ಭಾರತೀಯ ಮಿಲಿಟರಿಯು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,ಮಂಡ್ಯ, ಬಳ್ಳಾರಿ, ಮೈಸೂರು, ತುಮಕೂರು,ಕೋಲಾರ, ರಾಮನಗರ,ಚಾಮರಾಜನಗರ, ಕೊಡಗು, ಚಿತ್ರದುರ್ಗ, ಹಾಸನ, ಚಿಕ್ಕಬಳ್ಳಾಪುರ ಜಿಲ್ಲೆಗಳ ಪುರುಷ ಅಭ್ಯರ್ಥಿಗಳಿಗಾಗಿ ಆರ್ಮಿ ನೇಮಕಾತಿ ರ್ಯಾಲಿಯನ್ನು ನಡೆಸಲಿದೆ.
ಆನ್ಲೈನ್ ರಿಜಿಸ್ಟ್ರೇಶನ್ ಆರಂಭಿಕ ದಿನಾಂಕ : 13-03-2021
ಆನ್ಲೈನ್ ರಿಜಿಸ್ಟ್ರೇಶನ್ ಕೊನೆಯ ದಿನಾಂಕ : 26-04-2021
ಇಂಡಿಯನ್ ಆರ್ಮಿಯು ಸೋಲ್ಜರ್ ಜೆನೆರಲ್ ಡ್ಯೂಟಿ, ಸೋಲ್ಜರ್ ಟೆಕ್ನಿಕಲ್,ಸೋಲ್ಜರ್ ಟ್ರೇಡ್ಸ್ ಮೆನ್(10 ನೇ ತರಗತಿ ಪಾಸ್), ಸೋಲ್ಜರ್ ಟ್ರೇಡ್ಸ್ ಮೆನ್( 8 ನೇ ತರಗತಿ), ಸೋಲ್ಜರ್ ಕರ್ಕ್ ಮತ್ತು ಸ್ಟೋರ್ ಕೀಪರ್,ಟೆಕ್ನಿಕಲ್ ಅಸಿಸ್ಟೆಂಟ್,ನರ್ಸಿಂಗ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗಾಗಿ ಅಭ್ಯರ್ಥಿಗಳಿಂದ ನೇಮಕಾತಿ ರ್ಯಾಲಿಯನ್ನು ನಡೆಸಲಿದೆ.
ನೇಮಕಾತಿ ರ್ಯಾಲಿ ನಡೆಯುವ ಸ್ಥಳ: ವಿಶ್ವೇಶ್ವರಯ್ಯ ಸ್ಟೇಡಿಯಂ, ಕೋಲಾರ, ಕರ್ನಾಟಕ
ಆರ್ಮಿ ನೇಮಕಾತಿ ರ್ಯಾಲಿ ದಿನಾಂಕ : ಮೇ 07, 2021 ರಿಂದ ಮೇ 12,2021 ರವರೆಗೆ.
ವಯೋಮಿತಿ : ಆರ್ಮಿ ನೇಮಕಾತಿ ರ್ಯಾಲಿಗೆ ಅರ್ಜಿ ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳಿಗೆ 17 ವರ್ಷ 6 ತಿಂಗಳು ಹಾಗೂ ಗರಿಷ್ಠ 23 ವರ್ಷ ಮೀರಿರಬಾರದು.
ಆರ್ಮಿಯು ವಿವಿಧ ವಿಭಾಗಕ್ಕೆ ಸೈನಿಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಿದ್ದು, ದೈಹಿಕ ಅರ್ಹತೆಗಳ ಬಗ್ ತಿಳಿದುಕೊಳ್ಳಲು ಗೆ ಈ ಲಿಂಕ್ ಗೆ ಕ್ಲಿಕ್ ಮಾಡಿ.
ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಆನ್ಲೈನ್ ಮೂಲಕ ರಿಜಿಸ್ಟ್ರೇಶನ್ ಪಡೆದ ಅಭ್ಯರ್ಥಿಗಳ ಇ-ಮೇಲ್ ವಿಳಾಸಕ್ಕೆ ಅಡ್ಮಿಟ್ ಕಾರ್ಡ್ ಕಳುಹಿಸಲಾಗುತ್ತದೆ. ಅದರಲ್ಲಿ ನಿಗದಿಪಡಿಸಿದ ದಿನಾಂಕದಂದು ಅಭ್ಯರ್ಥಿ ಅಗತ್ಯ ದಾಖಲೆಗಳೊಂದಿಗೆ ರ್ಯಾಲಿಯಲ್ಲಿ ದಾಖಲಾಗಬಹುದು.
ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸುವ ಆಸಕ್ತ ಅಭ್ಯರ್ಥಿಗಳು ಈ ಲಿಂಕ್ ಮೂಲಕ ರಿಜಿಸ್ಟ್ರೇಶನ್ ಪಡೆಯಬೇಕು.