Author: sarkari

  • BBMP Job: ಬಿಬಿಎಂಪಿಯಲ್ಲಿ 444 ಹುದ್ದೆಗಳಿಗೆ ಅರ್ಜಿ ಆಹ್ವಾನ

    BBMP Job: ಬಿಬಿಎಂಪಿಯಲ್ಲಿ 444 ಹುದ್ದೆಗಳಿಗೆ ಅರ್ಜಿ ಆಹ್ವಾನ

    BBMP Recruitment 2024: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 444 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 444 ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ ನಡೆಯಲಿದ್ದು, ಯುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ.
    ಹುದ್ದೆ: ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ತಂಬಾಕು ನಿಯಂತ್ರಣ ಕಾರ್ಯಕ್ರಮ, ಕುಷ್ಠರೋಗ ನಿರ್ಮೂಲಕನಾ ಕಾರ್ಯಕ್ರಮ, ಅಂಧತ್ವ ನಿರ್ಮೂಲಕನಾ ಕಾರ್ಯಕ್ರಮದಡಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

    ಯಾವೆಲ್ಲ ಹುದ್ದೆಗಳು: ನೇತ್ರ ತಜ್ಞರು, ಮಕ್ಕಳ ತಜ್ಞರು, ಫಾರ್ಮಾಸಿಸ್ಟ್‌, ಲ್ಯಾಬ್‌ ಟೆಕ್ನಿಶಿಯನ್ಸ್‌, ಸ್ಟಾಫ್‌ ನರ್ಸ್‌ ಹಾಗೂ ಇತರ ಅರೆವೈದ್ಯ ಸಿಬ್ಬಂದಿ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ವಿದ್ಯಾಭ್ಯಾಸ: ಹುದ್ದೆಗಳಿಗನುಗುಣವಾಗಿ ಎಸ್‌ಎಸ್‌ಎಲ್ಸಿ, ಪಿಯುಸಿ, ಜೆಎನ್‌ಎಂ ,ಎ.ಎನ್‌.ಎಂ.ಎಂ.ಎಸ್ಸಿ, ಬಿಎಸ್ಸಿ, ಡಿಪ್ಲೊಮಾ ಇನ್‌ ನರ್ಸಿಂಗ್‌, ಬಿ.ಫಾರ್ಮಾ/ಡಿ.ಫಾರ್ಮಾ,ಬಿಇ, ಬಿ.ಟೆಕ್‌, ಎಂ.ಟೆಕ್‌, ಎಂಬಿಎ,ಎಂಬಿಬಿಎಸ್‌, ಎಂಡಿ(ಓಬಿಜಿ/ಪಿಡಿಯಾಟ್ರಿಕ್ಸ್‌/ಮೆಡಿಸಿನ್/ಅನಸ್ಥೇಷಿಯಾ/ರೆಡಿಯೋಲಾಜಿ) ಹೊಂದಿರಬೇಕು.

    ವಯೋಮಿತಿ: ಈ ಹುದ್ದೆಗಳಿಗೆ ಕನಿಷ್ಠ 18ವರ್ಷ ವಯಸ್ಸಾಗಿರಬೇಕು.

    ಆಯ್ಕೆ ಮಾಡುವ ವಿಧಾನ: ಅಭ್ಯರ್ಥಿಗಳನ್ನು ಮೆರಿಟ್‌ ಕಂ ರೋಸ್ಟರ್‌ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ.

    ವಾಕ್‌ಇನ್‌ ಇಂಟರ್‌ವ್ಯೂ ದಿನಾಂಕ: ಪಾಲಿಕೆ ನಿಗದಿಪಡಿಸಿರುವ ಸ್ಥಳಗಳಲ್ಲಿ ಫೆ.13ರಿಂದ 15, 2024ರವರೆಗೆ ಸಮಯ ಬೆಳಿಗ್ಗೆ 10.30ರಿಂದ ಸಂಜೆ 4.30 ರವರೆಗೆ. ಆಯಾ ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆಯನ್ನು ಆಧರಿಸಿ ನೇಮಕಾತಿ ನಡೆಯಲಿದೆ.

    ನೇರ ಸಂದರ್ಶನ ನಡೆಯುವ ಸ್ಥಳ: ಡಾ.ರಾಜ್‌ಕುಮಾರ್‌ ಗಾಜಿನ ಮನೆ, ಬಿಬಿಎಂಪಿ ಕೇಂದ್ರ ಕಛೇರಿ, ಎನ್‌.ಆರ್‌.ಚೌಕ, ಬೆಂಗಳೂರು.

