ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ವೇತನ ಇತರ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆ : ಎಂಬಿಬಿಎಸ್ ಡಾಕ್ಟರ್ಸ್ , ಬಿಡಿಎಸ್ ಡಾಕ್ಟರ್ಸ್, ಆಯುಷ್ ಡಾಕ್ಟರ್ಸ್, ಸ್ಟಾಫ್ ನರ್ಸ್ ಫಾರ್ ವ್ಯಾಕ್ಸಿನೇಶನ್, ಸ್ವಾಬ್ ಕಲೆಕ್ಟರ್ಸ್
ಎಂಬಿಬಿಎಸ್ ಡಾಕ್ಟರ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ದಿಂದ ಎಂಬಿಬಿಎಸ್ ನ್ನು ಪಡೆದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.80,000/- ವೇತನವಿರುತ್ತದೆ.
ಬಿಡಿಎಸ್ ಡಾಕ್ಟರ್ಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಅಂಗೀಕೃತ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ದಿಂದ ಬಿಡಿಎಸ್ ಮಾಡಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 60,000/- ವೇತನ ನಿಗದಿಯಾಗಿದೆ.
ಆಯುಷ್ ಡಾಕ್ಟರ್ಸ್ ಹುದ್ದೆಗೆ ಬಿಎಎಂಎಸ್/ಬಿಯುಎಂಎಸ್/ಬಿಎಸ್‌ಎಂಎಸ್/ಬಿಎಚ್‌ಎಂಎಸ್ ಆಯುರ್ವೇದ ಡಿಗ್ರಿಯನ್ನು ಪಡೆದಿರಬೇಕು. ಈ ಹುದ್ದೆ ಮಾಸಿಕ ರೂ. 60,000/- ವೇತನವಿರುತ್ತದೆ.
ಸ್ಟಾಫ್ ನರ್ಸ್ ಫಾರ್ ವ್ಯಾಕ್ಸಿನೇಶನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಎಸ್ಸಿ/ಜಿಎನ್‌ಎಂ/ಡಿಪ್ಲೋಮಾ ನರ್ಸಿಂಗ್ ನ್ನು ರಿಜಿಸ್ಟರ್ಸ್ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಿಂದ ಪಡೆದಿರಬೇಕು. ಈ ಹುದ್ದೆಗೆ ತಿಂಗಳ ರೂ.20,000/- ವೇತನವಿರುತ್ತದೆ.
ಸ್ವಾಬ್ ಕಲೆಕ್ಟರ್ಸ್ ಈ ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ ಹತ್ತನೇ ತರಗತಿ ತೇರ್ಗಡೆ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.19,000/- ವೇತನವಿರುತ್ತದೆ.
ವಯೋಮಿತಿ : ಅಭ್ಯರ್ಥಿಗಳ ವಯೋಮಿತಿಯು 50 ವರ್ಷ ಮೀರಿರಬಾರದು.
ಅಭ್ಯರ್ಥಿಗಳಿಗೆ ಕನ್ನಡ ಮಾತನಾಡಲು, ಬರೆಯಲು ಓದಲು ತಿಳಿದಿರಬೇಕು.
ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಈ ಹುದ್ದೆಯು 3 ತಿಂಗಳ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ.
ವಿಳಾಸ : 3rd Floor South BBMP Zonal Office,Jayangara 2nd Block.
ದಿನಾಂಕ 19-04-2021 ರಿಂದ 21-04-2021
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ನಂಬರನ್ನು ಸಂಪರ್ಕಿಸಿ : 8431816718