Bank Jobs: ಬ್ಯಾಂಕ್‌ ಆಫ್‌ ಬರೋಡಾದಲ್ಲಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

Advertisements

BOB Recruitment 2024: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಸಿಹಿ ಸುದ್ದಿ. ಬ್ಯಾಂಕ್‌ ಆಫ್‌ ಬರೋಡ ತನ್ನ ಅಧಿಕೃತ ಅಧಿಸೂಚನೆಯಲ್ಲಿ ಖಾಲಿ ಇರುವ ಹಲವು ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಫೈರ್‌ ಆಫೀಸರ್‌, ಮ್ಯಾನೇಜರ್‌ ಪೋಸ್ಟ್‌ಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರಕಾರದಲ್ಲಿ ಉದ್ಯೋಗ ಮಾಡಲು ಇಚ್ಛೆ ಪಡುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮಾರ್ಚ್‌,08,2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು;
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 17-02-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-03-2024

ಹುದ್ದೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ;
ಹುದ್ದೆ ಹೆಸರು: ಬ್ಯಾಂಕ್‌ ಬರೋಡ ಅಧಿಸೂಚನೆಯ ಪ್ರಕಾರ, ಅಗ್ನಿಶಾಮಕ ಅಧಿಕಾರಿ, ವ್ಯವಸ್ಥಾಪಕ ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ಸಂಖ್ಯೆ: ಒಟ್ಟು 22 ಹುದ್ದೆಗಳಿಗೆ ಬ್ಯಾಂಕ್‌ ಆಫ್‌ ಬರೋಡ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ಸಂಖ್ಯೆ: ಅಗ್ನಿಶಾಮಕ ಅಧಿಕಾರಿ-2 ಹುದ್ದೆಗಳು, ಮ್ಯಾನೇಜರ್‌ – 10 ಹುದ್ದೆಗಳು, ಸೀನಿಯರ್‌ ಮ್ಯಾನೇಜರ್‌ – 9 ಹುದ್ದೆಗಳು, ಚೀಫ್‌ ಮ್ಯಾನೇಜರ್‌ – 1 ಹುದ್ದೆಗಳು ಖಾಲಿ ಇದೆ. ಒಟ್ಟು 22 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಅಗ್ನಿಶಾಮಕ ಅಧಿಕಾರಿ- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿಟೆಕ್‌,ಡಿಗ್ರಿಯನ್ನು ಪಡೆದಿರಬೇಕು
ಮ್ಯಾನೇಜರ್‌, ಸೀನಿಯರ್‌ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಸಿಎ,ಸಿಎಂಎ, ಮಾಸ್ಟರ್ಸ್‌ ಡಿಗ್ರಿ ಮಾಡಿರಬೇಕು.
ಚೀಫ್ ಮ್ಯಾನೇಜರ್‌ ಹುದ್ದೆಗೆ ಎಂಬಿಎ, ಪೋಸ್ಟ್‌ ಗ್ರಾಜ್ಯುಯೇಷನ್‌ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಅಗ್ನಿಶಾಮಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 22, ಗರಿಷ್ಠ 35 ಮೀರರಬಾರದು. ಮ್ಯಾನೇಜರ್‌ ಹುದ್ದೆಗೆ ಕನಿಷ್ಠ ವಯೋಮಿತಿ 24, ಗರಿಷ್ಠ ವಯೋಮಿತಿ 35, ಸೀನಿಯರ್‌ ಮ್ಯಾನೇಜರ್‌ ಹುದ್ದೆಗೆ ಕನಿಷ್ಠ 26 ವರ್ಷ, ಗರಿಷ್ಠ 40 ವರ್ಷ, ಚೀಫ್‌ ಮ್ಯಾನೇಜರ್‌ ಹುದ್ದೆಗೆ ಕನಿಷ್ಠ 28 ವರ್ಷ, ಗರಿಷ್ಠ 40 ವರ್ಷ ಮೀರದವರು ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ. ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

ಅರ್ಜಿ ಶುಲ್ಕ: SC/ST/PWD/ ಮಹಿಳಾ ಅಭ್ಯರ್ಥಿಗಳಿಗೆ ರೂ.100, General/EWS/OBC ಅಭ್ಯರ್ಥಿಗಳು: Rs.600/- ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.

ವೇತನ: ಅಗ್ನಿಶಾಮಕ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.36,000-63,840ರೂ. ವೇತನ, ಮ್ಯಾನೇಜರ್‌ ಹುದ್ದೆಗೆ ರೂ.48 ,170-ರೂ.69,180 ವೇತನ, ಸೀನಿಯರ್‌ ಮ್ಯಾನೇಜರ್‌ ಹುದ್ದೆಗೆ ರೂ.63,840-78,230/- ರೂ ವೇತನ, ಚೀಫ್‌ ಮ್ಯಾನೇಜರ್‌ ಹುದ್ದೆಗೆ ರೂ.76,010-ರೂ.89,890 ವೇತನ ಸಿಗಲಿದೆ.

ಅಗ್ನಿಶಾಮಕ ಅಧಿಕಾರಿ ಹುದ್ದಗೆ ಅರ್ಜಿ ಸಲ್ಲಿಸುವವರು ಈ ನೋಟಿಫಿಕೇಶನ್‌ ಮೇಲೆ ಕ್ಲಿಕ್ ಮಾಡಿ
ಮ್ಯಾನೇಜರ್, ಹಿರಿಯ ವ್ಯವಸ್ಥಾಪಕ ಹುದ್ದೆಯ ನೋಟಿಫಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಗ್ನಿಶಾಮಕ ಅಧಿಕಾರಿ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ
ಮ್ಯಾನೇಜರ್, ಹಿರಿಯ ವ್ಯವಸ್ಥಾಪಕ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