    ಮೇಲೆ ನೀಡಿದ ಎಲ್ಲಾ ಹುದ್ದೆಗಳಿಗೆ ಒಂದು ವರ್ಷದ ಗುತ್ತಿಗೆಯಾಧಾರದಲ್ಲಿ ನೇಮಕಾತಿ ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಆಸಕ್ತ ಅಭ್ಯರ್ಥಿಗಳು ಬಿಬಿಎಂಪಿ ವೆಬ್‌ಸೈಟ್‌ನಲ್ಲಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿಸಿದ ವಿದ್ಯಾರ್ಹತೆಯ ಮೂಲ ದಾಖಲೆಗಳು, ವಾಕ್‌ಇನ್‌ ಆಯ್ಕೆ ಪ್ರಕ್ರಿಯೆಗೆ ಹಾಜರಾಗಲು ಸೂಚಿಸಲಾಗಿದೆ. ಹೆಚ್ಚಿನ ವಿವರಗಳಾಗಿ ಅಭ್ಯರ್ಥಿಗಳು Email [email protected] ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವೆಬ್‌ಸೈಟ್‌ ಗೆ ಸಂಪರ್ಕಿಸಿ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • ISRO Recruitment 2024: ಇಸ್ರೋದಲ್ಲಿ ಬಂಪರ್‌ ಉದ್ಯೋಗಾವಕಾಶ, 224 ವಿವಿಧ ಹುದ್ದೆ, ಬೆಂಗಳೂರಲ್ಲಿ ಪೋಸ್ಟಿಂಗ್‌

    ISRO Recruitment 2024: ಇಸ್ರೋದಲ್ಲಿ ಬಂಪರ್‌ ಉದ್ಯೋಗಾವಕಾಶ, 224 ವಿವಿಧ ಹುದ್ದೆ, ಬೆಂಗಳೂರಲ್ಲಿ ಪೋಸ್ಟಿಂಗ್‌

    ISRO Recruitment 2024: ಇಸ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಸೈಂಟಿಸ್ಟ್‌, ಇಂಜಿನಿಯರ್‌, ಟೆಕ್ನಿಕಲ್‌ ಅಸಿಸ್ಟೆಂಟ್‌ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ಕುರಿತು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ-ಬೆಂಗಳೂರಿನಲ್ಲಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪೋಸ್ಟಿಂಗ್‌ ಮಾಡಲಾಗುವುದು.

    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಫೆ.10, 2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:ಮಾರ್ಚ್‌ 01, 2024

    ಹುದ್ದೆಗಳ ವಿವರ
    ಹುದ್ದೆ: ಇಸ್ರೋದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಟೆಕ್ನಿಕಲ್‌ ಅಸಿಸ್ಟೆಂಟ್‌, ಡ್ರಪ್ಟಮನ್ಸ್‌-ಬಿ, ಸೈಂಟಿಸ್ಟ್‌, ಇಂಜಿನಿಯರ್‌, ಸೈಂಟಿಫಿಕ್‌ ಅಸಿಸ್ಟಂಟ್‌, ಲ್ರೈಬ್ರರಿ ಅಸಿಸ್ಟಂಟ್‌, ಪೈರಮನ್‌-ಎ, ಹೆವಿ ವೆಹಿಕಲ್‌ ಡ್ರೈವರ್, ಲೈಟ್‌ ವೆಹಿಕಲ್‌ ಡ್ರೈವರ್-‌ಎ

    ಹುದ್ದೆಗಳ ಸಂಖ್ಯೆ: ಒಟ್ಟು 224 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ ಮತ್ತು ನೀಡಲಾಗುವ ವೇತನ:
    ಸೈಂಟಿಸ್ಟ್‌ ಇಂಜಿನಿಯರ್‌- 5ಹುದ್ದೆ- ರೂ. 56,100
    ಟೆಕ್ನಿಕಲ್‌ ಅಸಿಸ್ಟೆಂಟ್‌-55 ಹುದ್ದೆ-ರೂ.44,900
    ಸೈಂಟಿಫಿಕ್‌ ಅಸಿಸ್ಟಂಟ್‌-6 ಹುದ್ದೆ-ರೂ.44,900
    ಲೈಬ್ರರಿ ಅಸಿಸ್ಟಂಟ್‌-1 ಹುದ್ದೆ-ರೂ.44,900
    ಟೆಕ್ನಿಷಿಯನ್-ಬಿ-126 ಹುದ್ದೆ- ರೂ.21,700
    ಡ್ರಾಫ್ಟಮನ್ಸ್‌-ಬಿ-16 ಹುದ್ದೆ-ರೂ.21,700
    ಕುಕ್‌-4 ಹುದ್ದೆ-ರೂ.19,900
    ಫೈರ್‌ಮನ್‌-ಎ-3 ಹುದ್ದೆ-ರೂ.19,900
    ಹೆವಿ ವೆಹಿಕಲ್‌ ಡ್ರೈವರ್‌ ಎ-6 ಹುದ್ದೆ-ರೂ.19,900
    ಲೈಟ್‌ ವೆಹಿಕಲ್‌ ಡ್ರೈವರ್‌ ಎ-2 ಹುದ್ದೆ-ರೂ.19,900

    ಶೈಕ್ಷಣಿಕ ಅರ್ಹತೆ: ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್‌ ಪದವಿ ಯನ್ನು ಹೊಂದಿರಬೇಕು.

