Advertisements
ಬೆಂಗಳೂರು ವಿಶ್ವವಿದ್ಯಾನಿಲಯವು ಎಪ್ರಿಲ್ 19 ರಂದು ನಡೆಸಬೇಕಾಗಿದ್ದ ಸ್ನಾತಕ, ಸ್ನಾತಕೋತ್ತರ ಪದವಿ ಮತ್ತು ಇಂಜಿನಿಯರಿಂಗ್ ಪದವಿ ಪರೀಕ್ಷೆಯನ್ನು ಮುಂದೂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಪ್ರಿಲ್ 19 , 20 ಮತ್ತು 21 ರಂದು ನಡೆಯಬೇಕಾಗಿದ್ದ ವಿವಿಧ ಪರೀಕ್ಷೆಗಳನ್ನು ಸೋಂಕು ಹೆಚ್ಚಳ ಕಾರಣಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಮುಂದೂಡಿದೆ.
ಏ.19 ರಂದು ಪ್ರಾರಂಭವಾಗಬೇಕಾಗಿದ್ದ ಎಲ್ಲಾ ಎಲ್ಲಾ ಯುಜಿ ಕೋರ್ಸ್‌ಗಳ 1 ಮತ್ತು 3ನೇ ಸೆಮಿಸ್ಟರ್ , ಯುವಿಸಿಇನ ಬಿ.ಆರ್ಕ್/ಬಿ.ಟೆಕ್ (ಸಿಬಿಸಿಎಸ್) 1,2,3 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.
20 ರಿಂದ ಪ್ರಾರಂಭವಾಗಬೇಕಾಗಿದ್ದ ಎಂಬಿಎ/ಎಂಸಿಎ/ಎಂ.ಇಡಿ/ಎಂ.ಎಸ್ಸಿ ಆರಂಭವಾಗಬೇಕಾಗಿದ್ದ ಎಂಎ/ಎಂಎಸ್ಸಿ/ಎಂಎಎಸ್‌ಎಲ್‌ಪಿ ನ 3 ನೇ ಸೆಮಿಸ್ಟರ್ ಹಾಗಝೂ ಎಂಸಿಎ 5 ನೇ ಸೆಮಿಸ್ಟರ್ ಪರೀಕ್ಷೆಗಳನ್ನೂ ಮುಂದೂಡಲಾಗಿದೆ ಎಂದು ಬೆಂಗಳೂರು ವಿವಿ ಕುಲಸಚಿವರು (ಮೌಲ್ಯಮಾಪನ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.