BECIL (ಬ್ರಾಡ್ ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟಿಂಗ್ ಇಂಡಿಯಾ ಲಿಮಿಟೆಡ್) ಕನ್ಸಲ್ಟಿಂಗ್ ಭಾಷಾ ಸಂಪಾದಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಿದೆ.
ಆಸಕ್ತರು ಈ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಯ ಹೆಸರು – ಸಲಹಾ ಭಾಷಾ ಸಂಪಾದಕರಾಗಿ (ಕನ್ಸಲ್ಟಿಂಗ್ ಲಾಂಗ್ವೇಜ್ ಎಡಿಟರ್)
ಹುದ್ದೆಯ ಸಂಖ್ಯೆ-6.
ತಮಿಳು (1)
ಕನ್ನಡ(1)
ಮರಾಠಿ (1)
ಪಂಜಾಬಿ(1)
ಬೆಂಗಾಲಿ (1)
ಒಡಿಯಾ(1)
ಭಾರತದ ಕಚೇರಿಗಳಲ್ಲಿ ನಿಯೋಜಿಸಲು ಒಪ್ಪಂದದ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸಿದೆ.
ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಫೆಬ್ರವರಿ 12, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
ವಿದ್ಯಾರ್ಹತೆ
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ/ಡಿಪ್ಲೊಮಾ/ಸ್ನಾತಕೋತ್ತರ ಪದವಿ ಹೊಂದಿರಬೇಕು.
ವಯೋಮಿತಿ
BECIL ನೇಮಕಾತಿ ಮಾನದಂಡಗಳ ಪ್ರಕಾರ ಅನ್ವಯವಾಗುತ್ತದೆ.
ಅರ್ಜಿ ಶುಲ್ಕ
ಅರ್ಜಿ ಶುಲ್ಕ ಆನ್ ಲೈನ್ ಮುಖಾಂತರ ಪಾವತಿಸಬೇಕು.
ಜನರಲ್/ಒಬಿಸಿ/ಎಕ್ಸ್ ಸರ್ವಿಸ್ ಮ್ಯಾನ್/ ಮಹಿಳಾ ಅಭ್ಯರ್ಥಿಗಳು ರೂ.750 ನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಇಡ್ಬ್ಯು ಎಸ್/ಪಿಎಚ್ ಅಭ್ಯರ್ಥಿಗಳು ರೂ.450 ನ್ನು ಪಾವತಿಸಬೇಕು.
ಇತರೆ ಅರ್ಹತೆಗಳು
ಟಿ.ವಿ ಅಥವಾ ಪ್ರಿಂಟ್ ಪಬ್ಲಿಕೇಶನ್ ಅಥವಾ ರೇಡಿಯೋನಲ್ಲಿ 5 ವರ್ಷಗಳ ಅನುಭವ. ಎಡಿಟಿಂಗ್, ಫ್ರೂಫ್ ರೀಡಿಂಗ್, ಟ್ರಾನ್ಸ್ ಲೇಶನ್ ಮಾಡಲು ತಿಳಿದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಎಲ್ಲಾ ಅರ್ಹ ಅಭ್ಯರ್ಥಿಗಳು ಫೆಬ್ರವರಿ -2021 ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ಕನ್ಸಲ್ಟೆಂಟ್ ಲಾಂಗ್ವೇಜ್ ಎಡಿಟರ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು
ಹಂತ -1: ಮೊದಲನೆಯದಾಗಿ BECIL ನೇಮಕಾತಿ ಅಧಿಸೂಚನೆ 2021 ಮೂಲಕ ಸಂಪೂರ್ಣವಾಗಿ ಹೋಗಿ ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಇದೆಯೇ ಎಂದು ಖಚಿತಪಡಿಸಿಕೊಳ್ಳಿ
ಹಂತ -2: ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವ ಇದ್ದರೆ ದಾಖಲೆಗಳನ್ನು ಸಿದ್ಧವಾಗಿಡಿ. .
ಹಂತ -3: BECIL ಕನ್ಸಲ್ಟೆಂಟ್ ಭಾಷಾ ಸಂಪಾದಕರು ಆನ್‌ಲೈನ್- ಲಿಂಕ್ ಅನ್ನು ಕ್ಲಿಕ್ ಮಾಡಿ. ಲಿಂಕನ್ನು ಕೆಳಗೆ ನೀಡಲಾಗಿದೆ.
ಹಂತ -4: ಅಗತ್ಯವಿರುವ ಎಲ್ಲ ವಿವರಗಳನ್ನು BECIL ಆನ್‌ಲೈನ್ ಅರ್ಜಿ ನಮೂನೆಯಲ್ಲಿ ನವೀಕರಿಸಿ. ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯವಾಗಿದ್ದರೆ) ಅಗತ್ಯ ಪ್ರಮಾಣಪತ್ರಗಳು / ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.