    ವಯೋಮಿತಿ: ಈ ಮೇಲ್ಕಂಡ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಆಗಿರಬೇಕು. ಉಳಿದ ಹಾಗೆ ಈ ಕೆಳಗೆ ಹುದ್ದೆಗಳಿಗೆ ತಕ್ಕಂತೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
    ಸೈಂಟಿಸ್ಟ್‌ ಇಂಜಿನಿಯರ್‌-30 ವರ್ಷ
    ಟೆಕ್ನಿಕಲ್‌ ಅಸಿಸ್ಟಂಟ್‌, ಸೈಂಟಿಫಿಕ್‌ ಅಸಿಸ್ಟಂಟ್‌, ಲೈಬ್ರರಿ ಅಸಿಸ್ಟಂಟ್‌-35 ವರ್ಷ
    ಟೆಕ್ನಿಷಿಯನ್-ಬಿ, ಡ್ರಾಪ್ಟಮನ್ಸ್‌ ಬಿ, ಕುಕ್‌-35 ವರ್ಷ
    ಪೈರಮನ್‌ ಎ- 25 ವರ್ಷ
    ಹೆವಿ ವೆಹಕಲ್‌ ಡ್ರೈವರ್‌ ಎ, ಲೈಟ್‌ ವೆಹಿಕಲ್‌ ಡ್ರೈವರ್‌ ಎ-35ವರ್ಷ
    ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ಅರ್ಜಿ ಶುಲ್ಕ: ಸೈಂಟಿಸ್ಟ್‌ ಇಂಜಿನಿಯರ್‌, ಟೆಕ್ನಿಕಲ್‌ ಅಸಿಸ್ಟಂಟ್‌ , ಸೈಂಟಿಫಿಕ್‌ ಅಸಿಸ್ಟಂಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ.250 ನ್ನು ಪಾವತಿಸಬೇಕು. ಪ್ರೊಸೆಸಿಂಗ್‌ ಶುಲ್ಕ 500 ರೂ. ನ್ನು ಪಾವತಿ ಮಾಡಬೇಕು. ( ಪ್ರೊಸೆಸಿಂಗ್‌ ಶುಲ್ಕವನ್ನು ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮರುಪಾವತಿ ಮಾಡಲಾಗುವುದು)

    ಅರ್ಜಿ ಶುಲ್ಕ ಪಾವತಿ ಮಾಡುವ ವಿಧಾನ: ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್‌ ಕಾರ್ಡ್‌, ನೆಟ್‌ ಬ್ಯಾಂಕಿಂಗ್‌, ಯುಪಿಎ ಮೂಲಕ ಶುಲ್ಕ ಪಾವತಿ ಮಾಡಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಆಯ್ಕೆ ವಿಧಾನ; ಈ ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳು ಆಯ್ಕೆ ಮಾಡಲು ಲಿಖಿತ ಪರೀಕ್ಷೆ/ ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ/ ಸ್ಕಿಲ್‌ ಟೆಸ್ಟ್‌/ ಡ್ರೈವಿಂಗ್‌ ಟೆಸ್ಟ್‌ ಈ ಪರೀಕ್ಷೆಗಳನ್ನು ಹುದ್ದೆಗಳಿಗೆ ತಕ್ಕ ಹಾಗೆ ನಡೆಸಿ ಆಯ್ಕೆ ಮಾಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ

  • UPSC Recruitment 2024: UPSC ಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, 122 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

    UPSC Recruitment 2024: UPSC ಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, 122 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

    UPSC Recruitment 2024: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಸಂಸ್ಥೆಯು ಸಹಾಯಕ ನಿರ್ದೇಶಕ, ಸೈಂಟಿಸ್ಟ್‌-ಬಿ, ಆಡಳಿತಾಧಿಕಾರಿ ಗ್ರೇಡ್-I ಮತ್ತು ಸ್ಪೆಷಲಿಸ್ಟ್ ಗ್ರೇಡ್ III ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10-02-2024
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-02-2024 (23:59 ಗಂಟೆಗಳು)

    ಹುದ್ದೆಗಳ ವಿವರ: ಸಹಾಯಕ ನಿರ್ದೇಶಕ, ಸೈಂಟಿಸ್ಟ್‌-ಬಿ, ಆಡಳಿತಾಧಿಕಾರಿ ಗ್ರೇಡ್-I ಮತ್ತು ಸ್ಪೆಷಲಿಸ್ಟ್ ಗ್ರೇಡ್ III ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆ ಸಂಖ್ಯೆ: 122 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಸಂಬಂಧಿತ ಹುದ್ದೆಗೆ ಬೇಕಾದ ಯಾವುದೇ ಪದವಿ/ಪಿಜಿ ತೇರ್ಗಡೆ ಹೊಂದಿರಬೇಕು.

