಮೆಟ್ರಿಕ್ಯುಲೇಷನ್,ಎಂಸಿಎ/ಎಂಟೆಕ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.

ವಯೋಮಿತಿ : ಕನಿಷ್ಠ 40 ರಿಂದ 64 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 15,000/- ರಿಂದ ರೂ. 80,000/- ರವರೆಗೆ ವೇತನವಿರುತ್ತದೆ.

ಲಿಖಿತ ಪರೀಕ್ಷೆ ಹಾಗೂ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿದಾರರು ರೂ.955/- ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಅಂಗವಿಕಲ/ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು ರೂ.670/- ನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave a Comment