ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :
ಹುದ್ದೆಯ ಹೆಸರು : ಕಾನೂನು ಅಧಿಕಾರಿ : ಹುದ್ದೆಯ ಸಂಖ್ಯೆ : 03 : ಅರ್ಹತೆ : ಕರ್ನಾಟಕ ನ್ಯಾಯಾಂಗ ಸೇವೆಯಲ್ಲಿ ಕಾರ್ಯನಿರ್ವಹಿಸಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶರು. ಅಥವಾ 2. ಕಾನೂನು ಇಲಾಖೆ ಅಥವಾ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುವ ಸರಕಾರದ ಹೆಚ್ಚುವರಿ ಕಾರ್ಯದರ್ಶಿಗಳ ದರ್ಜೆಗಿಂತ ಕಡಿಮೆಯಿಲ್ಲದ ನಿವೃತ್ತ ಅಧಿಕಾರಿಗಳು. ನಿವೃತ್ತಿ ಹೊಂದಿದ ದಿನಾಂಕದಿಂದ ಐದು ವರ್ಷಗಳು ಮೀರಿರಬಾರದು. ವೇತನ : ಮಾಹೆಯಾನ ರೂ.1,00,000/- ಇತರೆ ಸೌಲಭ್ಯಗಳು : ಕಚೇರಿಯ ಕೆಲಸಕ್ಕಾಗಿ ಸಹಾಯಕ ಸಿಬ್ಬಂದಿಗಳು, ಕಾರು ಮತ್ತು ಚಾಲಕರನ್ನು ಒದಗಿಸಲಾಗುವುದು.
ನೋಡಲ್ ಅಧಿಕಾರಿಗಳು: ಹುದ್ದೆಯ ಸಂಖ್ಯೆ : 07: ಅರ್ಹತೆ : ಕಾನೂನು ಪದವಿಯನ್ನು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿರುವ ಕಾನೂನು ಪದವೀಧರರು/ ಸ್ನಾತಕೋತ್ತರ ಪದವೀಧರರು / ವಕೀಲರು. ಕನಿಷ್ಠ 03 ವರ್ಷ ಅನುಭವ ಹೊಂದಿರಬೇಕು. ವಯಸ್ಸು : ಅರ್ಜಿ ಸಲ್ಲಿಸುವ ದಿನಾಂಕಕ್ಕೆ 45 ವರ್ಷಗಳು ಮೀರಿರಬಾರದು. ವೇತನ : ಮಾಹೆಯಾನ ರೂ.45,000 + 5000 ( ಸಂಭಾವನೆ ಮತ್ತು ದೂರವಾಣಿ ಶುಲ್ಕ + ಭತ್ಯೆ ಸೇರಿ)
ಮೇಲ್ಕಂಡ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 12-07-2021