    ಅರ್ಜಿ ಶುಲ್ಕ: ಮಹಿಳೆಯರಿಗೆ/ SC/ ST ಮತ್ತು ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ
    ಇತರರಿಗೆ ಅರ್ಜಿ ಶುಲ್ಕ: ರೂ. 25/-
    SBI ಯ ಯಾವುದೇ ಶಾಖೆಯಲ್ಲಿ ಹಣವನ್ನು ನಗದು ಮೂಲಕ ಅಥವಾ ವೀಸಾ/ಮಾಸ್ಟರ್/ರುಪೇ ಕ್ರೆಡಿಟ್/ಡೆಬಿಟ್ ಕಾರ್ಡ್/ಯುಪಿಐ ಪಾವತಿಯನ್ನು ಬಳಸಿಕೊಂಡು ಅಥವಾ ಯಾವುದೇ ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಅರ್ಜಿ ಶುಲ್ಕ ಪಾವತಿಸಬಹುದು.

    ಪೋಸ್ಟಿಂಗ್‌: ನವದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಡೆಹ್ರಾಡೂನ್, ಲಕ್ನೋ, ಭೋಪಾಲ್, ನಾಗ್ಪುರ, ಪಾಟ್ನಾ, ಗುವಾಹಟಿ, ಜೈಪುರ ಈ ಸ್ಥಳಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲ್ಲಿ ಪೋಸ್ಟಿಂಗ್‌ ಮಾಡಲಾಗುತ್ತದೆ:

    ವಯಸ್ಸಿನ ಮಿತಿಗಳು: ವಿವಿಧ ಹುದ್ದೆಗಳಿಗೆ ವಯಸ್ಸಿನ ಮಿತಿಯನ್ನು ಜಾಹೀರಾತಿನಲ್ಲಿ ನೀಡಲಾಗಿದೆ. ವಿವಿಧ ವರ್ಗಗಳಿಗೆ ನೀಡಿದ ವಯಸ್ಸಿನ ರಿಯಾಯಿತಿಗಳಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ

    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. http://www.upsconline.nic.in ಈ ಲಿಂಕ್‌ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಯಾವುದೇ ಇತರ ವಿಧಾನದ ಮೂಲಕ ಕಳುಹಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
    ಅಭ್ಯರ್ಥಿಗಳು ತಮ್ಮ ಜನ್ಮ ದಿನಾಂಕ, ಅನುಭವ, ವಿದ್ಯಾರ್ಹತೆಗಳು ಇತ್ಯಾದಿ ದಾಖಲೆಗಳು/ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಬೇಕು. pdf ಫೈಲ್‌ನಲ್ಲಿ ಪ್ರತಿ ಫೈಲ್ ಗಾತ್ರವು 1 MB ಮತ್ತು “ಅಪ್‌ಲೋಡ್ ಇತರ ಡಾಕ್ಯುಮೆಂಟ್ ಮಾಡ್ಯೂಲ್‌ಗೆ 2 MB ಮೀರದ ರೀತಿಯಲ್ಲಿ ಅಪ್‌ಲೋಡ್‌ ಮಾಡಬೇಕು. ಪೇ ಸ್ಲಿಪ್, ರೆಸ್ಯೂಮ್, ನೇಮಕಾತಿ ಪತ್ರ, ರಿಲೀವಿಂಗ್ ಲೆಟರ್, ಅನ್-ಸೈನ್ಡ್ ಎಕ್ಸ್‌ಪೀರಿಯೆನ್ಸ್ ಸರ್ಟಿಫಿಕೇಟ್ ಇತ್ಯಾದಿಗಳನ್ನು ಅಭ್ಯರ್ಥಿಗಳು ಅಪ್‌ಲೋಡ್‌ ಮಾಡಬಾರದು.

