ಬೆಂಗಳೂರಿನಲ್ಲಿ ಆಶಾ ಮೇಲ್ವಿಚಾರಕರ ಹುದ್ದೆಗೆ ನೇರ ಸಂದರ್ಶನ

Advertisements

ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ( ರಿ) ದ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ: ಆಶಾ ಮೇಲ್ವಿಚಾರಕ ಹುದ್ದೆಗಳನ್ನು ಮೆರಿಟ್ ಆಧಾರದ ಮೇಲೆ 01 ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ವಾಕ್ ಇನ್ ಪ್ರಕ್ರಿಯೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವೇತನ : ಮಾಸಿಕ ರೂ.15,600/- ವೇತನ ನಿಗದಿಪಡಿಸಲಾಗಿದೆ.

ಹುದ್ದೆ ಸಂಖ್ಯೆ : 04

ಸಂದರ್ಶನ ದಿನಾಂಕ ಹಾಗೂ ಸಮಯ: 25-06-2021 ರಂದು Naukara Bhavana, BBMP Head Office, N.R. Square, Bengaluru. ಸಮಯ 11-00 ಗಂಟೆ ಬೆಳಿಗ್ಗೆ ಯಿಂದ 04-00 ಗಂಟೆ ಸಾಯಂಕಾಲ ರವರೆಗೆ.

ವಯೋಮಿತಿ : ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಕನಿಷ್ಠ 20 ವರ್ಷಗಳು ಆಗಿರಬೇಕು. ಸಾಮಾನ್ಯ ವರ್ಗ – 35 ವರ್ಷ( ಬಿ), 2ಎ, 2ಬಿ, 3 ಎ, 3ಬಿ – 38 ವರ್ಷ, ಪ.ಜಾತಿ/ ಪ.ಪಂಗಡ, ವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿಯನ್ನು ಮೀರಿರಬಾರದು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 08022110445 ಗೆ ಸಂಪರ್ಕಿಸಬಹುದು.

Leave a Comment