BBMP : 78 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Advertisements

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಗೊಳ್ಳಿ ರಾಯಣ್ಣ ಕೋವಿಡ್ ಆಸ್ಪತ್ರೆ, ಬಿಬಿಎಂಪಿ ವಾರ್ಡ್ ನಂ.126, ಜಿಕೆಡ್ಬ್ಲ್ಯು ಲೇಔಟ್, 4 ನೇ ಅಡ್ಡ ರಸ್ತೆ, ಸಂಗೊಳ್ಳಿ ರಾಯಣ್ಣ ಸ್ಟೇಡಿಯಂ ಕಾಂಪ್ಲೆಕ್ಸ್, ಬೆಂಗಳೂರು – 560040 ಕೋವಿಡ್-19 ರೋಗಿಗಳನ್ನು ನಿರ್ವಹಿಸಲು ಅವಶ್ಯವಿರುವ ಅಧಿಕಾರಿ/ ಸಿಬ್ಬಂದಿಗಳ ಹುದ್ದೆಗಾಗಿ 03 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ವಾಕ್- ಇನ್- ಪ್ರಕ್ರಿಯೆ ಮೂಲಕ ಸೇವೆಯನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆ: ಅರಿವಳಿಕೆ ತಜ್ಞ : 4 ಹುದ್ದೆಗಳು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರಿವಳಿಕೆ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಮಾನ್ಯತೆ ಪಡೆದ ಸ್ನಾತಕೋತ್ತರ ಪದವಿ/ ಡಿಪ್ಲೋಮಾ/ ಡಿಎನ್ ಬಿ ಪಡೆದಿರಬೇಕು. ಈ ಹುದ್ದೆಗೆ ಪ್ರತಿ ತಿಂಗಳು ರೂ.1,30,000/- ವೇತನವಿರುತ್ತದೆ.

ಜನರಲ್ ಫಿಸಿಶಿಯನ್ : 3 ಹುದ್ದೆ. ಈ ಹುದ್ದೆಗೆ ಜನರಲ್ ಮೆಡಿಸಿನ್ ನಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಮಾನ್ಯತೆ ಪಡೆದ ಸ್ನಾತಕೋತ್ತರ ಪದವಿ/ ಡಿಎನ್ ಬಿ ಪಡೆದಿರಬೇಕು. ಈ ಹುದ್ದೆಗೆ ಮಾಸಿಕ ರೂ. 1,30,000/- ವೇತನವಿರುತ್ತದೆ.

ಎಂಬಿಬಿಎಸ್ ಡಾಕ್ಟರ್ಸ್ : 20 ಹುದ್ದೆಗಳು. ಈ ಹುದ್ದೆಗೆ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಮಾನ್ಯತೆ ಪಡೆದ ಎಂಬಿಬಿಎಸ್ ಪದವಿ ಪಡೆದಿರಬೇಕು. ಈ ಹುದ್ದೆಗೆ ರೂ.80,000/- ಮಾಸಿಕ ವೇತನ‌ ನಿಗದಿಪಡಿಸಲಾಗಿದೆ.

ಸ್ಟಾಫ್ ನರ್ಸ್ : 40 ಹುದ್ದೆಗಳು. ಈ ಹುದ್ದೆಗೆ ನರ್ಸಿಂಗ್ ನಲ್ಲಿ ಕರ್ನಾಟಕ ನರ್ಸಗ್ ಸಂಸ್ಥೆಯಿಂದ ಮಾನ್ಯತೆ ಪಡೆದ ಬಿಎಸ್ಸಿ/ ಜಿಎನ್ ಎಂ/ ಡಿಪ್ಲೋಮಾ ಪಡೆದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30,000/- ವೇತನವಿರುತ್ತದೆ.

ಉಸಿರಾಟದ ಚಿಕಿತ್ಸಕ : 3 ಹುದ್ದೆಗಳು. ಈ ಹುದ್ದೆಗೆ ಅಭ್ಯರ್ಥಿಗಳು ಉಸಿರಾಟ ಚಿಕಿತ್ಸೆಯಲ್ಲಿ ಬಿಎಸ್ಸಿ ಪದವಿ ಪಡೆದಿರಬೇಕು. ಈ ಹುದ್ದೆಗೆ ಮಾಸಿಕ ರೂ.18,000/- ವೇತನವಿರುತ್ತದೆ.

ಡಾಟಾ ಎಂಟ್ರಿ ಅಪರೇಟರ್ : 3 ಹುದ್ದೆಗಳು. ಅಭ್ಯರ್ಥಿಗಳು ದ್ವಿತೀಯ ಪಿಯುಸಿಯೊಂದಿಗೆ ಕಂಪ್ಯೂಟರ್ ಡಿಪ್ಲೋಮಾ ಪಡೆದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.18,000/- ವೇತನವಿರುತ್ತದೆ.

ಲ್ಯಾಬ್ ಟೆಕ್ನಿಶಿಯನ್: 3 ಹುದ್ದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಡಿಎಂಎಲ್ ಟಿ ಪಡೆದಿರಬೇಕು. ಈ ಹುದ್ದೆಗೆ ಮಾಸಿಕ ರೂ.25,000/- ವೇತನವಿರುತ್ತದೆ.

ಫಾರ್ಮಸಿಸ್ಟ್ :2 ಹುದ್ದೆ. ಈ ಹುದ್ದೆಗೆ ಅಭ್ಯರ್ಥಿಗಳು ಕರ್ನಾಟಕ ಫಾರ್ಮೆಸಿ ಕೌನ್ಸಿಲ್ ನಿಂದ ಮಾನ್ಯತೆ ಪಡೆದ ಡಿ ಫಾರ್ಮಾ. ಬಿ.ಫಾರ್ಮಾ/ ಎಂ ಫಾರ್ಮಾ ಪಡೆದಿರಬೇಕು. ಈ ಹುದ್ದೆಗೆ ಮಾಸಿಕ ರೂ.15,000/- ವೇತನವಿರುತ್ತದೆ.

ಅಭ್ಯರ್ಥಿಗಳು ದಿನಾಂಕ 05-06-2021 ಶನಿವಾರ.

ಸಂದರ್ಶನ ನಡೆಯುವ ಸ್ಥಳ : ದಾಸಪ್ಪ ಮೀಟಿಂಗ್ ಹಾಲ್, 1 ನೇ ಮಹಡಿ, ಟೌನ್ ಹಾಲ್ ಹತ್ತಿರ, ಸಮಯ ಸಂಜೆ 10:00 ರಿಂದ ಸಂಜೆ 4:30 ಗಂಟೆಗೆ

Leave a Comment