  • Bengaluru Govt Jobs 2024: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ ನಲ್ಲಿ ವಿವಿಧ ಹುದ್ದೆ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    Bengaluru Govt Jobs 2024: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ ನಲ್ಲಿ ವಿವಿಧ ಹುದ್ದೆ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

    Bengaluru Govt Jobs: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜಿಲ್ಲಾ ಪಂಚಾಯತ್‌ ಬೆಂಗಳೂರು ಗ್ರಾಮಾಂತರ, ಸಂಜೀವಿನಿ ಕರ್ನಾಟಕ ರಾಜ್ಯದ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ(KSRLPS) ಇಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ನಿರ್ವಹಣಾ ಘಟಕಗಳಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 09-02-2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-02-2024

    ಹುದ್ದೆಗಳ ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
    ಹುದ್ದೆ
    ; ಬ್ಲಾಕ್‌ ಮ್ಯಾನೇಜರ್-‌ ನಾನ್‌ ಫಾರ್ಮ್‌ ಲೈವ್ಲಿ ಹುಡ್‌
    ಕ್ಲಸ್ಟರ್‌ ಸೂಪರ್‌ವೈಸರ್‌- ಸ್ಕಿಲ್ಸ್‌

    ಹುದ್ದೆಗಳ ಸಂಖ್ಯೆ:
    ಬ್ಲಾಕ್‌ ಮ್ಯಾನೇಜರ್-‌ ನಾನ್‌ ಫಾರ್ಮ್‌ ಲೈವ್ಲಿ ಹುಡ್‌ -4 ಹುದ್ದೆಗಳು
    ಕ್ಲಸ್ಟರ್‌ ಸೂಪರ್‌ವೈಸರ್‌- ಸ್ಕಿಲ್ಸ್‌-4 ಹುದ್ದೆಗಳು
    ಒಟ್ಟು ಹುದ್ದೆಗಳ ಸಂಖ್ಯೆ- 08

    ಮಹತ್ವದ ಮಾಹಿತಿ: ಮೇಲ್ಕಂಡ ಹುದ್ದೆಗೆ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅಂಚೆ ಅಥವಾ ಕೊರಿಯರ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಅಂಚೆ, ಕೊರಿಯರ್‌ ಮೂಲಕ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

    ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ವಿದ್ಯಾರ್ಹತೆ ಹಾಗೂ ಕಾರ್ಯಾನುಭವದ ಆಧಾರದಲ್ಲಿ ಶಾರ್ಟ್‌ಲಿಸ್ಟ್‌ ಮಾಡಿ ನೇಮಕ ಮಾಡಲಾಗುವುದು.

    ಸಂಬಳ: ಮೇಲ್ಕಂಡ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಮ್ಮ ಹುದ್ದೆಯ ಅವಧಿ ಮುಗಿಯುವರೆಗೆ ಆಕರ್ಷಕ ಸಂಬಳದ ಜೊತೆಗೆ ವಿಶೇಷ ಭತ್ಯೆಗಳನ್ನು ನೀಡಲಾಗುವುದು.

    ವಿದ್ಯಾರ್ಹತೆ: ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ/ಪದವಿ ಶಿಕ್ಷಣವನ್ನು ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಪಡೆದು ತೇರ್ಗಡೆ ಹೊಂದಿರಬೇಕು. ಹಾಗೆನೇ ಸಂಬಂಧಿಸಿದ ಹುದ್ದೆಯ ಕಾರ್ಯಕ್ಷೇತ್ರದಲ್ಲಿ ಅಭ್ಯರ್ಥಿಗಳು ಕಾರ್ಯಾನುಭವ ಹೊಂದಿರಬೇಕು.

    ಅರ್ಜಿ ಸಲ್ಲಿಸುವಿಕೆಯ ವಿಧಾನ:
    ಅಭ್ಯರ್ಥಿಗಳು ಇಲ್ಲಿ ನೀಡಲಾದ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಬಹುದು. ಲಿಂಕ್‌ನಲ್ಲಿ ಕೇಳಲಾದ ಮಾಹಿತಿಯನ್ನು, ದಾಖಲೆಯನ್ನು ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಇಲ್ಲಿ ಹೇಳಲಾದ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ವೈಯಕ್ತಿಕ ಮಾಹಿತಿಗಳು, ಕಾರ್ಯಾನುಭವ ಮಾಹಿತಿಗಳು ಹಾಗೂ ದಾಖಲೆಗಳು, ಇ-ಮೇಲ್‌, ಮೊಬೈಲ್‌ ನಂಬರ್‌ ಹಾಗೂ ವಿದ್ಯಾಭ್ಯಾಸದ ದಾಖಲೆಗಳು ಬೇಕು.

    ಹುದ್ದೆಯ ಆಕ್ಷಾಂಕ್ಷಿಗಳು ಇಲ್ಲಿ ನೀಡಲಾದ ಲಿಂಕ್‌ ಕ್ಲಿಕ್‌ ಮಾಡಿದರೆ, ಪೇಜ್‌ ಓಪನ್‌ ಆಗುತ್ತದೆ. ಹುದ್ದೆಯ ಮುಂದೆ ʼView/Apply’ ಎಂದಿರುವಲ್ಲಿ ಕ್ಲಿಕ್‌ ಮಾಡಿದಾಗ, ನಿಮಗೆ ನಿಮ್ಮ ಹುದ್ದೆಯ ಕುರಿತು ಎಲ್ಲಾ ವಿವರಗಳು ದೊರಕುತ್ತದೆ. ಇವುಗಳನ್ನು ಸಂಪೂರ್ಣವಾಗಿ ಓದಿ ಅರ್ಜಿಯನ್ನು ಸಲ್ಲಿಸಬಹುದು.

