ಆಯುಷ್‌ ಕೋರ್ಸ್‌ಗಳ ಪ್ರವೇಶಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

Advertisements
ಆಯುಷ್‌ ಕೋರ್ಸ್‌ಗಳ ಪ್ರವೇಶಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ 2

2020-21ಸಾಲಿನ ಆರ್ಯುವೇದ, ಹೋಮಿಯೋಪತಿ, ಯುನಾನಿ ಕೋರ್ಸುಗಳ‌‌ ಪ್ರವೇಶಾತಿಗೆ UGNEET -2020 ರಲ್ಲಿ ಅರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಪ್ರಾಧಿಕಾರವು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈಗಾಗಲೇ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ದಾಖಲಾತಿ ಪರಿಶೀಲನೆ ಮಾಡಿಕೊಂಡಿರುವವರು ಮತ್ತೊಮ್ಮೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸದೆ ಇರುವವರು ಅಥವಾ ದಾಖಲಾತಿ ಪರಿಶೀಲನೆಯನ್ನು ಮಾಡಿಕೊಳ್ಳದೇ ಇರುವ ಅರ್ಹ ಕರ್ನಾಟಕ ಅಭ್ಯರ್ಥಿಗಳು ಆಯುಷ್ ಕೋರ್ಸುಗಳ ಪ್ರವೇಶಾತಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.

2020-21ನೇ ಸಾಲಿಗೆ ಆಯುರ್ವೇದ, ಯುನಾನಿ, ಹೋಮಿಯೋಪತಿ ಸೀಟುಗಳಿಗೆ ಸರ್ಕಾರವು ನೀಡಿದ ಸೀಟ್ ಮ್ಯಾಟ್ರಿಕ್ಸ್ ಅನ್ವಯ ಮತ್ತು ಆದೇಶದಂತೆ ಸದರಿ ಸೀಟುಗಳನ್ನು ಈ ಕೆಳಗಿನ ವೇಳಾಪಟ್ಟಿಯಂತೆ ಯುಜಿನೀಟ್-2020 ರ ಅರ್ಹ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗುವುದು. ಕಾಲೇಜುವಾರು, ಪ್ರವರ್ಗ ವಾರಯ ಮತ್ತು ಕೋರ್ಸುವಾರು ಲಭ್ಯವಿರುವ ಸೀಟುಗಳನ್ನು ಪ್ರಾಧಿಕಾರದ ವೆಬ್ ಸೈಟಿನಲ್ಲಿ ಪ್ರಕಟಿಸಲಾಗುವುದು. ಯುಜಿನೀಟ್-2020 ರ ಅರ್ಹ ಅಭ್ಯರ್ಥಿಗಳು ಕರ್ನಾಟಕದ ಎರಡನೇ ಪಿಯುಸಿ/ 12 ನೇ ತರಗತಿ / ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲೀಷನ್ನು ಒಂದು ಭಾಷಾ ವಿಷಯವನ್ನಾಗಿ ಲಭ್ಯಸಿಸಿರಬೇಕು. ಹಾಗೂ ಭೌತಶಾಸ್ತ್ರ , ರಸಾಯನಶಾಸ್ತ್ರ, ಜೀವಶಾಸ್ತ್ರ, ಐಚ್ಛಿಕ ವಿಷಯಗಳಲ್ಲಿ ಒಟ್ಟಾರೆ ಕನಿಷ್ಠ ಶೇಕಡ 50 ರಷ್ಟು ಅಂಕಗಳನ್ನು ಪಡೆದು ತೇರ್ಗಡೆ ಹೊಂದಿರಬೇಕು. (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಂದ ಪ್ರವರ್ಗ-1, 2ಎ, 2ಬಿ, 3ಎ, ಮತ್ತು3ಬಿ ಗಳಿಗೆ ಸೇರಿರುವ ಅಭ್ಯರ್ಥಿಗಳು ಶೇ. 40) ಇಚ್ಚೆ ಇರುವ ಅಭ್ಯರ್ಥಿಗಳು ನೊಂದಣಿ ಮಾಡುವ ಮೂಲಕ ಈ ಸುತ್ತಿನಲ್ಲಿ ಭಾಗವಹಿಸಬಹುದಾಗಿದೆ. ( ನೊಂದಣಿ ವಿಧಾನವನ್ನು ಕೆಳಗೆ ವಿವರಿಸಲಾಗಿದೆ)

ಕೇಂದ್ರ ಸರಕಾರವು ನೀಟ್ 2020ರ ಆಯುಷ್ ಕೋರ್ಸುಗಳಿಗೆ ನಿಗದಿಪಡಿಸಲಾದ ನೀಟ್ ಪರ್ಸಂಟೈಲ್ ಅನ್ನು ಸಡಿಲಗೊಳಿಸಿರುವ ಜನನ ಕಾರಣದಿಂದ ಆಯುಷ್ ಕೋರ್ಸುಗಳಿಗೆ ಅರ್ಹತೆಯನ್ನು ಪಡೆಯುವ ಅಭ್ಯರ್ಥಿಗಳು ಇಲ್ಲಿಯವರೆಗೆ ಪ್ರಾಧಿಕಾರದಲ್ಲಿಅರ್ಜಿಯನ್ನು ಸಲ್ಲಿಸದೇ ಇರುವ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ‌. ಹಾಗೂ ಶುಲ್ಕ ಪಾವತಿಸಿ. ಎಲ್ಲಾ ದಾಖಲೆಗಳೊಂದಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದಾಗಿದೆ. ( ನೀಟ್ ಪರ್ಸಂಟೈಲ್ ಅನ್ನು ಸಡಿಲಗೊಳಿಸಿರುವ ವಿವರಗಳನ್ನು ಪ್ರಾಧಿಕಾರದ ವೆಬ್ ಸೈಟಿ ನಲ್ಲಿ ಪ್ರಕಟಿಸಲಾಗಿದೆ)

ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಪತ್ರ ಸಂಖ್ಯೆ L-11011/2/2020-E-P(1) part-2 ದಿನಾಂಕ 10-12-2020 ರ ಅನ್ವಯ ಖಾಸಗಿ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ಕಾಲೇಜುಗಳಲ್ಲಿ15% ಅಖಿಲ ಭಾರತ ಕೋಟದ ಸೀಟುಗಳನ್ನು ಸಹ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಮೆರಿಟ್ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು. ಸದರಿ ಸೀಟುಗಳು ಮುಕ್ತ ಸೀಟುಗಳಾಗಿರುತ್ತದೆ. ಅರ್ಹ ಯುಜಿನೆಟ್ -2020 ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸೂಚನೆ

  1. ವೈದ್ಯಕೀಯ /ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದವರು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಿರುವುದಿಲ್ಲ‌.
  2. ಸಿಇಟಿ -2006 ನಿಯಮಗಳ ಅನ್ವಯ ಇತರೆ ವೃತ್ತಿಪರ ಕೋರ್ಸುಗಳಿಗೆ ಕಾಲೇಜುಗಳಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ, ಆಯುರ್ವೇದ, ಯುನಾನಿ, ಹೋಮಿಯೋಪತಿ ಸೀಟುಗಳ ಪ್ರವೇಶಾತಿಯ ಅರ್ಹತೆಯ Karnataka Selection of Candidates for admission to government Seats in professional educational institutions ( Amendment) Rules, 2020ರ ನಿಯಮಗಳಿಗೆ ಒಳಪಟ್ಟಿರುತ್ತದೆ.

ಕ್ರಮಗಳು

ನೀಟ್ ರೋಲ್ ನಂಬರನ್ನು ನಮೂದಿಸಿ, ಇಂಜಿನಿಯರಿಂಗ್, ಕೃಷಿ, ವಿಜ್ಞಾನ ಇತರೆ ಕೋರ್ಸಿಗೆ/ಅಥವಾ ವೈದ್ಯಕೀಯ/ದಂತವೈದ್ಯಕೀಯ ಕೋರ್ಸಿಗೆ ದಾಖಲಾತಿ ಪರಿಶೀಲನೆ ಮಾಡಿಕೊಂಡಿರುವವರು ಆಯುಷ್ ಕೋರ್ಸುಗಳಿಗೆ ಮತ್ತೊಮ್ಮೆ ದಾಖಲಾತಿ ಪರಿಶೀಲನೆಗೆ ಹಾಜರಾಗುವ ಅಗತ್ಯವಿರುವುದಿಲ್ಲ.

ನೀಟ್ ರೋಲ್ ನಂಬರ್ ನಮೂದಾಗಿರುವ verification slip ಅನ್ನು ಡೌನ್‌ಲೋಡ್ ಮಾಡಿಕೊಂಡಿರುವವರೂ ಸಹ ಮತ್ತೊಮ್ಮೆ ಡೌನ್‌ಲೋಡ್ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ. Verification slip ಅನ್ನು ಡೌನ್‌ಲೋಡ್ ಮಾಡಿಕೊಳ್ಳದಿರುವ ಅಭ್ಯರ್ಥಿಗಳು ಮಾತ್ರ ಆಯುಷ್ ಕೋರ್ಸುಗಳಿಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಹೊಸದಾಗಿ ಅರ್ಜಿಯನ್ನು ನೊಂದಣಿ ಮಾಡುತ್ತಿರುವವರು ನೀಟ್ ಸ್ಕೋರ್ ಕಾರ್ಡ್ ಹಾಗೂ ಇತರೆ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಆಯುಷ್ ಕೋರ್ಸ್‌ಗಳ ಪ್ರವೇಶಾತಿಗೆ ಪರಿಶೀಲನೆಗೆ ಹಾಜರಾಗಬೇಕು.

ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ನೀಟ್ ರೋಲ್ ನಂಬರ್ ಅನ್ನು ದಾಖಲಿಸದೇ ಇರುವವರು, ನೀಟ್ ರೋಲ್ ನಂಬರನ್ನು ದಾಖಲಿಸಿ, ನೀಟ್ ಸ್ಕೋರ್ ಕಾರ್ಡ್ ಹಾಗೂ ಇತರೆ ಎಲ್ಲಾ ಮೂಲ ದಾಖಲಾತಿಯೊಂದಿಗೆ ಆಯುಷ್ ಕೋರ್ಸ್‌ಗಳ ಪ್ರವೇಶಾತಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.

ನೀಟ್ ರೋಲ್ ನಂಬರನ್ನು ದಾಖಲಿಸಿ ಪರಿಶೀಲನೆಯನ್ನು ಮಾಡಿಕೊಳ್ಳದೇ ಇರುವ ಅರ್ಹ ಕರ್ನಾಟಕ ಅಭ್ಯರ್ಥಿಗಳು ನೀಟ್ ಸ್ಕೋರ್ ಕಾರ್ಡ್ ಹಾಗೂ ಇತರೆ ಎಲ್ಲಾ ಮೂಲ ದಾಖಲಾತಿಯೊಂದಿಗೆ ಆಯುಷ್ ಕೋರ್ಸುಗಳ ಪ್ರವೇಶಾತಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು.

ನೊಂದಣಿ, ದಾಖಲಾತಿ ಪರಿಶೀಲನೆ, ಸೀಟು ಹಂಚಿಕೆ ಇನ್ನಿತರ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಅಭ್ಯರ್ಥಿಗಳ ಮಾಹಿತಿಗಾಗಿ ನೀಡಲಾಗಿದೆ.

Leave a Comment