ಬೆಂಗಳೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನ

Advertisements

ಕರ್ನಾಟಕ ಸರಕಾರವು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ೨೦೨೦-೨೧ನೇ ಸಾಲಿಗೆ ಎನ್‌ಎಚ್‌ಎಂ ಯೋಜನೆಯ ಎನ್‌ಪಿಸಿಡಿಸಿಎಸ್/‌ ಎನ್‌ವಿಬಿಡಿಸಿಪಿ ಕಾರ್ಯಕ್ರಮಗಳ ಅಡಿಯಲ್ಲಿ ಅನುಮೋದನೆಯಾಗಿರುವ ವೈದ್ಯಕೀಯ ಮ್ತತ್ತು ಅರೆವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಿದೆ. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಎಲ್ಲಿ?

ಕರ್ನಾಟಕ ಸರಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಅಸಾಂಕ್ರಮಿಕ ರೋಗಗಳ ನಿಯಂತ್ರಣಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ, ಹಳೇ ಟಿಬಿ ಸ್ಯಾನಿಟೋರಿಯಂ ಆಸ್ಪತ್ರೆ ಆವರಣ, ಹಳೆ ಮದ್ರಾಸ್‌ ರಸ್ತೆ, ಇಂದಿರಾನಗರ, ಬೆಂಗಳೂರು ೩೮.

ಒಟ್ಟು ಹುದ್ದೆಗಳ ಸಂಖ್ಯೆ: ೫

ಹುದ್ದೆಗಳ ವಿವರ

ವೈದ್ಯಾಧಿಕಾರಿಗಳು

೩ ಹುದ್ದೆಗಳು

ವಿದ್ಯಾರ್ಹತೆ: ಎಂಬಿಬಿಎಸ್‌ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.

ಮಾಸಿಕ ವೇತನ: ೪೪,೦೦೦ ರೂಪಾಯಿ.

ವಯೋಮಿತಿ: ೪೦ ವರ್ಷ

ಆಪ್ತ ಸಮಲೋಚಕರು

ಹುದ್ದೆಗಳ ಸಂಖ್ಯೆ: ೦೧

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಪದವಿಯಲ್ಲಿ ಸಾಮಾಜಿಕ ವಿಜ್ಞಾನ ವಿಷಯವನ್ನು ಓದಿರಬೇಕು ಅಥವಾ ಕೌನ್ಸೆಲಿಂಗ್‌ ಹೆಲ್ತ್‌ ಎಜುಕೇಷನ್‌ / ಮಾಸ್‌ ಕಮ್ಯುನಿಕೇಷನ್‌ ವಿಷಯಗಳ ಬಗ್ಗೆ ಪದವಿ/ ಡಿಪ್ಲೊಮಾ ಮಾಡಿರಬೇಕು. ಆರೋಗ್ಯ ಕ್ಷೇತ್ರದಲ್ಲಿ ಸಮಲೋಚಕರಾಗಿ ೨ ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ಮಾಸಿಕ ವೇತನ: ೧೪ ಸಾವಿರ ರೂ.

ವಯೋಮಿತಿ: ೪೦ ವರ್ಷ

ಕನ್ಸಲ್ಟೆಂಟ್‌ ಎಂಟೊಮೊಲಜಿಸ್ಟ್‌ (ವಲಯ ಹಂತ)

ಹುದ್ದೆಗಳ ಸಂಖ್ಯೆ:

ಮಾಸಿಕ ವೇತನ: ೨೫ ಸಾವಿರ ರೂಪಾಯಿ

ವಿದ್ಯಾರ್ಹತೆ: ಝುವಾಲಜಿ/ ಜೀವವಿಜ್ಞಾನದಲ್ಲಿ ಪದವಿ ಪಡೆದಿರಬೇಕು. ಲೈಫ್‌ ಸೈನ್ಸ್‌ನಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಕಡ್ಡಾಯವಾಗಿ ಒಂದು ವಿಷಯವಾಗಿ ಝುವಾಲಜಿ ಓದಿರಬೇಕು. ಎಂಟೊಮೊಲಜಿಸ್ಟ್‌ ಕ್ಷೇತ್ರದಲ್ಲಿ ಪದವಿ ಹಂತದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಇರಬೇಕು.

ಸಂದರ್ಶನ ಮಾಹಿತಿ

ಆಸಕ್ತ ಅಭ್ಯರ್ಥಿಗಳು ಜೂನ್‌ ೧೬, ೨೦೨೦ರ ಬೆಳಗ್ಗೆ ೧೧ ಗಂಟೆಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನಕ್ಕೆ ಬರುವಾಗ ಮೂಲ ದಾಖಲೆಯೊಂದಿಗೆ ೧ ಸೆಟ್‌ ಜೆರಾಕ್ಸ್‌ ಪ್ರತಿಗಳನ್ನು ತರಬೇಕು.

ಸಂದರ್ಶನ ಸ್ಥಳ: ಜಿಲ್ಲಾ ಎನ್‌ಸಿಡಿ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣ, ಹಳೆ ಟಿಬಿ ಆಸ್ಪತ್ರೆ, ಇಂದಿರಾನಗರ, ಬೆಂಗಳೂರು- ೩೮.

ಬೆಂಗಳೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳಿಗೆ ಅರ್ಜಿ ಆಹ್ವಾನ 2

Leave a Comment