  • Ballari Grama Panchayath Jobs: ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ಮೇಲ್ವಿಚಾರಕರ 14 ಹುದ್ದೆ, ದ್ವಿತೀಯ ಪಿಯುಸಿ ಆದವರು ಅರ್ಜಿ ಸಲ್ಲಿಸಿ

    Ballari Grama Panchayath Jobs: ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯ ಮೇಲ್ವಿಚಾರಕರ 14 ಹುದ್ದೆ, ದ್ವಿತೀಯ ಪಿಯುಸಿ ಆದವರು ಅರ್ಜಿ ಸಲ್ಲಿಸಿ

    Ballari Grama Panchayat Recruitment 2024: ಬಳ್ಳಾರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ 14 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕರ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

    ಪ್ರಮುಖ ದಿನಾಂಕಗಳು;
    ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಆರಂಭಿಕ ದಿನಾಂಕ -08/02/2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 28/02/2024

    ಹುದ್ದೆ ವಿವರಗಳು ಈ ಕೆಳಗಿನಂತಿದೆ.
    ಹುದ್ದೆ ಹೆಸರು:
    ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕರು

    ಹುದ್ದೆ ಸಂಖ್ಯೆ: ಬಳ್ಳಾರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಒಟ್ಟು ಎಂಟು ಗ್ರಾಮ ಪಂಚಾಯಿತಿಗಳಿಗೆ ನೂತನವಾಗಿ ಗ್ರಾಮಪಂಚಾಯಿತಿ ಗ್ರಂಥಾಲಯ ಮ್ತು ಮಾಹಿತಿ ಕೇಂದ್ರಗಳು ಮಂಜೂರಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಒಂದರಂತೆ ಒಟ್ಟು ಎಂಟು ಹುದ್ದೆಗಳು ಮತ್ತು ರಾಜೀನಾಮೆ, ನಿವೃತ್ತಿ ಕಾರಣದಿಂದ ತೆರವಾದ ಆರು ಹುದ್ದೆಗಳು ಸೇರಿ ಒಟ್ಟು 14 ಹುದ್ದೆಗಳು ಖಾಲಿ ಇದೆ.

    ಶೈಕ್ಷಣಿಕ ವಿದ್ಯಾರ್ಹತೆ: ಪಿಯುಸಿ ಯಲ್ಲಿ ಉತ್ತೀರ್ಣರಾಗಿರಬೇಕು. ಮತ್ತು ಸರ್ಟಿಫಿಕೇಷನ್‌ ಕೋರ್ಸ್‌ ಇನ್‌ ಲೈಬ್ರರಿ ಸೈನ್ಸ್‌ನಲ್ಲಿ ಪ್ರಮಾಣ ಪತ್ರ ಪಡೆದಿರತಕ್ಕದ್ದು. ಕನಿಷ್ಠ ಮೂರು ತಿಂಗಳ ಕಂಪ್ಯೂಟರ್‌ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.

    ವಾಸಸ್ಥಳ: ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಯಾಗಿರತಕ್ಕದ್ದು.

    ವಯೋಮಿತಿ: ಮೇಲಿನ ಹುದ್ದೆಗೆ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ಪೂರೈಸಿರತಕ್ಕದ್ದು. ಹಾಗೂ ಗರಿಷ್ಠ ವಯೋಮಿತಿಯು ಈ ಕೆಳಕಂಡಂತೆ ನೀಡಲಾಗಿದೆ.
    ಸಾಮಾನ್ಯ ವರ್ಗ 35ವರ್ಷ, 2ಎ, ಎಬಿ, 3ಎ,3ಬಿ -38 ವರ್ಷ, ಪ.ಜಾತಿ/ಪ.ಪಂಗಡ/ಪ್ರ-1 40 ವರ್ಷ

    ಅರ್ಜಿ ಶುಲ್ಕ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

    ಆಯ್ಕೆ ವಿಧಾನ
    ಶೈಕ್ಷಣಿಕ ಅರ್ಹತೆಯಲ್ಲಿನ ಮೆರಿಟ್‌ ಮತ್ತು ರೋಸ್ಟರ್‌ ಮೀಸಲಾತಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಒಂದು ವೇಳೆ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಸಮಾನವಾದ ಅಂಕಗಳನ್ನು/ಮೆರಿಟ್‌ ಅನ್ನು ಹೊಂದಿದ್ದಲ್ಲಿ ವಯಸ್ಸಿನಲ್ಲಿ ಹಿರಿಯರಾದವರನ್ನು ಆಯ್ಕೆಗೆ ಪರಿಗಣಿಸಲಾಗುವುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

