BBMP Recruitment 2024: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಕೆಳಕಂಡ ಕಾಮಗಾರಿಗಳಿಗೆ ಒಂದು ವರ್ಷಗಳ ಅವಧಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹೆಚ್ ಆರ್ ನೇಮಕಾತಿ ಕುರಿತ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಪ್ರಮುಖ ದಿನಾಂಕಗಳು;
ಅಧಿಸೂಚನೆ ಪ್ರಕಟಗೊಂಡ ದಿನಾಂಕ: 05-03-2024
ಕಚೇರಿಗೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 11-03-2024
ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಮಾಡುವ ದಿನಾಂಕ: 12-03-2024, ಬೆಳಗ್ಗೆ 11.00 ಗಂಟೆಗೆ
ಹುದ್ದೆಗಳ ವಿವರ:
ಎನ್‌ಸಿಡಿ ಯೋಜನೆಗಳಿಗೆ ವಿವಿಧ ವರ್ಗಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳು
ಹುದ್ದೆ: ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ, ಮನೋವೈದ್ಯ, ಕಾರ್ಯಕ್ರಮ ಸಹಾಯಕ/ಡಿಇಓ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಇತರೆ ವಿವರಗಳು: ಮನೋವೈದ್ಯ, ವಿವರ: ವಯೋಮಿತಿ: 35 ವರ್ಷಗಳು
ವಿದ್ಯಾರ್ಹತೆ: 1. ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆಯಲ್ಲಿ ಮನೋವೈದ್ಯದಲ್ಲಿ ಎಂಬಿಬಿಎಸ್, ಎಂಡಿ ಅಥವಾ ಡಿಎನ್‌ಬಿ ಅನುಭಮ ಗಣಕೀಕರಣ ಶಿಕ್ಷಣದ ಜೊತೆಗೆ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಎರಡು ವರ್ಷಗಳ ಅನುಭವ. ಮಾಸಿಕ 1,20,000 ವೇತನ.
ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ, ವಿವರ: ವಯೋಮಿತಿ: <35 ವರ್ಷಗಳು. ಮನೋವೈದ್ಯಕೀಯ ಸಾಮಾಜಿಕ ಸೇವೆಯಲ್ಲಿ ಎಂಎಸ್‌ಡಬ್ಲ್ಯೂ ಅಥವಾ ಎಂ.ಫಿಲ್. 2. ಮನೋವೈದ್ಯಕೀಯ ಸಾಮಾಜಿಕ ಸೇವೆಯಲ್ಲಿ ಪಿಹೆಚ್‌ಡಿ.
ಅನುಭವ: ಗಣಕೀಕರಣ ಶಿಕ್ಷಣದ ಜೊತೆಗೆ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಎರಡು ವರ್ಷಗಳ ಅನುಭವ. ಯೂನಿಟ್ ಶುಲ್ಕ (ರೂ.ಗಳಲ್ಲಿ): ರೂ.27500/- ಮಾಸಿಕ, ಒಂದು ವರ್ಷಮಾತ್ರ: 12 ತಿಂಗಳು
ಕಾರ್ಯಕ್ರಮ ಸಹಾಯಕ/ಡಿಇಓ, ವಿವರ: ವಯೋಮಿತಿ: <35 ವರ್ಷಗಳು
ವಿದ್ಯಾರ್ಹತೆ: ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಬಿಎಸ್‌ಸಿ/ಬಿಎ ಉತ್ತೀರ್ಣ ಮತ್ತು ಸಿ, ಸಿ++, ಜಾವ, ಲಿನಕ್ಸ್, ಎಕ್ಸೆಲ್ ಜ್ಞಾನ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಟೈಪಿಂಗ್ ಅನುಭವ ಹೊಂದಿರಬೇಕು. ಟೈಪಿಂಗ್ ಸ್ಪೀಡ್ ನಿಮಿಷಕ್ಕೆ 40 ಪದಗಳನ್ನು ಟೈಪ್ ಮಾಡುವಷ್ಟಿರಬೇಕು (40ಡಬ್ಲ್ಯೂಪಿಎಂ)
ಅನುಭವ: ಗಣಕೀಕರಣ ಶಿಕ್ಷಣದ ಜೊತೆಗೆ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಎರಡು ವರ್ಷಗಳ ಅನುಭವ. ಯೂನಿಟ್ ಶುಲ್ಕ (ರೂ.ಗಳಲ್ಲಿ): ರೂ.25000/- ಮಾಸಿಕ, ಒಂದು ವರ್ಷಮಾತ್ರ:
ವಿಶೇಷ ಸೂಚನೆ:
ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಮಾಡುವ ದಿನಾಂಕ 12.03.2024, ಬೆಳಿಗ್ಗೆ 11.00 ಗಂಟೆಗೆ. ಅರ್ಜಿಗಳನ್ನು ಯೋಜನಾ ಕಚೇರಿ ಜಿ01, ಅನೆಕ್ಸ್ 3 ಕಟ್ಟಡ, ಬಿಬಿಎಂಪಿ ಪ್ರಧಾನ ಕಛೇರಿಯಿಂದ ಪಡೆಯಬಹುದು ಮತ್ತು ಇತರೆ ವಿವರಗಳನ್ನು ಪ್ರಕಟಣಾ ನೋಟಿಸ್‌ನಲ್ಲಿ ಪರಿಶೀಲಿಸಬಹುದು.