Advertisements
2019 ರಲ್ಲಿ ಪಿಎಚ್ಡಿ ನೋಂದಣಿಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಗಳಲ್ಲಿರುವ ಮಾರ್ಗದರ್ಶಕರುಗಳ ಬಳಿ ಬಾಕಿ ಉಳಿದಿರುವ ಸೀಟುಗಳಿಗಾಗಿ, 2ನೇ ಸುತ್ತಿನ ಹಂಚಿಕೆ ಪ್ರಕ್ರಿಯೆಯು (2nd Round Counselling for Ph.d) ದಿನಾಂಕ 17-03-2021 ರಂದು ಸಂಬಂಧ ಪಟ್ಟ ಸ್ನಾತಕೋತ್ತರ ವಿಭಾಗದಲ್ಲಿ ಬೆಳಗ್ಗೆ 9.30 ಗಂಟೆಗೆ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಮೊದಲನೇ ಸುತ್ತಿನ ಪ್ರವೇಶ ಪ್ರಕ್ರಿಯೆಯಲ್ಲಿ ಗೈರು ಹಾಜರಾದ ಹಾಗೂ ಸೀಟುಗಳು ಹಂಚಿಕೆಯಾಗದ ಅರ್ಜಿದಾರರು 2 ನೇ ಸುತ್ತಿನ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದೆಂದು ತಿಳಿಸಲಾಗಿದೆ.
ಬಾಕಿ ಉಳಿದಿರುವ ವಿವರಗಳನ್ನು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ bangaloreuniversity.ac.in ನಲ್ಲಿ ಶೀಘ್ರವಾಗಿ ಪ್ರಕಟಿಸಲಾಗುವುದು.