    ಅರ್ಜಿ ಸಲ್ಲಿಸುವ ವಿಧಾನ
    ಅರ್ಜಿಯನ್ನು ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ವೆಬ್‌ಸೈಟ್‌ ವಿಳಾಸ https://ballari.nic.in ದಲ್ಲಿ ಸಲ್ಲಿಸುವುದು.
    ಅರ್ಜಿ ಶುಲ್ಕ ವಿನಾಯಿತಿಸಲಾಗಿದೆ
    ಅರ್ಜಿಯೊಂದಿಗೆ ಈ ಕೆಳಕಾಣಿಸಿದ ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು
    ಪಿಯುಸಿ ಅಂಕಪಟ್ಟಿ, ಸರ್ಟಿಫಿಕೇಷನ್‌ ಕೋರ್ಸ್‌ ಇನ್‌ ಲೈಬ್ರರಿ ಸೈನ್ಸ್‌ನಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿ, ಮೂರು ತಿಂಗಳ ಕಂಪ್ಯೂಟರ್‌ ಕೋರ್ಸ್‌ ಪಡೆದಿರುವ ಪ್ರಮಾಣ ಪತ್ರ, ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ, ಜಾತಿ ಮತ್ತು ಆದಾರಯ ಪ್ರಮಾಣ ಪತ್ರ

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

  • Yadgir District Court Recruitment 2024: ಯಾದಗಿರಿ ಜಿಲ್ಲೆಯ ಕೋರ್ಟ್‌ಗಳಲ್ಲಿ 30 ಹುದ್ದೆಗಳಿಗೆ ಅರ್ಜಿ ಆಹ್ವಾನ; 10th,12th ಪಾಸಾದವರು ಅರ್ಜಿ ಸಲ್ಲಿಸಿ

    Yadgir District Court Recruitment 2024: ಯಾದಗಿರಿ ಜಿಲ್ಲೆಯ ಕೋರ್ಟ್‌ಗಳಲ್ಲಿ 30 ಹುದ್ದೆಗಳಿಗೆ ಅರ್ಜಿ ಆಹ್ವಾನ; 10th,12th ಪಾಸಾದವರು ಅರ್ಜಿ ಸಲ್ಲಿಸಿ

    Yadgir District Court Recruitment 2024: ಯಾದಗಿರಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜವಾನ, ಬೆರಳಚ್ಚುಗಾರರು, ಶೀಘ್ರ ಲಿಪಿಗಾರರು ಗ್ರೇಡ್‌3 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಅರ್ಜಿಯನ್ನು ಯಾದಗಿರಿ ಜಿಲ್ಲಾ ನ್ಯಾಯಾಲಯದ ಅಧಿಕೃತ ಜಾಲತಾಣದ ಮೂಲಕ ನಿಗದಿ ಪಡಿಸಿದ ದಿನಾಂಕದ ಒಳಗಾಗಿ ಸಲ್ಲಿತಕ್ಕದ್ದು. ಆನ್‌ಲೈನ್‌ ಹೊರತುಪಡಿಸಿ ಖುದ್ದಾಗಿ, ಅಂಚೆ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

    ಪ್ರಮುಖ ದಿನಾಂಕಗಳು
    ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಲು ಆರಂಭಿಕ ದಿನಾಂಕ; 16-01-2024
    ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 15-02-2024 (ರಾತ್ರಿ 11.59 ಗಂಟೆಯವರೆಗೆ)
    ಶುಲ್ಕ ಪಾವತಿ ಮಾಡಲು ಕಡೆಯ ದಿನಾಂಕ; 16-02-2024

    ಹುದ್ದೆಗಳ ವಿವರ: ಜವಾನ ಹುದ್ದೆ-24, ಬೆರಳಚ್ಚುಗಾರರು ಹುದ್ದೆ-05 ಹುದ್ದೆ, ಶೀಘ್ರಲಿಪಿಗಾರರು ಗ್ರೇಡ್‌ 3-01 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ವೇತನ ಶ್ರೇಣಿ: ಶೀಘ್ರಲಿಪಿಗಾರ ಗ್ರೇಡ್‌ 3 ವೇತನ: ರೂ.27,650-52,650 ಹಾಗೂ ವಿಶೇಷ ಭತ್ಯೆ, ಬೆರಳಚ್ಚುಗಾರರ ವೇತನ: ರೂ.21,400-42,000 ಹಾಗೂ ವಿಶೇಷ ಭತ್ಯೆ, ಜವಾನ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.17000-28950ರೂ. ಹಾಗೂ ವಿಶೇಷ ಭತ್ಯೆ ದೊರಕಲಿದೆ.

