ಆಯುಷ್ ನಿರ್ದೇಶನಾಲಯದ ಜಿಲ್ಲಾ ಆಯುಷ್ ಅಧಿಕಾರಿಗಳ ಕಾರ್ಯಾಲಯ ಧಾರವಾಡ ಇಲ್ಲಿ ಅಗತ್ಯವಿರುವ ಸಂಪೂರ್ಣ ತಾತ್ಕಾಲಿಕ ಗ ಹುದ್ದೆಯಾಗಿರುವ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ( DPM) -01 ಹುದ್ದೆಯನ್ನು ನೇಮಕ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳು, ಧಾರವಾಡರವರ ಅನುಮೋದನೆ ಅನ್ವಯ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯ ಹೆಸರು : ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ( DPM )
ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. ಆಯುಷ್ ಸೇರಿದಂತೆ & ಪಿ.ಜಿ.-ಎಂ.ಬಿ.ಎ/ ಪೋಸ್ಟ್ ಗ್ರಾಜ್ಯುಯೇಶನ್ ಡಿಪ್ಲೋಮಾ ಎ.ಆಯ್.ಸಿ.ಟಿ.ಇ ಅಂಗೀಕೃತ ಸಂಸ್ಥೆಯಿಂದ
ಮಾಸಿಕ ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.30,000/- ವೇತನ ನಿಗದಿಪಡಿಸಲಾಗಿದೆ.
ವಯೋಮಿತಿ : ದಿನಾಂಕ 01-04-2021 ಕ್ಕೆ ಎಲ್ಲಾ ವರ್ಗದವರಿಗೆ ಕನಿಷ್ಠ 18 ಹಾಗೂ ಗರಿಷ್ಠ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ಅರ್ಜಿದಾರರು ನಿಗದಿತ ಅರ್ಜಿ ನಮೂನೆಯನ್ನು ಈ ಕಚೇರಿಯಿಂದ ಪಡೆದು ಅವಶ್ಯವಿರುವ ಎಲ್ಲಾ ವಿದ್ಯಾರ್ಹತೆ ಹಾಗೂ ಅನುಭವಗಳ ಬಗ್ಗೆ ದಾಖಲಾತಿಗಳೊಂದಿಗೆ ದಿನಾಂಕ 05-07-2021 ಸಂಜೆ 5.30 ರೊಳಗಾಗಿ ಜಿಲ್ಲಾ ಆಯುಷ್ ಅಧಿಕಾರಿಗಳು, ಸಿವಿಲ್ ಆಸ್ಪತ್ರೆ ಹತ್ತಿರ, ಕಿಲ್ಲಾ ರಸ್ತೆ, ಧಾರವಾಡ- 580008 ರವರಿಗರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವುದು.