ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ: ನೇಮಕ ಪ್ರಕಟಣೆ

Advertisements

ಮಹಾತ್ಮಾ ಗಾಂಧಿ‌ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ ಖಾತರಿ ಯೋಜನೆಯಡಿ ಬೆಂಗಳೂರು ನಗರ ಪಂಚಾಯಿತಿ ವ್ಯಾಪ್ತಿಯಲ್ಲಿಈ ಕೆಳಕಂಡ ಹುದ್ದೆಗಳಿಗೆ 11 ತಿಂಗಳ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ: ತಾಂತ್ರಿಕ ಸಹಾಯಕರು (ಅರಣ್ಯ)-01, ತಾಂತ್ರಿಕ ಸಹಾಯಕರು ( ತೋಟಗಾರಿಕೆ) -01

ತಾಂತ್ರಿಕ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ (ಫಾರೆಸ್ಟ್ರಿ) , ಎಂಎಸ್ಸಿ (ಫಾರೆಸ್ಟ್ರಿ) ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.24,000/- ಮಾಸಿಕ ವೇತನ ( ಪ್ರಯಾಣ ಭತ್ಯೆ ಪ್ರತಿ ಕಿ.ಮೀ.ಗೆ 5 ರೂ.ನಂತೆ ಗರಿಷ್ಠ ಮಾಸಿಕ ರೂ.1,500). ಈ ಹುದ್ದೆಗೆ 21ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ತಾಂತ್ರಿಕ ಸಹಾಯಕರು (ತೋಟಗಾರಿಕೆ) ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛೆ ಪಡುವ ಅಭ್ಯರ್ಥಿಗಳು ಬಿಎಸ್ಸಿ ( ಹೋರಿಕಲ್ಚರ್), ಎಂ.ಎಸ್ಸಿ ( ಹೋರಿಕಲ್ಚರ್) ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಅನುಭವ ಇರಬೇಕು. ಈ ಹುದ್ದೆಗೆ ಅರ್ಜಿ‌ ಸಲ್ಲಿಸುವ ಅಭ್ಯರ್ಥಿಗಳು 21 ರಿಂದ 41 ರೊಳಗೆ ವಯೋಮಿತಿ ಇರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 24,000/- ಮಾಸಿಕ ವೇತನ ( ಪ್ರಯಾಣ ಭತ್ಯೆ ಪ್ರತಿ ಕಿ.ಮೀ.ಗೆ 5 ರೂ.ನಂತೆ ಗರಿಷ್ಠ ಮಾಸಿಕ ರೂ.1,500).ಇರುತ್ತದೆ.

ಭರ್ತಿ ಮಾಡಿ‌ದ ಅರ್ಜಿಯನ್ನು ದಿನಾಂಕ 15-05-2021 ರ ಸಂಜೆ 5.30 ರೊಳಗೆ ಖುದ್ದಾಗಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಟಪಾಲು ಶಾಖೆಗೆ ಸಲ್ಲಿಸುವುದು.

ಅರ್ಜಿ ಸಲ್ಲಿಸುವ ವಿಳಾಸ : ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಬನಶಂಕರಿ ದೇವಸ್ಥಾನದ ಹತ್ತಿರ, ಎಸ್.ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು- 70

Leave a Comment