    ವಿದ್ಯಾರ್ಹತೆ: ಶೀಘ್ರಲಿಪಿಗಾರ ಗ್ರೇಡ್‌ 3 ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕಡೆಯ ದಿನಾಂಕದ ಒಳಗಾಗಿ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ಮೂರು ವರ್ಷದ ಡಿಪ್ಲೋಮಾ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಮತ್ತು ಕನ್ನಡ, ಇಂಗ್ಲೀಷ್‌ ಎರಡೂ ಭಾಷೆಗಳಲ್ಲಿ ಹಿರಿಯ ಶ್ರೇಣಿ ಶೀಘ್ರಲಿಪಿ ಮತ್ತು ಬೆರಳಚ್ಚು ಅಥವಾ ಡಿಪ್ಲೋಮಾ ವಾಣಿಜ್ಯ ಪರೀಕ್ಷೆ ತೇರ್ಗಡೆ ಹೊಂದಿರಬೇಕು.

    ಬೆರಳಚ್ಚುಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ, ಅಥವಾ ಮೂರು ವರ್ಷದ ಡಿಪ್ಲೋಮಾ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

    ಜವಾನ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

    ವಯೋಮಿತಿ: ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತೆ ನೀಡಲಾಗಿದೆ.
    ಸಾಮಾನ್ಯ ವರ್ಗ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ 38 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 40 ವರ್ಷ
    ವಿಧವೆಯರು, ಅಂಗವಿಕಲರಿಗೆ ಗರಿಷ್ಠ 10 ವರ್ಷ, ಮಾಜಿ ಸೈನಿಕರಿಗೆ ಸಶಸ್ತ್ರ ದಳಗಳಲ್ಲಿ ಸೇವೆ ಸಲ್ಲಿಸಿರುವಷ್ಟು ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾವುದುಓ ಅಷ್ಟು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

    ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ ರೂ.200, ಪ್ರವರ್ಗ-2ಎ/2ಬಿ/3ಎ/2ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ.100, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
    ಅರ್ಜಿ ಶುಲ್ಕವನ್ನು ಸ್ಟೇಟ್‌ಬ್ಯಾಂಕ್‌ ಇಂಡಿಯಾದ State Bank Collect ಮೂಲಕ ಆನ್‌ಲೈನ್‌ ನೆಟ್‌ಬ್ಯಾಂಕಿಂಗ್‌/ಕ್ರೆಡಿಟ್‌ ಕಾರ್ಡ್‌/ಡೆಬಿಟ್‌ ಕಾರ್ಡ್‌/ಯುಪಿಐ ಯಾವುದಾದರೂ ಒಂದು ಸೌಲಭ್ಯದ ಮೂಲಕ ಪಾವತಿ ಮಾಡತಕ್ಕದ್ದು.

    ಆಯ್ಕೆ ವಿಧಾನ: ಶೀಘ್ರಲಿಪಿಗಾರರ ಹುದ್ದೆಯ ಆಯ್ಕೆ: ಅಭ್ಯರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಪ್ರತಿ ನಿಮಿಷಕ್ಕೆ 120 ಪದಗಳ ವೇಗದಂತೆ ನಿಮಿಷಗಳ ಉಕ್ತಲೇಖನ ನೀಡಿ ನಂತರ 45 ನಿಮಿಷಗಳ ಅವಧಿಯಲ್ಲಿ ಬೆರಳ್ಳುಯಂತ್ರ/ಗಣಕಯಂತ್ರದ ಮೇಲೆ ಲಿಪ್ಯಂತರ ಮಾಡಲು ಹೇಳಲಾಗುವುದು.

    ಬೆರಳಚ್ಚುಗಾರರ ಹುದ್ದೆಯ ಆಯ್ಕೆ ವಿಧಾನ: ಅಭ್ಯರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ 15 ನಿಮಿಷಗಳ ಅರ್ಹತಾ ಪರೀಕ್ಷೆಯನ್ನು ಬೆರಳಚ್ಚು ಯಂತ್ರ/ಗಣಕಯಂತ್ರದ ಮೇಲೆ ಬೆರಳಚ್ಚು ಮಾಡಲು ಹೇಳಲಾಗುವುದು.

    ಜವಾನ ಹುದ್ದೆಯ ಆಯ್ಕೆ : ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡವಾರು ಅಂಕಗಳ ಆಧಾರದ ಮೇಲೆ 1 ಹುದ್ದೆಗೆ 10 ಅಭ್ಯರ್ಥಿಗಳಂತೆ (1:10 ರ ಅನುಪಾತದಲ್ಲಿ) ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.